ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ; ರಾಮನಗರ ಜಿಲ್ಲೆ ರೈತರಿಗೆ ಜಮೀನು ನಷ್ಟದ ಭೀತಿ

Bengaluru News: ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ; ರಾಮನಗರ ಜಿಲ್ಲೆ ರೈತರಿಗೆ ಜಮೀನು ನಷ್ಟದ ಭೀತಿ

Umesh Kumar S HT Kannada

Mar 09, 2024 10:04 AM IST

ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ (ಸಾಂಕೇತಿಕ ಚಿತ್ರ)

  • ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ನಿಯಮಿತ (ಎನ್‌ಎಚ್‌ಎಸ್‌ಆರ್‌ಸಿಎಲ್) ಮುಂದಾಗಿದೆ. ಈ ವಿದ್ಯಮಾನದಿಂದಾಗಿ, ರಾಮನಗರ ಜಿಲ್ಲೆಯ ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ (ಸಾಂಕೇತಿಕ ಚಿತ್ರ)
ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆ (ಸಾಂಕೇತಿಕ ಚಿತ್ರ)

ಬೆಂಗಳೂರು: ಚೆನ್ನೈ-ಬೆಂಗಳೂರು-ಮೈಸೂರು ಬುಲೆಟ್ ರೈಲು ಉದ್ಯಮಿಗಳು ವ್ಯಾಪಾರಿಗಳಿಗೆ ಸಂತಸ ತಂದಿದ್ದರೆ ಈ ಯೋಜನೆ ರಾಮನಗರ ಜಿಲ್ಲೆಯ ರೈತರಿಗೆ ಮರಣ ಶಾಸನವಾಗಿ ಪರಿಣಮಿಸಿದೆ. 435 ಕಿಮೀ ಉದ್ದದ ಈ ಯೋಜನೆಗೆ ಜಿಲ್ಲೆಯ 28 ಗ್ರಾಮಗಳ ರೈತರು ತಮ್ಮ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರು ಉದ್ಯಮಿ ಪುತ್ರಿ ಪ್ರೇಮಕಥನ; ಮನೆಯಲ್ಲಿದ್ದ1 ಕೋಟಿ ರೂ. ಜತೆ ಪರಾರಿ

Bangalore rains: ಬೆಂಗಳೂರಿನಲ್ಲಿ ನಿಲ್ಲದ ಮಳೆ, ಇನ್ನೂ ಎರಡು ದಿನ ಮಳೆ ಮುನ್ಸೂಚನೆ

Hassan Scandal: ಹಾಸನ ಸಂತ್ರಸ್ತೆ ಅಪಹರಣ ಪ್ರಕರಣ, ಮಾಜಿ ಸಚಿವ ರೇವಣ್ಣಗೆ ಜಾಮೀನು ಮಂಜೂರು, ಬಿಡುಗಡೆ ಯಾವಾಗ?

Vande Bharath Train: ತಿರುವನಂತಪುರಂ ಮಂಗಳೂರು ವಂದೇ ಭಾರತ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿರುವ ರಾಮನಗರ ಜಿಲ್ಲೆಯ ರೈತರು ಅಣ್ಣ ನೀಡುತ್ತಿರುವ ಭೂಮಿಯನ್ನು ತ್ಯಾಗ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಈ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಹೈಸ್ಪೀಡ್ ರೈಲು ನಿಗಮ ನಿಯಮಿತ (ಎನ್‌ಎಚ್‌ಎಸ್‌ಆರ್‌ಸಿಎಲ್) ಮುಂದಾಗಿದೆ. ಅದಕ್ಕಾಗಿ, ರಾಮನಗರ ಜಿಲ್ಲೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಾದ 28 ಗ್ರಾಮಗಳ ಕಂದಾಯ ನಕ್ಷೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಎನ್‌ಎಚ್‌ಎಸ್‌ಆರ್‌ಸಿಎಲ್ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ನಕ್ಷೆ ರಚಿಸಲು ಜಿಲ್ಲಾಡಳಿತ ಮುಂದಾಗಿದೆ.

ಚೆನ್ನೈ ಬೆಂಗಳೂರು ಮೈಸೂರು ಬುಲೆಟ್ ರೈಲು ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ

ಈ ಯೋಜನೆಯ ಸಲಹಾ ಸೇವೆಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದ್ದು, ಈ ಸಂಸ್ಥೆಗಳಿಗೆ ಜಿಲ್ಲಾಡಲಿತ ಸಹಕರಿಸಬೇಕಿದ್ದು ಬುಲೆಟ್ ರೈಲು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನುಗಳ ಸರ್ವೆ ನಂಬರ್‌ಗಳು, ಜಮೀನಿನ ವಿಸ್ತೀರ್ಣ ಮತ್ತು ಆ ಜಮೀನುಗಳ ಮಾಲೀಕರ ವಿವರಗಳನ್ನು ಸಂಗ್ರಹಿಸಲು ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದೆ.

ಈ ಕೆಲಸಕ್ಕಾಗಿ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡಿ ಈ ಯೋಜನೆಗೆ ಒಳಪಡುವ ರೈತರ ಆಧಾರ್ ಕಾರ್ಡ್ ಸಂಗ್ರಹಿಸುತ್ತಿದ್ದಾರೆ. ಏಕೆ ಎಂದು ವಿಷಯ ತಿಳಿದ ರೈತರು ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಡಿಪಿಆರ್ ಸಿದ್ಧಪಡಿಸಿದ ಬಳಿಕ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತದೆ.

ನಮ್ಮ ಗ್ರಾಮಗಳಲ್ಲಿ ಪ್ರಸ್ತಾವಿತ ಮಾರ್ಗ ಇದೆ ಎಂಬ ಮಾಹಿತಿ ಇದೆ. ಜಮೀನಿಗೆ ಪರಿಹಾರ ಸಿಗುತ್ತದೆ ಎನ್ನುವುದು ಗೊತ್ತಿದೆ. ಆದರೆ, ಜೀವನಾಧಾರವಾದ ಕೃಷಿಯೇ ಇಲ್ಲವಾದರೆ ಏನು ಮಾಡುವುದು? ಅವರ ಪರಿಹಾರ ಧನ ಎಸ್ತು ಕಾಲ ಉಳಿದೀತು ಎಂದು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ರೈತರೊಬ್ಬರು ಪ್ರಶ್ನಿಸುತ್ತಾರೆ.

ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ರೈತರು

ಭತ್ತ, ರಾಗಿ, ಮಾವು, ತೆಂಗು, ಹಿಪ್ಪುನೇರಳೆ, ಬಾಳೆ ಸೇರಿದಂತೆ ಹತ್ತಾರು ಬೆಳೆಗಳನ್ನು ಬೆಳೆಯುವ ನೂರಾರು ಎಕರೆ ಕೃಷಿ ಭೂಮಿ ನಮ್ಮ ಕೈ ತಪ್ಪಲಿದೆ. ಕೃಷಿಯನ್ನೇ ಅವಲಂಬಿಸಿದ್ದ ನಾವು ಏನು ಮಾಡಬೇಕು ಎಲ್ಲಿ ಹೋಗಿ ನೆಲೆಸಬೇಕು ಎಂದು ಮಾಯಗೊಂಡನಹಳ್ಳಿ, ಕೇತೋಹಳ್ಳಿ, ಬಸವನಪುರ ಗ್ರಾಮದ ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಸರ್ಕಾರ ಜಾರಿಗೆ ತಂದ ಕೆರೆ ತುಂಬಿಸುವ ಯೋಜನೆಯಿಂದಾಗಿ ಅಂತರ್ಜಲಮಟ್ಟ ಹೆಚ್ಚಿದೆ. ನೀರು ವಿಫಲವಾಗಿದೆ. ಕೃಷಿ, ತೋಟಗಾರಿಕೆ ಜೊತೆಗೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದೇವೆ. ಕೃಷಿಕರು ಹಣ ನೋಡಲು ಆರಂಭಿಸಿದ್ದಾರೆ. ಅಧಿಕ ಜಮೀನು ಹೊಂದಿರುವ ರೈತರು ಒಂದಿಷ್ಟು ಭಾಗವನ್ನು ಕಳೆದು ಕೊಂಡರೂ ಇಲ್ಲಿಯೇ ಉಳಿಯುತ್ತಾರೆ. ತುಂಡು ಭೂಮಿ ಕಳೆದುಕೊಂಡು ಏನು ಮಾಡಬೇಕು ಎಂಬ ಚಿಂತೆ ಸಣ್ಣ ಹಿಡುವಳಿದಾರರನ್ನು ಕಾಡುತ್ತಿದೆ.

ತಾಗಚಗೆರೆ, ತಿಮ್ಮಸಂದ್ರ, ಸುಣ್ಣಗಟ್ಟ, ಹೊಂಗನೂರು, ಕುಡ್ಲೂರು, ಹೊತ್ತಿಗಾನಹೊಸಹಳ್ಳಿ, ಚಕ್ಕೆರೆ, ಕುರಣಗೆರೆ, ಚಕ್ಕಲೂರು ಮತ್ತು ಕುಕ್ಕೂರು ತಾಳಕುಪ್ಪೆ, ಕೆಜಿ ಭೀಮನಹಳ್ಳಿ, ಬೆಳಕೆಂಪನಹಳ್ಳಿ, ಬಾನಂದೂರು, ಬಾದಾಡಿ, ಕೆಂಚನಕುಪ್ಪೆ, ಕಲ್ಲು ಗೋಪನಹಳ್ಳಿ, ಕೆಂಪನಹಳ್ಳಿ, ಮಾಯಗೊಂಡನಹಳ್ಳಿ, ಕೇತೋಹಳ್ಳಿ, ಬಸವನಪುರ, ಕೊತ್ತೀಪುರ, ಶಿಡ್ಲಕಲ್ಲು, ಅಚ್ಚಲು, ಅಚ್ಚಲು ರಾಜ್ಯ ಅರಣ್ಯ, ವಿಭೂತಿಕೆರೆ, ಬೊಮ್ಮನಹಳ್ಳಿ, ಬ್ರಹ್ಮನಿಪುರ ಸೇರಿದಂತೆ 30 ಕ್ಕೂ ಹೆಚ್ಚು ಗ್ರಾಮಗಳ ರೈತಾಪಿ ವರ್ಗ ಜಮೀನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಯೋಜನೆ ಆಗಲೇ ಬಹುದೂರ ಮುಂದಕ್ಕೆ ಸಾಗಿದ್ದು, ರೈತರ ರಕ್ಷಣೆ ಈ ಹಂತದಲ್ಲಿ ಅಸಾಧ್ಯ. ಈಗಾಗಲೇ, ಜ. 2023 ರಲ್ಲಿ ಅಧ್ಯಯನ ಕಾರ್ಯ ಮತ್ತು ಹೆಚ್ಚಿನ ಪ್ರಾಥಮಿಕ ಮಾರ್ಗ ಅಭಿವೃದ್ಧಿ ಪೂರ್ಣಗೊಂಡಿದೆ. ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನ ಮುಗಿದಿದೆ.

ಏನಿದು ಬುಲೆಟ್‌ ಟ್ರೈನ್‌ ಯೋಜನೆ?

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಬುಲೆಟ್‌ ಟ್ರೈನ್‌ ಕೂಡಾ ಒಂದು. ಬೆಂಗಳೂರು, ಮೈಸೂರು, ಚೆನ್ನೈ ಮಾರ್ಗದ ಬುಲೆಟ್‌ ಟ್ರೈನ್‌ ರಾಜ್ಯದಲ್ಲಿ ಬಂಗಾರಪೇಟೆ, ಬೆಂಗಳೂರು, ಚನ್ನಪಟ್ಟಣ, ಮಂಡ್ಯ ಮತ್ತು ಮೈಸೂರಿನಲ್ಲಿ ನಿಲುಗಡೆ ಮಾಡಲಿದೆ. ಈ ಬುಲೆಟ್‌ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು ರಾಜ್ಯದ ಮೂರು ಸೇರಿದಂತೆ ಮೂರು ರಾಜ್ಯಗಳಲ್ಲಿ 9 ನಿಲ್ದಾಣಗಳು ಇರಲಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ