ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather: ರಾಜ್ಯದಲ್ಲಿ ಕೆಲವೆಡೆ ಲೈಟ್‌ ಆಗಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಒಣ ಹವೆ ಮುಂದುವರಿಕೆ; ಹವಾಮಾನ ಇಲಾಖೆ ಮುನ್ಸೂಚನೆ

Karnataka weather: ರಾಜ್ಯದಲ್ಲಿ ಕೆಲವೆಡೆ ಲೈಟ್‌ ಆಗಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಒಣ ಹವೆ ಮುಂದುವರಿಕೆ; ಹವಾಮಾನ ಇಲಾಖೆ ಮುನ್ಸೂಚನೆ

HT Kannada Desk HT Kannada

Jan 25, 2023 10:01 AM IST

ಹಗುರ ಮಳೆ (ಸಾಂಕೇತಿಕ ಚಿತ್ರ)

  • Karnataka weather: ಭಾರತದ ಹವಾಮಾನ ಇಲಾಖೆ (IMD) ಮಂಗಳವಾರ ಹೇಳಿರುವ ಪ್ರಕಾರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಕೆಲವು ಬಾರಿ ಮಳೆಯಾಗಬಹುದು. ಮಂಜು ಕವಿದ ವಾತಾವರಣ ಇರಬಹುದು. ಅದೇ ರೀತಿ ಬೆಂಗಳೂರಿನಲ್ಲಿ ಶುಷ್ಕ ಹವಾಮಾನ ಮುಂದುವರಿಯಲಿದೆ. ಉಳಿದ ವಿವರ ಈ ವರದಿಯಲ್ಲಿದೆ.

ಹಗುರ ಮಳೆ (ಸಾಂಕೇತಿಕ ಚಿತ್ರ)
ಹಗುರ ಮಳೆ (ಸಾಂಕೇತಿಕ ಚಿತ್ರ) (HT_PRINT)

ಕರ್ನಾಟಕದ ಕೆಲವು ಭಾಗಗಳಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಲಘು ಮಳೆಯಾಗುವ ಸಂಭವ ಇದೆ. ಕೆಲವು ಕಡೆ ಚಳಿ, ಮಂಜು ಕವಿದ ವಾತಾವರಣ ನಿರೀಕ್ಷಿಸಬಹುದು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ಮಳೆ ಕೊರತೆ, ಬಿಸಿಯಿಂದ ಕೈಕೊಟ್ಟ ಬೆಳೆಗಳು; ಬೆಂಗಳೂರಿನಲ್ಲಿ 60 ರೂ ಇದ್ದ ಕೆಜಿ ಬೀನ್ಸ್ 240 ರೂಪಾಯಿ, ಗಗನಕ್ಕೇರಿದ ತರಕಾರಿ ಬೆಲೆ

ಹವಾಮಾನ ವೈಪರೀತ್ಯ; ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 9 ವಿಮಾನಗಳು ಚೆನ್ನೈಗೆ ಡೈವರ್ಟ್, 3 ದಿನದಲ್ಲಿ 2ನೇ ಘಟನೆ

Fact Check: ಲ್ಯಾಬ್‌ಗಳ ಕೃತಕ ಗರ್ಭಾಶಯಗಳಲ್ಲಿ ಭ್ರೂಣಗಳನ್ನು ಬೆಳೆಸುವ ತಂತ್ರಜ್ಞಾನ ಬಂದಿದೆಯೇ, ವೈರಲ್ ವೀಡಿಯೊ ಸತ್ಯವೇ? -ಇಲ್ಲಿದೆ ವಿವರ

ಕರ್ನಾಟಕ ಹವಾಮಾನ ಮೇ 14: ದಕ್ಷಿಣ ಕನ್ನಡ, ಉಡುಪಿ ಸೇರಿ 10 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯ ಮುನ್ಸೂಚನೆ; ತಗ್ಗಿದ ತಾಪಮಾನ

"ರಾಜ್ಯಕ್ಕೆ 24 ಗಂಟೆಗಳ ಮುನ್ಸೂಚನೆ: ಒಣ ಹವಾಮಾನ ಸಾಧ್ಯತೆ. 48 ಗಂಟೆಗಳ ಮುನ್ಸೂಚನೆ ಹೀಗಿದೆ - ದಕ್ಷಿಣ ಒಳ ಕರ್ನಾಟಕದ ಪ್ರತ್ಯೇಕ ಸ್ಥಳಗಳಲ್ಲಿ ಹಗುರಾಗಿ ಅಥವಾ ಸಾ‍ಧಾರಣ ಮಳೆಯಾಗುವ ಸಾ‍ಧ್ಯತೆ ಇದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡಿನಲ್ಲಿ ಒಣ ಹವಾಮಾನ ನಿರೀಕ್ಷಿಸಬಹುದು ಎಂದು ಬೆಂಗಳೂರು ಮೆಟ್‌ ಸೆಂಟರ್‌ ಟ್ವೀಟ್‌ ಮಾಡಿದೆ.

ಭಾರತೀಯ ಹವಾಮಾನ ಇಲಾಖೆಯು ತನ್ನ ದೈನಂದಿನ ಬುಲೆಟಿನ್‌ನಲ್ಲಿ ಮಂಗಳವಾರ, ರಾಜ್ಯದಲ್ಲಿ ಮೈಸೂರು ಕನಿಷ್ಠ ತಾಪಮಾನ 10.4 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ ಎಂದು ಹೇಳಿದೆ. ಬುಧವಾರ ಮತ್ತು ಗುರುವಾರ, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರತ್ಯೇಕ ಸ್ಥಳಗಳು ಲಘು ಮಳೆ ಆಗಬಹುದು. ಆದರೆ ಉತ್ತರ ಒಳನಾಡಿನಲ್ಲಿ ಒಣ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಬಹುದು ಎಂದು ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಬುಧವಾರ ಮತ್ತು ಗುರುವಾರದಂದು ಕೆಲವು ಪ್ರದೇಶಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 26 ಮತ್ತು 17 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ ಎಂದು ಇಲಾಖೆ ಬುಲೆಟಿನ್‌ ವಿವರಿಸಿದೆ.

ಮಲೆನಾಡು ಮತ್ತು ದಕ್ಷಿಣ ಒಳನಾಡು ಕರ್ನಾಟಕ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಅತಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

ಬಿಬಿಎಂಪಿ ಪ್ರದೇಶದಲ್ಲಿ ಒಣ ಹವಾಮಾನದ ಮುನ್ಸೂಚನೆ ಇದೆ. ಸೋಮವಾರ ರಾಜ್ಯದ ಸರಾಸರಿ ಕನಿಷ್ಠ ತಾಪಮಾನವು ಬೆಳಗಾವಿ ಜಿಲ್ಲೆಯಲ್ಲಿ ದಾಖಲಾಗಿದೆ. ರಾಜ್ಯದ ಶೇಕಡ 84 ಭೌಗೋಳಿಕ ಪ್ರದೇಶದಲ್ಲಿ ಕನಿಷ್ಠ ತಾಪಮಾನವು 16 ರಿಂದ 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಬೆಳಗಾವಿ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ 12 ರಿಂದ 15 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಹೇಳಿದೆ.

ಗಮನಿಸಬಹುದಾದ ಸುದ್ದಿ

ಮುಸಲ್ಮಾನ ವಿರೋಧಿ ಇಮೇಜ್‌ ಕಳಚಲು ಬಿಜೆಪಿ ಪ್ರಯತ್ನ; ಹಲವು ಉಪಕ್ರಮಗಳಿಗೆ ಪಕ್ಷದ ವರಿಷ್ಠರ ಹಸಿರು ನಿಶಾನೆ

BJP minority outreach: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಎಂದ ಕೂಡಲೇ ಅಲ್ಪಸಂ‍ಖ್ಯಾತ ವಿಶೇಷವಾಗಿ ಮುಸಲ್ಮಾನ ವಿರೋಧಿ ಪಕ್ಷ ಎಂಬ ಇಮೇಜ್‌ ಸಾಮಾನ್ಯ ಆಲೋಚನೆಯ ಮನಸ್ಸಿನವರಲ್ಲಿ ಮೂಡುವಂಥದ್ದು. ಈ ಇಮೇಜ್‌ನಿಂದ ಹೊರಬರಬೇಕು ಎಂಬ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ. ಇದಕ್ಕೆ ಪೂರಕ ವಿವರ ಒಂದು ಬಹಿರಂಗವಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ