ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Republic Day 2023: ಗಣತಂತ್ರ ದಿನಾಚರಣೆ ಇತಿಹಾಸ, ಮಹತ್ವ ಮತ್ತು ಇತರೆ ವಿವರ

Republic Day 2023: ಗಣತಂತ್ರ ದಿನಾಚರಣೆ ಇತಿಹಾಸ, ಮಹತ್ವ ಮತ್ತು ಇತರೆ ವಿವರ

Republic Day 2023: ಈ ವರ್ಷ ಇದೇ ಗುರುವಾರ ಅಂದರೆ ನಾಳೆಯೇ ನಮ್ಮ ಈ ರಾಷ್ಟ್ರೀಯ ಹಬ್ಬ ಆಚರಿಸಲ್ಪಡುತ್ತಿದೆ. ಇದು 74ನೇ ವರ್ಷದ ಗಣತಂತ್ರ ದಿನಾಚರಣೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ಪಥ (ರಾಜಪಥ)ದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದರೊಂದಿಗೆ ಗಣತಂತ್ರ ದಿನಾಚರಣೆಯ ಸಂಭ್ರಮಕ್ಕೆ ಚಾಲನೆ ಸಿಗುತ್ತದೆ.

ಗಣರಾಜ್ಯೋತ್ಸವ 2023
ಗಣರಾಜ್ಯೋತ್ಸವ 2023 (Still Pixels)

ಪ್ರತಿ ವರ್ಷ ಜನವರಿ 26ರಂದು ನಮ್ಮ ದೇಶದ ಗಣತಂತ್ರ ದಿನಾಚರಣೆ ಆಯೋಜಿಸಲ್ಪಡುತ್ತದೆ. ಇದು ವಾರ್ಷಿಕ ಆಚರಣೆ. ದೇಶಕ್ಕೆ ಸಂಬಂಧಿಸಿದ ಹಬ್ಬ. ಈ ವರ್ಷ ಇದೇ ಗುರುವಾರ ಅಂದರೆ ನಾಳೆಯೇ ನಮ್ಮ ಈ ರಾಷ್ಟ್ರೀಯ ಹಬ್ಬ ಆಚರಿಸಲ್ಪಡುತ್ತಿದೆ. ಇದು 74ನೇ ವರ್ಷದ ಗಣತಂತ್ರ ದಿನಾಚರಣೆ.

ಟ್ರೆಂಡಿಂಗ್​ ಸುದ್ದಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ತವ್ಯ ಪಥ (ರಾಜಪಥ)ದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವುದರೊಂದಿಗೆ ಗಣತಂತ್ರ ದಿನಾಚರಣೆಯ ಸಂಭ್ರಮಕ್ಕೆ ಚಾಲನೆ ಸಿಗುತ್ತದೆ. ಪ್ರತಿವರ್ಷ ಕೋಟ್ಯಂತರ ಭಾರತೀಯರು ಈ ಉತ್ಸವದ ಶ್ರೀಮಂತ ಸಂಪ್ರದಾಯ, ಸಾಂಸ್ಕೃತಿಕ ಪರಂಪರೆ, ರಾಷ್ಟ್ರದ ಪ್ರಗತಿ ಮತ್ತು ಸಾಧನೆಗಳ ಚಮತ್ಕಾರ ಮತ್ತು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನಗಳನ್ನು ದೂರದರ್ಶನದಲ್ಲಿ ವೀಕ್ಷಿಸುತ್ತಾರೆ. ಇದಲ್ಲದೆ, ಸಾರ್ವಜನಿಕರು ಗಣರಾಜ್ಯೋತ್ಸವದ ಪರೇಡ್ ಪೂರ್ವಾಭ್ಯಾಸ, ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭಗಳನ್ನೂ ವೀಕ್ಷಿಸಬಹುದು.

ಗಣತಂತ್ರ ದಿನಾಚರಣೆ ಇತಿಹಾಸ ಮತ್ತು ಮಹತ್ವ (Republic Day History and Significance)

ಪ್ರಜಾಪ್ರಭುತ್ವ ದಿನ ಎಂಬುದು ನಮ್ಮ ದೇಶ ಭಾರತವು ಸಂವಿಧಾನವನ್ನು ಅಂಗೀಕರಿಸಿದ (1950 ಜನವರಿ 26) ದಿನವನ್ನು ಸ್ಮರಿಸುವ ಆಚರಣೆಯಾಗಿದೆ. ನಮ್ಮ ದೇಶಕ್ಕೆ ಬ್ರಿಟಿಷ್‌ ಆಡಳಿತದಿಂದ 1947ರಲ್ಲಿ ಸ್ವಾತಂತ್ರ್ಯ ಲಭಿಸಿದರೆ, 1950ರ ಜನವರಿ 26ರಂದು ಸಂವಿಧಾನವನ್ನು ಅಂಗೀಕರಿಸುವ ಮೂಲಕ ಸಾರ್ವಭೌಮ ರಾಷ್ಟ್ರ ಅಥವಾ ಗಣರಾಜ್ಯ ಎಂದು ಘೋಷಿಸಲ್ಪಟ್ಟಿತ್ತು. ದೇಶದ ಮೊದಲ ಸಂವಿಧಾನ ಸಭೆ 1946ರ ಡಿಸೆಂಬರ್‌ 9ರಂದು ತನ್ನ ಮೊದಲ ಅಧಿವೇಶನ ನಡೆಸಿತ್ತು. ಕೊನೆಯ ಅಧಿವೇಶನ 1949ರ ನವೆಂಬರ್‌ 26ರಂದು ನಡೆಯಿತು. ಡಾ.ಬಿ.ಆರ್.‌ ಅಂಬೇಡ್ಕರ್‌ ನೇತೃತ್ವದ ಸಂವಿಧಾನ ರಚನಾ ಸಮಿತಿ ರಚಿಸಿದ ಸಂವಿಧಾನವನ್ನು ಈ ಕೊನೆಯ ಅಧಿವೇಶನ ಆಗಿ ಒಂದು ವರ್ಷದ ಬಳಿಕ ಅಂಗೀಕರಿಸಿತು. ಇದೇ ನವೆಂಬರ್‌ 26ರಂದು ದೇಶ ಸಂವಿಧಾನ ದಿನವನ್ನು ಆಚರಿಸುತ್ತಿದೆ.

ಗಣರಾಜ್ಯೋತ್ಸವವು ಸ್ವತಂತ್ರ ಭಾರತದ ಚೈತನ್ಯವನ್ನು ಸ್ಮರಿಸುತ್ತದೆ. ಇದೇ ದಿನ 1930 ರಲ್ಲಿ, ವಸಾಹತುಶಾಹಿ ಆಳ್ವಿಕೆಯಿಂದ ಪೂರ್ಣ ಸ್ವರಾಜ್ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಘೋಷಿಸಿತು. ಗಣರಾಜ್ಯೋತ್ಸವವು ತಮ್ಮ ಸರ್ಕಾರವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡುವ ಭಾರತೀಯ ನಾಗರಿಕರ ಶಕ್ತಿಯನ್ನು ಸ್ಮರಿಸುತ್ತದೆ. ಭಾರತೀಯ ಸಂವಿಧಾನದ ಸ್ಥಾಪನೆಯ ಸ್ಮರಣೆಗಾಗಿ ದೇಶವು ಇದನ್ನು ರಾಷ್ಟ್ರೀಯ ಉತ್ಸವ ಆಚರಣೆಯ ರಜಾದಿನ ಎಂದು ಗುರುತಿಸುತ್ತದೆ.

ಗಣರಾಜ್ಯೋತ್ಸವ ಆಚರಣೆಯ ಸಂಭ್ರಮ

ನಮ್ಮ ದೇಶದಲ್ಲಿ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನ, ರಾಷ್ಟ್ರಪತಿಯವರು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಈ ಸಮಾರಂಭದ ಬಳಿಕ ಅದ್ಭುತವಾದ ಮಿಲಿಟರಿ ಮತ್ತು ಸಾಂಸ್ಕೃತಿಕ ವೈಭವ ಪ್ರದರ್ಶನ ನಡೆಯುತ್ತದೆ. ಇದಲ್ಲದೆ, ಭಾರತದ ರಾಷ್ಟ್ರಪತಿಗಳು ದೇಶದ ಅರ್ಹ ನಾಗರಿಕರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸುತ್ತಾರೆ. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ ಮತ್ತು ವೀರ ಚಕ್ರವನ್ನು ನೀಡಲಾಗುತ್ತದೆ.

IPL_Entry_Point