ಕನ್ನಡ ಸುದ್ದಿ  /  ಜೀವನಶೈಲಿ  /  ಅವಧಿಗೂ ಮುನ್ನ ಜನಿಸಿದ ಅವಳಿಗಳು: 750 ಗ್ರಾಂ ತೂಕದ ಶಿಶುವನ್ನು ಉಳಿಸುವಲ್ಲಿ ಯಶಸ್ವಿಯಾದ ವೈದ್ಯರು

ಅವಧಿಗೂ ಮುನ್ನ ಜನಿಸಿದ ಅವಳಿಗಳು: 750 ಗ್ರಾಂ ತೂಕದ ಶಿಶುವನ್ನು ಉಳಿಸುವಲ್ಲಿ ಯಶಸ್ವಿಯಾದ ವೈದ್ಯರು

Meghana B HT Kannada

Jan 18, 2024 05:38 PM IST

ಡಾ. ಸುಶಾಂತ್‌ ಶಿವಸ್ವಾಮಿ (ಬಲಚಿತ್ರ)

    • Premature Baby: ಅವಧಿಗೂ ಮುನ್ನ ಜನಿಸಿದ, ರಕ್ತಹೀನತೆಯಿಂದ ಬಳಲುತ್ತಿದ್ದ ಅತಿ ಕಡಿಮೆ ತೂಕದ ಮಗುವನ್ನು ಉಳಿಸಿಕೊಳ್ಳುವಲ್ಲಿ ಬೆಂಗಳೂರು ಮೂಲದ ಕಿಂಡರ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. 
ಡಾ. ಸುಶಾಂತ್‌ ಶಿವಸ್ವಾಮಿ (ಬಲಚಿತ್ರ)
ಡಾ. ಸುಶಾಂತ್‌ ಶಿವಸ್ವಾಮಿ (ಬಲಚಿತ್ರ)

ಸುಸೂತ್ರವಾಗಿ ಹೆರಿಗೆಯಾಗಬೇಕಾದರೆ, ಹುಟ್ಟುವ ಮಕ್ಕಳು ಆರೋಗ್ಯವಾಗಿರಬೇಕೆಂದರೆ ಗರ್ಭಿಣಿಯರು ಬಹಳಷ್ಟು ಎಚ್ಚರಿಕೆ ವಹಿಸಬೇಕು, ಸೂಕ್ತ ಆಹಾರಗಳನ್ನು ತೆಗೆದುಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆಯರೂ ತಮ್ಮ ಗರ್ಭಾವಸ್ಥೆಯಲ್ಲಿ ಹೆಚ್ಚಿನ ನಿಗಾ ವಹಿಸಿರುತ್ತಾರೆ. ಆದರೂ ಕೂಡ ಕೆಲವೊಮ್ಮೆ ಹೆರಿಗೆ ವೇಳೆ ಸಮಸ್ಯೆಗಳು ಎದುರಾಗುತ್ತವೆ. ಅವಧಿಗೂ ಮುನ್ನ ಹೆರಿಗೆ ಆಗುವ ಸಾಧ್ಯತೆ ಇರುತ್ತದೆ. ಹುಟ್ಟುವ ಮಗು ತುಂಬಾ ಕಡಿಮೆ ತೂಕದ್ದಾಗುವ ಸಾಧ್ಯತೆಯಿದೆ. ಅಂತಹ ಒಂದು ಅಪರೂಪದ ಪ್ರಕರಣವನ್ನು ನಿಭಾಯಿಸುವಲ್ಲಿ ಬೆಂಗಳೂರಿನ ಕಿಂಡರ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಸು, ಎಮ್ಮೆ ಹಾಲಿಗೆ ಪರ್ಯಾಯ ಡೈರಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯ: ಸೂಕ್ತವಾದ ಹಾಲನ್ನು ಆರಿಸುವುದು ಹೇಗೆ?

ದಿನಾ ಎಳನೀರು ಕುಡಿದು ಬೇಸರವಾಗಿದ್ಯಾ; ಈ 5 ಭಿನ್ನ ವಿಧಾನಗಳಲ್ಲಿಯೂ ಎಳನೀರನ್ನು ದೇಹ ಸೇರಿಸಬಹುದು

Moringa Water: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರು ಕುಡಿಯಿರಿ; ಈ ಆರೋಗ್ಯ ಪ್ರಯೋಜನ ಪಡೆಯಿರಿ

ವೈರಲ್‌ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ

ಅಚ್ಚರಿ ಎಂಬಂತೆ ಕೇವಲ 28 ವಾರಗಳಲ್ಲಿ ಜನಿಸಿದ 750 ಗ್ರಾಂ ತೂಕದ ಶಿಶುವನ್ನು ಕಿಂಡರ್‌ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ರಕ್ಷಿಸಿದ್ದಾರೆ. ತಾಯಿಯ ಗರ್ಭದಲ್ಲಿ ಅವಳಿ ಶಿಶುಗಳಿದ್ದವು. ಎರಡನೇ ಶಿಶು ಕೂಡ ಒಂದೇ ಪ್ಲಸೆಂಟಾವನ್ನು (Placenta) ಹಂಚಿಕೊಂಡಿತ್ತು. ಇದರಿಂದಾಗಿ ಅವಳಿಗಳ ನಡುವೆ ರಕ್ತದ ಹಂಚಿಕೆ ಅಸಹಜವಾಗಿತ್ತು. ಅದರ ಪರಿಣಾಮ ಒಂದು ಶಿಶು ರಕ್ತಹೀನತೆ, ಕಡಿಮೆ ರಕ್ತದ ಪ್ರಮಾಣ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಅದೇ ರೀತಿಯಾಗಿ ಮತ್ತೊಂದು ಶಿಶುವು ಕೆಂಪು ರಕ್ತ ಕಣಗಳು ಮತ್ತು ಹೆಚ್ಚಿನ ರಕ್ತದ ಪ್ರಮಾಣ ಹಾಗೂ ಒತ್ತಡದಿಂದ ಬಳಲುವ ಸಾಧ್ಯತೆಗಳಿದ್ದು, ಎರಡೂ ಸಂದರ್ಭಗಳು ಮಾರಣಾಂತಿಕ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಇದೊಂದು ಸವಾಲಾಗಿ ಪರಿಣಮಿಸಿತ್ತು.

ಕಿಂಡರ್‌ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಸುಶಾಂತ್‌ ಶಿವಸ್ವಾಮಿ ಮತ್ತು ಅವರ ತಂಡದ ಕೌಶಲ್ಯ ಮತ್ತು ಬದ್ಧತೆಯಿಂದ ಈ ಕಠಿಣ ಸಂದರ್ಭವನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು. ಪ್ರತಿ ಶಿಶುವು 750 ಗ್ರಾಂ ತೂಕ ಹೊಂದಿದ್ದು, ಕೇವಲ 28 ವಾರಕ್ಕೆ ಜನಿಸಿದ್ದ ಕಾರಣ ಕೂಡಲೇ ನವಜಾತ ಶಿಶು ತೀವ್ರ ಘಟಕಕ್ಕೆ ದಾಖಲು ಮಾಡಲಾಯಿತು.

ಮೆದುಳಲ್ಲಿ ತೀವ್ರ ರಕ್ತಸ್ರಾವ ಉಂಟಾದ ಕಾರಣ ಮೊದಲ ಶಿಶುವನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಗೆಯೇ ಎರಡನೇ ಶಿಶುವು ಕೂಡ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿತ್ತು. ಆ ಶಿಶುವಿನ ಜೀವ ರಕ್ಷಣೆ ಕೂಡ ಸವಾಲಿನ ಕೆಲಸವಾಗಿತ್ತು. ಆದರೆ ನಿರಂತರ ಉಸಿರಾಟದ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಮತ್ತು ಹೃದಯದ ಸಕ್ರಿಯ ಕಾರ್ಯಾಚರಣೆಯು ಜೀವ ರಕ್ಷಣೆಗೆ ಅಗತ್ಯವಾಗಿತ್ತು. ಈ ವೇಳೆ ವೈದ್ಯರು ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡಿದರು.

ಈ ಕುರಿತು ವಿವರಿಸಿರುವ ಡಾ.ಸುಶಾಂತ್‌, "ಅವಳಿಗಳಲ್ಲಿ ಎರಡನೇ ಶಿಶುವಿಗೆ ಸರಿಯಾದ ಮೇಲ್ವಿಚಾರಣೆ, ಹೃದಯದ ನಿಖರ ಕಾರ್ಯಾಚರಣೆ ಮತ್ತು ಅವಶ್ಯಕ ಪೋಷಕಾಂಶಗಳನ್ನು ನೀಡುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ನಮ್ಮ ವೈದ್ಯರ ತಂಡದ ನೆರವಿನೊಂದಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಚಿಕಿತ್ಸೆ ನೀಡಿದೆವು ಎಂದು ಹೇಳಿದರು.

ಅವಧಿಗೂ ಮುನ್ನ ಜನಿಸಿದ ಶಿಶುವಿನ ಚೇತರಿಕೆಗೆ ಕಿಂಡರ್‌ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಮತ್ತು ತಜ್ಞರ ಶ್ರಮ ಪ್ರಮುಖ ಪಾತ್ರವಹಿಸಿತು. ಎರಡು ತಿಂಗಳ ತೀವ್ರ ಚಿಕಿತ್ಸೆಯ ನಂತರ ಶಿಶುವು 1.98 ಕೆ.ಜಿ ತೂಕ ಹೊಂದಿತ್ತು. ಬಳಿಕ ಶಿಶುವಿನ ಮೆದುಳು ಮತ್ತು ಕಣ್ಣಿನ ಪರೀಕ್ಷೆಗಳನ್ನು ನಡೆಸಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾದ ವಿಶೇಷ ಆರೈಕೆ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳ ಒಳಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಈ ಘಟನೆಯು ಒತ್ತಿ ಹೇಳುತ್ತಿದೆ. ಈ ಮೂಲಕ ಆರೋಗ್ಯ ಸಮಸ್ಯೆ ಹೊಂದಿರುವ ಶಿಶುಗಳ ಆರೋಗ್ಯಕ್ಕೆ ಭರವಸೆ ನೀಡಿದಂತಾಗಿದೆ.

    ಹಂಚಿಕೊಳ್ಳಲು ಲೇಖನಗಳು