ಬಾಣಂತಿಯರು ತಪ್ಪದೇ ಸೇವಿಸಬೇಕಾದ ಆಹಾರ ಪದಾರ್ಥಗಳಿವು; ಮಗುವಿನ ಆರೋಗ್ಯವೃದ್ಧಿಗೂ ಇವು ಅವಶ್ಯ
Jan 02, 2024 07:15 AM IST
ಸಾಂಕೇತಿಕ ಚಿತ್ರ
- ಬಾಣಂತಿಯರು ಹಸುಗೂಸಿನ ಬಗ್ಗೆ ಗಮನ ಹರಿಸುವುದು ಮಾತ್ರವಲ್ಲ, ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು. ಬಾಣಂತಿಯರಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಅದಕ್ಕಾಗಿ ಈ ಕೆಲವು ಆಹಾರ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸಬೇಕು. ಇದರಿಂದ ಎದೆಹಾಲು ವೃದ್ಧಿಯಾಗಿ, ಮಗುವಿನ ಆರೋಗ್ಯವೂ ಸುಧಾರಿಸುತ್ತದೆ.
ಕಂದಮ್ಮನಿಗೆ ಎದೆಹಾಲು ಕುಡಿಸಬೇಕು ಎಂಬುದು ಮಗುವನ್ನು ಹೆತ್ತ ಪ್ರತಿತಾಯಿಯ ಬಯಕೆ. ಮಗುವಿಗೆ ಹಸಿವಾದ ತಕ್ಷಣ ಎಲ್ಲೇ ಇದ್ದರೂ ತಾಯಿಗೆ ಅರಿಯವಾಗುತ್ತದೆ. ಅಂತಹ ಸುಮಧುರ ಬಂಧನ ತಾಯಿ ಹಾಗೂ ಮಗುವಿನದ್ದು. ಆದರೆ ಕೆಲವು ತಾಯಂದಿರಲ್ಲಿ ಎದೆಹಾಲಿನ ಕೊರತೆ ಕಾಣುತ್ತದೆ. ಇದರಿಂದ ಮಗುವಿಗೂ ಅರೆಹೊಟ್ಟೆಯಾಗುತ್ತದೆ. ಇದನ್ನು ತಡೆಯಲು ತಾಯಿಯು ಪೌಷ್ಟಿಕ ಆಹಾರ ಸೇವಿಸುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೆ ಇದು ಹಾಲೂಡಿಸುವ ಅಮ್ಮನ ಆರೋಗ್ಯಕ್ಕೂ ಬಹಳ ಮುಖ್ಯ. ಹಾಗಾದ್ರೆ ಹಾಲೂಡಿಸುವ ಅಮ್ಮಂದಿರು ಯಾವೆಲ್ಲಾ ರೀತಿಯ ಆಹಾರವನ್ನು ಹೆಚ್ಚು ಸೇವಿಸಬೇಕು ನೋಡಿ.
ಹಣ್ಣುಗಳು
ಹಲವು ವರದಿಗಳ ಪ್ರಕಾರ ಬಾಣಂತಿಯಲ್ಲಿ ಮಲಬದ್ಧತೆ ಸಮಸ್ಯೆ ಕಾಡುವುದು ಸಹಜ. ಆದರೆ ಈ ಸಮಸ್ಯೆಯ ನಿವಾರಣೆಗೆ ಪ್ರತಿದಿನ ಒಂದು ಬೌಲ್ ವಿವಿಧ ಬಗೆಯ ಹಣ್ಣುಗಳನ್ನು ಸೇವಿಸುವುದು ಮುಖ್ಯವಾಗುತ್ತದೆ. ಕೆಲವು ಹಣ್ಣುಗಳಲ್ಲಿ ಪೊಟ್ಯಾಶಿಯಂ ಹಾಗೂ ವಿಟಮಿನ್ ಎ ಅಂಶ ಸಮೃದ್ಧವಾಗಿರುತ್ತದೆ. ಬಾಳೆಹಣ್ಣು, ಮಾವಿನಹಣ್ಣು, ಏಪ್ರಿಕಾಟ್, ಖರ್ಬೂಜ, ಕಿತ್ತಳೆಯಂತಹ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.
ತರಕಾರಿ
ತರಕಾರಿಗಳನ್ನು ಆಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದ್ದು ಇದು ಅಗತ್ಯ ಪೋಷಕಾಂಶಗಳನ್ನು ವೃದ್ಧಿಸುತ್ತದೆ. ಅಲ್ಲದೆ ಎದೆಹಾಲು ಹೆಚ್ಚಲು ಸಹಾಯ ಮಾಡುತ್ತದೆ. ಎದೆ ಹಾಲು ಕುಡಿಸುವ ತಾಯಂದಿರು ಪ್ರತಿದಿನ 3 ಬೌಲ್‌ಗಳಷ್ಟು ತರಕಾರಿ ಸೇವಿಸಬೇಕು. ಪಾಲಕ್, ಕ್ಯಾರೆಟ್, ಕುಂಬಳಕಾಯಿ, ಟೊಮೆಟೊ, ದೊಣ್ಣೆ ಮೆಣಸು ಇವುಗಳ ಸೇವನೆಗೆ ಒತ್ತು ನೀಡಬೇಕು. ಪ್ರೊಟೀನ್
ಸ್ತನ್ಯಪಾನ ಮಾಡುವ ತಾಯಂದಿರಿಗೆ ಪ್ರೊಟೀನ್ ಬಹಳ ಮುಖ್ಯ. ಹಾಗಾಗಿ ಪ್ರತಿದಿನದ ಆಹಾರದಲ್ಲಿ ಕನಿಷ್ಠ 25 ಗ್ರಾಂ ಪ್ರೊಟೀನ್ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಒಣಹಣ್ಣುಗಳು, ಬೀಜಗಳು, ಚಿಕನ್, ಮೊಟ್ಟೆ, ಪನೀರ್ ಇತ್ಯಾದಿಗಳನ್ನು ಸೇವಿಸಬೇಕು. ಇದರೊಂದಿಗೆ ಒಮೆಗಾ 3 ಅಂಶ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವಾಲ್‌ನಟ್, ಸಾಲ್ಮಾನ್ ಮೀನು ಸೇವಿಸುವುದು ಮುಖ್ಯವಾಗುತ್ತದೆ.
ಡೇರಿ ಉತ್ಪನ್ನಗಳು
ಗರ್ಭ ಧರಿಸಿರುವಾಗ ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಹೊರ ಹೋಗಿರುತ್ತದೆ. ಇದು ವಿಟಮಿನ್ ಡಿ ಕಡಿಮೆಯಾಗಲು ಕಾರಣವಾಗುತ್ತದೆ. ಕೆಲವು ಡೇರಿ ಉತ್ಪನ್ನಗಳು ಕ್ಯಾಲ್ಸಿಯಂ ಹಾಗೂ ವಿಟಮಿನ್ ಪ್ರಮಾಣವನ್ನು ಹೆಚ್ಚಿಸುವುದು ಮಾತ್ರವಲ್ಲ. ಇದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ಉತ್ತಮ ಎನ್ನಿಸುತ್ತದೆ. ಇದಕ್ಕಾಗಿ ಹಾಲು, ಚೀಸ್, ಯೋಗರ್ಟ್ ಸೇವನೆ ಉತ್ತಮ. ಅಲ್ಲದೆ ಹಸಿರು ತರಕಾರಿ, ಧಾನ್ಯಗಳಿಂದಲೂ ಇದನ್ನು ಪಡೆಯಬಹುದು. ಅದಕ್ಕೆ ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಇರುವುದು ಮುಖ್ಯವಾಗುತ್ತದೆ.
ಇದನ್ನೂ ಓದಿ
Breastfeeding Week: ಕಂದಮ್ಮನಿಗೆ ಹಾಲುಣಿಸುವ ಸಂದರ್ಭ ಈ 5 ಅಭ್ಯಾಸಗಳನ್ನು ಎಂದಿಗೂ ರೂಢಿಸಿಕೊಳ್ಳದಿರಿ; ಮಗುವಿಗೆ ಅಪಾಯ ತಪ್ಪಿದ್ದಲ್ಲ
ಮಗುವಿಗೆ ಜನ್ಮ ನೀಡುವುದು ಮಾತ್ರವಲ್ಲ, ಕಂದಮ್ಮನಿಗೆ ಹಾಲುಣಿಸುವುದು ಕೂಡ ಶ್ರೇಷ್ಠವಾದದ್ದು. ಮಗುವಿಗೆ ಎದೆಹಾಲು ನೀಡುವಾಗ ತಾಯಿಯು ಕೆಲವೊಂದು ಅಭ್ಯಾಸಗಳನ್ನು ತ್ಯಜಿಸಬೇಕು. ಇದು ಮಗುವಿನ ಆರೋಗ್ಯ ದೃಷ್ಟಿಯಿಂದ ಬಹಳ ಅವಶ್ಯ. ಹಾಗಾದ್ರೆ ಹಾಲುಣಿಸುವಾಗ ಯಾವೆಲ್ಲಾ ಆಹಾರಗಳನ್ನು ತ್ಯಜಿಸಬೇಕು ನೋಡಿ.