ಕನ್ನಡ ಸುದ್ದಿ  /  ಜೀವನಶೈಲಿ  /  Motivation Story: ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು; ಚಾರ್ಲ್ಸ್‌ ಡಾರ್ವಿನ್‌ ಹೀಗೇಕೆ ಹೇಳಿದ್ದು ನೋಡಿ

Motivation Story: ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು; ಚಾರ್ಲ್ಸ್‌ ಡಾರ್ವಿನ್‌ ಹೀಗೇಕೆ ಹೇಳಿದ್ದು ನೋಡಿ

Reshma HT Kannada

Apr 28, 2024 11:38 AM IST

ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು, ಚಾರ್ಲ್‌ ಡಾರ್ವಿನ್‌ ಹೇಳಿದ ಬದುಕಿನ ಪಾಠ

    • ಮನುಷ್ಯ ತನ್ನ ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು ಎಂದು ಖ್ಯಾತ ಬರಹಗಾರ ಚೇತನ್‌ ಭಗತ್‌ ತಮ್ಮ ಇತ್ತೀಚಿನ ಪುಸ್ತಕ ‘11 ರೂಲ್ಸ್ ಫಾರ್ ಲೈಫ್’ನಲ್ಲಿ ಬರೆದಿದ್ದಾರೆ. ಚಾರ್ಲ್‌ ಡಾರ್ವಿನ್‌ ಕೂಡ ಇದೇ ಮಾತು ಹೇಳಿದ್ದರು. ಹಾಗಾದರೆ ಇವರು ಮನುಷ್ಯನ ಜೀವನವನ್ನು ಜಿರಳೆಗೆ ಹೋಲಿಸಿದ್ದು ಯಾಕೆ ಎಂಬುದನ್ನು ನೋಡೋಣ. 
ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು, ಚಾರ್ಲ್‌ ಡಾರ್ವಿನ್‌ ಹೇಳಿದ ಬದುಕಿನ ಪಾಠ
ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು, ಚಾರ್ಲ್‌ ಡಾರ್ವಿನ್‌ ಹೇಳಿದ ಬದುಕಿನ ಪಾಠ

ಭಾರತದ ಪ್ರಸಿದ್ಧ ಬರಹಗಾರರಲ್ಲಿ ಚೇತನ್‌ ಭಗತ್‌ ಕೂಡ ಒಬ್ಬರು. ಸ್ಫೂರ್ತಿದಾಯಕ ಬರವಣಿಗೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ ಚೇತನ್‌. ಈಗಾಗಲೇ ಇವರ ಹಲವು ಪುಸ್ತಕಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ವರ್ಷ ಅವರು ಮತ್ತೊಂದು ಹೊಸ ಪುಸ್ತಕದೊಂದಿಗೆ ನಮ್ಮ ಮುಂದೆ ಬಂದಿದ್ದಾರೆ. ಅವರ ‘11 ರೂಲ್ಸ್ ಫಾರ್ ಲೈಫ್’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದ್ದು ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ಯಶಸ್ಸು ಸಾಧಿಸಲು ಮನುಷ್ಯನಿಗೆ ಮಾರ್ಗದರ್ಶನ ನೀಡುವ ಹಲವು ಅಂಶಗಳಿವೆ.

ಟ್ರೆಂಡಿಂಗ್​ ಸುದ್ದಿ

Moringa Water: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರು ಕುಡಿಯಿರಿ; ಈ ಆರೋಗ್ಯ ಪ್ರಯೋಜನ ಪಡೆಯಿರಿ

ವೈರಲ್‌ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ

Garlic Rice: ಅನ್ನ ಮಿಕ್ಕಿದೆ ಅಂತ ವೇಸ್ಟ್‌ ಮಾಡ್ಬೇಡಿ, ಈ ರೀತಿ ಗಾರ್ಲಿಕ್‌ ರೈಸ್‌ ಮಾಡಿಕೊಡಿ, ಎಲ್ರೂ ಇಷ್ಟಪಟ್ಟು ತಿಂತಾರೆ

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ಜೀವನದಲ್ಲಿ ಯಶಸ್ವಿಯಾಗಲು ಜಿರಳೆಯಂತೆ ಬದುಕಲು ಕಲಿಯಬೇಕು ಎಂದು ಚೇತನ್ ಭಗತ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಮನುಷ್ಯನ ಇತರೆಲ್ಲಾ ಪ್ರಾಣಿಗಳಿಂದ ಪಾಠ ಕಲಿಯುವುದಕ್ಕಿಂತ ಜಿರಳೆಯಿಂದ ಹಾಗೂ ಜಿರಳೆಯ ಬದುಕಿನಿಂದ ಪಾಠ ಕಲಿತರೆ ಸಾಕು, ಯಶಸ್ವಿ ಜೀವನ ತನ್ನದಾಗಿಸಿಕೊಳ್ಳುವುದು ಸುಳ್ಳಲ್ಲ ಎಂದು ಚೇತನ್‌ ಭಗತ್‌ ಬರೆದಿದ್ದಾರೆ.

ಜಿರಳೆಯನ್ನು ಮನುಷ್ಯ ಆದರ್ಶವಾಗಿ ತೆಗೆದುಕೊಳ್ಳಬೇಕು ಏಕೆ?

ಚಾರ್ಲ್ಸ್ ಡಾರ್ವಿನ್ ಪ್ರಕಾರ, ಪ್ರಕೃತಿಯಲ್ಲಿ ಉಳಿದುಕೊಂಡಿರುವ ಪ್ರಬಲ ಜೀವಿಗಳಲ್ಲಿ ಜಿರಳೆ ಕೂಡ ಒಂದು. ಇದು ಅತ್ಯಂತ ಬುದ್ಧಿವಂತ ಜೀವಿ ಕೂಡ ಹೌದು, ಜೊತೆಗೆ ಸನ್ನಿವೇಶದ ಸ್ವಭಾವಕ್ಕೆ ಹೊಂದಿಕೊಳ್ಳುವ ಜೀವಿಯೂ ಹೌದು. ಜಿರಳೆಯ ಹೆಸರನ್ನು ಹೇಳಿದರೆ ನಿಮಗೆ ಅಸಹ್ಯವಾಗಬಹುದು. ಜಿರಳೆಯನ್ನು ಹೊಗಳುವವರು ಹುಚ್ಚರಂತೆ ಕಾಣಿಸಬಹುದು. ಜಿರಳೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಇತರ ಯಾವುದೇ ಜೀವಿಗಳಿಗೆ ಹೋಲಿಸಿದರೆ ಭೂಮಿಯ ಮೇಲೆ ದೀರ್ಘಕಾಲ ಉಳಿದಿರುವ ಜಾತಿಯಾಗಿದೆ.

ಜಿರಳೆ ಭೂಮಿಯ ಮೇಲಿನ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಳ್ಳಲು ಕಲಿತಿದೆ. ಹಾಗಾಗಿ ಈ ಜಾತಿಗಳು ನೂರಾರು ವರ್ಷಗಳಿಂದ ಈ ಭೂಮಿಯಲ್ಲಿ ಉಳಿದುಕೊಂಡಿವೆ. ಇವು ಪ್ರಕೃತಿಯ ಪ್ರತಿಯೊಂದು ಸ್ಥಿತಿ ಮತ್ತು ಬದಲಾವಣೆಯನ್ನು ತಡೆದುಕೊಳ್ಳುತ್ತವೆ. ಭೂಮಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆದುಕೊಳ್ಳಲಾಗದೆ ಹಲವು ಜೀವಿಗಳು ಅಳಿವಿನಂಚಿನಲ್ಲಿವೆ. ಆದರೆ ಜಿರಳೆ ಪರಿಸ್ಥಿತಿಗೆ ಹೊಂದಿಕೊಂಡು ಬದುಕುತ್ತಿದೆ. ಅದಕ್ಕೇ ಬಲಿಷ್ಠ ಪ್ರಾಣಿಯನ್ನು ಆದರ್ಶವಾಗಿ ತೆಗೆದುಕೊಳ್ಳಬೇಡಿ. ಪರಿಸ್ಥಿತಿಗೆ ಅನುಗುಣವಾಗಿ ಪ್ರಕೃತಿಯಲ್ಲಿ ಬದುಕುವ ಜಿರಳೆಯನ್ನು ಆದರ್ಶವಾಗಿ ತೆಗೆದುಕೊಳ್ಳಿ ಎನ್ನುತ್ತಾರೆ ಚೇತನ್ ಭಗತ್.

ಪ್ರಕೃತಿಯ ಬದಲಾವಣೆಗೆ ಹೊಂದಿಕೊಳ್ಳಬೇಕು

ಅವರು ಹೇಳುವಂತೆ ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ಅಥವಾ ಎಷ್ಟೇ ಬಲಶಾಲಿಯಾಗಿದ್ದರೂ ಪ್ರಕೃತಿಗೆ ನಿಮ್ಮ ಅಗತ್ಯವಿಲ್ಲ. ಇದನ್ನು ಕಲಿತು ಹೊಂದಿಕೊಂಡರೆ ಮಾತ್ರ ಈ ಪ್ರಕೃತಿಯಲ್ಲಿ ಬದುಕಲು ಸಾಧ್ಯ. ಇಲ್ಲದಿದ್ದರೆ ಇಡೀ ಜನಾಂಗವೇ ನಾಶವಾಗುತ್ತದೆ. ಲಕ್ಷಾಂತರ ವರ್ಷಗಳ ಹಿಂದೆ ಡೈನೋಸಾರ್ ಎಂಬ ದೈತ್ಯ ಪ್ರಾಣಿಗಳು ಇದ್ದವು. ಅವು ಈ ಭೂಮಿಯ ಮೇಲೆ ಜೀವಿಸಿರುವ ಅತಿ ದೊಡ್ಡ ಪ್ರಾಣಿಗಳು. ಅವು ಆನೆಗಳಿಗಿಂತ ಬಲಶಾಲಿ. ಯಾರೂ ಉದ್ದೇಶಪೂರ್ವಕವಾಗಿ ಅವುಗಳನ್ನು ನಾಶಪಡಿಸಲಿಲ್ಲ. ಒಂದು ಕಾಲದಲ್ಲಿ ಜಗತ್ತನ್ನು ಆಳಿದ್ದ ಪ್ರಾಣಿಗಳವು. ಆದರೆ ಮಂಜುಗಡ್ಡೆ ಕರಗಲು ಪ್ರಾರಂಭಿಸಿದಾಗ ಮತ್ತು ಟೆಕ್ಟೋನಿಕ್ ಪ್ಲೇಟ್‌ಗಳು ಸ್ಥಳಾಂತರಗೊಳ್ಳಲು ಪ್ರಾರಂಭಿಸಿದಾಗ, ಡೈನೋಸಾರ್‌ಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಇಡೀ ಸಂಕುಲವೇ ನಶಿಸಿಹೋಯಿತು.

ಆದರೆ ಈ ಜಿರಳೆಗಳು ಹಾಗಲ್ಲ, ಪ್ರಕೃತಿಯಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತವೆ. ಅದಕ್ಕೆ ತಕ್ಕಂತೆ ತಮ್ಮನ್ನು ತಾವು ಮಾರ್ಪಾಟು ಮಾಡಿಕೊಳ್ಳುತ್ತವೆ. ಅಷ್ಟೇ ಏಕೆ ಶಕ್ತಿಶಾಲಿ ಡೈನೋಸಾರ್‌ಗಳು ಅಳಿದು ಹೋದರೂ ಜಿರಳೆಗಳು ಇನ್ನೂ ಜೀವಂತವಾಗಿವೆ. ಮನುಷ್ಯ ಜೀವನದಲ್ಲಿ ಯಶಸ್ವಿಯಾಗಲು ಹೊಂದಿಕೊಳ್ಳುವ ಮನಸ್ಥಿತಿ ಹೊಂದಿರಬೇಕು. ಪರಿಸ್ಥಿತಿಗಳು ಮತ್ತು ಸ್ವಭಾವಕ್ಕೆ ಅನುಗುಣವಾಗಿ ಒಬ್ಬನು ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ಅವನು ಏನನ್ನಾದರೂ ಸಾಧಿಸಲು ಸಾಧ್ಯ.

ಆದಿಮಾನವನೂ ಹಾಗೆ ತನ್ನನ್ನು ತಾನು ಪರಿಸ್ಥಿತಿಗೆ ತಕ್ಕಂತೆ ಹೊಂದಿಸಿಕೊಂಡು ಬದುಕಿದ್ದ. ಒಂದು ಕಾಲದಲ್ಲಿ ಆದಿಮಾನವರು ಎಲೆಗಳನ್ನು ತಿಂದು ಬದುಕುತ್ತಿದ್ದರು. ನಂತರ ಅವರು ಕೀಟಗಳನ್ನು ತಿನ್ನುತ್ತಿದ್ದರು. ನಂತರ ಹಸಿರು ಎಲೆಗಳನ್ನು ತಿಂದು ಬದುಕಿದ, ನಂತರ ಹುರಿದ ಮಾಂಸವನ್ನು ತಿಂದು ಬದುಕುತ್ತಾನೆ. ಈಗ ಮನುಷ್ಯರು ಸಿರಿಧಾನ್ಯ, ಅಕ್ಕಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಗೆಯೇ ಜೀವನದಲ್ಲಿ, ಎಲ್ಲದರಲ್ಲೂ ಹೊಂದಿಕೊಂಡು, ಸಂದರ್ಭಗಳಿಗೆ ತಕ್ಕಂತೆ ಬದುಕುವುದನ್ನು ಕಲಿತರೆ, ಆ ವ್ಯಕ್ತಿ ಯಾವಾಗಲೂ ತನಗೆ ಬೇಕಾದುದನ್ನು ಸಾಧಿಸಬಹುದು. ಜೀವನದಲ್ಲಿ ಯಶಸ್ಸು ಗಳಿಸಲು ಯಾವುದೇ ಪರಿಸ್ಥಿತಿಗೂ ಮನುಷ್ಯ ಹೊಂದಿಕೊಳ್ಳಬೇಕು.

    ಹಂಚಿಕೊಳ್ಳಲು ಲೇಖನಗಳು