logo
ಕನ್ನಡ ಸುದ್ದಿ  /  ಜೀವನಶೈಲಿ  /  Sunday Motivation: ದಿನಕ್ಕೊಂದು ಸ್ಫೂರ್ತಿಮಾತು; ಪ್ರತಿದಿನ ಬೆಳಗ್ಗೆ ಎದ್ದಾಗ ಈ ಕೆಲಸ ಮಾಡಿದರೆ ಜೀವನ ಪ್ರಶಾಂತವಾಗಿರುತ್ತೆ

Sunday Motivation: ದಿನಕ್ಕೊಂದು ಸ್ಫೂರ್ತಿಮಾತು; ಪ್ರತಿದಿನ ಬೆಳಗ್ಗೆ ಎದ್ದಾಗ ಈ ಕೆಲಸ ಮಾಡಿದರೆ ಜೀವನ ಪ್ರಶಾಂತವಾಗಿರುತ್ತೆ

Raghavendra M Y HT Kannada

Apr 28, 2024 08:32 AM IST

ಪ್ರತಿದಿನ ಬೆಳಗ್ಗೆ ಎದ್ದಾಗ ಈ ಕೆಲಸ ಮಾಡಿದರೆ ಜೀವನ ಪ್ರಶಾಂತವಾಗಿರುತ್ತೆ. ಅಲ್ಲದೆ, ಇಡೀ ಖುಷಿಯಾಗಿ ಇರುತ್ತೀರಿ.

    • Sunday Motivation: ಜೀವನ ಪ್ರಶಾಂತವಾಗಿರಬೇಕೆಂದರೆ ಪ್ರತಿದಿನ ಬೆಳಗ್ಗೆ ಎದ್ದಾಗ ಕೆಲವೊಂದು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಕೆಲಸಗಳನ್ನು ನಿಮ್ಮನ್ನು ಪ್ರಶಾಂತವಾಗಿ ಇಡುವ ಜೊತೆಗೆ ಇಡೀ ದಿನ ಖುಷಿಯಾಗಿ ಇರುತ್ತೀರಿ.
ಪ್ರತಿದಿನ ಬೆಳಗ್ಗೆ ಎದ್ದಾಗ ಈ ಕೆಲಸ ಮಾಡಿದರೆ ಜೀವನ ಪ್ರಶಾಂತವಾಗಿರುತ್ತೆ. ಅಲ್ಲದೆ, ಇಡೀ ಖುಷಿಯಾಗಿ ಇರುತ್ತೀರಿ.
ಪ್ರತಿದಿನ ಬೆಳಗ್ಗೆ ಎದ್ದಾಗ ಈ ಕೆಲಸ ಮಾಡಿದರೆ ಜೀವನ ಪ್ರಶಾಂತವಾಗಿರುತ್ತೆ. ಅಲ್ಲದೆ, ಇಡೀ ಖುಷಿಯಾಗಿ ಇರುತ್ತೀರಿ.

ಬೆಳಗ್ಗೆ ಎದ್ದಾಗ ನೀವು ಮಾಡುವ ಮೊದಲ ಕೆಲಸ ಯಾವುದು? ಫೋನ್ ನೋಡುತ್ತಾ ಕುಳಿತುಕೊಳ್ಳುವುದು. ಸಾಮಾಜಿಕ ಜಾಲತಾಣಗಳನ್ನು ನೋಡುವ ಮೂಲಕ ಇಡೀ ದಿನವನ್ನು ಗೊಂದಲವಾಗಿಸಿಕೊಳ್ಳುವುದು. ನೀವೇನಾದರೂ ಪ್ರಶಾಂತವಾಗಿರಬೇಕೆಂದು ಬಯಸಿದರೆ ನಿಮ್ಮ ದಿನಚರಿಯಲ್ಲಿ ಈ ಅಭ್ಯಾಸಗಳಿಗೆ ಫುಲ್‌ಸ್ಟಾಪ್ ಇಡಿ. ದಿನದ ಆರಂಭ ಯಾವಾಗಲೂ ಅಧ್ಯಾತ್ಮಿಕ ರೀತಿಯಲ್ಲಿ ಇರಬೇಕು.

ಟ್ರೆಂಡಿಂಗ್​ ಸುದ್ದಿ

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ಚಾರ್‌ ಧಾಮ್‌ ಯಾತ್ರೆ; ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ

ಸೋಷಿಯಲ್‌ ಮೀಡಿಯಾದಲ್ಲಿ 'ಬರ್ಡ್‌ ಟೆಸ್ಟ್‌' ಟ್ರೆಂಡಿಂಗ್‌; ಜೋಡಿ ಹಕ್ಕಿಗಳ ಟೆಸ್ಟ್‌ನಲ್ಲಿದೆ ಟ್ವಿಸ್ಟ್

ಭಾರತೀಯರಿಗೆ ಸನ್‌ಸ್ಕ್ರೀನ್‌ ಅವಶ್ಯಕತೆ ಇಲ್ವಾ, ಇದನ್ನ ಹಚ್ಚಿಲ್ಲ ಅಂದ್ರೆ ಏನಾಗುತ್ತೆ? ತ್ವಚೆಯ ಕಾಳಜಿ ಕುರಿತು ಮಹತ್ವದ ಸಲಹೆಯಿದು

ಕೆಲಸಗಳಿಂದ ನಮ್ಮ ಮನಸ್ಸು ತುಂಬಾ ಬ್ಯುಸಿಯಾಗಿರುತ್ತದೆ. ನಿಮ್ಮ ಮನಸ್ಸಿಗೆ ವಿಶ್ರಾಂತಿಯನ್ನು ನೀಡಬೇಕು. ನೀವು ಶಾಂತವಾಗಿರಬೇಕಾದ ಸಮಯ ಯಾವುದು ಎಂದರೆ ಅದು ಬೆಳಗ್ಗೆ ಎದ್ದೇಳುವಂತ ಸಮಯವಾಗಿದೆ. ಪ್ರತಿದಿನ ಬೆಳಗ್ಗೆ ಕೆಲವು ರೀತಿಯ ಕೆಲಸಗಳನ್ನು ಮಾಡಬೇಕು. ಇವು ಅಧ್ಯಾತ್ಮಿಕ ಸ್ವಭಾವವನ್ನು ಹೆಚ್ಚಿಸುತ್ತದೆ. ಜೊತೆಗೆ ಇಡೀ ದಿನ ನಿಮ್ಮನ್ನು ಪ್ರಶಾಂತವಾಗಿರುವಂತೆ ಮಾಡುತ್ತದೆ.

ಬೆಳಗ್ಗೆ ಎದ್ದ ತಕ್ಷಣ ಫೋನ್, ಟಿವಿ, ಸೋಷಿಯಲ್ ಮಿಡಿಯಾ ಅಕೌಂಟ್‌ಗಳನ್ನು ನೋಡುವುದನ್ನು ನಿಲ್ಲಿಸಿ. ಸ್ವಲ್ಪ ಹೊತ್ತು ಶಾಂತವಾಗಿ ಕುಳಿತುಕೊಳ್ಳಿ. ಕಾಲು ಗಂಟೆ ಧ್ಯಾನ ಮಾಡಿ. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಏಳುವುದನ್ನು ರೂಢಿ ಮಾಡಿಕೊಂಡರೆ ತುಂಬಾ ಒಳ್ಳೆಯದು. ನಿಮಗೆ ತುಂಬಾ ಕಂಫರ್ಟ್ ಎನ್ನುವಂತ ಸ್ಥಳದಲ್ಲಿ ಕುಳಿತುಕೊಂಡು ಉಸಿರಾಟದ ಮೇಲೆ ಕೇಂದ್ರೀಕರಿಸಿ. ಯಾವುದೇ ಆಲೋಚನೆಗಳನ್ನು ಮಾಡಬೇಡಿ. ಉಸಿರಾಟದ ವ್ಯಾಯಮ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ಒತ್ತಡವೂ ಕಡಿಮೆಯಾಗುತ್ತದೆ.

ಪ್ರತಿದಿನ ಬೆಳಗ್ಗೆ ಹೀಗೆ ಮಾಡುವುದರಿಂದ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ. ತುಂಬಾ ಶಾಂತವಾಗಿರುತ್ತೀರಿ. ಆಗ ನಿಮ್ಮ ಬಗ್ಗೆ ಯೋಚಿಸಬೇಕು. ನೀವು ಏನು ಮಾಡಲು ಬಯಸುತ್ತೀರಿ ಹಾಗೂ ಅದನ್ನು ಅನುಸರಿಸಲು ಕೈಗೊಳ್ಳಬೇಕಾದ ಹಂತಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಕಣ್ಣುಗಳನ್ನು ಮುಚ್ಚಿ ನಿಮ್ಮ ಜೀವನದಲ್ಲಿ ನಡೆದಿರುವ ಒಳ್ಳೆಯ ಸಂಗತಿಗಳ ಬಗ್ಗೆ ಯೋಚಿಸಿ. ಇದು ನಿಮ್ಮಲ್ಲಿ ಸಂತೋಷ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ನಾಳೆ ಏನು ಮಾಡಬೇಕೆಂದು ಹಿಂದಿನ ದಿನ ಡೈರಿಯಲ್ಲಿ ಬರೆಯಿರಿ. ನಿಮಗೆ ಸಂತೋಷ ನೀಡಿದ ಮೂರು ವಿಷಯಗಳು ಮತ್ತು ನಿಮ್ಮನ್ನು ಅಸಮಾಧಾನಗೊಳಿಸಿದ ಮೂರು ವಿಷಯಗಳನ್ನು ಬರೆಯಿರಿ. ಇವುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ನಿಮ್ಮ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಸಮಯದವರೆಗೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸ್ವಲ್ಪ ಹೊತ್ತು ಬೆಳಗಿನ ನಡಿಗೆ, ಗಿಡಗಳಿಗೆ ನೀರು ಹಾಕುವುದು, ಆರು ಗಂಟೆಗೆ ಕಾಫಿ ಕುಡಿಯುತ್ತಾ ಹೊರಗಡೆ ಕೂರುವುದು ಎಲ್ಲವನ್ನೂ ಮಾಡಿ. ಸೂರ್ಯ ಮತ್ತು ಪ್ರಕೃತಿ ನಿಮ್ಮ ಉತ್ತಮ ಸ್ನೇಹಿತರು. ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಫೋನ್ ನೋಡಬೇಡಿ. ಎಚ್ಚರವಾದ ನಂತರ ಸ್ವಲ್ಪ ಸಮಯವದೆರೆ ನಿಮ್ಮ ಸಾಕುಪ್ರಾಣಿಗಳೊಂದಿಗೆ ಆಟವಾಡಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ. ನಿಮ್ಮ ಆಯ್ಕೆಯ ಕಾಫಿ ಮತ್ತು ಚಾಹವನ್ನು ಕುಡಿಯಿರಿ. ಸ್ವಲ್ಪ ಹೊತ್ತು ವ್ಯಾಯಾಮ ಮಾಡಿ. ಯೋಗ ಮತ್ತು ನಗುವ ವ್ಯಾಯಾಮವನ್ನು ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಪ್ರತಿದಿನ ಬೆಳಗ್ಗೆ ನಿಮಗೆ ಇಷ್ಟವಾದದ್ದನ್ನು ಮಾಡುವುದರಿಂದ ಇಡೀ ದಿನವನ್ನು ಹೆಚ್ಚು ರೋಮಾಂಚನಗೊಳಿಸುತ್ತದೆ. ನಿಮ್ಮಲ್ಲಿ ಧನಾತ್ಮಕತೆ ಹೆಚ್ಚುತ್ತದೆ. ಮನಸಿದ್ದರೆ ಮಾರ್ಗ. ಹೀಗಾಗಿ ನಮ್ಮ ಜೀವನವನ್ನು ಹೇಗೆ ಬೇಕೋ ಹಾಗೆ ರೂಪಿಸಿಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು