ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮದರಸಾಗಳಲ್ಲಿ ಅರೇಬಿಕ್‌ ಜತೆಗೆ ಸಂಸ್ಕೃತವನ್ನೂ ಕಡ್ಡಾಯವಾಗಿ ಕಲಿಸುತ್ತೇವೆ ಎಂದ ವಕ್ಫ್‌ ಬೋರ್ಡ್ ಚೇರ್‌ಮನ್‌

ಮದರಸಾಗಳಲ್ಲಿ ಅರೇಬಿಕ್‌ ಜತೆಗೆ ಸಂಸ್ಕೃತವನ್ನೂ ಕಡ್ಡಾಯವಾಗಿ ಕಲಿಸುತ್ತೇವೆ ಎಂದ ವಕ್ಫ್‌ ಬೋರ್ಡ್ ಚೇರ್‌ಮನ್‌

HT Kannada Desk HT Kannada

Sep 14, 2023 03:09 PM IST

ಮದರಸಾ (ಕಡತ ಚಿತ್ರ)

  • ಉತ್ತರಾಖಂಡದ 117 ಮದರಸಾಗಳಲ್ಲಿ ವಿಜ್ಞಾನ, ಗಣಿತ, ಅರೇಬಿಕ್ ಜತೆಗೆ ಸಂಸ್ಕೃತವನ್ನೂ ಹೇಳಿಕೊಡಲಾಗುವುದು. ಮದರಸಾಗಳ ಆಧುನೀಕರಣ ಯೋಜನೆ ಪ್ರಕಾರ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಜಾರಿಗೆ ತರಲಾಗುತ್ತಿದೆ ಎಂದು ವಕ್ಫ್‌ ಬೋರ್ಡ್ ಚೇರ್‌ಮನ್‌ ಶಾಬಾದ್ ಶಾಮ್ಸ್ ಹೇಳಿದ್ದಾರೆ.

ಮದರಸಾ (ಕಡತ ಚಿತ್ರ)
ಮದರಸಾ (ಕಡತ ಚಿತ್ರ) (HT News )

ಉತ್ತರಾಖಂಡದಲ್ಲಿ ವಕ್ಫ್‌ ಬೋರ್ಡ್‌ (Uttarakhand Waqf Board) ಅಧೀನದಲ್ಲಿರುವ ಮದರಸಾಗಳಲ್ಲಿ ಸಂಸ್ಕೃತವನ್ನು (Sanskrit) ಕಡ್ಡಾಯವಾಗಿ ಕಲಿಸಲಾಗುವುದು ಎಂದು ವಕ್ಫ್‌ ಬೋರ್ಡ್ ಅಧ್ಯಕ್ಷ ಶಾಬಾದ್ ಶಾಮ್ಸ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಮದರಸಾಗಳನ್ನು ಆಧುನೀಕರಿಸುವ ಯೋಜನೆ ಪ್ರಕಾರ 117 ಮದರಸಾಗಳಲ್ಲಿ ವಿಜ್ಞಾನ, ಗಣಿತ, ಅರೇಬಿಕ್ ಮತ್ತು ಸಂಸ್ಕೃತವನ್ನು ಕಲಿಸಲಾಗುತ್ತದೆ. ಇದಕ್ಕಾಗಿ ಮಂಡಳಿಯು ಸಂಸ್ಕೃತ ಮತ್ತು ಅರೇಬಿಕ್ ಎರಡಕ್ಕೂ ಶಿಕ್ಷಕರನ್ನು ನೇಮಿಸುತ್ತದೆ ಈ ಮದರಸಾಗಳಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮವನ್ನು ಜಾರಿಗೆ ತರುವುದಾಗಿ ಶಾಮ್ಸ್ ಹೇಳಿದರು.

“ನಾವು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರೀತಿಸಬೇಕು ಮತ್ತು ಅದನ್ನು ಗೌರವಿಸಬೇಕು. ನಾವು ಮದರಸಾಗಳಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಎರಡಕ್ಕೂ ಶಿಕ್ಷಕರನ್ನು ನೇಮಿಸುತ್ತೇವೆ. ಇದರಿಂದ ಅವರು ನಮ್ಮ ಸಂಸ್ಕೃತಿಯನ್ನು ಕಲಿಯಬಹುದು. ಮದರಸಾ ವಿದ್ಯಾರ್ಥಿಗಳು ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಯಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಸರ್ಕಾರ ನೀಡಲಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ" ಎಂದು ಅವರು ಹೇಳಿದರು.

ಇದನ್ನೂ ಓದಿ| ಸಂಸತ್‌ ಸಿಬ್ಬಂದಿಗೆ ಹೊಸ ಯೂನಿಫಾರಂ: ಕಮಲ ಚಿಹ್ನೆ ಬಳಕೆಗೆ ಪ್ರತಿಪಕ್ಷಗಳ ಆಕ್ಷೇಪ

“ಮುಖ್ಯವಾಗಿ, ಬಡತನದ ಹಿನ್ನೆಲೆಯ ಮಕ್ಕಳು ಮತ್ತು ಅನಾಥರು ಮದರಸಾಗಳಿಗೆ ಹೋಗುತ್ತಾರೆ. ಅವರಿಗೆ ಸಾಂಪ್ರದಾಯಿಕವಾಗಿ ಕೇವಲ ಅರೇಬಿಕ್ ಮತ್ತು ಕುರಾನ್ ಕಲಿಸಲಾಗುತ್ತದೆ. ಇಂತಹ ಹಿನ್ನೆಲೆಯ ಮಕ್ಕಳಿಗೆ ಅವಕಾಶ ಸಿಕ್ಕರೆ ಅದ್ಭುತಗಳನ್ನು ಸಾಧಿಸಬಹುದು. ಅವರು ಇಂಜಿನಿಯರ್, ವಿಜ್ಞಾನಿ, ಡಾಕ್ಟರ್ ಆಗಬಹುದು. ನಮ್ಮ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರೇ ಇದಕ್ಕೆ ಪರಿಪೂರ್ಣ ಉದಾಹರಣೆ" ಎಂದು ಶಾಮ್ಸ್ ಹೇಳಿದರು.

ಮದರಸಾಗಳಲ್ಲಿ ಕುರಾನ್ ಮತ್ತು ಹದೀಸ್ ಬೋಧನೆ ಮುಗಿದ ನಂತರ, ಬೆಳಿಗ್ಗೆ 8.30 ರಿಂದ, ಆಧುನಿಕ ಶಿಕ್ಷಣ ಆಧಾರಿತ ತರಗತಿಗಳು ಮಧ್ಯಾಹ್ನ 2 ರವರೆಗೆ ನಡೆಯುತ್ತವೆ. ಮದರಸಾಗಳ ಆಧುನೀಕರಣದ ಒಟ್ಟು ಯೋಜನೆಯಲ್ಲಿ ಅಧ್ಯಯನ ಬೆಂಚ್‌ಗಳು ಮತ್ತು ಸಮವಸ್ತ್ರಗಳ ಪರಿಚಯದಂತಹ ಮೂಲಸೌಕರ್ಯಗಳ ಉನ್ನತೀಕರಣವೂ ಒಳಗೊಂಡಿದೆ.

ಇದನ್ನೂ ಓದಿ| ಸಂಸತ್ತಿನ ವಿಶೇಷ ಅಧಿವೇಶನ ಸೆಪ್ಟೆಂಬರ್ 18 ರಿಂದ 5 ದಿನ, ಕಾರ್ಯಸೂಚಿ ಮತ್ತು ಇತರೆ ವಿವರ ಹೀಗಿದೆ

ಈ ಕಸರತ್ತಿನ ಮೊದಲ ಹಂತ ಪೂರ್ಣಗೊಂಡ ನಂತರ, ಎರಡನೇ ಹಂತದ ಆಧುನೀಕರಣ ಕಾರ್ಯಕ್ರಮದಲ್ಲಿ ಹೆಚ್ಚಿನ ಜಿಲ್ಲೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ, ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವ ನಾಲ್ಕು ಮಾದರಿ ಮದರಸಾಗಳನ್ನು ತಯಾರಿಸುತ್ತೇವೆ. ಲಿಂಕ್‌ಗಳ ಮೂಲಕ ಅದರ ಆನ್‌ಲೈನ್ ಸ್ಟ್ರೀಮ್ ಅನ್ನು ಖಚಿತಪಡಿಸಿಕೊಳ್ಳುತ್ತೇವೆ ಎಂದು ವಕ್ಫ್ ಮಂಡಳಿಯ ಅಧ್ಯಕ್ಷ ಶಾಮ್ಸ್ ವಿವರಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ವಕ್ಫ್ ಮಂಡಳಿಯ ಎಲ್ಲ ಮದರಸಾಗಳಲ್ಲಿ ಸಮಾನ ವಸ್ತ್ರಸಂಹಿತೆ ಜಾರಿಗೊಳಿಸುವುದಾಗಿ ಶಾಮ್ಸ್ ಘೋಷಿಸಿದ್ದರು.

ಉತ್ತರಾಖಂಡದಲ್ಲಿರುವ ಮದರಸಾಗಳೆಷ್ಟು

ವಕ್ಫ್‌ ಮಂಡಳಿ ಅಧ್ಯಕ್ಷ ಘೋಷಿಸಿರುವ ಉಪ್ರಕಮದ ಮಾಹಿತಿ ಅಥವಾ ಅರಿವು ಇಲ್ಲ. ಮದರಸಾ ಶಿಕ್ಷಣ ಮಂಡಳಿ ವ್ಯಾಪ್ತಿಯಲ್ಲಿ 419 ಮದರಸಾಗಳಿವೆ ಎಂದು ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿಯ ನಿರ್ದೇಶಕ ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಮಂಡಳಿಯ ಮಾಜಿ ಅಧಿಕಾರಿಗಳ ಪ್ರಕಾರ ಉತ್ತರಾಖಂಡದಲ್ಲಿ 800ರಿಂದ 1000 ಮದರಸಾಗಳಿವೆ. ಈ ಪೈಕಿ 400 ಮದರಸಾಗಳು ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿವೆ.

ಉತ್ತರಾಖಂಡದಲ್ಲಿ 2011ರ ಜನಗಣತಿ ಪ್ರಕಾರ ಶೇಕಡ 13.9 ಮುಸ್ಲಿಂ ಸಮುದಾಯದವರಿದ್ದಾರೆ. ಬಹುಪಾಲು ಮುಸ್ಲಿಮರು ತೆರಾಯಿ ಪ್ರದೇಶದಲ್ಲಿದ್ದಾರೆ. ಹರಿದ್ವಾರ, ಉದ್ಧಾಮ್ ಸಿಂಗ್‌ ನಗರ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದ ಪ್ರಮಾಣ ಶೇಕಡ 34 ಮತ್ತು ಶೇಕಡ 22ರಷ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ