ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  West Bengal: ಸಂದೇಶ್‌ಖಾಲಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಕಿರಾತಕರ ವಿರುದ್ಧ ತಿರುಗಿಬಿದ್ದ ಮಹಿಳೆಯರು -10 ಪ್ರಮುಖ ಅಂಶಗಳಿವು

West Bengal: ಸಂದೇಶ್‌ಖಾಲಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಕಿರಾತಕರ ವಿರುದ್ಧ ತಿರುಗಿಬಿದ್ದ ಮಹಿಳೆಯರು -10 ಪ್ರಮುಖ ಅಂಶಗಳಿವು

Raghavendra M Y HT Kannada

Feb 20, 2024 10:11 AM IST

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ನಾಯಕ ಶೇಕ್ ಶಾಜಹಾನ್ ವಿರುುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು.

  • Sandeshkhali Facts: ಬಂದೂಕು ತೋರಿಸಿ ಬೆದರಿಸಿ, ಗಂಡನ ಮೇಲೆ ಹಲ್ಲೆ ನಡೆಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳ ವಿಚಾರದಲ್ಲಿ ಬಂಗಾಳ ಸರ್ಕಾರದ ನಡವಳಿಕೆ ವಿರುದ್ಧ ಬೀದಿಗಿಳಿದಿರುವ ಸಂದೇಶ್‌ಖಾಲಿ ಮಹಿಳೆಯರು ಮಮತಾ ಬ್ಯಾನರ್ಜಿ ವಿರುದ್ಧ ಸಿಟ್ಟಿಗೆದಿದ್ದಾರೆ. ಇದನ್ನ ಲೋಕಸಭಾ ಚುನಾವಣೆಯ 'ಟರ್ನಿಂಗ್ ಪಾಯಿಂಟ್' ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ನಾಯಕ ಶೇಕ್ ಶಾಜಹಾನ್ ವಿರುುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿ ನಾಯಕ ಶೇಕ್ ಶಾಜಹಾನ್ ವಿರುುದ್ಧ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ದ್ವೀಪ ಇದೀಗ ದೇಶದ ಗಮನ ಸೆಳೆದಿದೆ. ಮಹಿಳಾ ಮುಖ್ಯಮಂತ್ರಿ, ಮಹಿಳಾ ಸಂಸದೆ ಇದ್ದರೂ ಇಲ್ಲಿನ ಮಹಿಳೆಯರಿಗೆ ದುಷ್ಟರಿಂದ ರಕ್ಷಣೆ ಸಿಕ್ಕಿಲ್ಲ. ಈವರೆಗೆ ಒಂದು ಸಮುದಾಯವಾಗಿ ಮಮತಾ ಬ್ಯಾನರ್ಜಿ ಬೆನ್ನಿಗೆ ನಿಂತಿದ್ದ ಮಹಿಳೆಯರು ಇದೀಗ ತಮ್ಮ ಮೇಲೆ ಲೈಂಗಿಕ ಶೋಷಣೆ ನಡೆಸಿದವರ ವಿರುದ್ಧ ಕ್ರಮ ಜರುಗಿಸದ ಪೊಲೀಸರ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

SBI FD Rate Hike: ಸ್ಥಿರ ಠೇವಣಿಗಳ ಬಡ್ಡಿದರ ಹೆಚ್ಚಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಎಸ್‌ಬಿಐ ಎಫ್‌ಡಿಗಳ ಬಡ್ಡಿದರ ವಿವರ ಹೀಗಿದೆ

Monsoon2024: ಮೇ19ಕ್ಕೆ ಮಾನ್ಸೂನ್ ಭಾರತ ಪ್ರವೇಶ, ಬೇಗನೇ ಮಳೆ ಆರಂಭದ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

Gold Rate Today: ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ, ಚಿನ್ನದೊಂದಿಗೆ ಬೆಳ್ಳಿ ಬೆಲೆಯೂ ಇಳಿಕೆ; ರಾಜ್ಯದಲ್ಲಿಂದು ದರ ಎಷ್ಟಿದೆ ಗಮನಿಸಿ

ಈ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದ್ದು ಸರ್ಕಾರಕ್ಕೆ ಚಾಟಿಯೇಟು ಕೊಟ್ಟಿದೆ. ಸುಪ್ರೀಂಕೋರ್ಟ್‌ನಲ್ಲಿಯೂ ಪ್ರಕರಣ ಪ್ರತಿಧ್ವನಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಸಂದೇಶ್‌ಖಾಲಿ ದ್ವೀಪಕ್ಕೆ ಭೇಟಿ ನೀಡಲಿದ್ದು, ಈ ಪ್ರಕರಣವನ್ನು ಲೋಕಸಭಾ ಚುನಾವಣೆ ದೃಷ್ಟಿಯಿಂದ "ಮಮತಾ ಬ್ಯಾನರ್ಜಿಯ ಪತನದ ಮುನ್ನುಡಿ, ಬಿಜೆಪಿ ಪಾಲಿಗೆ ಟರ್ನಿಂಗ್ ಪಾಯಿಂಟ್" ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸಂದೇಶ್‌ಖಾಲಿ ಪ್ರಕರಣದ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳಿವು.

1) ಎಲ್ಲಿದೆ ಸಂದೇಶ್‌ಖಾಲಿ?

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸುಂದರಬನ್ಸ್‌ನಲ್ಲಿ ಸಂದೇಶ್‌ಖಾಲಿ ದ್ವೀಪವಿದೆ. ರಾಜಧಾನಿ ಕೋಲ್ಕತ್ತಾದಿಂದ ಸುಮಾರು 75 ಕಿಲೋ ಮೀಟರ್ ದೂರದಲ್ಲಿದೆ.

2) ಷಹಜಹಾನ್ ಶೇಖ್ ಯಾರು?

ಶೇಖ್ ಷಹಜಹಾನ್ ಟಿಎಂಸಿಯ ಪ್ರಭಾವಿ ನಾಯಕರಾಗಿದ್ದಾರೆ. ಇವರ ವಿರುದ್ಧ ಹಲವು ಅಪರಾಧದ ಆರೋಪಗಳು ಕೇಳಬಂದಿದ್ದು, ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂದೇಶ್‌ಖಾಲಿ ದ್ವೀಪದಲ್ಲಿ ಅಶಾಂತಿಯು ದೊಡ್ಡ ರಾಜಕೀಯ ಗದ್ದಲಕ್ಕೆ ತಿರುಗಿದೆ.

3) ಭೂ ಅತಿಕ್ರಮಣದ ಆರೋಪಗಳು

ಇಲ್ಲಿನ ಅಧಿಕಾರಿಗಳು ಪಶ್ಚಿಮ ಬಂಗಾಳದ ಸಾರ್ವಜನಿಕ ಭೂಮಿ (ಅನಧಿಕೃತ ಒತ್ತುವರಿದಾರರ ತೆರವು) ಕಾಯಿದೆ, 1962ರ ಶಾಸನಬದ್ಧ ನಿಬಂಧನೆಗಳನ್ನು ಅನುಸರಿಸಿದೆ ಖಾಸಗಿ ಕಟ್ಟಡಗಳ ತೆರವು ಕೂಡ ಅಲ್ಲಿನ ಜನರು ಸಿಡಿದೇಳುವಂತೆ ಮಾಡಿದೆ. ನ್ಯಾಯಾಂಗ ಪ್ರಕ್ರಿಯೆಗಳನ್ನು ನಿರ್ಲಕ್ಷಿಸಿರುವ ಆರೋಪದಲ್ಲಿ ಕಲ್ಕತ್ತ ಹೈಕೋರ್ಟ್ ಕೂಡ ಅಧಿಕಾರಿಗಳಿಗೆ ದಂಡ ಹಾಕಿದ್ದರು.

4) ರೇಷನ್ ಹಗರಣ

ಬಹುಕೋಟಿ ಪಡಿತರ ವಿತರಣೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಪಶ್ಚಿಮ ಬಂಗಾಳ ಸಚಿವೆ ಜ್ಯೋತಿ ಪ್ರಿಯಾ ಮಲ್ಲಿಕ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಪಡಿತರ ವಿತರಣೆ ಹಗರಣದಲ್ಲಿ ಜ್ಯೋತಿ ಪ್ರಿಯಾ ಮಲ್ಲಿಕಾ ಅವರನ್ನು ಅರೆಸ್ಟ್ ಕೂಡ ಮಾಡಲಾಗಿತ್ತು.

5) ಕಲ್ಕತ್ತಾ ಹೈಕೋರ್ಟ್ ಚಾಟಿ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿನ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತ ಹಲ್ಲೆಗಳ ವರದಿ ಹಿನ್ನೆಲೆಯಲ್ಲಿ ಅಲ್ಲಿನ ಹೈಕೋರ್ಟ್ ಕೂಡ ಮಧ್ಯಪ್ರವೇಶಿಸಿದ್ದು, ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿರುವ ಕೋರ್ಟ್ ಸಂದೇಶ್‌ಖಾಲಿಗೆ ಭೇಟಿ ನೀಡಲು ಅನುಮತಿ ನೀಡಿದೆ.

6) ಸುಪ್ರೀಂಕೋರ್ಟ್‌ನಲ್ಲೂ ಪ್ರತಿಧ್ವನಿಸಿದ ಪ್ರಕರಣ

ಸಂದೇಶ್‌ಖಾಲಿ ಪ್ರಕರಣದಲ್ಲಿ ಲೋಕಸಭೆಯ ವಿಶೇಷಾಧಿಕಾರಿಗಳ ಸಮಿತಿಯು ತಮ್ಮ ಮುಂದೆ ಹಾಜರಾಗುವಂತೆ ಪಶ್ಚಿಮ ಬಂಗಾಳ ಅಧಿಕಾರಿಗಳಿಗೆ ನೀಡಿದ್ದ ನೋಟಿಸ್‌ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಲ್ಲದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.

7) ಮಹಿಳೆಯರು ಬೀದಿಯಲ್ಲಿದ್ದಾಗ ಸಂಸದೆ ವ್ಯಾಲಂಟೈನ್ಸ್‌ ಡೇ ಆಚರಣೆ

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತ ಹಲ್ಲೆಗಳನ್ನು ಖಂಡಿಸಿ ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತನ್ನ ಪತಿ, ನಟ ಯಶ್ ದಾಸ್‌ಗುಪ್ತಾ ಅವರೊಂದಿಗೆ ವ್ಯಾಂಟೇನ್ಸ್ ಡೇ ಆಚರಿಸಿಕೊಂಡಿರುವ ಅಲ್ಲಿನ ಜನರ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ನುಸ್ರತ್ ಜಹಾನ್ ಪ್ರೇಮಿಗಳ ದಿನ ಸಂಭ್ರಮಾಚರಣೆಯ ವಿಡಿಯೊವನ್ನು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

8) ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಕ್ರಮ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಗ್ರಾಮದಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರಾದ ಉತ್ತಮ್ ಸರ್ದಾರ್ ಮತ್ತು ಶಿಬಾಪ್ರಸಾದ್ ಹಜ್ರಾ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಕೆಲವು ದಿನಗಳ ನಂತರ ಅವರು ಸಾಮೂಹಿಕ ಅತ್ಯಾಚಾರಕ್ಕಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ) ವಿಭಾಗವನ್ನು ಸೇರಿಸಿದ್ದಾರೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ. ಇಬ್ಬರ ವಿರುದ್ಧ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮುಖ್ಯಸ್ಥರಾದ ರಾಜೀವ್ ಕುಮಾರ್ ತಿಳಿಸಿದ್ದಾರೆ.

9) ಕುಸಿಯುತ್ತಿದೆ ಟಿಎಂಸಿ ಕೋಟೆ, ಬಿಜೆಪಿಗೆ ಲಾಭ

ಆರೋಪಿಗಳ ವಿರುದ್ಧ ದೂರು ಕೊಟ್ಟರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂಬುದು ಜನರ ಆರೋಪವಾಗಿದೆ. ಈ ಸಂಬಂಧ ಆಡಳಿತ ಪಕ್ಷದ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶವೂ ಸಾಮಾನ್ಯರಲ್ಲಿದೆ. ಈ ಎಲ್ಲಾ ಬೆಳವಣಿಗಳನ್ನು ಗಮನಿಸಿದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ವರ್ಚಸ್ಸು ಕುಸಿಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಬಿಜೆಪಿಗೆ ಎಷ್ಟು ಲಾಭವಾಗಲಿದೆ ಅನ್ನೋದ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಲಿದೆ.

ಲೋಕಸಭೆ ಚುನಾವಣೆ ಹೊಸಿಲಲ್ಲಿ ಭುಗಿಲೆದ್ದಿರುವ ಈ ಪ್ರತಿಭಟನೆಯ ಕಾವು ಅಷ್ಟು ಸುಲಭಕ್ಕೆ ತಣಿಯುವುದಿಲ್ಲ. ಇಷ್ಟು ದಿನ ಸಂದೇಶ್‌ಖಾಲಿಯ ಭ್ರಷ್ಟರು ಮತ್ತು ಅತ್ಯಾಚಾರಿಗಳ ಬಗ್ಗೆ ಮಮತಾ ಬ್ಯಾನರ್ಜಿ ಗಟ್ಟಿಯಾಗಿ ಏನೂ ಹೇಳಿಲ್ಲ. ಈ ಹಿಂದೆ ಸಿಪಿಎಂ ಆಡಳಿತದಲ್ಲಿ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ರಾಜಕೀಯವಾಗಿ ಬಳಸಿಕೊಂಡು ಮಹಿಳೆಯರ ಮನಗೆದ್ದವರು ಮಮತಾ ಬ್ಯಾನರ್ಜಿ. ಆದರೆ ಈಗ ಅವರ ಪಕ್ಷದ ನಾಯಕನೇ ವಿಲನ್ ಆಗಿದ್ದಾನೆ. ಮಹಿಳೆಯರ ಬೆಂಬಲ ಕಳೆದುಕೊಂಡ ಟಿಎಂಸಿಗೆ ಹಿನ್ನಡೆ ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶ್‌ಖಾಲಿ ಭೇಟಿ ಘೋಷಣೆಯ ಮೂಲಕ ಬಿಜೆಪಿ ತನ್ನ ನಡೆಯನ್ನು ಸ್ಪಷ್ಟಪಡಿಸಿದೆ.

(This copy first appeared on Hindustan Times Kannada. To read more on politics, Lok Sabha Elections related news, political analysis please visit kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ