ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  New Ayodhya: ಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಿ; ಉತ್ತರ ಪ್ರದೇಶ ಮುಖ್ಯಕಾರ್ಯದರ್ಶಿಯ ವಿಶ್ವಾಸದ ನುಡಿ

New Ayodhya: ಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಿ; ಉತ್ತರ ಪ್ರದೇಶ ಮುಖ್ಯಕಾರ್ಯದರ್ಶಿಯ ವಿಶ್ವಾಸದ ನುಡಿ

HT Kannada Desk HT Kannada

Jan 14, 2023 10:00 AM IST

ಅಯೋಧ್ಯಾ ನಗರ (ಸಾಂದರ್ಭಿಕ ಚಿತ್ರ)

  • New Ayodhya: ಅಯೋಧ್ಯೆಯ ಪುನರುತ್ಥಾನ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಉತ್ತರ ಪ್ರದೇಶದ ಮು‍ಖ್ಯ ಕಾರ್ಯದರ್ಶಿ ದುರ್ಗಾಶಂಕರ್‌ ಮಿಶ್ರಾ, ಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಬಹುದು. ಆ ರೀತಿಯಾದ ಅಭಿವೃದ್ಧಿಗಳೊಂದಿಗೆ ಅಯೋಧ್ಯಾ ನಗರ ರೂಪುಗೊಳ್ಳುತ್ತಿದೆ ಎಂದು ಹೇಳಿದರು.

ಅಯೋಧ್ಯಾ ನಗರ (ಸಾಂದರ್ಭಿಕ ಚಿತ್ರ)
ಅಯೋಧ್ಯಾ ನಗರ (ಸಾಂದರ್ಭಿಕ ಚಿತ್ರ) (UP Tourism )

ಲಖನೌ: ʻಮುಂಬರುವ ದಿನಗಳಲ್ಲಿ ಹೊಚ್ಚ ಹೊಸ ಅಯೋಧ್ಯಾ ನಗರವನ್ನು ನಿರೀಕ್ಷಿಸಬಹುದು. ಆ ರೀತಿಯಾದ ಅಭಿವೃದ್ಧಿಗಳೊಂದಿಗೆ ಅಯೋಧ್ಯಾ ನಗರ ರೂಪುಗೊಳ್ಳುತ್ತಿದೆʼ.

ಟ್ರೆಂಡಿಂಗ್​ ಸುದ್ದಿ

ಸೌರ ಮಾರುತಗಳ ಆಟಕ್ಕೆ ಸಾಕ್ಷಿಯಾದ ಲಡಾಖ್ ಆಗಸ: ಇದು ಸೂರ್ಯನ ಹೋಳಿ ಆಟ, ಬಣ್ಣದೋಕುಳಿ ಕಂಡು ಸೂಪರ್ ಎಂದ ಜನ

ಲೋಕಸಭಾ ಚುನಾವಣೆ: ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲೇ ಸರಿಯಾದ ಹೊಡೆತ; ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್

PM Narendra Modi Interview: ನಮಗೆ ಜನಪ್ರಿಯತೆ ಅಗತ್ಯವಿಲ್ಲ, ನಮ್ಮ ಕೆಲಸದ ವೇಗವನ್ನು ಜನ ನೋಡಿದ್ದಾರೆ; ಪ್ರಧಾನಿ ಮೋದಿ

ಸಂಪಾದಕೀಯ: ಕೃಷಿ ಉತ್ಪನ್ನ ಮತ್ತು ರಾಜಕಾರಣ; ಈರುಳ್ಳಿ ಮೇಲೆ ಚುನಾವಣೆಯ ಛಾಯೆ, ರಫ್ತು ನಿರ್ಬಂಧ ಹಿಂಪಡೆವ ನಿರ್ಧಾರದ ಹಲವು ಮುಖಗಳು

ಇದು ಉತ್ತರ ಪ್ರದೇಶದ ಮು‍ಖ್ಯ ಕಾರ್ಯದರ್ಶಿ ದುರ್ಗಾಶಂಕರ್‌ ಮಿಶ್ರಾ ಅವರ ವಿ‍ಶ್ವಾಸದ ನುಡಿ. ಅವರು ಅಯೋಧ್ಯೆಯ ಪುನರುತ್ಥಾನ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಹೇಳಿದ ಮಾತಿದು.

ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಕೆಲವೊಂದು ಸಲಹೆಗಳನ್ನೂ ನೀಡಿದ್ದಾರೆ. ಆ ಪೈಕಿ, ಹನುಮಾನ್‌ಗಢಿಯಲ್ಲಿ ಭಕ್ತರ ಅನುಕೂಲಕ್ಕಾಗಿ ವಿಶೇಷವಾಗಿ ವಿಕಲಚೇತನರು ಮತ್ತು ವಯೋ ವೃದ್ಧರಿಗಾಗಿ ಎಸ್ಕಲೇಟರ್‌ ಅಥವಾ ಲಿಫ್ಟ್‌ ಅಳವಡಿಸುವಂತೆ ಸೂಚಿಸಿದ್ದಾರೆ. ಇದು ಆ ವರ್ಗದ ಭಕ್ತರು ಯಾವುದೇ ತೊಂದರೆ ಇಲ್ಲದೆ ಭಗವಂತನ ದರ್ಶನ ಮಾಡಿ ಅನುಗ್ರಹ ಪಡೆಯಲು ನೆರವಾದೀತು ಎಂದು ಹೇಳಿದ್ದಾಗಿ ಸರ್ಕಾರದ ಮೂಲಗಳು ತಿಳಿಸಿವೆ.

ಪಂಚಕೋಶಿ ಮಾರ್ಗ, ಚೌದಹ್‌ ಕೋಶಿ ಮಾರ್ಗಗಳಲ್ಲಿ ಭಕ್ತರಿಗೆ ಕುಳಿತುಕೊಳ್ಳುವುದಕ್ಕೆ ಅನುಕೂಲವಾಗುವಂತೆ ಬೆಂಚ್‌ ಅಳವಡಿಸಲು ಸಲಹೆ ನೀಡಿದರು. ಅದೇ ರೀತಿ, ರಸ್ತೆ ಅತಿಕ್ರಮಣವಾಗದಂತೆ ವಿಶೇಷ ಪ್ರಯತ್ನ ಜಾರಿಯಲ್ಲಿರಲಿ ಎಂದೂ ಅವರು ಹೇಳಿದರು.

ಜನ್ಮಭೂಮಿ ಪಥ, ಭಕ್ತಿಪಥ, ರಾಮ ಪಥಗಳ ಕಾಮಗಾರಿಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಪರಿಶೀಲಿಸಿದರು. ಇದೇ ವೇಳೆ, ʻಮುಂಬರುವ ದಿನಗಳಲ್ಲಿ ಹೊಸ ಅಯೋಧ್ಯೆ ರೂಪುಗೊಳ್ಳುತ್ತದೆ. ದೇಶವಾಸಿಗಳಷ್ಟೇ ಅಲ್ಲ, ವಿದೇಶದಿಂದಲೂ ಅಯೋಧ್ಯೆಗೆ ಬರಲಿದ್ದಾರೆ. ರಾಮಾಯಣದ ಭಗವಾನ್‌ ಶ್ರೀರಾಮಚಂದ್ರನ ಆದರ್ಶ ಮತ್ತು ಗುಣಗಳಿಗೆ ಅನುಗುಣವಾಗಿ ನಾವು ಅಯೋಧ್ಯೆಯನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇದಕ್ಕಾಗಿ ಪರಿಣತರ ಸಲಹೆ, ಸೂಚನೆಗಳನ್ನು ಎಲ್ಲೆಲ್ಲಿ ಅಗತ್ಯ ಇದೆಯೋ ಅಲ್ಲೆಲ್ಲ ಪಡೆದುಕೊಂಡು ಕೆಲಸ ಮಾಡುವುದು ಅಗತ್ಯ ಮತ್ತು ಅನಿವಾರ್ಯʼ ಎಂದು ಅವರು ಅಧಿಕಾರಿಗಳಿಗೆ ಹೇಳಿದರು.

ನಿರ್ಮಾಣಕಾಮಗಾರಿಯಿಂದ ತೊಂದರೆ ಒಳಗಾಗಿರುವ ಜನರಿಗೆ ಸೂಕ್ತ ಪರಿಹಾರವನ್ನು ಸಕಾಲದಲ್ಲಿ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ಜನ್ಮಭೂಮಿ ಪಥ (ಸುಗ್ರೀವ ಕೋಟೆಯಿಂದ ಜನ್ಮಭೂಮಿ ಮಂದಿರ ಮಾರ್ಗಕ್ಕೆ ದಾರಿ) ಶೇಕಡ 51 ಕಾಮಗಾರಿ ಪೂರ್ಣವಾಗಿದೆ. ಉಳಿದ ಕೆಲಸಗಳು ಪ್ರಗತಿಯಲ್ಲಿವೆ.

ಭಕ್ತಿಪಥ ನಿರ್ಮಾಣಕ್ಕಾಗಿ ಭೂಮಿ ಖರೀದಿ, ಪುನರ್ವಸತಿ ಕೆಲಸಗಳು ಪೂರ್ಣಗೊಂಡಿವೆ. 350 ಅಂಗಡಿಯವರಿಗೆ ಪರಿಹಾರ ಒದಗಿಸಿದ್ದು, ಹಳೆಕಟ್ಟಡ ನಾಶಗೊಳಿಸುವ ಕೆಲಸ ಮುಗಿದಿದೆ. ಸಿವಿಲ್‌ ಕೆಲಸ ಶುರುವಾಗಿದೆ. ರಾಮಪಥಕ್ಕಾಗಿ ಜಮೀನು ಸ್ವಾಧೀನ ಮಾಡುವ ಕೆಲಸ ಮುಗಿದು, ಹಳೆಯ ಕಟ್ಟಡ ನಾಶಗೊಳಿಸುವ ಕೆಲಸ ಪ್ರಗತಿಯಲ್ಲಿದೆ. 2196 ಅಂಗಡಿಗಳ ಪೈಕಿ 2130 ಅಂಗಡಿಗಳವರಿಗೆ ಪರಿಹಾರ ನೀಡಿದ್ದು, ಪುನರ್ವಸತಿ ಕೆಲಸ ಆಗಿದೆ ಎಂದು ಸರ್ಕಾರ ತಿಳಿಸಿದೆ.

ಗಮನಿಸಬಹುದಾದ ಸುದ್ದಿ

Air defense missiles: ಚೀನಾ ಗಡಿ ಭಾಗದಲ್ಲಿ ನಿಯೋಜನೆಗೆ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌; ಖರೀದಿ ಪ್ರಸ್ತಾವನೆ ಅಂತಿಮ

ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ಹಾಗೆಯೇ ಮುಂದುವರಿದಿದ್ದು, ತೀವ್ರ ಬಿಕ್ಕಟ್ಟಿನ ಸನ್ನಿವೇಶ ಮೂರನೇ ವರ್ಷಕ್ಕೆ ಕಾಲಿರಿಸಿದೆ. ಇದೇ ಸಂದರ್ಭದಲ್ಲಿ ಭಾರತವು ಚೀನಾದ ಗಡಿಭಾಗದಲ್ಲಿ ಸೇನೆಯ ಬಲವರ್ಧನೆಗಾಗಿ ಪೋರ್ಟೆಬಲ್‌ ಏರ್‌ ಡಿಫೆನ್ಸ್‌ ಮಿಸೈಲ್‌ ಖರೀದಿಸಲು ಮುಂದಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Union Budget 2023: ಈ ಸಲದ ಮುಂಗಡ ಪತ್ರದ ಹಿಂದಿನ ಲೆಕ್ಕಾಚಾರ ಏನಿರಬಹುದು?

Union Budget 2023: ಮುಂದಿನ ವರ್ಷ ಅಂದರೆ 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದು ಇದಕ್ಕೆ ಕಾರಣ. ಸದ್ಯದ ಅಂದಾಜಿನ ಪ್ರಕಾರ, ಮುಂದಿನ ವರ್ಷವೂ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಹೆಚ್ಚಿನ ತೆರಿಗೆ ಆದಾಯ ಬಂದರೂ ಅದನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸಾಧ್ಯವಿಲ್ಲ. ಈ ಸಮಯ, ಸನ್ನಿವೇಶದಲ್ಲಿ ಸಮತೋಲನ ಕಾಪಾಡುವುದು ಸುಲಭವಲ್ಲ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ