ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2023: ಈ ಸಲದ ಮುಂಗಡ ಪತ್ರದ ಹಿಂದಿನ ಲೆಕ್ಕಾಚಾರ ಏನಿರಬಹುದು?

Union Budget 2023: ಈ ಸಲದ ಮುಂಗಡ ಪತ್ರದ ಹಿಂದಿನ ಲೆಕ್ಕಾಚಾರ ಏನಿರಬಹುದು?

Union Budget 2023: ಮುಂದಿನ ವರ್ಷ ಅಂದರೆ 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದು ಇದಕ್ಕೆ ಕಾರಣ. ಸದ್ಯದ ಅಂದಾಜಿನ ಪ್ರಕಾರ, ಮುಂದಿನ ವರ್ಷವೂ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಹೆಚ್ಚಿನ ತೆರಿಗೆ ಆದಾಯ ಬಂದರೂ ಅದನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸಾಧ್ಯವಿಲ್ಲ. ಈ ಸಮಯ, ಸನ್ನಿವೇಶದಲ್ಲಿ ಸಮತೋಲನ ಕಾಪಾಡುವುದು ಸುಲಭವಲ್ಲ.

Union Budget 2023 ಈ ಸಲದ ಮುಂಗಡ ಪತ್ರದ ಹಿಂದಿನ ಲೆಕ್ಕಾಚಾರ ಏನಿರಬಹುದು?
Union Budget 2023 ಈ ಸಲದ ಮುಂಗಡ ಪತ್ರದ ಹಿಂದಿನ ಲೆಕ್ಕಾಚಾರ ಏನಿರಬಹುದು? (livemint)

ಕೇಂದ್ರ ಸರ್ಕಾರದ ಮುಂದಿನ ಬಜೆಟ್‌ ಬಗ್ಗೆ ಸಾಕಷ್ಟು ಕುತೂಹಲ, ಚರ್ಚೆ ಈಗ ಪ್ರಚಲಿತದಲ್ಲಿದೆ. ದೇಶದ ಆರ್ಥಿಕತೆಯನ್ನು ಹಿಡಿತದಲ್ಲಿಟ್ಟುಕೊಳ್ಳುವ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವಾಗಲೂ ವಿವೇಕಯುತ ವರ್ತನೆ ತೋರಿದ್ದು, ಬಜೆಟ್‌ ಸಂದರ್ಭದಲ್ಲೂ ಅದನ್ನು ಗಮನದಲ್ಲಿಟ್ಟುಕೊಂಡೇ ವಿವೇಕಯುತವಾದ ಭರವಸೆಗಳನ್ನು ನೀಡುವ ನಿರೀಕ್ಷೆ ಇದೆ. ಆದರೆ ಈ ಸಮಯ, ಸನ್ನಿವೇಶದಲ್ಲಿ ಸಮತೋಲನ ಕಾಪಾಡುವುದು ಸುಲಭವಲ್ಲ.

ಟ್ರೆಂಡಿಂಗ್​ ಸುದ್ದಿ

ಮುಂದಿನ ವರ್ಷ ಅಂದರೆ 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದು ಇದಕ್ಕೆ ಕಾರಣ. ಸದ್ಯದ ಅಂದಾಜಿನ ಪ್ರಕಾರ, ಮುಂದಿನ ವರ್ಷವೂ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಹೆಚ್ಚಿನ ತೆರಿಗೆ ಆದಾಯ ಬಂದರೂ ಅದನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸಾಧ್ಯವಿಲ್ಲ. ಚುನಾವಣಾ ವರ್ಷವಾದ ಕಾರಣ ಖರ್ಚು ವೆಚ್ಚ ಮತ್ತು ರಾಜಕೀಯವಾಗಿ ಜನಪ್ರಿಯ ಯೋಜನೆಗಳ ಘೋಷಣೆ ಮುಂತಾದವುಗಳ ಒತ್ತಡ ಇದ್ದೇ ಇರುತ್ತದೆ. ಆದರೆ ಅದನ್ನು ನಿಭಾಯಿಸುವುದು ಸವಾಲಿನ ಕೆಲಸ.

ಪ್ರಸಕ್ತ ಹಣಕಾಸು ವರ್ಷದಲ್ಲಿ 2022-23 ರಲ್ಲಿ, ಇಂಧನ ಸುಂಕ ಕಡಿತ ಮತ್ತು ಹೆಚ್ಚಿನ ಸಬ್ಸಿಡಿ ವೆಚ್ಚಗಳಿಂದ ಸ್ವಲ್ಪಮಟ್ಟಿನ ಹಾನಿ ಆದರೂ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ವಾಸ್ತವವಾಗಿ ಪ್ರಮುಖ ಸಬ್ಸಿಡಿಗಳ ಮೇಲಿನ ಕೇಂದ್ರದ ಬಿಲ್ ಈಗಾಗಲೇ ನವೆಂಬರ್‌ನ ವೇಳೆಗೆ ಪೂರ್ಣ-ವರ್ಷದ ಬಜೆಟ್‌ನ ಗುರಿಯ ಶೇಕಡ 95 ಅನ್ನು ತಲುಪಿದೆ. ವರ್ಷಾಂತ್ಯದ ವೇಳೆಗೆ 2.5 ಲಕ್ಷ ಕೋಟಿ ರೂಪಾಯಿ ಗುರಿ ಮೀರಿಸುವುದನ್ನು ವಿಶ್ಲೇಷಕರು ನಿರೀಕ್ಷಿಸುತ್ತಿದ್ದಾರೆ. ಇದರ ಜತೆಗೆ ಆದಾಯವೂ ವೇಗವನ್ನು ಉಳಿಸಿಕೊಂಡಿದೆ. ಅದು ಕೂಡ ಅಂದಾಜು 1.8 ಲಕ್ಷ ಕೋಟಿ ರೂಪಾಯಿಯಷ್ಟು ಹೆಚ್ಚಬಹುದು.

ಆರೋಗ್ಯಕರ ಬೆಳವಣಿಗೆಯ ಕಾರಣ ಹೆಚ್ಚುವರಿ ಸಡಿಲಿಕೆ ಕಂಡುಬರುತ್ತದೆ. 2022-23ಕ್ಕೆ 16.6 ಲಕ್ಷ ಕೋಟಿ ರೂಪಾಯಿ ಅಥವಾ ಆದಾಯವನ್ನು ಮೀರಿದ ಖರ್ಚು ಅಂದರೆ ವಿತ್ತೀಯ ಕೊರತೆಯನ್ನು ಶೇಕಡ 6.4 ಎಂದು ಕಳೆದ ಬಜೆಟ್ ನಿಗದಿಪಡಿಸಿದೆ. ಆದರೆ ನಾಮಮಾತ್ರಕ್ಕೆ ಜಿಡಿಪಿ ಶೇಕಡ 11.1ಕ್ಕೆ ಏರುತ್ತದೆ ಎಂದು ನಂಬಲಾಗಿತ್ತು. ಆದರೆ ಆ ಪರಿಸ್ಥಿತಿ ಬದಲಾಗಿದೆ. ಶುಕ್ರವಾರ ಬಿಡುಗಡೆಯಾದ ಹೊಸ ಅಂದಾಜು ಪ್ರಕಾರ ಜಿಡಿಪಿ ಬೆಳವಣಿಗೆ ಶೇಕಡ 15.4 ಎಂಬ ಮುನ್ಸೂಚನೆಯನ್ನು ನೀಡಿದೆ. ಅಂದರೆ ವಿತ್ತೀಯ ಕೊರತೆಯು ಅಂದಾಜು 0.9 ಟ್ರಿಲಿಯನ್‌ ರೂಪಾಯಿ ಗುರಿಯನ್ನು ಮೀರಿಸಿದ್ದರೂ ಕೇಂದ್ರ ಸರ್ಕಾರವು ತನ್ನ ಶೇಕಡ 6.4 ರ ಭರವಸೆಯನ್ನು ಉಳಿಸಿಕೊಳ್ಳಬಹುದು.

ಕನಿಷ್ಠ ಈ ವರ್ಷಕ್ಕೆ, 7.5 ಲಕ್ಷ ಕೋಟಿ ರೂಪಾಯಿ ಬಂಡವಾಳ ವೆಚ್ಚದ ಗುರಿಯೊಂದಿಗೆ ಮುಂದುವರಿಯುತ್ತಿರುವಾಗಲೂ, ನಿಶ್ಚಿತ ಚೌಕಟ್ಟಿನೊಳಗೆ ಖರ್ಚು ಮಾಡುವ ಸ್ಪಷ್ಟ ಸಾಮರ್ಥ್ಯವನ್ನು ಇದು ಸೂಚಿಸುತ್ತದೆ. ಆದರೆ 2023-24ರಲ್ಲಿ ಕಥೆ ಬದಲಾಗಲಿದೆ ಎಂಬುದು ಪರಿಣತರ ನಿರೀಕ್ಷೆ.

ಆರ್ಥಿಕ ಹೊರೆ ತರುವ ಯೋಜನೆಗಳು ಮತ್ತು ತೆರಿಗೆ ಟ್ರೆಂಡ್‌ಗಳ ಲೆಕ್ಕಾಚಾರದ ಮೇಲೆ ಈ ವರ್ಷದ ಬಜೆಟ್‌ ಸಿದ್ಧವಾಗಲಿದೆ. ಇದರ ಪೂರ್ಣ ವಿವರಕ್ಕೆ HT ಕನ್ನಡದ ಸೋದರ ತಾಣ ಲೈವ್‌ ಮಿಂಟ್‌ ಅನ್ನು ಗಮನಿಸಬಹುದು. ಅದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ.

ಗಮನಿಸಬಹುದಾದ ಇತರೆ ವಿಚಾರಗಳು

Republic Day 2023: ಗಣತಂತ್ರ ಪರೇಡ್‌ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ ಇರಲ್ಲ; ನಾಲ್ಕೂ ಥೀಮ್‌ ರಿಜೆಕ್ಟ್‌ ಮಾಡಿದ ಆಯ್ಕೆ ಸಮಿತಿ!

Republic Day 2023: ದೆಹಲಿಯ ರಾಜಪಥದಲ್ಲಿ ಜನವರಿ 26ರಂದು ನಡೆಯಲಿರುವ ಗಣತಂತ್ರ ದಿನದ ಪರೇಡ್‌ (Republic Day Parade) ನಲ್ಲಿ ಈ ಸಲ ಕರ್ನಾಟಕದ ಸ್ತಬ್ಧಚಿತ್ರ (Karnataka Tableau) ಇರಲ್ಲ. ಕರ್ನಾಟಕ ಕೊಟ್ಟಿದ್ದ ನಾಲ್ಕೂ ಥೀಮ್‌ಗಳನ್ನು ಆಯ್ಕೆ ಸಮಿತಿ ತಿರಸ್ಕರಿಸಿದೆ. ಹದಿಮೂರು ವರ್ಷಗಳಲ್ಲಿ ಇದೇ ಮೊದಲ ಸಲ ಅವಕಾಶ ಕೈತಪ್ಪಿ ಹೋಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್‌ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್‌ ಬುಕ್‌ ಮಾಡಿ! ಇಲ್ಲಿದೆ ವಿವರ

Republic Day 2023: ಟಿಕೆಟ್‌ ಖರೀದಿ, ಪಾಸ್‌ ಪಡೆಯುವ ಪ್ರಕ್ರಿಯೆಯನ್ನು ಈ ಆಮಂತ್ರಣ ಪೋರ್ಟಲ್‌ ಬಹಳ ಸರಳಗೊಳಿಸಿದೆ. ಬಳಕೆದಾರ ಸ್ನೇಹಿ ಪ್ರಕ್ರಿಯೆಯನ್ನಾಗಿಸಿದೆ. ಅಲ್ಲದೆ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಟಿಕೆಟ್‌ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ. ಕ್ಲಿಕ್‌ ಮಾಡಿ

IPL_Entry_Point