logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mantralaya: ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಿದ ಗುರು ವೈಭವೋತ್ಸವ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ

Mantralaya: ಮಂತ್ರಾಲಯದಲ್ಲಿ ಅದ್ದೂರಿಯಾಗಿ ನೆರವೇರಿದ ಗುರು ವೈಭವೋತ್ಸವ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ

Mar 13, 2024 08:18 AM IST

ಮಂತ್ರಾಲಯದ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುವೈಭವೋತ್ಸವ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಂಗಳವಾರ (ಮಾ 12) ಅದ್ದೂರಿಯಾಗಿ ನಡೆಯಿತು.

ರಾಯರ ಮಠದ ಪೀಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ, ವಿಶೇಷ ಪೂಜೆ, ಹಸ್ತೋದಕ ನೆರವೇರಿಸಿದರು. 
(1 / 7)
ರಾಯರ ಮಠದ ಪೀಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ, ವಿಶೇಷ ಪೂಜೆ, ಹಸ್ತೋದಕ ನೆರವೇರಿಸಿದರು. (PC: SRSMATHA, Mantralayam)
ಪಾದುಕೆಗಳನ್ನು ಸುವರ್ಣ ಸಿಂಹಾಸನದ ಮೇಲೆ ಇರಿಸಿದಾಗ ಜನರು ಹರ್ಷೋದ್ಗಾರ ಮಾಡಿದರು. ಪಾದುಕೆಗಳಿಗೆ ಪುಷ್ಪಾಭಿಷೇಕ, ಕನಕಾಭಿಷೇಕ ಮತ್ತು ರತ್ನಾಭಿಷೇಕ ಮಾಡಲಾಯಿತು.
(2 / 7)

ಮಂತ್ರಾಲಯ ಮತ್ತು ಶಾಖಾ ಮಠಗಳಲ್ಲಿ ಉಚಿತವಾಗಿ ವಿತರಿಸಲಾಗುವ ಶ್ರೀ ಕ್ರೋಧಿ ನಾಮ ಸಂವತ್ಸರ ಪಂಚಾಂಗವನ್ನು ಸ್ವಾಮೀಜಿ ಅವರು ಲೋಕಾರ್ಪಣೆ ಮಾಡಿದರು.
(3 / 7)

 ಶ್ರೀ ರಾಘವೇಂದ್ರ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ  ಹಲವು ಕ್ಷೇತ್ರಗಳ ಸಾಧಕರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
(4 / 7)

ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. 
(5 / 7)

ಕಾರ್ಯಕ್ರಮದಲ್ಲಿ ಕಣ್ಮನ ಸೆಳೆದ ಭರತನಾಟ್ಯ ಕಾರ್ಯಕ್ರಮ
(6 / 7)
ಕಾರ್ಯಕ್ರಮದಲ್ಲಿ ಕಣ್ಮನ ಸೆಳೆದ ಭರತನಾಟ್ಯ ಕಾರ್ಯಕ್ರಮ
ಧರ್ಮ, ಜ್ಯೋತಿಷ್ಯ, ಫ್ಯಾಷನ್‌, ಆಹಾರ ಸೇರಿದಂತೆ ಇನ್ನಿತರ ಕ್ಷೇತ್ರಗಳ ಮಾಹಿತಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ ಓದಿ. 
(7 / 7)

    ಹಂಚಿಕೊಳ್ಳಲು ಲೇಖನಗಳು