ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಟಿ20 ವಿಶ್ವಕಪ್ ಸಮರಕ್ಕೆ ಮುಹೂರ್ತ ಫಿಕ್ಸ್; ಜೂನ್ 1ಕ್ಕೆ ಉದ್ಘಾಟನಾ ಪಂದ್ಯ, 29ಕ್ಕೆ ಫೈನಲ್

ಐಸಿಸಿ ಟಿ20 ವಿಶ್ವಕಪ್ ಸಮರಕ್ಕೆ ಮುಹೂರ್ತ ಫಿಕ್ಸ್; ಜೂನ್ 1ಕ್ಕೆ ಉದ್ಘಾಟನಾ ಪಂದ್ಯ, 29ಕ್ಕೆ ಫೈನಲ್

Raghavendra M Y HT Kannada

Jan 05, 2024 09:24 PM IST

ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ 2024

  • ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಿದೆ. ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ 2024
ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ 2024

ಬೆಂಗಳೂರು: ಬಹು ನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 1 ರಂದು ಗಯಾನಾದಲ್ಲಿ ಯುಎಸ್‌ಎ ಮತ್ತು ಕೆನಡಾ ತಂಡಗಳು ಉದ್ಘಾಟನಾ ಪಂದ್ಯವನ್ನು ಆಡಲಿದ್ದು, ಬಾರ್ಬಡೋಸ್‌ನಲ್ಲಿ ಜೂನ್ 29ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ವಹಿಸಿವೆ.

ಟ್ರೆಂಡಿಂಗ್​ ಸುದ್ದಿ

ಲಕ್ನೋ ವಿರುದ್ಧ ಅಮೋಘ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್;‌ ಉಭಯ ತಂಡಗಳ ಪ್ಲೇಆಪ್‌ ಕನಸು ಬಹುತೇಕ ಅಂತ್ಯ

ಕೆಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಸಂಜೀವ್ ಗೋಯೆಂಕಾ ಶ್ಲಾಘನೆ; ಎದ್ದು ನಿಂತು ಚಪ್ಪಾಳೆ ತಟ್ಟಿದ ಎಲ್‌ಎಸ್‌ಜಿ ಮಾಲೀಕ

ವಿಶೇಷ ಔತಣಕೂಟದಲ್ಲಿ ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್

ಚೆನ್ನೈ ಪಾಲಿಗೆ ಎಂಎಸ್ ಧೋನಿ ದೇವರು; ಅಭಿಮಾನಿಗಳು ಅವರ ದೇವಾಲಯ ನಿರ್ಮಿಸಲಿದ್ದಾರೆ ಎಂದ ಅಂಬಟಿ ರಾಯುಡು

ಭಾರತ-ಪಾಕಿಸ್ತಾನ ಪಂದ್ಯ ಯಾವಾಗ?

ವಿಶ್ವಕಪ್ ಮಿನಿ ಸಮರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 'ಎ' ಗ್ರೂಪ್‌ ನಲ್ಲಿವೆ. ಜೂನ್ 9ರ ಭಾನುವಾರ ನ್ಯೂಯಾರ್ಕ್‌ನಲ್ಲಿ ಇಂಡೋ-ಪಾಕ್ ಪೈಪೋಟಿ ನಡೆಯಲಿದೆ. ಯುಎಸ್‌ಎ, ಐರ್ಲೆಂಡ್ ಹಾಗೂ ಕೆನಡಾ ಗ್ರೂಪ್‌ 'ಎ'ನಲ್ಲಿರುವ ಇತರೆ ತಂಡಗಳಾಗಿವೆ.

ಯಾವ ಗುಂಪಿನಲ್ಲಿ ಯಾವ ತಂಡಗಳಿವೆ?

ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡಜ್ ಹಾಗೂ ಒಮನ್ ತಂಡಗಳು ಬಿ ಗುಂಪಿನಲ್ಲಿದೆ. ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಂಗಾಂಡಾ ಹಾಗೂ ಪಪುವಾ ನ್ಯೂಗಿನಿ ಸಿ ಗುಂಪಿನಲ್ಲಿರುವ ತಂಡಗಳಾಗಿವೆ.

ಟೂರ್ನಿಯಲ್ಲಿ ಟೀಂ ಇಂಡಿಯಾ ಜೂನ್ 5 ರಂದು ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುವ ಮೂಲಕ ಅಭಿಯಾವನ್ನು ಆರಂಭಿಸಲಿದೆ. ಆ ನಂತರ ಜೂನ್ 9 ರಂದು ಪಾಕಿಸ್ತಾನ, ಜೂನ್ 12 ರಂದು ಯುಎಸ್‌ಎ ವಿರುದ್ಧ ಇದೇ ಮೈದಾನದಲ್ಲಿ ಸೆಣಸಾಟ ನಡೆಸಲಿದೆ. ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಜೂನ್ 15 ರಂದು ಕೆನಡಾ ವಿರುದ್ಧ ಆಡಲಿದೆ.

ತಲಾ 4 ತಂಡಗಳಂತೆ 5 ಗ್ರೂಪ್‌ಗಳನ್ನು ಮಾಡಲಾಗಿದೆ. ಪ್ರತಿಯೊಂದು ಗುಂಪಿನಲ್ಲಿನ ಅಗ್ರ ಎರಡು ತಂಡಗಳು ಸೂಪರ್ 8ಗೆ ಅರ್ಹತೆ ಪಡೆಯುತ್ತವೆ. ಸೂಪರ್ 8 ಹಂತದಲ್ಲಿ ನಾಲ್ಕು ತಂಡಗಳ 2 ಗುಂಪುಗಳನ್ನು ಮಾಡಲಾಗುತ್ತದೆ. ಎರಡು ಗುಂಪುಗಳಲ್ಲಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್ ಹಂತಕ್ಕೆ ಪ್ರವೇಶ ಪಡೆಯುತ್ತವೆ.

ಗುಂಪು ಹಂತದ ಪಂದ್ಯಗಳು ಜೂನ್ 1 ರಿಂದ 18 ರವರೆಗೆ ನಡೆಯಲಿದೆ. ನಂತರ ಸೂಪರ್ 8 ಪಂದ್ಯಗಳು ಜೂನ್ 19 ರಿಂದ 24 ರವರೆಗೆ ನಡೆಯಲಿದೆ. ಪ್ರಮುಖ ಹಂತದವಾದ ಸೆಮಿ ಫೈನಲ್ ಪಂದ್ಯಗಳು ಜೂನ್ 26 ರಿಂದ 27 ವರೆಗೆ ನಡೆಯಲಿವೆ. ಮೊದಲ ಸೆಮಿ ಫೈನಲ್ ಪಂದ್ಯ ಗಯಾನಾದಲ್ಲಿ, ಎರಡನೇ ಸೆಮಿ ಫೈನಲ್ ಪಂದ್ಯ ಟ್ರೆನಿಡಾಡ್‌ನಲ್ಲಿ ಜರುಗಲಿದೆ. ಫೈನಲ್ ಪಂದ್ಯ ಜೂನ್ 29 ಬಾರ್ಬಡೋಸ್‌ನಲ್ಲಿ ನಡೆಯಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ