ಕನ್ನಡ ಸುದ್ದಿ  /  ಕ್ರಿಕೆಟ್  /  2024ರ ಟಿ20 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಬಹಿರಂಗ; ಬಹುನಿರೀಕ್ಷಿತ ಇಂಡೋ-ಪಾಕ್ ಪಂದ್ಯ ಈ ದಿನ

2024ರ ಟಿ20 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಬಹಿರಂಗ; ಬಹುನಿರೀಕ್ಷಿತ ಇಂಡೋ-ಪಾಕ್ ಪಂದ್ಯ ಈ ದಿನ

Prasanna Kumar P N HT Kannada

Jan 04, 2024 04:47 PM IST

2024ರ ಟಿ20 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಬಹಿರಂಗ.

    • ICC T20 World Cup 2024 schedule: ಜೂನ್​ 4ರಿಂದ ಆರಂಭವಾಗುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಆಡುವ ಪಂದ್ಯಗಳ ವೇಳಾಪಟ್ಟಿ ಬಹಿರಂಗಗೊಂಡಿದೆ. ಆದರೆ ಇದು ಅಧಿಕೃತವಲ್ಲ.
2024ರ ಟಿ20 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಬಹಿರಂಗ.
2024ರ ಟಿ20 ವಿಶ್ವಕಪ್​ನಲ್ಲಿ ಭಾರತದ ವೇಳಾಪಟ್ಟಿ ಬಹಿರಂಗ.

2024ರಲ್ಲಿ ನಡೆಯುವ ಬಹುನಿರೀಕ್ಷಿತ ಟಿ20 ವಿಶ್ವಕಪ್ ಟೂರ್ನಿ (T20 World Cup 2024 schedule) ಆರಂಭಕ್ಕೆ ಇನ್ನೂ ಆರು ತಿಂಗಳು ಬಾಕಿ ಇದೆ. ಜೂನ್​ 4ರಿಂದ ಅದೇ ತಿಂಗಳ 29ರವರೆಗೂ ನಡೆಯಲಿದ್ದು, ಅಮೆರಿಕ ಮತ್ತು ವೆಸ್ಟ್ ಇಂಡೀಸ್ (USA and West Indies)​ ಈ ಮೆಗಾ ಟೂರ್ನಿಗೆ ಆತಿಥ್ಯ ವಹಿಸಲಿದೆ. ಇನ್ನು ಜನವರಿ 8ರಂದು ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಲು ಐಸಿಸಿ ನಿರ್ಧರಿಸಿದೆ. ಆದರೆ ಅದಕ್ಕೂ ಮುನ್ನವೇ ಭಾರತದ ವೇಳಾಪಟ್ಟಿ ಬಹಿರಂಗಗೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ

ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ; ಹಾರ್ದಿಕ್ ಆಯ್ಕೆಗೆ ಅಚ್ಚರಿಯ ಕಾರಣ ತಿಳಿಸಿದ ವರದಿ

ವಿರಾಟ್‌ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ; ಅವರ ಬಗ್ಗೆ ಗೌರವ ಇದೆ ಎಂದ ಮೊಹಮ್ಮದ್‌ ರಿಜ್ವಾನ್‌

Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

ಆದರೀಗ ಬಹಿರಂಗಗೊಂಡಿರುವ ವರದಿ ಪ್ರಕಾರ ಇದೇ ವೇಳಾಪಟ್ಟಿ ಅಂತಿಮವಲ್ಲ. ಜೂನ್​ 4ರಿಂದ ಟಿ20 ವಿಶ್ವಕಪ್ ಆರಂಭವಾದರೆ, ಜೂನ್ 5ರಂದು ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಜೂನ್ 9ರಂದು ಸೆಣಸಾಟ ನಡೆಸಲಿವೆ. ಅಲ್ಲದೆ, ಭಾರತ ಇರುವ ಗ್ರೂಪ್​ನಲ್ಲಿ ಪಾಕಿಸ್ತಾನ ಹೊರತುಪಡಿಸಿ ಉಳಿದ ಮೂರು ತಂಡಗಳು ದುರ್ಬಲ. ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್​​ಎ ತಂಡಗಳು ಈ ಗುಂಪಿನಲ್ಲಿವೆ.

ಟೂರ್ನಿಗೆ ಅಮೆರಿಕ ಮತ್ತು ಅಮೆರಿಕ ಸೇರಿ 10 ಸ್ಥಳಗಳನ್ನು ಫೈನಲ್ ಮಾಡಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್​ನ ಪಂದ್ಯವೊಂದು ಹಾಗೂ ಸೆಮಿಫೈನಲ್​ ಪಂದ್ಯವೊಂದನ್ನು ಡೊಮಿನಿಕಾದಲ್ಲಿ ಆಯೋಜಿಸಲು ಐಸಿಸಿ ತೀರ್ಮಾನಿಸಿತ್ತು. ಆದರೆ, ಡೊಮಿನಿಕಾ ಹಿಂದೆ ಸರಿ ಕಾರಣ, ಈಗ 9 ಸ್ಥಳಗಳನ್ನ ಅಂತಿಮಗೊಳಿಸಲಾಗಿದೆ. 20 ತಂಡಗಳು ಭಾಗವಹಿಸಲಿವೆ ಗುಂಪು ಹಂತದ ಪಂದ್ಯಗಳನ್ನು ಅಮೆರಿಕದಲ್ಲಿ, ಸೂಪರ್​ 8 ಪಂದ್ಯಗಳನ್ನು ವೆಸ್ಟ್ ಇಂಡೀಸ್​ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಭಾರತದ ಟಿ20 ವಿಶ್ವಕಪ್ ವೇಳಾಪಟ್ಟಿ (ಗುಂಪು ಹಂತ, ವರದಿಗಳ ಪ್ರಕಾರ)

ಭಾರತ vs ಐರ್ಲೆಂಡ್, ಜೂನ್​ 5, ನ್ಯೂಯಾರ್ಕ್

ಭಾರತ vs ಪಾಕಿಸ್ತಾನ, ಜೂನ್​ 9, ನ್ಯೂಯಾರ್ಕ್

ಭಾರತ vs ಯುಎಸ್​ಎ, ಜೂನ್​ 12, ನ್ಯೂಯಾರ್ಕ್

ಭಾರತ vs ಕೆನಡಾ, ಜೂನ್​ 15, ಫ್ಲೋರಿಡಾ

ನಾಕೌಟ್​ ಪಂದ್ಯಗಳ ವೇಳಾಪಟ್ಟಿ

ಸೆಮಿಫೈನಲ್ 1, ಜೂನ್ 26, ಗಯಾನಾ

ಸೆಮಿಫೈನಲ್ 2, ಜೂನ್ 28, ಟ್ರಿನಿಡಾಡ್

ಫೈನಲ್, ಜೂನ್ 29, ಬಾರ್ಬಡೋಸ್

ಭಾರತವು ಸೂಪರ್ 8 ಹಂತಗಳಿಗೆ ಅರ್ಹತೆ ಪಡೆದರೆ, ಅವರ ಸುತ್ತಿನ ಮೊದಲ ಪಂದ್ಯವು ಜೂನ್ 20 ರಂದು ಬಾರ್ಬಡೋಸ್‌ನಲ್ಲಿ ನಡೆಯಲಿದೆ. ಭಾರತ ತಂಡವು ವೆಸ್ಟ್ ಇಂಡೀಸ್‌ನಲ್ಲಿ ತನ್ನ ಎಲ್ಲಾ ಸೂಪರ್ 8 ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ. ಅಲ್ಲದೆ, 1 ಮತ್ತು ನೇ ಸೆಮಿಫೈನಲ್, ಫೈನಲ್ ಪಂದ್ಯಗಳು ಸಹ ವೆಸ್ಟ್ ಇಂಡೀಸ್​ನಲ್ಲೇ ನಡೆಯಲಿವೆ.

ಐಸಿಸಿ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳ ಪಟ್ಟಿ

ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಉಗಾಂಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್.

ಕೊಹ್ಲಿ-ರೋಹಿತ್​ ಆಡೋ ಸಾಧ್ಯತೆ

ಪಿಟಿಐ ನೀಡಿದ ಇತ್ತೀಚಿನ ವರದಿಯ ಪ್ರಕಾರ, ಭಾರತದ ಸ್ಟಾರ್​ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೆ ತಂಡದ ಭಾಗವಾಗಲು ಉತ್ಸುಕರಾಗಿದ್ದಾರೆ . 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ನಂತರ ಇಬ್ಬರೂ ಭಾರತದ ಪರ ಚುಟುಕು ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. 2024ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್​ನಲ್ಲಿ 30 ಆಟಗಾರರನ್ನು ಶಾರ್ಟ್​ ಲೀಸ್ಟ್​ ಮಾಡಲಾಗುತ್ತದೆ ಎಂದು ಅದೇ ವರದಿ ಹೇಳಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ