ಕನ್ನಡ ಸುದ್ದಿ  /  ಕ್ರಿಕೆಟ್  /  ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ; ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ

ದ್ವಿಶತಕ ವೀರ ಯಶಸ್ವಿ ಜೈಸ್ವಾಲ್ ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ; ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ

Prasanna Kumar P N HT Kannada

Feb 04, 2024 05:37 PM IST

ಜೈಸ್ವಾಲ್ ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ; ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ

    • Gautam Gambhir on Yashasvi Jaiswal : ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ. ಇದರಿಂದ ಆತನ ನಿರೀಕ್ಷೆ ಹೆಚ್ಚಾಗಿ ಒತ್ತಡಕ್ಕೆ ಒಳಗಾಗುತ್ತಾನೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್​ ಸಲಹೆ ನೀಡಿದ್ದಾರೆ.
ಜೈಸ್ವಾಲ್ ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ; ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ
ಜೈಸ್ವಾಲ್ ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ; ಗೌತಮ್ ಗಂಭೀರ್ ಅಚ್ಚರಿ ಹೇಳಿಕೆ

ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಭಾರತ, ಇಂಗ್ಲೆಂಡ್​ ತಂಡಕ್ಕೆ 399 ರನ್​ಗಳ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ (Team India) ಉತ್ತಮ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal), ಇಂಗ್ಲಿಷ್ ಬೌಲರ್ಸ್​​ಗೆ ಚೆನ್ನಾಗಿ ದಂಡಿಸಿ ಟೆಸ್ಟ್​ನಲ್ಲಿ​ ತಮ್ಮ ಚೊಚ್ಚಲ ದ್ವಿಶತಕ ಸಿಡಿಸಿದರು. ಆ ಮೂಲಕ ಹಲವು ದಾಖಲೆ ಬರೆದರು.

ಟ್ರೆಂಡಿಂಗ್​ ಸುದ್ದಿ

ಭಾರತ ತಂಡದ ಹೆಡ್​ಕೋಚ್​ ಸ್ಥಾನಕ್ಕೆ ಎಂಎಸ್ ಧೋನಿ ನೆಚ್ಚಿನ ತರಬೇತುದಾರ; ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಯಾರು?

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

ಸಚಿನ್ ತೆಂಡೂಲ್ಕರ್ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ; ತನಿಖೆ ಚುರುಕು

ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್​ ಚಾನ್ಸ್?

ಆದರೆ ಇದೇ ವೇಳೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir)​, ಜೈಸ್ವಾಲ್ ಕುರಿತು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಪಿಟಿಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಗಂಭೀರ್​, ಯುವ ಆಟಗಾರನ ಅದ್ಭುತ ಸಾಧನೆಗೆ ಅಭಿನಂದಿಸಿದ್ದಾರೆ. ಆದರೆ ಆತನನ್ನು ಹೆಚ್ಚು ಪ್ರಚಾರ ಮಾಡಬಾರದು ಎಂದು ಸೂಚಿಸಿದ್ದಾರೆ. ಏಕೆಂದರೆ, ಜೈಸ್ವಾಲ್ ಮೇಲೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇಡದೆ ಆತನ ನೈಜ ಆಟವನ್ನು ಪ್ರದರ್ಶಿಸಲು ದಾರಿ ಮಾಡಿಕೊಡಬೇಕು ಎಂದು ತಿಳಿಸಿದ್ದಾರೆ.

ಹೀರೋ ಮಾಡಿಬಿಡ್ತಾರೆ ಎಂದ ಗಂಭೀರ್​

ಜೈಸ್ವಾಲ್ ದ್ವಿಶತಕದ ಕುರಿತು ಮಾತನಾಡಿದ ಗಂಭೀರ್​, ಎಲ್ಲರಿಗೂ ಒಂದು ಮುಖ್ಯವಾದ ವಿಷಯ ಹೇಳಬೇಕಿದೆ. ಜೈಸ್ವಾಲ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಆತನ ನೈಜ ಆಟಕ್ಕೆ ಒತ್ತು ಕೊಡಿ. ನಮ್ಮಲ್ಲಿ ಕೆಟ್ಟ ಸಂಸ್ಕೃತಿಯೊಂದಿದೆ. ನಾನದನ್ನು ತುಂಬಾ ದಿನಗಳಿಂದ ಗಮನಿಸಿದ್ದೇನೆ. ಯಾವುದೇ ಆಟಗಾರನ ಸಾಧನೆಯನ್ನು ಹೆಗಲ ಮೇಲೆ ಹೊತ್ತು ಮೆರೆಸುತ್ತಾರೆ. ದೊಡ್ಡ ಹೀರೋ ಎನ್ನುವಂತೆ ಬಿಂಬಿಸುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.

ಹೆಚ್ಚು ಪ್ರಚಾರ ಮಾಡಬೇಡಿ ಎಂದ ಮಾಜಿ ಕ್ರಿಕೆಟಿಗ

ಹೆಚ್ಚು ಪ್ರಚಾರ ಮಾಡಿದರೆ ಆತನ ಮೇಲೆ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಇದು ಜೈಸ್ವಾಲ್​ಗೆ ಒತ್ತಡವನ್ನು ಹೆಚ್ಚಿಸುವುದರ ಜೊತೆಗೆ ಆಟದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತದೆ. ಯುವ ಕ್ರಿಕೆಟಿಗನ ವೃತ್ತಿಜೀವನ ಅಂತ್ಯಕ್ಕೂ ಕಾರಣವಾಗಬಹುದು. ಭಾರತೀಯ ಮಾಧ್ಯಮಗಳು ಹಾಗೆ ಮಾಡುವ ಪ್ರವೃತ್ತಿ ಹೊಂದಿವೆ. ಆತನ ನೈಜ ಆಟವಾಡಲು ಅವಕಾಶ ಮಾಡಿಕೊಡಿ ಮತ್ತು ಅವರನ್ನು ಹೆಚ್ಚು ಪ್ರಚಾರ ಮಾಡಬೇಡಿ ಎಂದು ಅವರು ಎಲ್ಲರಿಗೂ ಸಲಹೆ ನೀಡಿದ್ದಾರೆ.

ಯಾವುದೇ ಆಟಗಾರ ಬೆಳೆಯಲು ಮತ್ತು ಅವರ ಕ್ರಿಕೆಟ್ ಅನ್ನು ಆನಂದಿಸಲು ಅವಕಾಶ ಮಾಡಿಕೊಡಿ ಎಂದು ಮಾಜಿ ಕೆಕೆಆರ್ ನಾಯಕ ಎಲ್ಲರಿಗೂ ಸಲಹೆ ನೀಡಿದ್ದಾರೆ. ಯಶಸ್ವಿ ಜೈಸ್ವಾಲ್ ಮಾತ್ರವಲ್ಲ, ಯಾವುದೇ ಆಟಗಾರರನ್ನು ಪ್ರಚಾರ ಮಾಡಬೇಡಿ. ನಿರೀಕ್ಷೆಗಳು ಹೆಚ್ಚಾದಂತೆ ಒತ್ತಡಗಳು ಹೆಚ್ಚಾಗುತ್ತವೆ. ಇದು ಆತನ ಸಹಜ ಆಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಜಿ ಆರಂಭಿಕ ಆಟಗಾರ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ದಾಖಲೆ

ಯಶಸ್ವಿ ಜೈಸ್ವಾಲ್ ಮತ್ತು ಗೌತಮ್ ಗಂಭೀರ್ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ನಾಲ್ಕು ಎಡಗೈ ಆಟಗಾರರಲ್ಲಿ ಇಬ್ಬರು. ಜೈಸ್ವಾಲ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ನಾಲ್ಕನೇ ಭಾರತೀಯ ಎಡಗೈ ಬ್ಯಾಟರ್ ಆಗಿದ್ದು, ಆ ಮೂಲಕ 17 ವರ್ಷಗಳ ಬರವನ್ನು ಕೊನೆಗೊಳಿಸಿದರು. 2007ರಲ್ಲಿ ಪಾಕಿಸ್ತಾನದ ವಿರುದ್ಧ ಸೌರವ್ ಗಂಗೂಲಿ ಟೆಸ್ಟ್ ದ್ವಿಶತಕ ಗಳಿಸಿದ ಕೊನೆಯ ಎಡಗೈ ಬ್ಯಾಟರ್.

ಯಶಸ್ವಿ ಜೈಸ್ವಾಲ್ ಅವರ 209 ರನ್‌ಗಳ ಮೇಲೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಿತು. ಜಸ್ಪ್ರೀತ್ ಬುಮ್ರಾ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಡಿಯಾಗೆ 143 ರನ್‌ಗಳ ಮುನ್ನಡೆ ತಂದುಕೊಟ್ಟರು. ಭಾರತದ ಪರವಾಗಿ ಶುಭ್ಮನ್​ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದರು. ಭಾರತ ತಂಡ ಇಂಗ್ಲೆಂಡ್​ಗೆ 399 ರನ್​ಗಳ ಗುರಿ ನೀಡಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ