logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ; 15 ಕಿ ಮೀ ಉದ್ದದ ಈ ಫ್ಲೈ ಓವರ್ ಎಲ್ಲಿಂದ ಎಲ್ಲಿವರೆಗೆ

ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ; 15 ಕಿ ಮೀ ಉದ್ದದ ಈ ಫ್ಲೈ ಓವರ್ ಎಲ್ಲಿಂದ ಎಲ್ಲಿವರೆಗೆ

Umesh Kumar S HT Kannada

Feb 09, 2024 02:47 PM IST

ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಎಲ್ಲಿಂದ ಎಲ್ಲಿವರೆಗೆ ಈ 15 ಕಿಮೀ ಉದ್ದದ ಈ ಫ್ಲೈ ಓವರ್ ನಿರ್ಮಾಣವಾಗಲಿದೆ. ಇಲ್ಲಿದೆ ಆ ವರದಿ.

  • ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ಸಿಗುವ ನಿರೀಕ್ಷೆ ಇದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದಕ್ಕಾಗಿ ಟೆಂಡರ್ ಕರೆದಿದೆ. ಈ 15 ಕಿಮೀ ಉದ್ದದ ಫ್ಲೈ ಓವರ್ ಎಲ್ಲಿಂದ ಎಲ್ಲಿವರೆಗೆ ಇರಲಿದೆ, ಮತ್ತು ಇತರೆ ಮಾಹಿತಿ ಇಲ್ಲಿದೆ.  (ವರದಿ- ಎಚ್. ಮಾರುತಿ, ಬೆಂಗಳೂರು) 

ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಎಲ್ಲಿಂದ ಎಲ್ಲಿವರೆಗೆ ಈ 15 ಕಿಮೀ ಉದ್ದದ ಈ ಫ್ಲೈ ಓವರ್ ನಿರ್ಮಾಣವಾಗಲಿದೆ. ಇಲ್ಲಿದೆ ಆ ವರದಿ.
ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಎಲ್ಲಿಂದ ಎಲ್ಲಿವರೆಗೆ ಈ 15 ಕಿಮೀ ಉದ್ದದ ಈ ಫ್ಲೈ ಓವರ್ ನಿರ್ಮಾಣವಾಗಲಿದೆ. ಇಲ್ಲಿದೆ ಆ ವರದಿ.

ಬೆಂಗಳೂರು ನಗರದಲ್ಲಿನ ಅತಿ ಉದ್ದದ ಮೇಲ್ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಈ ಮೇಲ್ಸೇತುವೆ ನಿರ್ಮಾಣವಾದರೆ ಬೆಂಗಳೂರಿನ ಅತಿ ಹೆಚ್ಚು ಟ್ರಾಫಿಕ್ ಸಮಸ್ಯೆ ಹೊಂದಿರುವ ಈ ಭಾಗದಲ್ಲಿ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗಲಿದೆ ಎಂದು ಎನ್‌ಎಚ್‌ಎಐ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಬಿರುಗಾಳಿ ಸಹಿತ ಭಾರಿ ಮಳೆ ಎಫೆಕ್ಟ್; ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ 17 ವಿಮಾನಗಳು ಚೆನ್ನೈ ಏರ್ಪೋರ್ಟ್‌ನಲ್ಲಿ ಲ್ಯಾಂಡಿಂಗ್

ಕೊಡಗು: ಸೋಮವಾರಪೇಟೆ ಸೂರ್ಲಬ್ಬಿಯಲ್ಲಿ 16 ವರ್ಷದ ಬಾಲಕಿಯ ದಾರುಣ ಹತ್ಯೆ, ವಿವಾಹ ಮುಂದೂಡಿದ್ದಕ್ಕೆ 32 ವರ್ಷದ ವ್ಯಕ್ತಿ ಪೈಶಾಚಿಕ ಕೃತ್ಯ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್‌; ಸಕಲೇಶಪುರದಲ್ಲಿ ಮೂವರನ್ನು ಬಂಧಿಸಿದ ಎನ್‌ಐಎ ಅಧಿಕಾರಿಗಳು, ಇಬ್ಬರು ಆರೋಪಿಗಳು, ಅವರ ಆಶ್ರಯದಾತ ಬಂಧಿತರು

ಬೆಂಗಳೂರು ಸಂಚಾರ ಸಲಹೆ; ನಾಗವಾರ ಮೇಲ್ಸೇತುವೆ ಬಳಿ ಇಂದಿನಿಂದ ಸರ್ವೀಸ್‌ ರಸ್ತೆ ಬಂದ್‌, ಟೈಮಿಂಗ್ಸ್ ಮತ್ತು ಇತರೆ ವಿವರ

ಬೆಂಗಳೂರಿನ ಪೂರ್ವ ಭಾಗದ ಹಳೇ ಮದ್ರಾಸ್ ರಸ್ತೆಯ ಇಕ್ಕೆಲಗಳಲ್ಲಿ ಐಟಿ ಕಂಪನಿಗಳು ನೆಲೆಯೂರಿವೆ. ಅದರಲ್ಲೂ ಟಿ.ಸಿ. ಪಾಳ್ಯ ಮತ್ತು ಭಟ್ಟರಹಳ್ಳಿ ವಾಹನ ದಟ್ಟಣೆಗೆ ಕುಖ್ಯಾತಿ ಪಡೆದಿವೆ. ಸಾಕಷ್ಟು ಮೇಲ್ಸೇತುವೆ ಮತ್ತು ಅಂಡರ್ ಪಾಸ್ ಗಳಿಲ್ಲದ ಏಕೈಕ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಇದೀಗ ಕೆ.ಆರ್‌. ಪುರ ಪೊಲೀಸ್‌ ಠಾಣೆಯಿಂದ ಕೊಳತ್ತೂರು ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಿದೆ.

ಹಳೇ ಮದ್ರಾಸ್‌ ರಸ್ತೆಯಲ್ಲಿ ನಿರ್ಮಾಣವಾಗಲಿದೆ ಉದ್ದದ ಮೇಲ್ಸೇತುವೆ

ಬೆಂಗಳೂರು ಪೂರ್ವ ಭಾಗದಲ್ಲಿ ಅತ್ಯಂತ ಹೆಚ್ಚಿನ ವಾಹನ ದಟ್ಟಣೆಯಿರುವ ಹಳೇ ಮದ್ರಾಸ್‌ ರಸ್ತೆ ಮೂಲಕ ಸಾಗುವ 15 ಕಿ.ಮೀ ಉದ್ದದ ಮೇಲ್ಸೇತುವೆ ಇದಾಗಲಿದೆ. ಟಿ.ಸಿ. ಪಾಳ್ಯ ಮತ್ತು ಭಟ್ಟರಹಳ್ಳಿಯ ಪ್ರಮುಖ ಜಂಕ್ಷನ್‌ಗಳ ವಾಹನ ದಟ್ಟಣೆಯನ್ನು ಈ ಮೇಲ್ಸೇತುವೆ ನಿವಾರಿಸಲಿದೆ.

ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸೇತುವೆ, ಹಳೆ ಮದ್ರಾಸ್‌ ರಸ್ತೆಯ ವಾಹನ ದಟ್ಟಣೆ ನಿವಾರಿಸುತ್ತದೆ. ಅಲ್ಲದೇ, ಈ ರಸ್ತೆಗೆ ಹೊಂದಿಕೊಂಡಿರುವ ಹಲವು ಭಾಗಗಳ ದಟ್ಟಣೆಯೂ ನಿವಾರಣೆಯಾಗಲಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

ಹೊಸ ಮೇಲ್ಸೇತುವೆಯಲ್ಲಿ 6 ಪಥಗಳಿದ್ದು, ಇದು ನಗರದ ಉದ್ದವಾದ ಕ್ಯಾರಿಯೇಜ್‌ ವೇ ಆಗಲಿದೆ. ರಾಷ್ಟ್ರೀಯ ಹೆದ್ದಾರಿ–4 ರ ಹೊಸೂರು ರಸ್ತೆ ಎಲೆಕ್ಟ್ರಾನಿಕ್‌ ಸಿಟಿ ಎಕ್ಸ್‌ಪ್ರೆಸ್‌ 9.98 ಕಿ.ಮೀ ಉದ್ದವಿದ್ದು, ಇದು ಈವರೆಗಿನ ಅತಿದೊಡ್ಡ ಮೇಲ್ಸೇತುವೆಯಾಗಿತ್ತು ಎಂದು ತಿಳಿದು ಬಂದಿದೆ.

ಕೆ.ಆರ್. ಪುರದ ತೂಗು ಮೇಲ್ಸೇತುವೆಯಿಂದ ಈ ಹೊಸ ಮೇಲ್ಸೇತುವೆಗೆ ಸಂಪರ್ಕ ನೀಡಬೇಕು ಎಂದು ಸ್ಥಳೀಯ ನಿವಾಸಿಗಳು ಅಗ್ರಹಪಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಇದು ಅಸಾಧ್ಯ ಎಂದು ವಾದಿಸುತ್ತಿದ್ದಾರೆ.

ಟೋಲ್‌ ಪ್ಲಾಜಾ ಎಷ್ಟು ಎಲ್ಲೆಲ್ಲಿ..

ಹಳೆ ಮದ್ರಾಸ್‌ ರಸ್ತೆಯಲ್ಲಿರುವ ಕಾಟಮಲ್ಲೂರು, ಹೊಸಕೋಟೆ ಜಂಕ್ಷನ್‌ ಮತ್ತು ಕೊಳತ್ತೂರು ಬಳಿಯ ಎಂವಿಜೆ ಆಸ್ಪತ್ರೆ ಬಳಿಯ ಮೂರು ಪ್ರಮುಖ ಕೆಳಸೇತುವೆಗಳನ್ನು ಈ ಹೊಸ ಮೇಲ್ಸೇತುವೆ ಸಂಪರ್ಕಿಸಲಿದೆ. ಈ ಮೂರು ಕೆಳಸೇತುವೆಗಳನ್ನು ತೆರವುಗೊಳಿಸುವುದಿಲ್ಲ, ಬದಲಿಗೆ ಅವುಗಳನ್ನು ಹೊಸ ಸೇತುವೆ ಜೊತೆಗೆ ಸೇರ್ಪಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಮೂಲಗಳು ಹೇಳಿವೆ.

ಹೊಸಕೋಟೆ ಟೋಲ್‌ ಪ್ಲಾಜಾ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಕೊಳತ್ತೂರಿಗೆ ಟೋಲ್‌ ಪ್ಲಾಜಾ ಸ್ಥಳಾಂತರಿಸಲು ಸಾಧ್ಯವಿಲ್ಲ. ಈ ಟೋಲ್‌ ಸಂಗ್ರಹ ಕೇಂದ್ರದ ಮೇಲೆ ಹೊಸ ಮೇಲ್ಸೇತುವೆ ಬರಲಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇಲ್ಸೇತುವೆಯ ವೆಚ್ಚವನ್ನು 1,500 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದ್ದು, ಹೈಬ್ರಿಡ್‌ ಆ್ಯನ್ಯುಯಿಟಿ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಎನ್‌ಎಚ್‌ಎಐ ಮತ್ತು ಗುತ್ತಿಗೆದಾರರು ವೆಚ್ಚವನ್ನು ಹಂಚಿಕೊಳ್ಳಲಿದ್ದಾರೆ. ಹೆಚ್ಚುವರಿ ಭೂಸ್ವಾಧೀನದ ಅಗತ್ಯ ಇರುವುದಿಲ್ಲ.

ಎನ್‌ಎಚ್‌ಎಐ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸುತ್ತಿದ್ದು, ಇದು 2024ರ ಮಾರ್ಚ್‌ ವೇಳೆಗೆ ಮುಗಿಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನ ಪೂರ್ವ ಭಾಗದ ನಿವಾಸಿಗಳು ಮತ್ತು ಈ ರಸ್ತೆಯಲ್ಲಿ ಸಂಚಾರ ಮಾಡುವವರಿಗೆ ಈ ಮೇಲ್ಸೇತುವೆ ಅತಿ ದೊಡ್ಡ ಕೊಡುಗೆ ಎನ್ನುವುದರಲ್ಲಿ ಅನುಮಾನಗಳಿಲ್ಲ. ಆದರೆ ಶುಲ್ಕ ಪಾವತಿಸಿ ಮೇಲ್ಸೇತುವೆಯನ್ನು ಬಳಸಬೇಕಾಗಿರುತ್ತದೆ. ಕೆಳಭಾಗದ ರಸ್ತೆ ಮುಕ್ತವಾಗಿರುತ್ತದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

This copy first appeared in Hindustan Times Kannada website. To read more like this please logon to kannada.hindustantime.com

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ