ಕನ್ನಡ ಸುದ್ದಿ  /  ಜೀವನಶೈಲಿ  /  National Safe Motherhood Day: 35ರ ನಂತರ ಗರ್ಭ ಧರಿಸುವ ಯೋಚನೆ ಮಾಡಿದ್ದೀರಾ? ಇದರ ಸವಾಲು, ಅಪಾಯಗಳ ಬಗ್ಗೆ ನಿಮಗೆ ಅರಿವಿರಲೇಬೇಕು

National Safe Motherhood Day: 35ರ ನಂತರ ಗರ್ಭ ಧರಿಸುವ ಯೋಚನೆ ಮಾಡಿದ್ದೀರಾ? ಇದರ ಸವಾಲು, ಅಪಾಯಗಳ ಬಗ್ಗೆ ನಿಮಗೆ ಅರಿವಿರಲೇಬೇಕು

Reshma HT Kannada

Apr 11, 2024 09:39 AM IST

35ರ ನಂತರ ಗರ್ಭ ಧರಿಸುವ ಯೋಚನೆ ಮಾಡಿದ್ದೀರಾ? ಇದರ ಸವಾಲು, ಅಪಾಯಗಳ ಬಗ್ಗೆ ನಿಮಗೆ ಅರಿವಿರಲೇಬೇಕು

    • National Safe Motherhood Day 2024: ಮಹಿಳೆಯರು 35 ವರ್ಷದ ನಂತರ ಗರ್ಭ ಧರಿಸಲು ಬಯಸಿದರೆ ಈ ಕೆಲವು ಸವಾಲು ಹಾಗೂ ಅಪಾಯಗಳನ್ನು ಎದುರಿಸಲು ಸಿದ್ಧರಾಗಿರಬೇಕು. 35ರ ನಂತರ ಗರ್ಭ ಧರಿಸುವವರಿಗಾಗಿ ಇಲ್ಲಿದೆ ಒಂದಿಷ್ಟು ಸಲಹೆ.
35ರ ನಂತರ ಗರ್ಭ ಧರಿಸುವ ಯೋಚನೆ ಮಾಡಿದ್ದೀರಾ? ಇದರ ಸವಾಲು, ಅಪಾಯಗಳ ಬಗ್ಗೆ ನಿಮಗೆ ಅರಿವಿರಲೇಬೇಕು
35ರ ನಂತರ ಗರ್ಭ ಧರಿಸುವ ಯೋಚನೆ ಮಾಡಿದ್ದೀರಾ? ಇದರ ಸವಾಲು, ಅಪಾಯಗಳ ಬಗ್ಗೆ ನಿಮಗೆ ಅರಿವಿರಲೇಬೇಕು

ಭಾರತದಲ್ಲಿ ಪ್ರತಿವರ್ಷ ಏಪ್ರಿಲ್‌ 11 ರಂದು ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲಾಗುತ್ತದೆ. ನವ ತಾಯಂದಿರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಹಾಗೂ ಸುರಕ್ಷಿತ ಗರ್ಭಧಾರಣೆ, ಪ್ರಸವಾ ನಂತರದ ಅಂದರೆ ಬಾಣಂತಿಯಾಗಿದ್ದಾಗ ಹೆಣ್ಣುಮಕ್ಕಳಿಗೆ ನೀಡಬೇಕಾದ ಬೆಂಬಲದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಗರ್ಭಾವಸ್ಥೆ ಎಂಬುದು ಜೀವನ ಪರಿವರ್ತನೆಯ ಪ್ರಯಾಣವಾಗಿದೆ. ಈ ಸಮಯದಲ್ಲಿ ತಾಯಿಯ ಆರೋಗ್ಯ ಹೇಗಿದೆ ಎಂಬುದು ಸುರಕ್ಷಿತ ಹಾಗೂ ತೊಂದರೆ ರಹಿತ ಹೆರಿಗೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಪೋಷಣೆಯಿಂದ ನಿಯಮಿತ ತಪಾಸಣೆಯವರೆಗೆ ಗರ್ಭವತಿಯಾದ ಮಹಿಳೆಯರು ಪರಿಗಣಿಸಬೇಕಾದ ಪ್ರಮುಖಾಂಶಗಳಿವು.

ಟ್ರೆಂಡಿಂಗ್​ ಸುದ್ದಿ

ಬೇಸಿಗೆಯಲ್ಲಿ ಗರ್ಭಿಣಿಯರನ್ನು ಕಾಡಬಹುದು ನೂರಾರು ಸಮಸ್ಯೆ; ಗರ್ಭಾವಸ್ಥೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

Mango Recipe: ಮ್ಯಾಂಗೋ ಕೇಕ್‌ನಿಂದ ಕುಲ್ಫಿವರೆಗೆ; ಬೇಸಿಗೆಗೆ ಬೆಸ್ಟ್‌ ಎನ್ನಿಸುವ ಮಾವಿನಹಣ್ಣಿನ ರೆಸಿಪಿಗಳಿವು, ನೀವೂ ಟ್ರೈ ಮಾಡಿ

Maruti Suzuki Swift vs Tata Tiago: ಮಾರುತಿ ಸುಜುಕಿ ಸ್ವಿಫ್ಟ್, ಟಾಟಾ ಟಿಯಾಗೊ ಎರಡರಲ್ಲಿ ಯಾವುದು ಬೆಸ್ಟ್?

Weight Loss: ವರ್ಕೌಟ್‌ ಮಾಡದೇ ವೈಟ್‌ಲಾಸ್‌ ಆಗ್ಬೇಕಾ; ಬೇಸಿಗೆಯಲ್ಲಿ ಬೆವರು ಹರಿಯದೇ ತೂಕ ಇಳಿಸಿಕೊಳ್ಳಲು ಇಲ್ಲಿದೆ 8 ಸರಳ ಸಲಹೆ

ಅದರಲ್ಲೂ ಮಹಿಳೆಯರು 35 ವರ್ಷದ ನಂತರ ಗರ್ಭ ಧರಿಸಿದರೆ ಕೆಲವು ಸವಾಲು ಹಾಗೂ ಅಪಾಯಗಳನ್ನು ಎದುರಿಸಬೇಕಾಗಬಹುದು. ಮಹಿಳೆಯರಿಗೆ ವಯಸ್ಸಾದಂತೆ ಗರ್ಭಧಾರಣೆಗೆ ಸಂಬಂಧಿತ ತೊಡಕುಗಳ ಅಪಾಯವು ಹೆಚ್ಚಾಗಬಹುದು. ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿಗಳು ಎದುರಾಗಿ ಸವಾಲಾಗಬಹುದು. ಜೊತೆಗೆ ಮಗುವಿನ ಅಕಾಲಿಕ ಜನ ಅಥವಾ ಕಡಮೆ ತೂಕ ಮಗು ಜನಿಸುವುದು ಇಂತಹ ಅಪಾಯಗಳೂ ಎದುರಾಗಬಹುದು. ಸುರಕ್ಷಿತ ಗರ್ಭಧಾರಣೆಗಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ.

35ರ ನಂತರ ಗರ್ಭಧಾರಣೆ

ಮಕ್ಕಳನ್ನು ಹೊಂದುವ ವಿಚಾರ ತೀರಾ ವೈಯಕ್ತಿಕವಾದದ್ದು. ಕೆಲವರು ಬೇಗನೆ ಗರ್ಭಧರಿಸಿದರೆ, ಇನ್ನೂ ಕೆಲವರು ತಡವಾಗಿ ಗರ್ಭ ಧರಿಸಲು ಬಯಸುತ್ತಾರೆ. ಕೆಲವರು 35ರ ನಂತರ ಮಕ್ಕಳು ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಾರೆ.

35ರ ನಂತರ ಗರ್ಭ ಧರಿಸಿದರೆ ಎದುರಾಗುವ ಸವಾಲುಗಳು

35ರ ನಂತರ ಗರ್ಭ ಧರಿಸಲು ಯೋಚಿಸುವವರು ಎದುರಿಸುವ ಪ್ರಮುಖ ಸವಾಲು ಎಂದರೆ ಫಲವಂತಿಕೆಯ ಕುಸಿತ. ಮಹಿಳೆಯರಿಗೆ ವಯಸ್ಸಾದಂತೆ ಅಂಡಾಣುಗಳ ಸಂಖ್ಯೆ ಹಾಗೂ ಗುಣಮಟ್ಟದ ಕುಸಿತವಾಗುತ್ತದೆ. ಇದು ನೈಸರ್ಗಿಕವಾಗಿ ಮಕ್ಕಳಾಗುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಆದರೆ ಈಗೆಲ್ಲಾ ಐವಿಎಫ್‌ನಂತಹ ಫಲವಂತಿಕೆಯ ಚಿಕಿತ್ಸೆಗಳು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. ಆದರೆ ತಡವಾಗಿ ಗರ್ಭ ಧರಿಸಿದರೆ ಮಗುವಿನಲ್ಲಿ ವರ್ಣತಂತು ಅಸಹಜತೆಗಳ ಅಪಾಯ ಹೆಚ್ಚಬಹುದು. ಹೀಗೆ ಗರ್ಭ ಧರಿಸಿದ ಮಹಿಳೆಯರಿಗೆ ಜನಿಸುವ ಮಕ್ಕಳಲ್ಲಿ ಡೌನ್‌ ಸಿಂಡ್ರೋಮ್‌ನಂತಹ ಅಪಾಯಗಳು ಎದುರಾಗಬಹುದು. ಪ್ರಸವಪೂರ್ವ ಪರೀಕ್ಷೆಯು ಈ ಸಮಸ್ಯೆಗಳನ್ನು ಇಂತಹ ಅಪಾಯಗಳನ್ನು ಮೊದಲೇ ಗುರುತಿಸಲು ಸಹಾಯ ಮಾಡುತ್ತದೆʼ ಎಂದು ಪ್ರಿಸ್ಟಿನ್ ಕೇರ್‌ನಲ್ಲಿ ಸಹ-ಸಂಸ್ಥಾಪಕಿ ಮತ್ತು ಸ್ತ್ರೀರೋಗತಜ್ಞೆ ಡಾ ಗರಿಮಾ ಸಾಹ್ನಿ ಹೇಳುತ್ತಾರೆ.

ʼವಯಸ್ಸಾದ ಅಂದರೆ 35ರ ನಂತರ ಗರ್ಭ ಧರಿಸುವ ಹೆಣ್ಣುಮಕ್ಕಳಿಗೆ ಗರ್ಭಾವಸ್ಥೆಯ ದೈಹಿಕ ಅಂಶಗಳು ಕೂಡ ಭಿನ್ನವಾಗಿರಬಹುದು. ಗರ್ಭಾವಸ್ಥೆಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಗರ್ಭಾವಸ್ಥೆಯ ತೊಡಕುಗಳು ಹೆಚ್ಚಿನ ಅವಕಾಶವಿದೆ. ಅಕಾಲಿಕ ಜನನ ಹಾಗೂ ಕಡಿಮೆ ತೂಕವೂ ಸಹ ಕಂಡುಬರುತ್ತದೆ. ಆದರೆ ಅವಧಿ ವಿಳಂಬ ಗರ್ಭಧಾರಣೆಯ ಸಂದರ್ಭ ನಿಯಮಿತ ತಪಾಸಣೆ ಹಾಗೂ ಸರಿಯಾದ ಪೋಷಣೆಯಿಂದ ಅಪಾಯವನ್ನು ಹಿಮ್ಮೆಟ್ಟಿಬಹುದು. ಸರಿಯಾದ ಆಹಾರ, ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಸುಗಮ ಗರ್ಭಧಾರಣೆಗೆ ಮುಖ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಗುರುಗ್ರಾಮದ ಫೋರ್ಟಿಸ್‌ ಮೆಮೊರಿಯಲ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ನೂಪುರ್‌ ಗುಪ್ತಾ ಅವರ ಪ್ರಕಾರ 35ರ ನಂತರ ಗರ್ಭಧಾರಣೆಯು ಕೆಲವು ಅಪಾಯಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ.

ಎದುರಿಸಬಹುದಾದ ಅಪಾಯಗಳಿವು

35 ವರ್ಷಕ್ಕಿಂದ ಮೇಲ್ಪಟ್ಟ ಮಹಿಳೆಯರು ಗರ್ಭ ಧರಿಸುವ ಪ್ರಮಾಣ ಈಗ ವಿಶ್ವದಾದ್ಯಂತ ಹೆಚ್ಚುತ್ತಿದೆ. ಅಮೆರಿಕನ್‌ ಕಾಲೇಜ್‌ ಆಫ್‌ ಒಬ್ಸ್‌ಸ್ಟ್ರೀಷಿಯನ್‌ ಅಂಡ್‌ ಗೈನಾಕಾಲಜಿಸ್ಟ್‌ ಪ್ರಕಾರ 35ರ ನಂತರ ಗರ್ಭಧರಿಸುವವರು ಈ ಕೆಲವು ಅಪಾಯಗಳನ್ನು ಎದುರಿಸಬೇಕಾಗುತ್ತದೆ.

1. ಅನೆಪ್ಲೋಯಿಡೀಸ್‌ ಅಥವಾ ಡೌನ್‌ ಸಿಂಡ್ರೂಮ್‌ನಂತಹ ಕ್ರೋಮೊಸೋಮಲ್‌ ಅಸಹಜತೆಗಳ ಅಪಾಯ ಹೆಚ್ಚುತ್ತದೆ.

2. ಫಲವಂತಿಕೆ ಕ್ಷೀಣಿಸುತ್ತದೆ: 35 ವರ್ಷಗಳ ನಂತರ ಫಲವಂತಿಕೆಯು ಗಮನಾರ್ಹವಾಗಿ ಕ್ಷೀಣಿಸುತ್ತದೆ. ಇದು ಮೂವತ್ತರ ದಶಕದ ಕೊನೆಯಲ್ಲಿ ಮತ್ತು ನಲವತ್ತರ ಆರಂಭದಲ್ಲಿ ಹೆಚ್ಚು ಸವಾಲು ಉಂಟಾಗುವಂತೆ ಮಾಡುತ್ತದೆ.

3. ಗರ್ಭಪಾತದ ಅಪಾಯ ಹೆಚ್ಚು, ಜೊತೆಗೆ ಸಹಜ ಗರ್ಭಧಾರಣೆ ಸಾಧ್ಯವಾಗದೇ ಇರಬಹುದು.

4. 35ರ ನಂತರ ಗರ್ಭ ಧರಿಸುವ ಮಹಿಳೆಯರಲ್ಲಿ ಗರ್ಭಾವಸ್ಥೆಯ ಮಧುಮೇಹದ ಸಾಧ್ಯತೆ ಹೆಚ್ಚು.

5. ಅಧಿಕ ರಕ್ತದೊತ್ತಡ ಹಾಗೂ ಪ್ರಿಕ್ಲಾಂಪ್ಸಿಯಾ ಅಪಾಯವೂ ಹೆಚ್ಚುತ್ತದೆ.

* ಅವಧಿಪೂರ್ವ ಮಗುವಿನ ಜನನದ ಅಪಾಯವು ಇನ್ನಿತರ ತೊಂದರೆಗಳಿಗೆ ಕಾರಣವಾಗುತ್ತದೆ.

* ಹೆಚ್ಚುವರಿ ವೈದ್ಯಕೀಯ ಅಪಾಯಗಳ ಕಾರಣದಿಂದ ಸಿಸೇರಿಯನ್‌ ಹೆರಿಗೆಯ ಸಾಧ್ಯತೆಗಳು ಹೆಚ್ಚುತ್ತದೆ.

35ರ ನಂತರ ಗರ್ಭ ಧರಿಸುವ ಮಹಿಳೆಯರು ಮಾಡಿಸಬೇಕಾದ ಪರೀಕ್ಷೆಗಳು

ಗರ್ಭಧಾರಣೆಯನ್ನು ಯೋಜಿಸುವ ಮೊದಲು ಮಹಿಳೆಯರು ಒಳಪಡಬೇಕಾದ ಕೆಲವು ವೈದ್ಯಕೀಯ ಪರೀಕ್ಷೆಗಳ ಪಟ್ಟಿಯನ್ನು ಡಾ. ಗುಪ್ತಾ ಇಲ್ಲಿ ಹಂಚಿಕೊಂಡಿದ್ದಾರೆ.

1. ಸಿಬಿಸಿ

2. ಬ್ಲಡ್‌ ಗ್ರೂಪ್‌

3. ರುಬೆಲ್ಲ ಐಜಿಸಿ

4. ಥಲಸ್ಸೆಮಿಯಾ ಸ್ಕ್ರೀನಿಂಗ್‌

5. ಬ್ಲಡ್‌ ಶುಗರ್‌

6. ಟಿಎಸ್‌ಎಚ್‌

7. ವ್ಯಾಕ್ಸಿನೇಷನ್‌

8. ರಕ್ತದೊತ್ತಡ ತಪಾಸಣೆ

9. ಬಿಎಂಐ

ʼ35 ವರ್ಷಕ್ಕಿಂದ ಮೇಲ್ಪಟ್ಟ ಮಹಿಳೆಯರು ಗರ್ಭಧಾರಣೆಯ ಬಗ್ಗೆ ಯೋಜಿಸುತ್ತಿದ್ದರೆ ಅವರು ಸಂಭಾವ್ಯ ಅಪಾಯಗಳನ್ನು ಚರ್ಚಿಸಲು ವೈದ್ಯರನ್ನು ಭೇಟಿ ಮಾಡಬೇಕು. ತಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಲು ವೈಯಕ್ತಿಕ ಆರೈಕೆಯ ಮೇಲೆ ಗಮನ ನೀಡಬೇಕು. ನಿಯಮಿತ ಪ್ರಸವಪೂರ್ವ ಆರೈಕೆ, ಆರೋಗ್ಯಕರ ಜೀವನಶೈಲಿಯ ಆಯ್ಕೆಗಳು, ವೈದ್ಯರೊಂದಿಗೆ ಮುಕ್ತ ಸಂವಹನ ನಡೆಸುವುದರಿಂದ ಅಪಾಯಗಳು ಹಾಗೂ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆʼ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

    ಹಂಚಿಕೊಳ್ಳಲು ಲೇಖನಗಳು