ಕನ್ನಡ ಸುದ್ದಿ  /  ಜೀವನಶೈಲಿ  /  Relationship: ನಿಮ್ಮ ಸಂಗಾತಿಯ ಭಾವನೆ ಅರ್ಥ ಮಾಡಿಕೊಳ್ಳಿ; ಉತ್ತಮ ಲೈಂಗಿಕ ಜೀವನಕ್ಕಾಗಿ ನವ ವಿವಾಹಿತರಿಗೆ ಇಲ್ಲಿವೆ ಉಪಯುಕ್ತ ಸಲಹೆಗಳು

Relationship: ನಿಮ್ಮ ಸಂಗಾತಿಯ ಭಾವನೆ ಅರ್ಥ ಮಾಡಿಕೊಳ್ಳಿ; ಉತ್ತಮ ಲೈಂಗಿಕ ಜೀವನಕ್ಕಾಗಿ ನವ ವಿವಾಹಿತರಿಗೆ ಇಲ್ಲಿವೆ ಉಪಯುಕ್ತ ಸಲಹೆಗಳು

HT Kannada Desk HT Kannada

Mar 27, 2024 04:37 PM IST

ಉತ್ತಮ ಲೈಂಗಿಕ ಜೀವನಕ್ಕಾಗಿ ನವ ವಿವಾಹಿತರಿಗೆ ಇಲ್ಲಿವೆ ಉಪಯುಕ್ತ ಸಲಹೆಗಳು

  •  Relationship: ನವ ವಿವಾಹಿತರು ಮೊದಲ ಬಾರಿ ದೈಹಿಕ ಸಂಪರ್ಕ ಬೆಳೆಸಲು ಮುಜುಗರ ವ್ಯಕ್ತಪಡಿಸುತ್ತಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಹಳ ಹಿಂಜರಿಯುತ್ತಾರೆ. ಆದರೆ ಇಂಥ ಹಿಂಜರಿಕೆಯನ್ನು ಹೋಗಲಾಡಿಸಿ ಸಂತೋಷದ ಲೈಂಗಿಕ ಜೀವನ ನಡೆಸಲು ಇಲ್ಲಿವೆ ಕೆಲವೊಂದು ಸಲಹೆಗಳು.

ಉತ್ತಮ ಲೈಂಗಿಕ ಜೀವನಕ್ಕಾಗಿ ನವ ವಿವಾಹಿತರಿಗೆ ಇಲ್ಲಿವೆ ಉಪಯುಕ್ತ ಸಲಹೆಗಳು
ಉತ್ತಮ ಲೈಂಗಿಕ ಜೀವನಕ್ಕಾಗಿ ನವ ವಿವಾಹಿತರಿಗೆ ಇಲ್ಲಿವೆ ಉಪಯುಕ್ತ ಸಲಹೆಗಳು (PC: Unsplash)

Relationship: ಮದುವೆ ಎನ್ನುವುದು ಎರಡು ಜೀವಗಳನ್ನು ಒಂದು ಮಾಡುವ ಪ್ರಕ್ರಿಯೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮದುವೆಯಾದ ಬಳಿಕ ಗಂಡು ಹೆಣ್ಣು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಲೈಂಗಿಕ ಕ್ರಿಯೆ ಎನ್ನುವುದು ದಂಪತಿಯ ನಡುವೆ ಪ್ರೇಮವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

Personality Test: ನಿಮ್ಮ ಸ್ವಭಾವ ಹೇಗೆ, ವ್ಯಕ್ತಿತ್ವ ಎಂಥದ್ದು ತಿಳಿಸುತ್ತೆ ಕೈ ಬೆರಳುಗಳ ಗಾತ್ರ, ಅಂಗೈನ ಆಕಾರ; ಪರೀಕ್ಷಿಸಿ

ಚಾರ್‌ ಧಾಮ್‌ ಯಾತ್ರೆ; ಶಿವನ ಸನ್ನಿಧಾನಕ್ಕೆ ಹೋಗುವ ಮೊದಲು ಕೇದಾರನಾಥದ ಇತಿಹಾಸ ತಿಳಿಯಿರಿ

ಸೋಷಿಯಲ್‌ ಮೀಡಿಯಾದಲ್ಲಿ 'ಬರ್ಡ್‌ ಟೆಸ್ಟ್‌' ಟ್ರೆಂಡಿಂಗ್‌; ಜೋಡಿ ಹಕ್ಕಿಗಳ ಟೆಸ್ಟ್‌ನಲ್ಲಿದೆ ಟ್ವಿಸ್ಟ್

ನವ ವಿವಾಹಿತರಿಗೆ ಇದೊಂದು ಹೊಸ ಅನುಭವವಾಗಿರುವುದರಿಂದ ದೈಹಿಕ ಬಂಧವನ್ನು ಹೊಂದಲು ಕೆಲವರು ಸಮಯ ತೆಗೆದುಕೊಳ್ಳುತ್ತಾರೆ. ಹೀಗಾಗಿ ನವ ವಿವಾಹಿತ ದಂಪತಿ ಉತ್ತಮ ದೈಹಿಕ ಸಂಬಂಧವನ್ನು ಹೊಂದಲು ಏನೆಲ್ಲ ಮಾಡಬಹುದು ಎಂಬುದಕ್ಕೆ ಇಲ್ಲಿವೆ ಸಲಹೆಗಳು.

ದಾಂಪತ್ಯ ಜೀವನದಲ್ಲಿ ಲೈಂಗಿಕತೆಯ ಮಹತ್ವವೇನು..?

ದಾಂಪತ್ಯ ಜೀವನದಲ್ಲಿ ಲೈಂಗಿಕತೆಯು ಪತಿ - ಪತ್ನಿಯ ನಡುವೆ ಅನ್ಯೋನ್ಯತೆ ಹಾಗೂ ನಿಕಟ ಸಂಬಂಧವನ್ನು ನಿರ್ವಹಿಸುತ್ತದೆ. ಇಬ್ಬರ ನಡುವೆ ಉತ್ತಮ ಬಂಧ ರೂಪಗೊಳ್ಳಲು ಇದು ಸಹಾಯ ಮಾಡುತ್ತವೆ. ಪತಿ - ಪತ್ನಿಯ ನಡುವೆ ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಮಿಪ್ಯವನ್ನು ತರುತ್ತದೆ.

ದಾಂಪತ್ಯ ಜೀವನಕ್ಕೆ ಬಂದ ಬಳಿಕ ಲೈಂಗಿಕ ಸಂಬಂಧಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ನಿಮ್ಮ ಸಂಗಾತಿಯ ಈ ನಿರ್ಧಾರಕ್ಕೆ ನೀವು ಬೆಲೆ ನೀಡಲೇಬೇಕು. ಒಪ್ಪಿಗೆಯಿಂದ ಕೂಡಿದ ದೈಹಿಕ ಸಂಪರ್ಕ ಮಾತ್ರ ಪ್ರೀತಿಯನ್ನು ಹುಟ್ಟಿಸುತ್ತದೆ. ಹೀಗಾಗಿ ನವ ವಿವಾಹಿತರು ಉತ್ತಮ ಲೈಂಗಿಕ ಜೀವನಕ್ಕಾಗಿ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದಾಗಿದೆ.

1. ಲೈಂಗಿಕತೆಯ ಬಗ್ಗೆ ಸಂವಹನ

ಸಂವಹನ ದಾಂಪತ್ಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲೈಂಗಿಕ ಜೀವನದ ಬಗ್ಗೆ ನಿಮ್ಮ ಇಷ್ಟ ಹಾಗೂ ಕಷ್ಟಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯವನ್ನು ಹಂಚಿಕೊಳ್ಳಿ. ನಿಮ್ಮ ಸಂಗಾತಿಗೆ ಯಾವ ರೀತಿಯ ದೈಹಿಕ ಸಂಪರ್ಕ ಇಷ್ಟವಾಗುತ್ತದೆ ಎಂಬುದರ ಬಗ್ಗೆ ಮಾತನಾಡುವುದರಿಂದ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

2. ಮಲಗುವ ಕೋಣೆಯ ವಾತಾವರಣ ಚೆನ್ನಾಗಿರಲಿ

ದೈಹಿಕ ಸಂಪರ್ಕ ಬೆಳೆಸಲು ಮೂಡ್ ಒಳ್ಳೆಯ ರೀತಿಯಲ್ಲಿ ಇರಬೇಕು. ಹೀಗಾಗಿ ನೀವು ಮಲಗುವ ಕೋಣೆ ಸ್ವಚ್ಛಂದವಾಗಿ ಇರುವಂತೆ ನೋಡಿಕೊಳ್ಳಿ. ಸುಗಂಧಭರಿತ ಮೇಣದಬತ್ತಿಗಳನ್ನು ಬೆಳಗಿ. ಸಣ್ಣದಾಗಿ ರೊಮ್ಯಾಂಟಿಕ್ ಗೀತೆಗಳನ್ನು ಹಾಕಿ. ಈ ರೀತಿ ಮಾಡುವುದರಿಂದ ಇಬ್ಬರ ನಡುವೆ ಪ್ರೀತಿಯ ಭಾವ ಮೂಡುತ್ತದೆ.

3. ರೊಮ್ಯಾನ್ಸ್‌ಗೆ ಸಂಬಂಧಿಸಿದ ದೃಶ್ಯಗಳು ನೋಡಿ

ನಿಮ್ಮ ಸಂಗಾತಿಯು ಲೈಂಗಿಕ ಸಂಬಂಧವನ್ನು ಬೆಳೆಸಲು ಹಿಂಜರಿಯುತ್ತಿದ್ದರೆ ಒಟ್ಟಾಗಿ ಕುಳಿತು ನೀವು ಕೆಲವು ರೊಮ್ಯಾಂಟಿಕ್ ದೃಶ್ಯಗಳನ್ನು ನೋಡಬಹುದು. ಇದು ನಿಮ್ಮ ಸಂಗಾತಿಗೆ ಲೈಂಗಿಕತೆಯ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಬಹುದು.

4 .ರೊಮ್ಯಾನ್ಸ್‌ಗೆ ಆದ್ಯತೆ ನೀಡಿ

ರೊಮ್ಯಾನ್ಸ್ ನಿಮ್ಮ ನಡುವಿನ ಸಂಬಂಧವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ. ಹೀಗಾಗಿ ಲೈಂಗಿಕ ಕ್ರಿಯೆಗೂ ಮುನ್ನ ಆದಷ್ಟು ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಿರಿ.

5. ಕಣ್ಣುಗಳು ಮಾತನಾಡುತ್ತಿರಲಿ

ಲೈಂಗಿಕ ಕ್ರಿಯೆ ಎನ್ನುವುದು ಕಾಟಾಚಾರದಂತಿರಬಾರದು. ನಿಮ್ಮ ಸಂಗಾತಿಯ ಜೊತೆ ಕಣ್ಣುಗಳಲ್ಲೇ ಸಂಭಾಷಣೆ ನಡೆಸಿ. ಅವರಿಗೆ ಒಳ್ಳೆಯ ವಾತಾವರಣವನ್ನು ಕಟ್ಟಿಕೊಡಿ. ಅವರ ಜೊತೆ ಸಂಭಾಷಣೆ ನಡೆಸಿ. ನಿಮ್ಮ ಪ್ರೀತಿಯ ಮಾತುಗಳನ್ನು ವ್ಯಕ್ತಪಡಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು