Relationship: ಸಂಬಂಧದಲ್ಲಿ ಹೊಂದಾಣಿಕೆಯೇ ಮರೀಚಿಕೆ ಆಗಿದ್ಯಾ? ಹಾಗಿದ್ರೆ ಈ 5 ಪ್ರಶ್ನೆಗಳನ್ನು ನಿಮಗೆ ನೀವೇ ಕೇಳ್ಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Relationship: ಸಂಬಂಧದಲ್ಲಿ ಹೊಂದಾಣಿಕೆಯೇ ಮರೀಚಿಕೆ ಆಗಿದ್ಯಾ? ಹಾಗಿದ್ರೆ ಈ 5 ಪ್ರಶ್ನೆಗಳನ್ನು ನಿಮಗೆ ನೀವೇ ಕೇಳ್ಕೊಳ್ಳಿ

Relationship: ಸಂಬಂಧದಲ್ಲಿ ಹೊಂದಾಣಿಕೆಯೇ ಮರೀಚಿಕೆ ಆಗಿದ್ಯಾ? ಹಾಗಿದ್ರೆ ಈ 5 ಪ್ರಶ್ನೆಗಳನ್ನು ನಿಮಗೆ ನೀವೇ ಕೇಳ್ಕೊಳ್ಳಿ

  • ಯಾವುದೇ ಸಂಬಂಧ ಅನ್ಯೋನ್ಯವಾಗಿರಬೇಕು ಅಂದ್ರೆ ಇಬ್ಬರ ನಡುವೆ ಹೊಂದಾಣಿಕೆ ಇರುವುದು ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆಯ ಸಮಸ್ಯೆಯಿಂದ ಹಲವರು ದೂರಾಗುತ್ತಿದ್ದಾರೆ. ನೀವು ಸಂಬಂಧದಲ್ಲಿ ಹೊಂದಾಣಿಕೆಯ ಸಮಸ್ಯೆ ಎದುರಿಸುತ್ತಿದ್ದರೆ, ನಿಮಗೆ ನೀವೇ ಈ ಪ್ರಶ್ನೆ ಕೇಳಿಕೊಳ್ಳಿ.

ಪ್ರೀತಿ-ಪ್ರೇಮ, ಮದುವೆ ಯಾವುದೇ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಆರಂಭದಿಂದಲೂ ಒಂದಿಷ್ಟು ವಿಚಾರಗಳ ಬಗ್ಗೆ ಸ್ವಷ್ಟತೆ ಹೊಂದಿರುವುದು ಮುಖ್ಯವಾಗುತ್ತದೆ. ನಿಮ್ಮ ಸಂಬಂಧದಲ್ಲಿ ದಿನೇ ದಿನೇ ಹೊಂದಾಣಿಕೆ ಹದಗೆಡುತ್ತಿದ್ದರೆ ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಿಮ್ಮ ಪ್ರಶ್ನೆಗೆ ನಿಮ್ಮ ಉತ್ತರ ನಿಮಗೆ ಸಮಾಧಾನ ತಂದಿಲ್ಲ ಎಂದರೆ ತಪ್ಪಿರುವುದು ಸಂಗಾತಿಯ ವಿಚಾರದಲ್ಲಲ್ಲ, ನೀವು ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಿದ್ದೀರಿ ಎಂದರ್ಥ. ಹಾಗಾದರೆ ಹೊಂದಾಣಿಕೆ ಇಲ್ಲದ ಸಂಬಂಧದಲ್ಲಿ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಯಾವುವು ನೋಡಿ. 
icon

(1 / 7)

(Unsplash)

ನಿಮ್ಮ ಸಂಬಂಧ ಯಾವ ಕಾರಣಕ್ಕೆ ಅಸ್ತಿತ್ವದಲ್ಲಿರಬೇಕು, ನೀವಿಬ್ಬರೂ ಸಂಬಂಧದಿಂದ ಏನನ್ನು ಬಯಸುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಕೇಳಿಕೊಂಡು ಅದಕ್ಕೆ ಉತ್ತರ ಹುಡುಕಿ. ಆಗ ಇಬ್ಬರಲ್ಲಿ ಯಾರ ಸಮಸ್ಯೆ ಎಂಬುದು ಅರ್ಥವಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳಲು ಮಾರ್ಗಗಳನ್ನು ಇಬ್ಬರೂ ಕೂತು ಚರ್ಚಿಸಿ. 
icon

(2 / 7)

ಯಾವುದೇ ಸಂಬಂಧಕ್ಕೂ ನಂಬಿಕೆಯೇ ಬುನಾದಿ. ನಂಬಿಕೆ ಇಲ್ಲ ಎಂದರೆ ಸಂಬಂಧವೇ ಇಲ್ಲ. ನೀವು ಸಂಗಾತಿಯೊಂದಿಗೆ ಯಾವೆಲ್ಲಾ ವಿಚಾರಕ್ಕೆ ಸುಳ್ಳು ಹೇಳಿದ್ದೀರಿ, ಯಾವ ವಿಚಾರವನ್ನು ಮುಚ್ಚಿಟ್ಟಿದ್ದೀರಿ ಎಂಬುದನ್ನು ನಿಮಗೆ ನೀವೇ ಕೇಳಿಕೊಳ್ಳಿ. 
icon

(3 / 7)

ಜಗಳ, ಸಂಘರ್ಷಗಳು ಉಂಟಾಗುವುದು ಯಾರಿಂದ, ಯಾವ ಕಾರಣಕ್ಕೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಈ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡು ಜಗಳವಾಗದಂತೆ ಸಂಬಂಧ ಮುಂದುವರಿಸುವುದು ಬಹಳ ಮುಖ್ಯವಾಗುತ್ತದೆ. 
icon

(4 / 7)

ನಮ್ಮ ಮೌಲ್ಯಗಳು ಹಾಗೂ ಆದರ್ಶಗಳು ನಮಗೆ ಮುಖ್ಯವಾಗುತ್ತದೆ. ಸಂಬಂಧ, ಪ್ರೀತಿ ಎಂದ ಮಾತ್ರಕ್ಕೆ ಅವನ್ನೆಲ್ಲಾ ಬಿಡಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರ ಮೌಲ್ಯಗಳಿಗೆ ನೀವಿಬ್ಬರೂ ಬೆಲೆ ನೀಡುತ್ತಿದ್ದೀರಾ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
icon

(5 / 7)

(Pexels )

ಹಣಕಾಸಿನ ಸಮಸ್ಯೆಗಳನ್ನು ಸಂಬಂಧದ ಆರಂಭದಲ್ಲಿಯೇ ಚರ್ಚಿಸಬೇಕು. ಈ ವಿಚಾರದಲ್ಲಿ ಇಬ್ಬರೂ ಪಾರದರ್ಶಕರಾಗಿರಬೇಕು. ಪ್ರೀತಿ ಪಡೆಯುವ ಹುಚ್ಚಿನಲ್ಲಿ ಸುಳ್ಳುವುದು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ನಿಮ್ಮ ಸಂಬಂಧ ಹದಗೆಡುತ್ತಿದೆ ಎಂದರೆ ಹಣಕಾಸಿನ ವಿಚಾರದಲ್ಲಿ ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
icon

(7 / 7)

ಇತರ ಗ್ಯಾಲರಿಗಳು