ಗ್ರಾಹಕರಿಗೆ ಸಿಹಿ ಸುದ್ದಿ; ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ಬಂಧದ ಡೆಡ್ಲೈನ್ ವಿಸ್ತರಣೆ, ಕೊನೆಯ ದಿನಾಂಕ ಯಾವಾಗ?
Feb 16, 2024 07:51 PM IST
ಗ್ರಾಹಕರಿಗೆ ಸಿಹಿ ಸುದ್ದಿ; ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ಬಂಧದ ಡೆಡ್ಲೈನ್ ವಿಸ್ತರಣೆ
- Payment Payments Bank : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಹಣ, ಟ್ರಾನ್ಸಾಕ್ಷನ್, ಪ್ರೀಪೇಯ್ಡ್ ಮತ್ತು ವಾಲೆಟ್, ಫಾಸ್ಟ್ಯಾಗ್ ವಹಿವಾಟನ್ನು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 15ರವರೆಗೂ ಗಡುವು ನೀಡಿದೆ. ತದನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಲಾಗುತ್ತದೆ.
ಆತಂಕದಲ್ಲಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Payment Payments Bank) ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪೇಟಿಎಂ ನಿಷೇಧದ ಗಡುವನ್ನು ರಿಸರ್ವ್ ಬ್ಯಾಂಕ್ (RBI) ವಿಸ್ತರಿಸಿದೆ. ನಿಷೇಧ ಜಾರಿಗೊಳಿಸುವ ಗಡುವು ಮೊದಲಿಗೆ ಇದೇ ತಿಂಗಳ ಫೆಬ್ರವರಿ 29ರವರೆಗೆ ಇತ್ತು. ಈಗ ಮಾರ್ಚ್ 15ಕ್ಕೆ ವಿಸ್ತರಿಸಲಾಗಿದೆ. 15 ದಿನಗಳ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.
ಮಾರ್ಚ್ 15ರವರೆಗೂ ವಹಿವಾಟು ನಡೆಸಬಹುದು
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸದ್ಯ ನಿಟ್ಟುಸಿರುವ ಬಿಡುವಂತಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರ್ಬಿಐ ತಿಳಿಸಿದೆ. ವ್ಯಾಪಾರಿಗಳು, ವಾಲೆಟ್ ಉಪಯೋಗಿಸುವ, ಫಾಸ್ಟ್ಯಾಗ್, ನ್ಯಾಷನಲ್ ಮೊಬಿಲಿಟಿ ಕಾರ್ಡ್ ಸೇರಿ ಇತರೆ ಬಳಕೆ ಮಾಡುತ್ತಿರುವವರು ನಿರಾಳರಾಗಿದ್ದಾರೆ.
ಅಲ್ಲದೆ, ಪೇಟಿಎಂ ಕಂಪನಿಗೂ ಈ ಈ ಗಡುವು ನಿರಾಳ ತಂದಿದೆ. ಫೆ.29ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಹೊಸದಾಗಿ ಹಣ ಡೆಪಾಸಿಟ್ ಮತ್ತು ಟ್ರಾನ್ಸಾಕ್ಷನ್ ಮಾಡುವಂತಿಲ್ಲ ಎಂದು ಜನವರಿ 31ರಂದು ಆರ್ಬಿಐ ನಿರ್ಬಂಧ ಹೇರಿತ್ತು. ಆದರೀಗ ಈ ಸೇವೆಗಳನ್ನು ಮಾರ್ಚ್ 15ರವರೆಗೂ ನಡೆಸಬಹುದು ಎಂದು ತಿಳಿಸಿದೆ.
ಮಾರ್ಚ್ 15ರ ತನಕ ಪೇಟಿಎಂ ಗ್ರಾಹಕರು ತಮ್ಮ ವಾಲೆಟ್ಗೆ ಹಣವನ್ನು ಜಮೆ ಮಾಡಬಹುದು. ಅಲ್ಲದೆ, ಫಾಸ್ಟ್ಯಾಗ್, ಹೊಸ ಡೆಪಾಸಿಟ್, ಟ್ರಾನ್ಸಾಕ್ಷನ್ ನಡೆಸಬಹುದು. ಆದರೆ ಮಾರ್ಚ್ 15ರ ನಂತರ ಎಲ್ಲವೂ ಸ್ಥಗಿತಗೊಳ್ಳಲಿದೆ. ನಿಮ್ಮ ಖಾತೆಯ ಹಣವನ್ನು ಪೂರ್ಣ ಮುಗಿಸಿಕೊಳ್ಳಿ ಎಂದು ಗ್ರಾಹಕರಿಗೆ ಆರ್ಬಿಐ ಸೂಚಿಸಿದೆ.
ಪೇಟಿಎಂ ನಿರ್ಬಂಧ ಮಾಡಿದ್ದೇಕೆ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ನಕಲಿ ಖಾತೆ, ಅಕ್ರಮಗಳು ಮತ್ತು ಅನುಮಾನ ಹುಟ್ಟಿಸುವ ವಹಿವಾಟುಗಳು ನಡೆದಿರುವುದು ಗೊತ್ತಾಗಿದೆ. ಕೆವೈಸಿ ಪರಿಶೀಲನೆಯಲ್ಲೂ ಸರಿಯಾದ ರೀತಿ ಅನುಕರಿಸಿಲ್ಲ. 1000ಕ್ಕೂ ಖಾತೆಗಳಿಗೆ ಒಂದು ಪಾನ್ ಕಾರ್ಡ್ ಬಳಸಿರುವುದು ಸಹ ಗೊತ್ತಾಗಿದೆ. ಹೀಗಾಗಿ ಈ ಬಗ್ಗೆ ಪೇಟಿಎಂಗೆ ಆರ್ಬಿಐ ಎಚ್ಚರಿಕೆ ನೀಡಿತ್ತು. ಆದರೆ, ಪೇಟಿಎಂ ತಲೆಗೆ ಹಾಕಿಕೊಂಡಿರಲಿಲ್ಲ. ಸಂಸ್ಥೆಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿದ ಆರ್ಬಿಐ, ವಹಿವಾಟನ್ನೇ ನಿರ್ಬಂಧಿಸಿತು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಠೇವಣಿ ಹಣವನ್ನು ಹೇಗೆ ಹಿಂಪಡೆಯಬೇಂಬ ಗೊಂದಲ ಉಂಟಾಗಿದೆ. ಅಲ್ಲದೆ, ಹಲವು ಗೊಂದಲು ಸೃಷ್ಟಿಯಾಗಿವೆ. ಹಾಗಾಗಿ ಇದೆಲ್ಲದಕ್ಕೂ ಆರ್ಬಿಐ ಉತ್ತರ ನೀಡಿದೆ. ಗ್ರಾಹಕರು ಪದೆಪದೇ ಕೇಳಲಾದ ಕೆಲವು ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನೂ ಒದಗಿಸಿದೆ.