logo
ಕನ್ನಡ ಸುದ್ದಿ  /  ಕ್ರೀಡೆ  /  ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

Prasanna Kumar P N HT Kannada

Apr 27, 2024 02:59 PM IST

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

    • Archery World Cup 2024: ಆರ್ಚರಿ ವಿಶ್ವಕಪ್​​​​ ಮೊದಲ ಹಂತದಲ್ಲಿ ಭಾರತ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡಿದೆ. ಪುರುಷರ, ಮಹಿಳೆಯರ ಮತ್ತು ಮಿಶ್ರ ತಂಡದ ಸ್ಪರ್ಧೆಯಲ್ಲಿ ಭಾರತ ಸ್ವರ್ಣಕ್ಕೆ ಕೊರೊಳೊಡ್ಡಿದೆ.
ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ
ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಏಪ್ರಿಲ್ 27 ರಂದು (ಶನಿವಾರ) ಶಾಂಘೈನಲ್ಲಿ ನಡೆಯುತ್ತಿರುವ 2024ರ ಆರ್ಚರಿ ವಿಶ್ವಕಪ್ ಹಂತ-1 ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಕಾಂಪೌಂಡ್ ಈವೆಂಟ್​ಗಳಲ್ಲಿ ತಲಾ ಒಂದೊಂದು ಚಿನ್ನದ ಪದಕಕ್ಕೆ ಮುತ್ತಿಕ್ಕಿವೆ. ಮಿಶ್ರ ತಂಡ ವಿಭಾಗದಲ್ಲೂ ಗೋಲ್ಡ್ ಗೆಲ್ಲುವ ಮೂಲಕ ಭಾರತ ಹ್ಯಾಟ್ರಿಕ್ ಸಾಧನೆ ಮಾಡಿದೆ. ಏಪ್ರಿಲ್ 28ರಂದು ಸಹ ಇನ್ನೆರಡು ಚಿನ್ನ ಗೆಲ್ಲಲು ಭಾರತ ಸಜ್ಜಾಗಿದೆ.

ಟ್ರೆಂಡಿಂಗ್​ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್ ಜ್ಯೋತಿ ಹೊತ್ತು ತಂದ 19ನೇ ಶತಮಾನದ ಹಡಗು; ಜುಲೈ 26ರಂದು ಸೀನ್​ ನದಿಯಲ್ಲಿ ಉದ್ಘಾಟನಾ ಸಮಾರಂಭ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರ ಮೂವರು ಇಟಲಿಯ ಮಾರ್ಸೆಲ್ಲಾ ಟೋನಿಯೊಲಿ, ಐರಿನ್ ಫ್ರಾಂಚಿನಿ ಮತ್ತು ಎಲಿಸಾ ರೋನರ್ ಅವರನ್ನು 236-225 ಅಂಕಗಳ ಅಂತರದಿಂದ ಸೋಲಿಸಿ ಮಹಿಳಾ ತಂಡ ಮುನ್ನಡೆ ಸಾಧಿಸಿತು. ಕೇವಲ 4 ಅಂಕಗಳನ್ನು ಕಳೆದುಕೊಂಡ ಮಹಿಳಾ ತಂಡ, 6ನೇ ಶ್ರೇಯಾಂಕದ ಇಟಲಿ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.

ಮತ್ತೊಂದೆಡೆ, ಅಭಿಷೇಕ್ ವರ್ಮಾ, ಪ್ರಿಯಾಂಶ್ ಮತ್ತು ಪ್ರಥಮೇಶ್ ಫುಗೆ ನೆದರ್ಲೆಂಡ್ಸ್​​​ನ ಮೈಕ್ ಸ್ಕ್ಲೋಸರ್, ಸಿಲ್ ಪಾಟರ್ ಮತ್ತು ಸ್ಟೆಫ್ ವಿಲ್ಲೆಮ್ಸ್ ವಿರುದ್ಧ ಇದೇ ರೀತಿಯ ಪ್ರಾಬಲ್ಯವನ್ನು ಪ್ರದರ್ಶಿಸಿದರು ಮತ್ತು 238-231 ರಲ್ಲಿ ಜಯಗಳಿಸಿದರು. ಭಾರತ ಪುರುಷರ ತಂಡ ಕೇವಲ 2 ಅಂಕಗಳನ್ನು ಕಳೆದುಕೊಂಡು ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಬಗ್ಗು ಬಡಿಯಿತು.

ಮಿಶ್ರ ತಂಡದಲ್ಲೂ ಭಾರತಕ್ಕೆ ಚಿನ್ನದ ಪದಕ

ಜ್ಯೋತಿ ಸುರೇಖಾ ವೆನ್ನಮ್ ಮತ್ತು ಅಭಿಷೇಕ್ ವರ್ಮಾ ಜೋಡಿ ಸಂಯುಕ್ತ ಮಿಶ್ರ ತಂಡ ಚಿನ್ನದ ಫೈನಲ್‌ನಲ್ಲಿ ಎಸ್ಟೋನಿಯಾವನ್ನು 158-157 ರಿಂದ ಸೋಲಿಸುವ ಮೂಲಕ ಭಾರತವು ತಮ್ಮ ಮುಡಿಗೆ 3ನೇ ಚಿನ್ನವನ್ನು ಸೇರಿಸಿತು. 2ನೇ ಶ್ರೇಯಾಂಕದ ಭಾರತೀಯ ಜೋಡಿಯು ತಮ್ಮ ಎಸ್ಟೋನಿಯನ್ ಸಹವರ್ತಿಗಳಿಂದ ತೀವ್ರ ಪೈಪೋಟಿ ಎದುರಿಸಿತು. ಆದರೆ, 158-157 ಗೇಮ್‌ಗಳನ್ನು ಪಡೆಯಲು ಕೊನೆವರೆಗೂ ತಾಳ್ಮೆ ಕಾಯ್ದುಕೊಂಡರು.

ಎಸ್ಟೋನಿಯಾದ ಲಿಸೆಲ್ ಜಾತ್ಮಾ ಮತ್ತು ರಾಬಿನ್ ಜಾತ್ಮಾ ಸಾಕಷ್ಟು ಚಮತ್ಕಾರ ಪ್ರದರ್ಶಿಸಿದರು. ತಮ್ಮ ಭಾರತೀಯ ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಿದರು. ಆದರೆ, ಕೊನೆಯವರೆಗೂ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. 

ಏಪ್ರಿಲ್ 28ರಂದು ಮತ್ತೆರಡು ಪದಕ ಸಾಧ್ಯತೆ

ಎರಡು ಚಿನ್ನ ಗೆದ್ದಿರುವ ಜ್ಯೋತಿ ಅವರು ವೈಯಕ್ತಿಕ ವಿಭಾಗದಲ್ಲೂ ಗೋಲ್ಡ್ ಗೆಲ್ಲಲು ಎದುರು ನೋಡುತ್ತಿದ್ದು, ಏಪ್ರಿಲ್ 28ರಂದು ಮತ್ತೊಂದು ಸ್ಪರ್ಧೆಯಲ್ಲಿ ತೊಡಗಲಿದ್ದಾರೆ. ಮತ್ತೊಂದೆಡೆ, ಪುರುಷರ ಟೀಮ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೂವರ ಭಾಗವಾಗಿರುವ ಪ್ರಿಯಾಂಶ್ ಅವರು ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ರಿಕರ್ವ್ ವಿಭಾಗದಲ್ಲಿ ಪದಕ ಸ್ಪರ್ಧೆಗಳು ಏಪ್ರಿಲ್ 28 ರಂದು (ಭಾನುವಾರ) ನಡೆಯಲಿದ್ದು, ಭಾರತ 2 ಪದಕಗಳನ್ನು ಗೆಲ್ಲುವ ಸ್ಪರ್ಧೆಯಲ್ಲಿದೆ. ಅನುಭವಿ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ವೈಯಕ್ತಿಕ ಚಿನ್ನದ ಮೇಲೆ ದೃಷ್ಟಿ ನೆಟ್ಟಿದ್ದು, ರಿಕರ್ವ್ ವಿಭಾಗದ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಬಿಲ್ಲುಗಾರನ ವಿರುದ್ಧ ಸ್ಪರ್ಧಿಸಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ