ಹಾರ್ದಿಕ್ ಪಾಂಡ್ಯ ಔಟ್, ಸಂಜು ಸ್ಯಾಮ್ಸನ್-ಶಿವಂ ದುಬೆ ಇನ್: ಟಿ20 ವಿಶ್ವಕಪ್​ಗೆ ಹರ್ಭಜನ್ ಆರಿಸಿದ 15 ಸದಸ್ಯರ ಭಾರತ ತಂಡ ಹೀಗಿದೆ-cricket news hardik pandya out sanju samson shivam dube in harbhajan singh picks india squad for t20 world cup 2024 prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ ಔಟ್, ಸಂಜು ಸ್ಯಾಮ್ಸನ್-ಶಿವಂ ದುಬೆ ಇನ್: ಟಿ20 ವಿಶ್ವಕಪ್​ಗೆ ಹರ್ಭಜನ್ ಆರಿಸಿದ 15 ಸದಸ್ಯರ ಭಾರತ ತಂಡ ಹೀಗಿದೆ

ಹಾರ್ದಿಕ್ ಪಾಂಡ್ಯ ಔಟ್, ಸಂಜು ಸ್ಯಾಮ್ಸನ್-ಶಿವಂ ದುಬೆ ಇನ್: ಟಿ20 ವಿಶ್ವಕಪ್​ಗೆ ಹರ್ಭಜನ್ ಆರಿಸಿದ 15 ಸದಸ್ಯರ ಭಾರತ ತಂಡ ಹೀಗಿದೆ

Harbhajan Singh T20 World Cup : ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಟಿ20 ವಿಶ್ವಕಪ್ 2024 ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಕಟ್ಟಿದ್ದಾರೆ. ಅಚ್ಚರಿ ಅಂದರೆ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಔಟ್, ಸಂಜು ಸ್ಯಾಮ್ಸನ್-ಶಿವಂ ದುಬೆ ಇನ್: ಟಿ20 ವಿಶ್ವಕಪ್​ಗೆ ಹರ್ಭಜನ್ ಆರಿಸಿದ 15 ಸದಸ್ಯರ ಭಾರತ ತಂಡ ಹೀಗಿದೆ
ಹಾರ್ದಿಕ್ ಪಾಂಡ್ಯ ಔಟ್, ಸಂಜು ಸ್ಯಾಮ್ಸನ್-ಶಿವಂ ದುಬೆ ಇನ್: ಟಿ20 ವಿಶ್ವಕಪ್​ಗೆ ಹರ್ಭಜನ್ ಆರಿಸಿದ 15 ಸದಸ್ಯರ ಭಾರತ ತಂಡ ಹೀಗಿದೆ

2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಎಂಎಸ್ ಧೋನಿ (MS Dhoni) ನೇತೃತ್ವದ ತಂಡದ ಭಾಗವಾಗಿದ್ದ ಭಾರತದ ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಅವರು ಮುಂಬರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ (T20 World Cup 2024) ಬಲಿಷ್ಠ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದ್ದಾರೆ. ಭಜ್ಜಿಯ 15 ಸದಸ್ಯರ ತಂಡದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಕೈಬಿಟ್ಟಿದ್ದಾರೆ. ಆದರೆ, ಲಕ್ನೋ ಸೂಪರ್ ಜೈಂಟ್ಸ್ ಯುವ ವೇಗಿ ಮಯಾಂಕ್ ಯಾದವ್ ಮತ್ತು ರಾಜಸ್ಥಾನ್ ರಾಯಲ್ಸ್ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಜೊತೆಗೆ ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆಗೆ ತಂಡದಲ್ಲಿ ಸ್ಥಾನ ಕೊಟ್ಟಿದ್ದಾರೆ.

ಚಹಲ್ ಟಿ20ಐಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಮತ್ತು ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಏಕೈಕ ಬೌಲರ್. ಆದರೆ ಅದರ ಹೊರತಾಗಿಯೂ ಅವರು ಇಲ್ಲಿಯವರೆಗೆ ಭಾರತ ತಂಡದ ಪರ ಟಿ20 ವಿಶ್ವಕಪ್‌ನಲ್ಲಿ ಆಡಿಲ್ಲ. 2021ರ ಟಿ20 ವಿಶ್ವಕಪ್‌ ಟೂರ್ನಿಗೆ ನಿರ್ಲಕ್ಷ್ಯಕ್ಕೆ ಒಳಗಾದರೆ, 2022ರ ಆವೃತ್ತಿಯ ಚುಟುಕು ಸಮರಕ್ಕೆ ಆಯ್ಕೆಯಾದರೂ ಆಡುವ ಅವಕಾಶ ಪಡೆಯಲಿಲ್ಲ. ಟಿ20 ವಿಶ್ವಕಪ್​ಗೆ ಕಟ್ಟಿರುವ ತಂಡವನ್ನು ಸ್ಟಾರ್​ಸ್ಪೋರ್ಟ್ಸ್​ನೊಂದಿಗೆ ಹಂಚಿಕೊಂಡಿರುವ ಹರ್ಭಜನ್, ರೋಹಿತ್​ ಶರ್ಮಾ ಅವರನ್ನು ಕ್ಯಾಪ್ಟನ್ ಮಾಡಿದ್ದಾರೆ.

ಹರ್ಭಜನ್ ಕಟ್ಟಿದ ವಿಶ್ವಕಪ್ ತಂಡದಲ್ಲಿ ಯಾರಿಗೆ ಅವಕಾಶ?

ರೋಹಿತ್ ನಾಯಕನಾದರೆ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್​ ಯಾದವ್, ರಿಂಕು ಸಿಂಗ್​ ಬ್ಯಾಟರ್​​ಗಳಾಗಿ ಸೇರಿಕೊಂಡಿದ್ದಾರೆ. ಐಪಿಎಲ್​ನಲ್ಲಿ ಆರ್ಭಟಿಸುತ್ತಿರುವ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ವಿಕೆಟ್ ಕೀಪರ್​ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಶಿವಂ ದುಬೆ ಅವರು ವೇಗದ ಬೌಲಿಂಗ್ ಆಲ್​ರೌಂಡರ್​​ ಆಗಿದ್ದಾರೆ. ರವೀಂದ್ರ ಜಡೇಜಾ ಅವರು ಸ್ಪಿನ್ ಬೌಲಿಂಗ್ ಆಲ್​ರೌಂಡರ್​ ಆಗಿದ್ದಾರೆ. ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್​​​ಗಳಾಗಿ ಯುಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ.

ಹಾಗೆಯೇ ವೇಗದ ಬೌಲಿಂಗ್ ಘಟಕದಲ್ಲಿ ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮತ್ತು ಮಯಾಂಕ್ ಯಾದವ್ ಅವರೊಂದಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಹರ್ಭಜನ್ ಸಿಂಗ್ ಸೇರಿಸಿದ್ದಾರೆ. ಬುಮ್ರಾ ಮತ್ತು ಅರ್ಷದೀಪ್ ಈ ಮೊದಲು ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಆಡಿದ್ದರೆ, ಅವೇಶ್ ಅವರು ಟಿ20ಐಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅದರಲ್ಲಿ ಅವರು ತಮ್ಮ ಹೆಸರಿಗೆ 19 ವಿಕೆಟ್‌ ಪಡೆದಿದ್ದಾರೆ. ಆದರೆ ಮಯಾಂಕ್ ಯಾದವ್ ಇನ್ನೂ ಮೆನ್ ಇನ್ ಬ್ಲೂ ಪರ ಆಡಿಲ್ಲ.

ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್, ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್, ರವಿ ಬಿಷ್ಣೋಯ್, ಅಕ್ಷರ್​ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಹಾರ್ದಿಕ್ ಭಾರತದ ಟಿ20 ವಿಶ್ವಕಪ್ 2024 ತಂಡಕ್ಕೆ ಹರ್ಭಜನ್ ಕಡೆಗಣಿಸಿದ ಕೆಲವು ಪ್ರಮುಖ ಆಟಗಾರರು. ಶೀಘ್ರದಲ್ಲೇ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸುವ ಸಾಧ್ಯತೆ ಇದೆ. ಜೂನ್ 1ರಿಂದ ಮೆಗಾ ಟೂರ್ನಿ ಪ್ರಾರಂಭ ಆಗಲಿದೆ. ಜೂನ್ 5ರಿಂದ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಟಿ20 ವಿಶ್ವಕಪ್ 2024ಕ್ಕೆ ಹರ್ಭಜನ್ ಸಿಂಗ್ ಅವರ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್.

ಮತ್ತಷ್ಟು ಕ್ರಿಕೆಟ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

mysore-dasara_Entry_Point