ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ಐಕಾನ್ ಪಟ್ಟಿಯಲ್ಲೇ ನನ್ನ ಹೆಸರಿರಲಿಲ್ಲ, ವಿಜಯ ಮಲ್ಯ ಅವನು ನನ್ನ ಬೆಂಗಳೂರು ಹುಡುಗ ಎಂದಿದ್ರು; ವಿಶೇಷ ಘಟನೆ ನೆನೆದ ಮಾಜಿ ನಾಯಕ

ಆರ್​ಸಿಬಿ ಐಕಾನ್ ಪಟ್ಟಿಯಲ್ಲೇ ನನ್ನ ಹೆಸರಿರಲಿಲ್ಲ, ವಿಜಯ ಮಲ್ಯ ಅವನು ನನ್ನ ಬೆಂಗಳೂರು ಹುಡುಗ ಎಂದಿದ್ರು; ವಿಶೇಷ ಘಟನೆ ನೆನೆದ ಮಾಜಿ ನಾಯಕ

Anil Kumble : ರಾಯಲ್ ಚಾಲೆಂಜರ್ಸ್ ಬೆಂಗಳೂರು 'ಐಕಾನ್' ಆಟಗಾರರ ಪಟ್ಟಿಯಲ್ಲಿ ಅವರನ್ನು ಸೇರಿಸದಿದ್ದರೂ ವಿಜಯ್ ಮಲ್ಯ ಅವರು ನೀನು ಬೆಂಗಳೂರು ಹುಡುಗ ಎಂದು ಹೇಳಿದ್ದರು ಎಂಬ ವಿಚಾರವನ್ನು ಅನಿಲ್ ಕುಂಬ್ಳೆ ಬಹಿರಂಗಪಡಿಸಿದ್ದಾರೆ.

ಐಪಿಎಲ್ ಹರಾಜಿನಲ್ಲಿ ನಡೆದ ವಿಶೇಷ ಘಟನೆ ನೆನೆದ ಮಾಜಿ ನಾಯಕ ಅನಿಲ್ ಕುಂಬ್ಳೆ
ಐಪಿಎಲ್ ಹರಾಜಿನಲ್ಲಿ ನಡೆದ ವಿಶೇಷ ಘಟನೆ ನೆನೆದ ಮಾಜಿ ನಾಯಕ ಅನಿಲ್ ಕುಂಬ್ಳೆ

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League)​ ಹರಾಜಿನ ಆರಂಭಿಕ ದಿನಗಳನ್ನು ಭಾರತ ಮಾಜಿ ಕ್ರಿಕೆಟ್ ದಂತಕಥೆ ಅನಿಲ್ ಕುಂಬ್ಳೆ (Anil Kumble) ನೆನೆಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 'ಐಕಾನ್' ಆಟಗಾರರ ಪಟ್ಟಿಯಲ್ಲಿ ನನ್ನನ್ನು ಸೇರಿಸದಿದ್ದರೂ ವಿಜಯ್ ಮಲ್ಯ (Vijay Malya) ಅವರು ‘ನೀನು ಬೆಂಗಳೂರು ಹುಡುಗ’ ಎಂದು ಹೇಳಿದ್ದರು ಎಂಬ ವಿಚಾರವನ್ನು ಅನಿಲ್ ಕುಂಬ್ಳೆ ಬಹಿರಂಗಪಡಿಸಿದ್ದಾರೆ. ಹರಾಜಿನ ವೇಳೆ ಏನೆಲ್ಲಾ ಆಯಿತು ಎಂಬುದರ ಕುರಿತು ಮಾಜಿ ನಾಯಕ ಕುಂಬ್ಳೆ ವಿವರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಆಗಿನ ಮಾಲೀಕ ವಿಜಯ್ ಮಲ್ಯ ಅವರ ಸಮಯೋಚಿತ ಮಧ್ಯ ಪ್ರವೇಶದಿಂದ ಅವರು ಬೇರೆ ಯಾವುದೇ ಫ್ರಾಂಚೈಸಿಗೆ ಹೋಗಲಿಲ್ಲ’ ಎಂದು ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್​ ಬೌಲರ್​​ಗಳಲ್ಲಿ ಒಬ್ಬರಾದ ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ‘ಐಪಿಎಲ್ ಪ್ರಾರಂಭದ ವೇಳೆ ಬಹಳಷ್ಟು ಉನ್ನತ ಮಟ್ಟದ ಹೆಸರುಗಳಿದ್ದವು. ಆರ್‌ಸಿಬಿ ನನ್ನನ್ನು ಆಯ್ಕೆ ಮಾಡಿದ ವೇಳೆ ನಾನು ಐಕಾನ್ ಪಟ್ಟಿಯ ಭಾಗವಾಗಿರಲಿಲ್ಲ. ಕೆಲವು ಕಾರಣಗಳಿಂದ ನಾನು ಅದರ ಭಾಗವಾಗಿರಲಿಲ್ಲ’ ಎಂದು ಹೇಳಿದ್ದಾರೆ.

‘ನಿಮ್ಮನ್ನು ಐಕಾನ್ ಪಟ್ಟಿಯಲ್ಲಿ ಹೆಸರು ಕಡಿತಗೊಳಿಸಿದ್ದಕ್ಕೆ ಕ್ಷಮಿಸಿ. ನೀವು ಬೆಂಗಳೂರಿನಲ್ಲಿ ಅನಿಲ್ ಕುಂಬ್ಳೆ ವೃತ್ತವನ್ನು ಹೊಂದಿದ್ದೀರಿ’ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೋಸ್ಟ್ ಆಗಿ ಹೇಳಿದ್ದಾರೆ.

ಅವನು ನನ್ನ ಬೆಂಗಳೂರು ಹುಡುಗ ಎಂದಿದ್ದ ಮಲ್ಯ

‘ನಾನು ಭಾರತೀಯ ಟೆಸ್ಟ್ ತಂಡದ ನಾಯಕನಾಗಿದ್ದೆ. ನನ್ನ ಹೆಸರು ಹರಾಜಿನಲ್ಲಿತ್ತು. ಹರಾಜಿನಲ್ಲಿ ನನ್ನ ಹೆಸರು ಬಂದ ತಕ್ಷಣ ವಿಜಯ್ ಮಲ್ಯ ಎದ್ದು ನಿಂತು ಅವನು ನನ್ನ ಬೆಂಗಳೂರು ಹುಡುಗ, ಅವನನ್ನು ಯಾರೂ ಮುಟ್ಟುತ್ತಿಲ್ಲ. ಆ ಬಳಿಕ ನನ್ನನ್ನು ಮೂಲ ಬೆಲೆಗೆ ಖರೀದಿಸಲಾಯಿತು. ಇಂದು ನೀವು ನೋಡುವಂತೆ ಹರಾಜು ಡೈನಾಮಿಕ್ಸ್ ಇರಲಿಲ್ಲ’ ಎಂದು ಕುಂಬ್ಳೆ ತೀರ್ಮಾನಿಸಿದ್ದಾರೆ.

2009ರಲ್ಲಿ ಕೆವಿನ್ ಪೀಟರ್ಸನ್ ಇಂಗ್ಲೆಂಡ್ ತನ್ನ ರಾಷ್ಟ್ರೀಯ ಕರ್ತವ್ಯಕ್ಕೆ ತೆರಳಿದ ಸಂದರ್ಭದಲ್ಲಿ ಆರ್​ಸಿಬಿ ಫ್ರಾಂಚೈಸಿಯ ನಾಯಕತ್ವವನ್ನು ಹಸ್ತಾಂತರಿಸಿದ ಬಗ್ಗೆ ಮಾತನಾಡಿದ ಕುಂಬ್ಳೆ, ‘ಇದು ಮಲ್ಯ ಅವರು ತೆಗೆದುಕೊಂಡ ನಿರ್ಧಾರ. ಇದು ನನ್ನ (ಮಲ್ಯ) ನಿರ್ಧಾರ. ತಂಡದ ಮಾಲೀಕನಾಗಿ ನಾನು ನಿರ್ಧರಿಸುತ್ತೇನೆ. ಆದರೆ ಇದು ಕೊನೆಯ ಕ್ಷಣದ ನಿರ್ಧಾರವಲ್ಲ ಎಂದು ಮಲ್ಯ ಹೇಳಿದ್ದರು’ ಎಂದು ಕುಂಬ್ಳೆ ತಿಳಿಸಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈವರೆಗೂ ನಡೆದ 8 ಪಂದ್ಯಗಳಲ್ಲಿ ಒಂದೇ ಪಂದ್ಯ ಗೆದ್ದಿರುವ ಆರ್​​ಸಿಬಿ, ಏಳು ಪಂದ್ಯಗಳಲ್ಲಿ ಸೋಲನುಭವಿಸಿದೆ. ಅಲ್ಲದೆ, ಪ್ಲೇಆಫ್ ರೇಸ್​ನಿಂದಲೂ ಬಹುತೇಕ ಹೊರ ಬಿದ್ದಿದೆ. ಕೇವಲ 2 ಅಂಕ ಪಡೆದಿರುವ ಆರ್​ಸಿಬಿ, ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

IPL_Entry_Point