ಕನ್ನಡ ಸುದ್ದಿ  /  Entertainment  /  Oscar 2023: 2023: Do You Know The Interesting Aspects Of The Oscars?

2023ರ ಆಸ್ಕರ್‌ನ ಕುತೂಹಲಕಾರಿ ಅಂಶಗಳಿವು? ಆಸ್ಕರ್‌ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದೆಯೇ ಆರ್‌ಆರ್‌ಆರ್‌ ಜೋಡಿ?

ಹಲವು ದಾಖಲೆಗಳನ್ನು ಮುರಿಯುವ ಗೆಲುವುಗಳಿಂದ ಹಿಡಿದು ಅನಿರೀಕ್ಷಿತ ಪ್ರದರ್ಶನಗಳವರೆಗೆ 95ನೇ ಅಕಾಡೆಮಿ ಪ್ರಶಸ್ತಿ ಅವಿಸ್ಮರಣೀಯವಾಗಿ ಉಳಿಯಲಿದೆ. ಹಾಗಾದರೆ ಈ ಬಾರಿಯ ಆಸ್ಕರ್‌ ಷೋನಲ್ಲಿ ನೀವು ನೋಡಬಹುದಾದ 9 ಪ್ರಮುಖ ಅಂಶಗಳು ಇಲ್ಲಿವೆ.

ಆಸ್ಕರ್‌ 2023
ಆಸ್ಕರ್‌ 2023

ಅಕಾಡೆಮಿ ಪ್ರಶಸ್ತಿ ಎಂದರೆ ಕಾತರ, ಕುತೂಹಲ. ಆ ರಾತ್ರಿಯ ಪ್ರಶಸ್ತಿ ಪ್ರದಾನ ಕ್ಷಣಕ್ಕಾಗಿ ಬಹಳಷ್ಟು ಮಂದಿ ಬಹಳಷ್ಟು ದಿನಗಳಿಂದ ಕಾಯುತ್ತಿರುತ್ತಾರೆ, ಇದಕ್ಕೆ 2023ರ ಆಸ್ಕರ್‌ ಕೂಡ ಹೊರತಾಗಿಲ್ಲ. ದಾಖಲೆಗಳನ್ನು ಮುರಿಯುವ ಗೆಲುವುಗಳಿಂದ ಹಿಡಿದು ಅನಿರೀಕ್ಷಿತ ಪ್ರದರ್ಶನಗಳವರೆಗೆ 95ನೇ ಅಕಾಡೆಮಿ ಪ್ರಶಸ್ತಿ ಅವಿಸ್ಮರಣೀಯವಾಗಿ ಉಳಿಯಲಿದೆ. ಹಾಗಾದರೆ ಈ ಬಾರಿಯ ಆಸ್ಕರ್‌ ಷೋನಲ್ಲಿ ನೀವು ನೋಡಬಹುದಾದ 9 ಪ್ರಮುಖ ಅಂಶಗಳು ಇಲ್ಲಿವೆ.

ಮೈ ಇಯರ್‌ ಆಫ್‌ ಡಿಕ್ಸ್‌: ಆಸ್ಕರ್‌ಗೆ ನಾಮನಿರ್ದೇಶನಗೊಂಡ ʼಡಿಕ್ಸ್‌ʼ ಶೀರ್ಷಿಕೆ ಇರಿಸಿಕೊಂಡ ಮೊದಲ ಚಿತ್ರ

ಮೈ ಇಯರ್‌ ಆಫ್‌ ಡಿಕ್ಸ್‌ ಹೆಸರಿನ ಅನಿಮೇಷನ್‌ ಆಧರಿತ ಕಿರುಚಿತ್ರ ಈ ಬಾರಿಯ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಅಲ್ಲದೆ ಈ ಕಿರುಚಿತ್ರ ಸಾಕಷ್ಟು ಪ್ರಚಾರವನ್ನೂ ಪಡೆದಿದೆ. ಈ ಕಿರುಚಿತ್ರ ಪ್ರಶಸ್ತಿ ಗೆದ್ದರೆ ಡಿಕ್ಸ್‌ ಶೀರ್ಷಿಕೆ ಇರಿಸಿಕೊಂಡು ಪ್ರಶಸ್ತಿ ಪಡೆದ ಮೊದಲು ಚಿತ್ರ ಎನ್ನಿಸಿಕೊಳ್ಳುತ್ತದೆ.

ಏಂಜೆಲಾ ಬ್ಯಾಸೆಟ್‌; ಆಸ್ಕರ್‌ ಪಡೆಯುವ ಮೊದಲ ಮಾರ್ವೆಲ್‌ ನಟಿ

ʼಬ್ಲ್ಯಾಕ್‌ ಪಾಂಥರ್‌; ವಕಾಂಡಾ ಫಾರ್ ಎವರ್‌ʼ ಚಿತ್ರದ ನಟನೆಗಾಗಿ ಏಂಜೆಲಾ ಬ್ಯಾಸೆಟ್‌ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದಾರೆ. ಒಂದು ವೇಳೆ ಈ ಬಾರಿ ಆಸ್ಕರ್‌ನಲ್ಲಿ ಆಕೆ ಪ್ರಶಸ್ತಿಯನ್ನು ಗೆದ್ದುಕೊಂಡರೆ ಮಾರ್ವೆಲ್‌ ಚಿತ್ರಗಳ ವಿಭಾಗದಲ್ಲಿ ಆಸ್ಕರ್‌ ಮೊದಲ ನಟಿ ಆಗುತ್ತಾರೆ.

ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರಾ ಎನ್‌ಟಿಆರ್‌, ರಾಮ್‌ಚರಣ್‌?

ಆಸ್ಕರ್‌ಗೆ ನಾಮ ನಿರ್ದೇಶನಗೊಂಡ ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನ ʼಆರ್‌ಆರ್‌ಆರ್‌ʼ ಸಿನಿಮಾದ ʼನಾಟು ನಾಟುʼ ಹಾಡು ಈಗಾಗಲೇ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ಚರಣ್‌ ಈ ಹಾಡಿಗೆ ಮನಸೂರೆಗೊಳ್ಳುವ ಹಾಗೆ ಕುಣಿದಿದ್ದರು. ವದಂತಿಗಳ ಪ್ರಕಾರ ಈ ಜೋಡಿ ಈ ಹಾಡಿಗೆ ಆಸ್ಕರ್‌ ವೇದಿಕೆಯ ಮೇಲೆ ಲೈವ್‌ ಪ್ರದರ್ಶನ ನೀಡಲಿದೆಯಂತೆ. ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎನ್ನುವುದು ಮಾತ್ರ ಇನ್ನೂ ಖಚಿತವಾಗಿಲ್ಲ.

2023ರ ಆಸ್ಕರ್‌ನಲ್ಲಿ ಏಷ್ಯಾದ ಪ್ರಮುಖರು ಪ್ರಶಸ್ತಿ ಪಡೆಯಲಿದ್ದಾರಾ?

ʼಎವೆರಿಥಿಂಗ್‌ ಎವೆರಿವೇರ್‌ ಆಲ್‌ ಅಟ್‌ ಒನ್ಸ್‌ʼ ಚಿತ್ರದಲ್ಲಿನ ಪಾತ್ರಕ್ಕಾಗಿ ಮಿಚೆಲ್‌ ಯೋಹ್‌ ಅತ್ಯುತ್ತಮ ನಟಿ ವಿಭಾಗಕ್ಕೆ ನಾಮನಿರ್ದೇಶಗೊಂಡಿದ್ದಾರೆ. ಆ ಮೂಲಕ ನಟನೆಯಿಂದ ಗುರುತಿಸಿಕೊಂಡ ಏಷ್ಯಾದ ನಟಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಆಸ್ಕರ್‌ ವಿಜೇತರಾದರೆ ಪುನಃ ಇತಿಹಾಸವನ್ನು ಸೃಷ್ಟಿಸುತ್ತಾರೆ. ಆದರೆ ಇದರಿಂದ ಇವರು ಮಾತ್ರ ಇತಿಹಾಸ ಸೃಷ್ಟಿಸುವುದಲ್ಲ, ಈ ಚಿತ್ರದಲ್ಲಿ ಇವರೊಂದಿಗೆ ನಟಿಸಿದ ಕೆ ಹುಯ್‌ ಕ್ವಾನ್‌, ಸ್ಟೆಫನಿ ಹ್ಸು ಹಾಗೂ ಹಾಂಗ್‌ ಚೌ ಕೂಡ ಸಹ ನಾಮನಿರ್ದೇಶನಗೊಂಡಿದ್ದಾರೆ. ಇವೆಲ್ಲರೂ ಪ್ರಶಸ್ತಿ ಗೆದ್ದುಕೊಂಡರೆ ಮೊದಲ ಬಾರಿ ಏಷ್ಯಾದ ನಟರು ಒಟ್ಟಿಗೆ ಪ್ರಶಸ್ತಿ ವಿಜೇತರಾಗುವುದನ್ನು ಒಂದೇ ವೇದಿಕೆಯಲ್ಲಿ ಕಾಣಬಹುದಾಗಿದೆ.

ಅತ್ಯುತ್ತಮ ನಟಿ ಪ್ರಶಸ್ತಿ ಪ್ರದಾನ ಮಾಡುವವರು ಯಾರು?

ಸಂಪ್ರದಾಯದಂತೆ ಕಳೆದ ಬಾರಿ ಬೆಸ್ಟ್‌ ನಟ ಪ್ರಶಸ್ತಿ ಪಡೆದ ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಬೇಕಿತ್ತು. ಆದರೆ ಮುಂದಿನ ದಶಕದವರೆಗೆ ಅವರು ಯಾವುದೇ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆ ಕಾರಣಕ್ಕೆ ಈ ಬಾರಿ ಪ್ರಶಸ್ತಿಯನ್ನು ಯಾರು ನೀಡಬಹುದು ಎನ್ನುವ ಬಗ್ಗೆ ಕುತೂಹಲ ಮೂಡುತ್ತಿದೆ. ಹಿಂದಿನ ಅತ್ಯುತ್ತಮ ನಟಿ ವಿಜೇತರಾದ ಜೆಸ್ಸಿಕಾ ಚಸ್ಟೈನ್‌, ಹಾಲೆ ಬೆರ್ರಿ ಮತ್ತು ನಿಕೋಲ್‌ ಕಿಡ್‌ಮನ್‌ ಅವರ ತಂಡ ಇರಬಹುದೇ ಅಥವಾ ಎಲ್ಲೆನ್‌ ಬರ್‌ಸ್ಟಿನ್‌ ಅಥವಾ ಶೆರ್ಲಿ ಮ್ಯಾಕ್‌ಲೈನ್‌ನಂತಹ ಅತ್ಯುತ್ತಮ ನಟಿ ವಿಜೇತರಿಂದ ಈ ವರ್ಷ ಪ್ರಶಸ್ತಿ ಕೊಡಿಸಬಹುದೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮ್ಯಾಂಡಿ ವಾಕರ್‌: ವಿಶ್ವದ ಅತ್ಯುತ್ತಮ ಛಾಯಾಗ್ರಾಹಕಿ ಆಗಲಿದ್ದಾರಾ?

ಪ್ರತಿ ವರ್ಷ ಚಲನಚಿತ್ರ ಛಾಯಾಗ್ರಹಣ ವಿಭಾಗದಲ್ಲಿ ಪುರುಷರ ಉದ್ದದ ಪಟ್ಟಿಯೇ ಇರುತ್ತಿತ್ತು. ಆದರೆ ಈ ಬಾರಿ ಎಲ್ವಿಸ್‌ ಎಲ್ವಿಸ್‌ನ ಛಾಯಾಗ್ರಾಹಕಿ ಮ್ಯಾಂಡಿ ವಾಕರ್‌ ಸ್ಪರ್ಧೆಗೆ ನಾಮನಿರ್ದೇಶನಗೊಂಡಿದ್ದು, ಈ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ಮೂರನೇ ಛಾಯಾಗ್ರಾಹಕಿ ಎನ್ನಿಸಿಕೊಂಡಿದ್ದಾರೆ. ಆಸ್ಕರ್‌ ಪಂಡಿತರ ಪ್ರಕಾರ ಈಕೆ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಜಾನ್‌ ವಿಲಿಯಂ: ಮೊತ್ತೊಮ್ಮೆ ಆಸ್ಕರ್‌ ಪಡೆಯಲಿದ್ದಾರಾ ಲೀವಿಂಗ್‌ ಲೆಜೆಂಡ್‌?

53 ಬಾರಿ ನಾಮನಿರ್ದೇಶನಗೊಳ್ಳುವ ಮೂಲಕ ಜಾನ್‌ ವಿಲಿಯಮ್ಸ್‌ ಈಗಾಗಲೇ ಆಸ್ಕರ್‌ ಇತಿಹಾಸದಲ್ಲಿ ದಾಖಲೆಯ ಮಾಡಿದ್ದಾರೆ, ಅಲ್ಲದೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ಹೆಸರಿಗೆ ಮತ್ತೊಂದು ಪುರಸ್ಕಾರ ಸೇರುವ ಸಾಧ್ಯತೆ ಇದೆ. 91 ನೇ ವಯಸ್ಸಿನಲ್ಲಿ, ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವುದು ಜೀವಂತ ದಂತಕಥೆಗೆ ಸಲ್ಲುವ ಸೂಕ್ತ ಗೌರವವಾಗಿರಲಿದೆ.

ಡಯೇನ್‌ ವಾರೆನ್‌: 2023ರ ಆಸ್ಕರ್‌ ಅವರ ವೃತ್ತಿಜೀವನಕ್ಕೆ ಪ್ರಮುಖ ಮೈಲಗಲ್ಲಾಗಲಿದೆಯೇ?

ಡಯೇನ್‌ ವಾರೆನ್‌ ಸ್ಪರ್ಧಾತ್ಮಕ ಮೂಲಗೀತೆ ವಿಭಾಗದಲ್ಲಿ 14 ಬಾರಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಬಾರಿ ಅವರು ರಿಹಾನ್ನಾ, ಲೇಡಿ ಗಾಗಾ ಹಾಗೂ ನಾಟು ನಾಟು ಸಂಗೀತ ನಿರ್ದೇಶಕರೊಂದಿಗೆ ಸ್ಪರ್ಧಿಸುತ್ತಿದ್ದಾರೆ.

ಹಾಲಿವುಡ್‌ ರಾಯಲ್ಟಿ ವಿಭಾಗದಲ್ಲಿ ಜೇಮಿ ಲೀ ಕರ್ಟಿಸ್‌ ಗೆಲ್ಲಲಿದ್ದಾರಾ?

ಜೇಮೀ ಲೀ ಕರ್ಟಿಸ್‌ ಹಾಲಿವುಡ್‌ ರಾಯಲ್ಟಿ ವಿಭಾಗದಿಂದ ನಾಮನಿರ್ದೇಶನಗೊಂಡಿದ್ದಾರೆ. ಅವರ ಪೋಷಕರಾದ ಜಾನೆಟ್‌ ಲೀ ಹಾಗೂ ಟೋನಿ ಕರ್ಟಿಸ್‌ ಕೂಡ ಆಸ್ಕರ್‌ಗೆ ನಾಮನಿರ್ದೇಶಿತರಾಗಿದ್ದವರು.

IPL_Entry_Point

ವಿಭಾಗ