ಬೌಲಿಂಗ್ vs ಬ್ಯಾಟಿಂಗ್ ತಂಡಗಳ ಸೆಣಸಾಟ; ಐಪಿಎಲ್‌ನ 50ನೇ ಪಂದ್ಯದಲ್ಲಿ ಎಸ್ಆರ್ಹೆಚ್ vs ಆರ್ಆರ್ ಸಂಭಾವ್ಯ ಪ್ಲೇಯಿಂಗ್ XI
SRH vs RR Playing 11 : 2024ರ ಐಪಿಎಲ್‌ನ 50ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ಪ್ಲೇಯಿಂಗ್ XI ಇಲ್ಲಿದೆ ನೋಡಿ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 50ನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು (Sunrisers Hyderabad vs Rajasthan Royals) ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಜಿದ್ದಾಜಿದ್ದಿನ ಕದನಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವು ವೇದಿಕೆ ವಹಿಸಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ತಂಡವು ಈ ಪಂದ್ಯದಲ್ಲಿ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ.
ನೀರು ಕುಡಿದಂತೆ 200 ಪ್ಲಸ್ ರನ್ ಹೊಡೆಯುತ್ತಿರುವ ಸನ್(ರನ್)ರೈಸರ್ಸ್ ತಂಡವು, ಮತ್ತೊಂದು ಬೃಹತ್ ಮೊತ್ತವನ್ನು ಗಳಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಅದರಲ್ಲೂ ಕಳೆದ 2 ಪಂದ್ಯಗಳಲ್ಲಿ ಸೋತಿದ್ದು, ತವರಿನಲ್ಲಿ ಗೆಲುವಿನ ಲಯಕ್ಕೆ ಮರಳಲು ತಂತ್ರ ರೂಪಿಸುತ್ತಿದೆ. ಇನ್ನು ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ರಾಜಸ್ಥಾನ್ 9ನೇ ಜಯದ ಕನಸಿನಲ್ಲಿದ್ದು, ಈ ಪಂದ್ಯೆ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಲಿದೆ.
ಪ್ರಸಕ್ತ ಐಪಿಎಲ್ನಲ್ಲಿ ಕೇವಲ 1 ಬಾರಿ 200+ ರನ್ ಬಿಟ್ಟುಕೊಟ್ಟಿರುವ ರಾಜಸ್ಥಾನ್, ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಹೇಗೆ ಕಟ್ಟಿ ಹಾಕಲಿದೆ ಎಂಬುದು ಕುತೂಹಲ ಮೂಡಿಸಿದೆ. ಐಪಿಎಲ್‌ನ ಅತ್ಯುತ್ತಮ ಬೌಲಿಂಗ್ ತಂಡ ಮತ್ತು ಅತ್ಯುತ್ತಮ ಬ್ಯಾಟಿಂಗ್ ತಂಡಗಳ ನಡುವಿನ ಈ ಸ್ಪರ್ಧೆಯು ಬಹಳ ಕೌತುಕತೆಯನ್ನು ಹೆಚ್ಚಿಸಿದೆ. ಈ ಪಂದ್ಯದಲ್ಲಿ ಗೆದ್ದು ಎಸ್ಆರ್ಹೆಚ್ ಹ್ಯಾಟ್ರಿಕ್ ಸೋಲಿನಿಂದ ಪಾರಾಗಲು ರಣತಂತ್ರ ರೂಪಿಸುತ್ತಿದೆ.
ಮಯಾಂಕ್ ಮಾರ್ಕಂಡೆಗೆ ಅವಕಾಶ
ಫಿಂಗರ್‌ಸ್ಪಿನ್ನರ್ ಶಹಬಾಜ್ ಅಹ್ಮದ್ ಬದಲಿಗೆ ಸನ್‌ರೈಸರ್ಸ್ ತಮ್ಮ ಲೆಗ್‌ಸ್ಪಿನ್ನರ್ ಮಯಾಂಕ್ ಮಾರ್ಕಾಂಡೆ ಅವರನ್ನು ಮರಳಿ ಕರೆತರಲು ಚಿಂತನೆ ನಡೆಸಿದೆ. ಆದರೆ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಸ್ಪಿನ್ನರ್ಗಳ ವಿರುದ್ಧ ಅಬ್ಬರಿಸಿದ್ದು, ಎಸ್ಆರ್ಹೆಚ್ ಸ್ಪಿನ್ ಬೌಲಿಂಗ್ ವಿಭಾಗಕ್ಕೆ ಭಯ ಹುಟ್ಟಿದ್ದಾರೆ. ಅನ್ಮೋಲ್ಪ್ರೀತ್ ಸಿಂಗ್ ಮತ್ತು ನಟರಾಜನ್ ಇಂಪ್ಯಾಕ್ಟ್ ಪ್ಲೇಯರ್ ಆಗಬಹುದು. ಉಳಿದಂತೆ ಅದೇ ತಂಡವನ್ನು ಕಣಕ್ಕಿಳಿಸಲಿದೆ. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎಂದು ತಿಳಿದು ಬಂದಿದೆ.
ಸನ್‌ರೈಸರ್ಸ್ ಹೈದರಾಬಾದ್ ಸಂಭಾವ್ಯ XI : ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಮಯಾಂಕ್ ಮಾರ್ಕಾಂಡೆ, 10 ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕತ್, ಟಿ ನಟರಾಜನ್.
ರಾಜಸ್ಥಾನ್ ರಾಯಲ್ಸ್ ಸಂಭಾವ್ಯ XI : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಆರ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಆವೇಶ್ ಖಾನ್, ಯುಜ್ವೇಂದ್ರ ಚಹಾಲ್ - ಧ್ರುವ್ ಜುರೆಲ್ (ಇಂಪ್ಯಾಕ್ಟ್ ಪ್ಲೇಯರ್)
ಅಂಕಿ-ಅಂಶಗಳು
ಐಪಿಎಲ್ 2022ರಲ್ಲಿ 7 ರಿಂದ 10 ಓವರ್‌ಗಳ ನಡುವೆ ಸಂಜು 9 ಬಾರಿ ಔಟಾಗಿದ್ದಾರೆ. ಆದರೆ ಐಪಿಎಲ್-2024ರಲ್ಲಿ ಅದೇ ಓವರ್‌ಗಳ ನಡುವೆ ಅವರು 139ರ ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡುತ್ತಿದ್ದು, ವಿಕೆಟ್ ಒಪ್ಪಿಸಿಲ್ಲ
ಚಹಲ್ ಎಸ್ಆರ್ಹೆಚ್ ವಿರುದ್ಧ 19 ಇನ್ನಿಂಗ್ಸ್‌ಗಳಲ್ಲಿ 28 ವಿಕೆಟ್ ಪಡೆದಿದ್ದಾರೆ. 18.9 ಸರಾಸರಿಯೊಂದಿಗೆ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಹೆನ್ರಿಚ್ ಕ್ಲಾಸೆನ್ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಚಹಲ್, 41 ಎಸೆತಗಳಲ್ಲಿ 93 ರನ್ ನೀಡಿ 3 ವಿಕೆಟ್ ಉರುಳಿಸಿದ್ದಾರೆ.
ಸನ್‌ರೈಸರ್ಸ್‌ಗೆ ಹೆಡ್ ಮತ್ತು ಅಭಿಷೇಕ್ ಅತ್ಯುತ್ತಮ ಜೋಡಿಯಾಗಿದ್ದಾರೆ, ಒಬ್ಬರು ಪೇಸ್-ಹಿಟ್ಟರ್, ಇನ್ನೊಬ್ಬರು ಸ್ಪಿನ್-ಹಿಟ್ಟರ್.
ಪಿಚ್ ವರದಿ
ಐಪಿಎಲ್-2024ರಲ್ಲಿ ಹೈದರಾಬಾದ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ 216. ಬ್ಯಾಟಿಂಗ್ ಪಿಚ್ ಆಗಿರುವ ಕಾರಣ ಇಂದು (ಮೇ 2) ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.
ಮುಖಾಮುಖಿ ದಾಖಲೆ
ಒಟ್ಟು ಪಂದ್ಯಗಳು - 18
ಎಸ್ಆರ್ಹೆಚ್ ಗೆಲುವು - 09
ರಾಜಸ್ಥಾನ್ ಗೆಲುವು - 09