Gold Rate Today: ಚಿನ್ನದ ಬೆಲೆ ಏರಿಕೆಗಿಲ್ಲ ಬ್ರೇಕ್‌, ಮಂಗಳವಾರವೂ ಭಾರಿ ಹೆಚ್ಚಳ ಕಂಡ ಹಳದಿ ಲೋಹದ ಬೆಲೆ; ಬೆಳ್ಳಿ ತುಸು ಇಳಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಚಿನ್ನದ ಬೆಲೆ ಏರಿಕೆಗಿಲ್ಲ ಬ್ರೇಕ್‌, ಮಂಗಳವಾರವೂ ಭಾರಿ ಹೆಚ್ಚಳ ಕಂಡ ಹಳದಿ ಲೋಹದ ಬೆಲೆ; ಬೆಳ್ಳಿ ತುಸು ಇಳಿಕೆ

Gold Rate Today: ಚಿನ್ನದ ಬೆಲೆ ಏರಿಕೆಗಿಲ್ಲ ಬ್ರೇಕ್‌, ಮಂಗಳವಾರವೂ ಭಾರಿ ಹೆಚ್ಚಳ ಕಂಡ ಹಳದಿ ಲೋಹದ ಬೆಲೆ; ಬೆಳ್ಳಿ ತುಸು ಇಳಿಕೆ

ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆ ಇರಿಸಿಕೊಂಡಿದ್ದರೆ ನೀವು ಆ ಆಸೆಯನ್ನು ಬದಿಗೊತ್ತಿ ಸುಮ್ಮನಿರುವುದು ಉತ್ತಮ. ಯಾಕೆಂದರೆ ಚಿನ್ನದ ದರ ಏರಿಕೆಗೆ ಬ್ರೇಕ್‌ ಹಾಕಲು ಸಾಧ್ಯವಾಗುತ್ತಿಲ್ಲ. ದಿನೇ ದಿನೇ ಏರುತ್ತಿರುವ ಚಿನ್ನದ ಬೆಲೆ ಮಂಗಳವಾರವೂ (ಏಪ್ರಿಲ್‌ 16) ಭಾರಿ ಹೆಚ್ಚಳ ಕಂಡಿದೆ.

ಏಪ್ರಿಲ್‌ 16ರ ಬೆಳ್ಳಿ, ಚಿನ್ನ ದರ
ಏಪ್ರಿಲ್‌ 16ರ ಬೆಳ್ಳಿ, ಚಿನ್ನ ದರ

ಬೆಂಗಳೂರು: ಏಪ್ರಿಲ್‌ ತಿಂಗಳು ಎಂದರೆ ಮದುವೆ ಕಾರ್ಯಕ್ರಮಗಳು ನಡೆಯುವ ಸಮಯ. ಈ ಸಮಯದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಹೆಚ್ಚುವುದು ಸಹಜ. ಆದರೆ ಈ ವರ್ಷ ಬಿಸಿಲಿನ ತಾಪ ದಿನೇ ದಿನೇ ಹೆಚ್ಚುತ್ತಿರುವಂತೆ ಚಿನ್ನದ ದರವೂ ಏರಿಕೆಯಾಗುತ್ತಿದೆ. ಕಳೆದ 15 ದಿನಗಳಲ್ಲಿ ಎರಡರಿಂದ ಮೂರು ಬಾರಿ ಕೊಂಚ ದರ ಇಳಿಕೆಯಾಗಿದ್ದರೆ ಬಹುತೇಕ ದಿನ ಏರಿಕೆಯಾಗಿದೆ. ಈಗಾಗಲೇ 70000 ಗಡಿ ದಾಟಿರುವ ಚಿನ್ನ ಎಷ್ಟಕ್ಕೆ ಹೋಗಿ ಮುಟ್ಟಬಹುದೋ ಎಂಬ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಏರಿಕೆಯಾದ ನಂತರ ಇಂದಿನ ಚಿನ್ನದ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,705 ರೂ. ಇದೆ. ನಿನ್ನೆ 6,650 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 55 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,640 ರೂ. ನೀಡಬೇಕು. ನಿನ್ನೆ 53,200 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 440 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 67,050 ರೂ ಇದೆ. ನಿನ್ನೆ 66,500 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 550 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,70,500 ರೂ. ನೀಡಬೇಕು. ನಿನ್ನೆ 6,65,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 5,500 ರೂ. ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,315 ರೂ. ಇದೆ. ನಿನ್ನೆ 7,255 ರೂ. ಇದು ಈ ದರಕ್ಕೆ ಹೋಲಿಸಿದರೆ 60 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,520 ರೂ. ನೀಡಬೇಕು. ನಿನ್ನೆ 58,040 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 480 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,150 ನೀಡಬೇಕು. ನಿನ್ನೆ 72,550 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 600 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,31,500 ರೂ. ಇದೆ. ನಿನ್ನೆ 7,25,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 6,000 ರೂ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 67,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 73,150 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,900 ರೂ. 24 ಕ್ಯಾರೆಟ್‌ಗೆ 74,070 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,050 ರೂ. 24 ಕ್ಯಾರೆಟ್‌ಗೆ 73,150 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,200 ರೂ. 24 ಕ್ಯಾರೆಟ್‌ಗೆ 73,300 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,050 ರೂ. 24 ಕ್ಯಾರೆಟ್‌ಗೆ 73,150 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,050 ರೂ. ಇದ್ದರೆ, 24 ಕ್ಯಾರೆಟ್‌ಗೆ 73,150 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,050 ರೂ. 24 ಕ್ಯಾರೆಟ್‌ಗೆ 73,150 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 84.65 ರೂ. ಇದೆ. 8 ಗ್ರಾಂಗೆ 677.20 ರೂ ಇದ್ದರೆ, 10 ಗ್ರಾಂಗೆ 846.50 ರೂ. ಇದೆ. 100 ಗ್ರಾಂಗೆ 8,465 ರೂ. ಹಾಗೂ 1 ಕಿಲೋಗೆ 84,650 ರೂ. ಬೆಲೆ ನಿಗದಿ ಆಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.