ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಬಹುದಿನಗಳ ಬಳಿಕ ಸ್ಥಿರವಾದ ಚಿನ್ನದ ಬೆಲೆ, ಆಭರಣ ಪ್ರಿಯರು ಕೊಂಚ ನಿರಾಳ; ಬೆಳ್ಳಿ ತುಸು ಏರಿಕೆ

Gold Rate Today: ಬಹುದಿನಗಳ ಬಳಿಕ ಸ್ಥಿರವಾದ ಚಿನ್ನದ ಬೆಲೆ, ಆಭರಣ ಪ್ರಿಯರು ಕೊಂಚ ನಿರಾಳ; ಬೆಳ್ಳಿ ತುಸು ಏರಿಕೆ

ಕಳೆದ ಒಂದಿಷ್ಟು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರ ಇಂದು (ಏಪ್ರಿಲ್‌ 18) ಸ್ಥಿರವಾಗುವ ಮೂಲಕ ಆಭರಣ ಪ್ರಿಯರಲ್ಲಿ ಹರ್ಷ ಮೂಡುವಂತೆ ಮಾಡಿದೆ. ಬೆಳ್ಳಿ ದರ ಎಂದಿನಿಂತೆ ಇಂದು ಕೂಡು ತುಸು ಏರಿಕೆ ಕಂಡಿದೆ. ಆಭರಣ ಖರೀದಿ ಪ್ಲಾನ್‌ ಇದ್ದರೆ ದರ ಗಮನಿಸಿ.

ಏಪ್ರಿಲ್‌ 18ರ ಚಿನ್ನ, ಬೆಳ್ಳಿ ದರ
ಏಪ್ರಿಲ್‌ 18ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ಗಗನಕ್ಕೇರುತ್ತಿರುವ ಚಿನ್ನದ ದರ ಆಭರಣ ಪ್ರಿಯರಿಗೆ ದಿಗಿಲು ಮೂಡಿಸಿದ್ದು ಸುಳ್ಳಲ್ಲ. ಮದುವೆಯಂತಹ ಕಾರ್ಯಕ್ರಮಗಳಲ್ಲಿ ಅಗತ್ಯ ಚಿನ್ನ ಖರೀದಿಗೂ ಹಿಂದು ಮುಂದು ನೋಡುವ ಪರಿಸ್ಥಿತಿ ಎಂದು ಎದುರಾಗಿದೆ. ಚಿನ್ನದ ದರ ಹೀಗೆ ಏರಿಕೆಯಾಗುತ್ತಿದ್ದರೆ ಮುಂದೇನು ಗತಿ ಎಂದು ಯೋಚಿಸುವ ಹೊತ್ತಿನಲ್ಲಿ ಇಂದು ಚಿನ್ನದ ದರ ಸ್ಥಿರವಾಗಿದೆ. ನಿನ್ನೆಯ ದರವೇ ಇಂದು ಕೂಡ ಮುಂದುವರಿದಿದೆ. ಬೆಳ್ಳಿ ದರ ಏರಿಕೆ ಸಾಗುತ್ತಿದೆ. ಆದರೆ ತುಸುವೇ ಏರಿಕೆಯಾಗುವ ಕಾರಣ ಕೊಂಚ ನೆಮ್ಮದಿ ಎನ್ನಿಸುತ್ತದೆ. ದೇಶದ ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,795 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,360 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 67,950 ರೂ ಇದೆ. ನಿನ್ನೆ 67,050 ರೂ. ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,79,500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,413 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,304 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 74,130 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 7,41,300 ರೂ. ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 67,950 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,130 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,700 ರೂ. 24 ಕ್ಯಾರೆಟ್‌ಗೆ 74,950 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,950 ರೂ. 24 ಕ್ಯಾರೆಟ್‌ಗೆ 74,130 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,100 ರೂ. 24 ಕ್ಯಾರೆಟ್‌ಗೆ 74,280 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,950 ರೂ. 24 ಕ್ಯಾರೆಟ್‌ಗೆ 74,130 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,950 ರೂ. ಇದ್ದರೆ, 24 ಕ್ಯಾರೆಟ್‌ಗೆ 74,130 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,950 ರೂ. 24 ಕ್ಯಾರೆಟ್‌ಗೆ 74,130 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 85.50 ರೂ. ಇದೆ. 8 ಗ್ರಾಂಗೆ 684 ರೂ ಇದ್ದರೆ, 10 ಗ್ರಾಂಗೆ 855 ರೂ. ಇದೆ. 100 ಗ್ರಾಂಗೆ 8,550 ರೂ. ಹಾಗೂ 1 ಕಿಲೋಗೆ 85,500 ರೂ. ಬೆಲೆ ನಿಗದಿ ಆಗಿದೆ.

IPL_Entry_Point