Gold Rate Today: ಆಭರಣ ಪ್ರಿಯರಿಗೆ ಶುಭ ಶುಕ್ರವಾರ, ಕಡಿಮೆಯಾಯ್ತು ಚಿನ್ನದ ಬೆಲೆ; ಏರಿಕೆಯಾಗುತ್ತಲೇ ಇದೆ ಬೆಳ್ಳಿ
ಚಿನ್ನದ ಬೆಲೆ ಏರಿಕೆ ಭಯದಲ್ಲಿರುವ ಆಭರಣ ಪ್ರಿಯರಿಗೆ ಶುಕ್ರವಾರ (ಏಪ್ರಿಲ್ 19) ಶುಭಸುದ್ದಿ ಸಿಕ್ಕಿದೆ. ಹಲವು ದಿನಗಳ ಬಳಿಕೆ ಇಂದು ಚಿನ್ನದ ದರ ತುಸು ಇಳಿಕೆಯಾಗಿದೆ. ಹಾಗಂತ ಭಾರಿ ಇಳಿಕೆ ಏನೆಲ್ಲಾ ಬಿಡಿ. ಆದರೆ ಬೆಳ್ಳಿ ದರ ದಿನೇ ದಿನೇ ಹೆಚ್ಚುತ್ತಿದೆ. ಇಂದು ಕರ್ನಾಟಕದಲ್ಲಿನ ಚಿನ್ನ, ಬೆಳ್ಳಿ ದರ ಗಮನಿಸಿ.
ಬೆಂಗಳೂರು: ʼಚಿನ್ನದ ಬೆಲೆ ಏರುತ್ತಿರುವುದು ನೋಡಿದ್ರೆ ಗಾಬರಿಯಾಗುತ್ತದೆ. ಹಿಂದೆಲ್ಲಾ ಗ್ರಾಂಗೆ 4,5 ಸಾವಿರ ಇದಿದ್ದು ಈಗ 50,000 ದಾಟಿದೆ. ಆದರೂ ಬೆಲೆ ಏರಿಕೆ ನಿಲ್ಲುತ್ತಿಲ್ಲ. ಹೀಗೆ ಆದ್ರೆ ಮದುವೆಯಂತಹ ಕಾರ್ಯಕ್ರಮಗಳ ಕಥೆ ಏನು?ʼ ಎಂದು ಭಾರತೀಯ ನಾರಿಮಣಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಗಗನಕ್ಕೇರುತ್ತಿರುವ ಚಿನ್ನದ ದರ. ಚಿನ್ನದ ದರ ಏರಿಕೆ ಎಗ್ಗಿಲ್ಲದೇ ಮುಂದುವರಿಯುತ್ತಿರುವ ಈ ಹೊತ್ತಿನಲ್ಲಿ ಒಂದು ಗುಡ್‌ನ್ಯೂಸ್ ಇದೆ. ಅದೇನೆಂದರೆ ಇಂದು (ಏಪ್ರಿಲ್ 19) ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಬಹುದಿನಗಳ ಬಳಿಕ ಚಿನ್ನದ ದರ ಕಡಿಮೆಯಾಗಿದ್ದು, ಆಭರಣ ಪ್ರಿಯರಲ್ಲಿ ಸಂತಸ, ಭರವಸೆ ಮೂಡಿಸಿದೆ. ಆದರೆ ಈಗ ಚಿನ್ನದಂತೆ ಬೆಳ್ಳಿ ದರ ದಿನೇ ದಿನೇ ಹೆಚ್ಚಳವಾಗುತ್ತಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,765 ರೂ. ಇದೆ. ನಿನ್ನೆ 6,795 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 30 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,120 ರೂ. ನೀಡಬೇಕು. ನಿನ್ನೆ 54,360 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 240 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 67,650 ರೂ ಇದೆ. ನಿನ್ನೆ 67,950 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,76,500 ರೂ. ನೀಡಬೇಕು. ನಿನ್ನೆ 6,79,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 3,000 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,380 ರೂ. ಇದೆ. ನಿನ್ನೆ 7,413 ರೂ. ಇದು ಈ ದರಕ್ಕೆ ಹೋಲಿಸಿದರೆ 33 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,040 ರೂ. ನೀಡಬೇಕು. ನಿನ್ನೆ 59,304 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 264 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,800 ನೀಡಬೇಕು. ನಿನ್ನೆ 74,130 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 330 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,38,000 ರೂ. ಇದೆ. ನಿನ್ನೆ 7,41,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 3,300 ರೂ ಇಳಿಕೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 67,650 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 73,800 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 68,350 ರೂ. 24 ಕ್ಯಾರೆಟ್‌ಗೆ 74,560 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,650 ರೂ. 24 ಕ್ಯಾರೆಟ್‌ಗೆ 73,800 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,800 ರೂ. 24 ಕ್ಯಾರೆಟ್‌ಗೆ 73,950 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,650 ರೂ. 24 ಕ್ಯಾರೆಟ್‌ಗೆ 73,800 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,650 ರೂ. ಇದ್ದರೆ, 24 ಕ್ಯಾರೆಟ್‌ಗೆ 73,800 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,650 ರೂ. 24 ಕ್ಯಾರೆಟ್‌ಗೆ 73,800 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 86 ರೂ. ಇದೆ. 8 ಗ್ರಾಂಗೆ 688 ರೂ ಇದ್ದರೆ, 10 ಗ್ರಾಂಗೆ 860 ರೂ. ಇದೆ. 100 ಗ್ರಾಂಗೆ 8,600 ರೂ. ಹಾಗೂ 1 ಕಿಲೋಗೆ 86,000 ರೂ. ಬೆಲೆ ನಿಗದಿ ಆಗಿದೆ.