Chhattisgarh Encounter: ಛತ್ತೀಸಗಢದಲ್ಲಿ ಎನ್‌‌ ಕೌಂಟರ್‌, ಪ್ರಮುಖ ಮಾವೋವಾದಿ ನಾಯಕ ಶಂಕರ್‌ ರಾವ್ ಸೇರಿ 18 ಮಂದಿ ಹತ್ಯೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Chhattisgarh Encounter: ಛತ್ತೀಸಗಢದಲ್ಲಿ ಎನ್‌‌ ಕೌಂಟರ್‌, ಪ್ರಮುಖ ಮಾವೋವಾದಿ ನಾಯಕ ಶಂಕರ್‌ ರಾವ್ ಸೇರಿ 18 ಮಂದಿ ಹತ್ಯೆ

Chhattisgarh Encounter: ಛತ್ತೀಸಗಢದಲ್ಲಿ ಎನ್‌‌ ಕೌಂಟರ್‌, ಪ್ರಮುಖ ಮಾವೋವಾದಿ ನಾಯಕ ಶಂಕರ್‌ ರಾವ್ ಸೇರಿ 18 ಮಂದಿ ಹತ್ಯೆ

ಲೋಕಸಭೆ ಚುನಾವಣೆಗೆ ಮುನ್ನ ಛತ್ತೀಸಗಢದಲ್ಲಿ ದಾಳಿಗೆ ಮುಂದಾದ ಮಾವೋವಾದಿಗಳ ಮೇಲೆ ಪೊಲೀಸರು ಹಾಗೂ ಗಡಿ ಭದ್ರತಾ ಪಡೆ ದಾಳಿ ನಡೆಸಿ ಮಾವೋವಾದಿ ನಾಯಕ ಸೇರಿ 18 ಮಂದಿಯನ್ನು ಕೊಂದು ಹಾಕಿವೆ.

ಛತ್ತೀಸಗಢದಲ್ಲಿ ಗಡಿ ಭದ್ರತಾ ಪಡೆ ದಾಳಿ.
ಛತ್ತೀಸಗಢದಲ್ಲಿ ಗಡಿ ಭದ್ರತಾ ಪಡೆ ದಾಳಿ.

ರಾಯಪುರ: ಮೊದಲ ಹಂತದ ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿರುವಾಗಲೇ ಛತ್ತೀಸಗಢದಲ್ಲಿ ದಾಳಿ ಮಾಡಲು ಮುಂದಾದ ಮಾವೋವಾದಿ ಗುಂಪಿನ ಮೇಲೆ ರಕ್ಷಣಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿವೆ. ಎನ್‌ಕೌಂಟರ್‌ನಲ್ಲಿ ಛತ್ತೀಸಗಢದ ಪ್ರಮುಖ ಮಾವೋವಾದಿ ನಾಯಕ ಸೇರಿ 18 ಮಂದಿಯನ್ನು ಹತ್ಯೆ ಮಾಡಲಾಗಿದೆ. ದಾಳಿ ವೇಳೆ ಇಬ್ಬರು ರಕ್ಷಣಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಛತ್ತೀಸಗಢದ ಕಂಕೇರ್‌ ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಗುಂಡಿನ ಚಕಮಕಿ ನಡೆದಿದೆ.

ಮಂಗಳವಾರ ಮಾವೋವಾದಿ ತಂಡ ಸಕ್ರಿಯವಾಗಿ ದಾಳಿ ಮಾಡಲು ಮುಂದಾಗಿತ್ತು. ಈಗಾಗಲೇ ಕಂಕೇರ್‌ ಜಿಲ್ಲೆಯ ಚೋಟೆ ಬೆತಿಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಮೀಸಲು ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಗಡಿ ಭದ್ರತಾ ಪಡೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆಗೆ ಮುಂದಾದರು. ಈ ವೇಳೆ ಗುಂಡಿನ ಚಕಮಕಿ ನಡೆಯಿತು. ಮೀಸಲು ಪಡೆ ಪೊಲೀಸರು ಹಾಗೂ ಗಡಿ ಭದ್ರತಾ ಪಡೆಯ ದಾಳಿಗೆ ಮಾವೋವಾದಿ ನಾಯಕ ಶಂಕರರಾವ್‌ ಸೇರಿದಂತೆ 18 ಮಂದಿ ಹತ್ಯೆಯಾಗಿದ್ದಾರೆ. ಈ ವೇಳೆ ಮಾವೋವಾದಿಗಳು ಇದ್ದ ಪ್ರದೇಶವನ್ನು ಸುತ್ತುವರೆದ ಪೊಲೀಸರು 4 ಏಕೆ 47 ಸಹಿತ ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಹತರಾದ ಮಾವೋವಾದಿಗಳ ಶವಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಛತ್ತೀಸಗಢ ಮಾವೋವಾದಿ ನಾಯಕ ಶಂಕರರಾವ್‌ ಅವರ ಬಗ್ಗೆ ಮಾಹಿತಿ ನೀಡಿದರೆ 25 ಲಕ್ಷ ರೂ. ಬಹುಮಾನ ನೀಡುವುದಾಗಿ ಛತ್ತೀಸಗಢ ಪೊಲೀಸ್‌ ಇಲಾಖೆ ಘೋಷಣೆ ಮಾಡಿತ್ತು. ಈ ಭಾಗದಲ್ಲಿ ಪೊಲೀಸ್‌ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚುನಾವಣೆಯೂ ಇರುವುದರಿಂದ ಮಾವೋವಾದಿಗಳ ದಾಳಿ ಆಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಇದೇ ಜಿಲ್ಲೆಯಲ್ಲಿ ಎನ್‌ಕೌಂಟರ್‌ ನಡೆದಿತ್ತು. ಇದರಲ್ಲಿ ಇಬ್ಬರು ಸಾರ್ವಜನಿಕರು, ಒಬ್ಬ ಮಾವೋವಾದಿ ಹಾಗೂ ಪೊಲೀಸ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದರು. ಕಳೆದ ನವೆಂಬರ್‌ನಲ್ಲೂ ವಿಧಾನಸಭೆ ಚುನಾವಣೆ ವೇಳೆ ಛತ್ತೀಸಗಢದಲ್ಲಿ ಇದೇ ರೀತಿ ದಾಳಿಗಳನ್ನು ನಡೆಸಲಾಗಿತ್ತು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.