ಕನ್ನಡ ಸುದ್ದಿ  /  Nation And-world  /  Lok Sabha Election 2024 Violence Threats To Voters Damaged Evms In Strife Torn Manipur Rmy

Lok Sabha Election 2024: ಮಣಿಪುರದಲ್ಲಿ ಮತಗಟ್ಟೆ ಬಳಿ ಬೆದರಿಕೆ, ಶಸ್ತ್ರಸಜ್ಜಿತರಿಂದ ಗಾಳಿಯಲ್ಲಿ ಗುಂಡು; ಎಲ್ಲೆಲ್ಲಿ ಏನಾಯ್ತು

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ವೇಳೆಯೂ ಕೆಲವರು ಪುಂಡಾಟ ಮರೆದಿದ್ದಾರೆ. ಶಸ್ತ್ರಸಜ್ಜಿತರು ಮತಗಟ್ಟೆಗಳ ಬಳಿ ಗಾಳಿಯಲ್ಲಿ ಗುಂಡು ಹಾರಿಸಿ ಮತದಾರರನ್ನು ಬೆದರಿಸಿದ್ದಾರೆ.

ಮಣಿಪುರದಲ್ಲಿ ಮತಗಟ್ಟೆ ಬಳಿ ಗನ್ ಹಿಡಿದು ಬಂದು ಆತಂಕ ಸೃಷ್ಟಿಸಿದ ಯುವಕರು. ಪೊಲೀಸರು ಹಾಗೂ ಸ್ಥಳೀಯರು ವೀಕ್ಷಿಸುತ್ತಿರುವುದು. ಲೋಕಸಭೆ ಚುನಾವಣೆ ವೇಳೆ ಮಣಿಪುರದ ರಾಜಧಾನಿ ಇಂಪಾಲ ಸೇರಿ ಅಲ್ಲಲ್ಲಿ ಗೊಂದಲಗಳು ಏರ್ಪಟ್ಟಿದ್ದವು.
ಮಣಿಪುರದಲ್ಲಿ ಮತಗಟ್ಟೆ ಬಳಿ ಗನ್ ಹಿಡಿದು ಬಂದು ಆತಂಕ ಸೃಷ್ಟಿಸಿದ ಯುವಕರು. ಪೊಲೀಸರು ಹಾಗೂ ಸ್ಥಳೀಯರು ವೀಕ್ಷಿಸುತ್ತಿರುವುದು. ಲೋಕಸಭೆ ಚುನಾವಣೆ ವೇಳೆ ಮಣಿಪುರದ ರಾಜಧಾನಿ ಇಂಪಾಲ ಸೇರಿ ಅಲ್ಲಲ್ಲಿ ಗೊಂದಲಗಳು ಏರ್ಪಟ್ಟಿದ್ದವು.

ಇಂಪಾಲ (ಮಣಿಪುರ): ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಮತದಾನದ (Manipal Election 2024) ವೇಳೆಯೇ ಗುಂಡಿನ ದಾಳಿ ನಡೆದಿರುವುದಾಗಿದಿ ವರದಿಯಾಗಿದೆ. ಅಷ್ಟೇ ಅಲ್ಲ, ವಿದ್ಯುನ್ಮಾನ ಮತಯಂತ್ರಗಳಿಗೆ (ಇವಿಎಂ) ಹಾನಿ, ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಮತದಾರರು ಮತ್ತು ಮತಗಟ್ಟೆ ಏಜೆಂಟರಿಗೆ ಬೆದರಿಕೆ ಹಾಕಿರುವ ಘಟನೆಗಳು ಶುಕ್ರವಾರ (ಏಪ್ರಿಲ್ 19) ನಡೆದಿವೆ. ಮೊದಲ ಹಂತದಲ್ಲಿ ಇನ್ನರ್ ಮಣಿಪುರ ಸಂಸದೀಯ ಸ್ಥಾನ ಮತ್ತು ಹೊರ ಮಣಿಪುರ ಸ್ಥಾನದ ಒಂದು ಭಾಗದಲ್ಲಿ ಮತದಾನ ನಡೆಯಿತು. ಮಣಿಪುರ ಹೊರವಲಯ ಕ್ಷೇತ್ರದ ಉಳಿದ ಪ್ರದೇಶಗಳಿಗೆ ಏಪ್ರಿಲ್ 26 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಕ್ಷೇತ್ರದ ತಮ್ನಾಪೊಕ್ಪಿಯಲ್ಲಿ, ಮತಗಟ್ಟೆಯ ಬಳಿ ಶಸ್ತ್ರಸಜ್ಜಿತ ವ್ಯಕ್ತಿಗಳು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದಾಗ ಮತದಾರರು ಭಯಭೀತರಾಗಿ ಓಡಿಹೋದರು ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿತ್ತು ಎಂದು ವರದಿಯಾಗಿದೆ.

ಇಂಫಾಲ್ ಪಶ್ಚಿಮ ಜಿಲ್ಲೆಯ ಉರಿಪೋಕ್ ಮತ್ತು ಇರೋಯಿಶೆಂಬಾದಲ್ಲಿ, ಶಸ್ತ್ರಸಜ್ಜಿತ ವ್ಯಕ್ತಿಗಳು ಪಕ್ಷದ ಏಜೆಂಟರನ್ನು ಆವರಣವನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಮತದಾರರಿಗೆ ಒಂದು ಪಕ್ಷಕ್ಕೆ ಮತ ಚಲಾಯಿಸುವಂತೆ ಬೆದರಿಕೆ ಹಾಕಿದರು. ಬೆದರಿಕೆಯಿಂದ ಕೋಪಗೊಂಡ ಕೆಲವು ಮತಗಟ್ಟೆಗಳಲ್ಲಿ ಮತದಾರರು ಇವಿಎಂಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯ ಕೀರಾವ್ ಕ್ಷೇತ್ರದ ಕಿಯಾಮ್ಗೆಯಲ್ಲಿ ಸಶಸ್ತ್ರ ವ್ಯಕ್ತಿಗಳು ಖಾಲಿ ಗುಂಡುಗಳನ್ನು ಹಾರಿಸಿ ಕಾಂಗ್ರೆಸ್ ಮತಗಟ್ಟೆ ಏಜೆಂಟರನ್ನು ಬೆದರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಬೆರಿಸಿದವರ ಬಗ್ಗೆ ವರದಿಗೆ ಸೂಚಿಸಿದ್ದೇನೆ - ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ

ಇಂಫಾಲ್‌ನ ಮೊಯಿರಂಗ್ಕಂಪು ಸಜೆಬ್ ಅವಾಂಗ್ ಲೀಕೈನ ಮತಗಟ್ಟೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ಮತ್ತು ಘರ್ಷಣೆ ನಡೆಸಿದ ಘಟನೆಯೂ ವರದಿಯಾಗಿದೆ. ಇನ್ನರ್ ಮಣಿಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಗೊಮ್ಚಾ ಬಿಮೋಲ್ ಅಕೋಯಿಜಾಮ್ ಅವರು ತಮ್ಮ ಏಜೆಂಟ್ ಅನ್ನು ಮತಗಟ್ಟೆಯಿಂದ ಬಂದೂಕುಧಾರಿ ಯುವಕರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ."ಕಾಂಗ್ರೆಸ್ ಅಭ್ಯರ್ಥಿ ತನ್ನ ಮತಗಟ್ಟೆ ಏಜೆಂಟ್‌ಗೆ ಬೆದರಿಕೆಗಳ ಬಗ್ಗೆ ದೂರು ನೀಡುತ್ತಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಪರಿಶೀಲಿಸಿ ವಿವರಗಳೊಂದಿಗೆ ಹಿಂತಿರುಗುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ" ಎಂದು ಮಣಿಪುರದ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಹೇಳಿದ್ದಾರೆ.

ಮೊಯಿರಂಗ್ಕಂಪು ಬ್ಲಾಕ್ ಮಟ್ಟದ ಅಧಿಕಾರಿ ಸಜೇಬ್ ಸುರ್ಬಾಲಾ ದೇವಿ ಎಎನ್ಐಗೆ ಮಾತನಾಡಿ, "ಇದ್ದಕ್ಕಿದ್ದಂತೆ ಇಬ್ಬರು ವ್ಯಕ್ತಿಗಳು ಬಂದು ಕಾಂಗ್ರೆಸ್ ಮತ್ತು ಬಿಜೆಪಿಯ ಮತಗಟ್ಟೆ ಏಜೆಂಟರನ್ನು ಕೇಳಿದರು. ಅವರು ಕಾಂಗ್ರೆಸ್ ಏಜೆಂಟರ ಕೈ ಹಿಡಿದು ಹೊರಗೆ ಕರೆದೊಯ್ದರು. ನಂತರ ಇಬ್ಬರು ವ್ಯಕ್ತಿಗಳು ಕಾರಿನ ಒಳಗಿನಿಂದ ಗುಂಡು ಹಾರಿಸಿದರು. ಗುಂಡಿ ದಾಳಿಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಇದಕ್ಕೂ ಮುನ್ನ ಇಂಫಾಲ್ ಪೂರ್ವ ಜಿಲ್ಲೆಯ ಖೊಂಗ್ಮನ್ ವಲಯ 4 ರಲ್ಲಿ ಮತದಾರರು ಮತ್ತು ಅಪರಿಚಿತ ವ್ಯಕ್ತಿಗಳ ನಡುವಿನ ಘರ್ಷಣೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಿಗೆ (ಇವಿಎಂ) ಹಾನಿಯಾಗಿದೆ ಎಂದು ವರದಿಯಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ವೀಡಿಯೊಗಳು ಮತ್ತು ಫೋಟೋಗಳಲ್ಲಿ, ಇವಿಎಂಗಳು ನೆಲದ ಮೇಲೆ ಬಿದ್ದಿರುವುದು ಮತ್ತು ಮತದಾನ ಕೇಂದ್ರಗಳಲ್ಲಿನ ಪೀಠೋಪಕರಣಗಳು ಹಾನಿಗೊಳಗಾಗಿರುವುದು ಕಂಡುಬಂದಿವೆ. ಕೆಲವು ವೀಡಿಯೊಗಳಲ್ಲಿ, ಜನರಿಗೆ ಗನ್ ಪಾಯಿಂಟ್‌ ಇಟ್ಟು ಒಂದು ಪಕ್ಷಕ್ಕೆ ಮತ ಚಲಾಯಿಸುವಂತೆ ಕೇಳಲಾಗಿದೆ. ಕೆಲವು ಸಂದರ್ಭಗಳಲ್ಲಿ ಅವರ ಮತಗಳನ್ನು ಈಗಾಗಲೇ ಇತರರು ಚಲಾಯಿಸಿದ್ದಾರೆ ಎಂದು ದೂರಿದ್ದಾರೆ. ಫೋಟೋಗಳು ಮತ್ತು ವೀಡಿಯೊಗಳ ಸತ್ಯಾಸತ್ಯತೆಯನ್ನು ಎಚ್‌ಟಿಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

ಈ ವರದಿಗಳಿಗೆ ಪ್ರತಿಕ್ರಿಯಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎಸ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ, "ಮಣಿಪುರದಲ್ಲಿ ಚುನಾವಣೆಯ ಸಮಯದಲ್ಲಿ ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಆತಂಕಕಾರಿ ವೀಡಿಯೊ ಪುರಾವೆಗಳು ನಾಗರಿಕರಿಗೆ ಮತದಾನದ ಹಕ್ಕನ್ನು ನಿರಾಕರಿಸಿವೆ. ಈ ರೀತಿಯ ಚುನಾವಣಾ ದುಷ್ಕೃತ್ಯವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಸಾರ್ವಜನಿಕ ನಂಬಿಕೆಯನ್ನು ನಾಶಪಡಿಸುತ್ತದೆ. ಅದೂ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಭಾರಿ ತೊಂದರೆ ಅನುಭವಿಸುತ್ತಿರುವ ರಾಜ್ಯದಲ್ಲಿ. ಈ ವಿಷಯವನ್ನು ತ್ವರಿತವಾಗಿ ತನಿಖೆ ಮಾಡಿ ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ನಾವು @ECISVEEP ಒತ್ತಾಯಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

IPL_Entry_Point