ಕನ್ನಡ ಸುದ್ದಿ  /  Photo Gallery  /  In Pics How Is Senior Actress Mahalakshmi Now?

Senior Actress Mahalakshmi: ಒಂದು ಕಾಲದ ಸ್ಟಾರ್‌ ನಟಿ ಮಹಾಲಕ್ಷ್ಮೀ ಈಗ ಏನ್ಮಾಡ್ತಿದ್ದಾರೆ? ಹೇಗಿದ್ದಾರೆ?

  • 80ರ ದಶಕದಲ್ಲಿ ಬಡ್ಡಿ ಬಂಗಾರಮ್ಮ, ಪರಶುರಾಮ, ಜಯಸಿಂಹ, ಭದ್ರಕಾಳಿ ಸೇರಿ 35ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿದವರು ನಟಿ ಮಹಾಲಕ್ಷ್ಮೀ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅಂದರೆ, 90ರ ದಶಕದ ಆರಂಭದಲ್ಲಿಯೇ ಈ ನಟಿ ಸಿನಿಮಾರಂಗದಿಂದಲೇ ಹಿಂದೆ ಸರಿದರು. ಮದುವೆಯೂ ಆಯಿತು. ಮಕ್ಕಳೂ ಆದವು. ಆದರೆ ಸಿನಿಮಾಕ್ಕೆ ಮಾತ್ರ ಅವರು ಮರಳಲಿಲ್ಲ. ಕಳೆದ ವರ್ಷವಷ್ಟೇ "ಟಿಆರ್‌ಪಿ ರಾಮ" ಸಿನಿಮಾ ಮೂಲಕ ಮತ್ತೆ ನಟನೆಗೆ ಮರಳಿದ್ದರು. ಅದೂ ಬರೋಬ್ಬರಿ 30 ವರ್ಷಗಳ ಬಳಿಕ. ಇದೀಗ ಇದೇ ನಟಿ ಈಗ ಹೇಗಿದ್ದಾರೆ? ಇಲ್ಲಿವೆ ನೋಡಿ ಕೆಲ ಫೋಟೋಗಳು..

80ರ ದಶಕದಲ್ಲಿ ಬಡ್ಡಿ ಬಂಗಾರಮ್ಮ, ಪರಶುರಾಮ, ಜಯಸಿಂಹ, ಭದ್ರಕಾಳಿ ಸೇರಿ 35ಕ್ಕೂ ಅಧಿಕ ಕನ್ನಡ ಸಿನಿಮಾಗಳಲ್ಲಿ ನಟಿಸಿದವರು ನಟಿ ಮಹಾಲಕ್ಷ್ಮೀ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಅಂದರೆ, 90ರ ದಶಕದ ಆರಂಭದಲ್ಲಿಯೇ ಈ ನಟಿ ಸಿನಿಮಾರಂಗದಿಂದಲೇ ಹಿಂದೆ ಸರಿದರು.
icon

(1 / 5)

ನಾನು ಒಬ್ಬ ನಟಿ. ನಟಿಯಾಗಿ ಆ ಕೆಲಸವನ್ನು ಎಷ್ಟು ಶ್ರದ್ಧೆಯಿಂದ ಮಾಡಿದ್ದೆನೋ ಅಷ್ಟೇ ಶ್ರದ್ಧೆಯಿಂದ ಕುಟುಂಬವನ್ನೂ ನಿಭಾಯಿಸಿದ್ದೆ. ಕುಟುಂಬದ ಸಲುವಾಗಿಯೇ ಚಿತ್ರರಂಗದಿಂದ ದೂರ ಉಳಿದಿದ್ದ ಬಗ್ಗೆ ಈ ಹಿಂದೆ ಮಹಾಲಕ್ಷ್ಮೀ ಹೇಳಿಕೊಂಡಿದ್ದರು.
icon

(2 / 5)

ಸಿನಿಮಾದಿಂದ ದೂರ ಸರಿಯುತ್ತಿದ್ದಂತೆ, ಚರ್ಚ್‌ಗಳಲ್ಲಿಯೂ ಮಹಾಲಕ್ಷ್ಮೀ ಕಾಣಿಸಿಕೊಂಡರು. ಕೆಲವರು ಅವರು ಸನ್ಯಾಸಿನಿಯಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನೂ ಹಬ್ಬಿಸಿದ್ದರು. ಅಷ್ಟೇ ಅಲ್ಲ ಮಾನಸಿಕವಾಗಿಯೂ ಅವರು ಖಿನ್ನತೆಗೆ ಜಾರಿದ್ದರು ಎಂಬ ಸುದ್ದಿ ಹರಿದಾಡಿತ್ತು.
icon

(3 / 5)

ಅದೆಲ್ಲದಕ್ಕೂ ಉತ್ತರವೆಂಬಂತೆ, ನನಗೆ ಮದುವೆಯಾಗಿದೆ. ಮಕ್ಕಳಿವೆ, ನಾನೇಕೆ ಸನ್ಯಾಸಿ ಆಗಲಿ ಎಂದಿದ್ದರು. ಆಧ್ಯಾತ್ಮದ ಕಡೆ ನನಗೆ ಸೆಳೆತ ಇದೆ. ಬಿಡುವಿದ್ದಾಗ ಚರ್ಚ್‌ಗೆ ಹೋಗಿ ಸೇವೆ ಮಾಡುತ್ತಿದ್ದೆ. ಅದನ್ನೇ ಬೇರೆ ರೀತಿ ತಿರುಚಿದ್ದರು ಎಂದು ಹೇಳಿಕೊಂಡಿದ್ದರು. ಸದ್ಯ ಇದೇ ಹಿರಿಯ ನಟಿ ಚೆನ್ನೈನಲ್ಲಿ ವಾಸವಿದ್ದಾರೆ.
icon

(4 / 5)

ಕಳೆದ ವರ್ಷ ಸೆಟ್ಟೇರಿದ್ದ ಆಶುತೋಷ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಟಿಆರ್‌ಪಿ ರಾಮ ಸಿನಿಮಾದಲ್ಲಿ ತಾಯಿ ಪಾತ್ರದಲ್ಲಿ ಮಹಾಲಕ್ಷ್ಮೀ ನಟಿಸಿದ್ದಾರೆ. ಬಹುತೇಕ ಕೆಲಸ ಮುಗಿಸಿಕೊಂಡಿರುವ ಆ ಸಿನಿಮಾ ಇನ್ನೇನು ಹೊಸ ಅಪ್‌ಡೇಟ್‌ ನೀಡಬೇಕಿದೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು