ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

ಮುಂಬೈ ಇಂಡಿಯನ್ಸ್ ಐಪಿಎಲ್‌ನ ಅತ್ಯುನ್ನತ ಬ್ರಾಂಡ್; ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ತಂಡದಲ್ಲಿ ಆರ್‌ಸಿಬಿಗೆ ಈ ಸ್ಥಾನ

  • ಐಪಿಎಲ್‌ನಲ್ಲಿ ಆಡುವ ಪ್ರತಿ ಫ್ರಾಂಚೈಸಿಯು ಭಾರಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಈ ಮೌಲ್ಯವು ಆಯಾ ತಂಡದ ಜನಪ್ರಿಯತೆ, ಅಭಿಮಾನಿ ಬಳಗ ಹಾಗೂ ವಾಣಿಜ್ಯ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಹಾಗಿದ್ದರೆ, ಐಪಿಎಲ್‌ನಲ್ಲಿ ಅಧಿಕ ಬ್ರಾಂಡ್‌ ಮೌಲ್ಯ ಹೊಂದಿರುವ ತಂಡ ಯಾವುದು ಎಂಬುದನ್ನು ನೋಡೋಣ.

ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಪ್ರಸ್ತುತ ಬ್ರಾಂಡ್ ಮೌಲ್ಯ ಬರೋಬ್ಬರಿ 87 ಮಿಲಿಯನ್ ಡಾಲರ್. ಅಂದರೆ ಸುಮಾರು 725 ಕೋಟಿ ರೂಪಾಯಿ. ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿ (5) ಗೆದ್ದಿರುವುದೇ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂಥ ಸ್ಟಾರ್ ಆಟಗಾರರನ್ನು ತಂಡ ಹೊಂದಿದೆ.
icon

(1 / 9)

ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಪ್ರಸ್ತುತ ಬ್ರಾಂಡ್ ಮೌಲ್ಯ ಬರೋಬ್ಬರಿ 87 ಮಿಲಿಯನ್ ಡಾಲರ್. ಅಂದರೆ ಸುಮಾರು 725 ಕೋಟಿ ರೂಪಾಯಿ. ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿ (5) ಗೆದ್ದಿರುವುದೇ ತಂಡದ ಯಶಸ್ಸಿಗೆ ಪ್ರಮುಖ ಕಾರಣ. ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂಥ ಸ್ಟಾರ್ ಆಟಗಾರರನ್ನು ತಂಡ ಹೊಂದಿದೆ.(AFP)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬ್ರಾಂಡ್ ಮೌಲ್ಯ ಸುಮಾರು 81 ಮಿಲಿಯನ್ ಡಾಲರ್. ಸಿಎಸ್‌ಕೆ ತಂಡ ಕೂಡಾ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ತಂಡದ ಯಶಸ್ಸಿನಲ್ಲಿ 5 ಟ್ರೋಫಿ ಪ್ರಮುಖ ಪಾತ್ರ ವಹಿಸಿದರೆ, ಧೋನಿ ತಂಡದ ಬ್ರಾಂಡ್‌ ಮೌಲ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ.
icon

(2 / 9)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಬ್ರಾಂಡ್ ಮೌಲ್ಯ ಸುಮಾರು 81 ಮಿಲಿಯನ್ ಡಾಲರ್. ಸಿಎಸ್‌ಕೆ ತಂಡ ಕೂಡಾ ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದೆ. ತಂಡದ ಯಶಸ್ಸಿನಲ್ಲಿ 5 ಟ್ರೋಫಿ ಪ್ರಮುಖ ಪಾತ್ರ ವಹಿಸಿದರೆ, ಧೋನಿ ತಂಡದ ಬ್ರಾಂಡ್‌ ಮೌಲ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ಹೊಂದಿದ್ದಾರೆ.(AP)

ಕೋಲ್ಕತಾ ನೈಟ್ ರೈಡರ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಶಾರುಖ್ ಖಾನ್‌ ಮಾಲಕತ್ವದ ತಂಡದ ಬ್ರಾಂಡ್ ಮೌಲ್ಯ ಸುಮಾರು 78.6 ಮಿಲಿಯನ್ ಡಾಲರ್ ಆಗಿದೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಕೆಕೆಆರ್‌, ಈವರೆಗೆ ಎರಡು ಬಾರಿ ಟ್ರೋಫಿ ಗೆದ್ದಿದೆ.
icon

(3 / 9)

ಕೋಲ್ಕತಾ ನೈಟ್ ರೈಡರ್ಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಶಾರುಖ್ ಖಾನ್‌ ಮಾಲಕತ್ವದ ತಂಡದ ಬ್ರಾಂಡ್ ಮೌಲ್ಯ ಸುಮಾರು 78.6 ಮಿಲಿಯನ್ ಡಾಲರ್ ಆಗಿದೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿರುವ ಕೆಕೆಆರ್‌, ಈವರೆಗೆ ಎರಡು ಬಾರಿ ಟ್ರೋಫಿ ಗೆದ್ದಿದೆ.(PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.
icon

(4 / 9)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆರ್‌ಸಿಬಿ ತಂಡವು ಈವರೆಗೆ ಟ್ರೋಫಿ ಗೆಲ್ಲದಿದ್ದರೂ, ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರ ಹಿಂದಿರುವ ಪ್ರಮುಖ ವ್ಯಕ್ತಿ ವಿರಾಟ್ ಕೊಹ್ಲಿ. ಆರ್‌ಸಿಬಿ ಬ್ರಾಂಡ್ ಮೌಲ್ಯವು ಸುಮಾರು 69.8 ಮಿಲಿಯನ್ ಡಾಲರ್ ಆಗಿದೆ. ಅಂದರೆ 582 ಕೋಟಿ ರೂಪಾಯಿ. ವಿರಾಟ್ ಕೊಹ್ಲಿಯ ಭಾರಿ ಜನಪ್ರಿಯತೆಯು ವಿಶ್ವಾದ್ಯಂತ ಅಭಿಮಾನಿಗಳನ್ನು ಆಕರ್ಷಿಸುತ್ತದೆ. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲೂ ತಂಡಕ್ಕೆ ವ್ಯಾಪಕ ಬೆಂಬಲಿಗರಿದ್ದಾರೆ.(AFP)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರಾಂಡ್ ಮೌಲ್ಯ 64.1 ಮಿಲಿಯನ್ ಡಾಲರ್. ಡೆಲ್ಲಿ ತಂಡಕ್ಕೂ ಫ್ಯಾನ್ ಬೇಸ್ ದೊಡ್ಡದಿದೆ.
icon

(5 / 9)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ರಾಂಡ್ ಮೌಲ್ಯ 64.1 ಮಿಲಿಯನ್ ಡಾಲರ್. ಡೆಲ್ಲಿ ತಂಡಕ್ಕೂ ಫ್ಯಾನ್ ಬೇಸ್ ದೊಡ್ಡದಿದೆ.(AFP)

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೂ ಫ್ಯಾನ್ ಬೇಸ್‌ ದೊಡ್ಡದಿದೆ. ತಂಡದ ಬ್ರಾಂಡ್ ಮೌಲ್ಯ ಹೆಚ್ಚಾಗಿದೆ. ಎಸ್ಆರ್‌ಎಚ್ ಬ್ರಾಂಡ್ ಮೌಲ್ಯ 48.2 ಮಿಲಿಯನ್ ಡಾಲರ್ ಇದೆ. ಈ ಪಟ್ಟಿಯಲ್ಲಿ ಹೈದರಾಬಾದ್ ಆರನೇ ಸ್ಥಾನದಲ್ಲಿದೆ.
icon

(6 / 9)

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೂ ಫ್ಯಾನ್ ಬೇಸ್‌ ದೊಡ್ಡದಿದೆ. ತಂಡದ ಬ್ರಾಂಡ್ ಮೌಲ್ಯ ಹೆಚ್ಚಾಗಿದೆ. ಎಸ್ಆರ್‌ಎಚ್ ಬ್ರಾಂಡ್ ಮೌಲ್ಯ 48.2 ಮಿಲಿಯನ್ ಡಾಲರ್ ಇದೆ. ಈ ಪಟ್ಟಿಯಲ್ಲಿ ಹೈದರಾಬಾದ್ ಆರನೇ ಸ್ಥಾನದಲ್ಲಿದೆ.(PTI)

ಪಂಜಾಬ್ ಕಿಂಗ್ಸ್‌ ತಂಡದ ಬ್ರಾಂಡ್ ಮೌಲ್ಯ 45.3 ಮಿಲಿಯನ್ ಡಾಲರ್. ಈ ಪಟ್ಟಿಯಲ್ಲಿ ಪಂಜಾಬ್ ಏಳನೇ ಸ್ಥಾನದಲ್ಲಿದೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಪಿಬಿಕೆಎಸ್ ತಂಡಕ್ಕೆ ಸೆಲೆಬ್ರಿಟಿ ಸ್ಪರ್ಶವನ್ನು ಪಡೆಯುತ್ತದೆ.
icon

(7 / 9)

ಪಂಜಾಬ್ ಕಿಂಗ್ಸ್‌ ತಂಡದ ಬ್ರಾಂಡ್ ಮೌಲ್ಯ 45.3 ಮಿಲಿಯನ್ ಡಾಲರ್. ಈ ಪಟ್ಟಿಯಲ್ಲಿ ಪಂಜಾಬ್ ಏಳನೇ ಸ್ಥಾನದಲ್ಲಿದೆ. ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಮಾಲೀಕತ್ವದ ಪಿಬಿಕೆಎಸ್ ತಂಡಕ್ಕೆ ಸೆಲೆಬ್ರಿಟಿ ಸ್ಪರ್ಶವನ್ನು ಪಡೆಯುತ್ತದೆ.(IPL)

ರಾಜಸ್ಥಾನ್ ರಾಯಲ್ಸ್‌ ಬ್ರಾಂಡ್ ಮೌಲ್ಯ 42 ಮಿಲಿಯನ್ ಡಾಲರ್.
icon

(8 / 9)

ರಾಜಸ್ಥಾನ್ ರಾಯಲ್ಸ್‌ ಬ್ರಾಂಡ್ ಮೌಲ್ಯ 42 ಮಿಲಿಯನ್ ಡಾಲರ್.(PTI)

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಐಪಿಎಲ್‌ನ ಹೊಸ ತಂಡಗಳು. ಆದರೂ ಲಕ್ನೋ ಸೂಪರ್ ಜೈಂಟ್ಸ್ ಬ್ರಾಂಡ್ ಮೌಲ್ಯ 47 ಮಿಲಿಯನ್ ಡಾಲರ್.‌ ಗುಜರಾತ್ ಟೈಟಾನ್ಸ್ ಬ್ರಾಂಡ್ ಮೌಲ್ಯ 65.4 ಮಿಲಿಯನ್ ಡಾಲರ್.‌ ಈ ತಂಡಗಳ ಬ್ರಾಂಡ್‌ ಮೌಲ್ಯ ಕೂಡಾ ವೇಗವಾಗಿ ಬೆಳೆಯುತ್ತಿದೆ.
icon

(9 / 9)

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ಐಪಿಎಲ್‌ನ ಹೊಸ ತಂಡಗಳು. ಆದರೂ ಲಕ್ನೋ ಸೂಪರ್ ಜೈಂಟ್ಸ್ ಬ್ರಾಂಡ್ ಮೌಲ್ಯ 47 ಮಿಲಿಯನ್ ಡಾಲರ್.‌ ಗುಜರಾತ್ ಟೈಟಾನ್ಸ್ ಬ್ರಾಂಡ್ ಮೌಲ್ಯ 65.4 ಮಿಲಿಯನ್ ಡಾಲರ್.‌ ಈ ತಂಡಗಳ ಬ್ರಾಂಡ್‌ ಮೌಲ್ಯ ಕೂಡಾ ವೇಗವಾಗಿ ಬೆಳೆಯುತ್ತಿದೆ.


IPL_Entry_Point

ಇತರ ಗ್ಯಾಲರಿಗಳು