logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೈಲಾಸ ದರ್ಶನ ಇನ್ನು ಸಲೀಸು, ಚೀನಾ ಮೂಲಕ ಹೆಚ್ಚು ಹೋಗಬೇಕಾಗಿಲ್ಲ, ಹೊಸ ವ್ಯೂವ್ ಪಾಯಿಂಟ್‌ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಕೈಲಾಸ ದರ್ಶನ ಇನ್ನು ಸಲೀಸು, ಚೀನಾ ಮೂಲಕ ಹೆಚ್ಚು ಹೋಗಬೇಕಾಗಿಲ್ಲ, ಹೊಸ ವ್ಯೂವ್ ಪಾಯಿಂಟ್‌ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

Umesh Kumar S HT Kannada

Sep 21, 2023 06:03 AM IST

ಕೈಲಾಸ ಪರ್ವತ (ಕಡತ ಚಿತ್ರ)

  • ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಕೈಲಾಸ ಪರ್ವತ ದರ್ಶನ ಇನ್ನು ಬಹಳ ಸಲೀಸಾಗಲಿದೆ. ಕೈಲಾಸ ದರ್ಶನಕ್ಕೆ ಚೀನಾದ ಮೂಲಕ ಹೆಚ್ಚು ಪ್ರಯಾಣಿಸಬೇಕಾಗಿತ್ತು. ಆದರೆ ಇನ್ನು ಆ ದಾರಿಯಲ್ಲಿ ಸಾಗಬೇಕಾಗಿಲ್ಲ. ಹೊಸ ವ್ಯೂವ್‌ಪಾಯಿಂಟ್‌ಗೆ ಪ್ರಧಾನಿ ನರೇಂದ್ರ ಮೋದಿ ಮುಂದಿನ ತಿಂಗಳು ಚಾಲನೆ ನೀಡಲಿದ್ದಾರೆ.

ಕೈಲಾಸ ಪರ್ವತ (ಕಡತ ಚಿತ್ರ)
ಕೈಲಾಸ ಪರ್ವತ (ಕಡತ ಚಿತ್ರ) (HT_PRINT)

ಕೈಲಾಸ ಪರ್ವತ ದರ್ಶನ ಹಿಂದುಗಳ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದುದು. ಆ ಪ್ರದೇಶಕ್ಕೆ ಭೇಟಿ ನೀಡಬೇಕಾದ ಭಾರತೀಯರು ಚೀನಾದ ಭೂಭಾಗದಲ್ಲಿ ಹೆಚ್ಚು ದೂರ ಸಾಗಬೇಕಾಗಿತ್ತು. ಆದರೆ ಇನ್ನು ಚೀನಾದ ಭೂಭಾಗದ ಪ್ರಯಾಣ ಕಡಿಮೆಯಾಗಿದ್ದು, ಸುಲಭವಾಗಿ ಕೈಲಾಸ ದರ್ಶನ ಲಭ್ಯವಾಗಲಿದೆ. ಇದಕ್ಕಾಗಿ ಹೊಸ ವ್ಯೂವ್ ಪಾಯಿಂಟ್‌ ಅನ್ನು ಭಾರತ ಸರ್ಕಾರ ಅನ್ವೇಷಿಸಿದೆ. ಮುಂದಿನ ತಿಂಗಳು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ತಾಜಾ ಫೋಟೊಗಳು

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

May 09, 2024 08:25 AM

Trigrahi Yoga: ಮೇ ತಿಂಗಳಲ್ಲಿ ತ್ರಿಗ್ರಹಿ ಯೋಗ; ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

May 09, 2024 06:00 AM

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

May 08, 2024 08:40 AM

Amavasya 2024: ಪಿತೃದೋಷ, ಕಾಳಸರ್ಪ ದೋಷ , ಶನಿ ದೋಷ ಪರಿಹಾರಕ್ಕೆ ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡಿ

May 07, 2024 03:00 PM

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಉತ್ತರಾಖಂಡದ ಪಿಥೋರ್‌ಗಡದಿಂದ ಶುರುವಾಗುವ ಈ ಮಾರ್ಗ ಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11 ಮತ್ತು 12ರಂದು ಉತ್ತರಾಖಂಡ ಪ್ರವಾಸ ಕೈಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಕೈಲಾಸ ದರ್ಶನಕ್ಕೆ ಇರುವ ಹೊಸ ಪಾಯಿಂಟ್‌ ಉದ್ಘಾಟನೆ ನೆರವೇರಿಸುವ ನಿರೀಕ್ಷೆ ಇದೆ ಎಂದು HT ಕನ್ನಡದ ಸೋದರ ತಾಣ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಇದನ್ನೂ ಓದಿ| 300 ವರ್ಷಗಳ ನಂತರ 3 ಮಹಾ ಯೋಗಗಳು, ಈ 3 ರಾಶಿಯವರಷ್ಟು ಅದೃಷ್ಟವಂತರು ಇನ್ಯಾರೂ ಇಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಪಿಥೋರ್‌ಗಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅನುಕೂಲಕರ ಹವಾಮಾನ ಇದ್ದರೆ ಅವರು ಓಂ ಪರ್ವತದ ದರ್ಶನವನ್ನೂ ಮಾಡಲಿದ್ದಾರೆ ಎಂದು ವರದಿ ಹೇಳಿದೆ.

ಕೈಲಾಸ ಪರ್ವತ ದರ್ಶನದ ಹೊಸ ವ್ಯೂವ್‌ ಪಾಯಿಂಟ್‌ ಪತ್ತೆಯಾದ್ದು ಯಾವಾಗ

ಹಿಂದೂ ಧರ್ಮ ಪ್ರಕಾರ ಕೈಲಾಸ ಪರ್ವತವನ್ನು ಶಿವನ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ವರ್ಷಂಪ್ರತಿ ಅಸಂಖ್ಯ ಭಾರತೀಯ ಯಾತ್ರಿಕರು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಾರೆ. ಉತ್ತರಾಖಂಡದ ಪಿಥೋರ್‌ಗಡ ಮೂಲಕ ಒಂದು ಮಾರ್ಗ ಸಾಗುತ್ತದೆ. ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ಉಂಟಾದ ಬಳಿಕ ಈ ಮಾರ್ಗದ ಪ್ರಯಾಣ ಸ್ಥಗಿತವಾಗಿದೆ.

ಇದನ್ನೂ ಓದಿ| ಎಲ್ಲ ರಾಶಿಗಳ ಮೇಲೂ ಆಗಲಿದೆ ಚಾಂಡಾಲ ಯೋಗದ ಪರಿಣಾಮ, ಆದರೆ ಈ 4 ರಾಶಿಯವರಿಗೆ ದುರಾದೃಷ್ಟ ಹೆಚ್ಚು

ಇಂತಹ ಸನ್ನಿವೇಶದಲ್ಲಿ ಭಾರತ ಮತ್ತು ಚೀನಾ ಗಡಿಯಿಂದಲೇ ಕೈಲಾಸ ಪರ್ವತ ದರ್ಶನ ಮಾಡಬಹುದಾದ ಹೊಸ ವ್ಯೂವ್‌ ಪಾಯಿಂಟ್ 2018ರಲ್ಲಿ ಪತ್ತೆ ಮಾಡಲಾಗಿದೆ. ಗಡಿ ಸಂಘರ್ಷ ಚಾಲ್ತಿಯಲ್ಲಿರುವಾಗ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಭಾರತೀಯರು ಚೀನಾ ಮೂಲಕ ಕೈಗೊಳ್ಳುವುದು ಕ್ಷೇಮಕರವಲ್ಲ ಎಂಬ ಕಾರಣಕ್ಕೆ ಈ ಹೊಸ ವ್ಯೂವ್ ಪಾಯಿಂಟ್ ಅನ್ನು ಅನ್ವೇಷಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಕೈಲಾಸ ಪರ್ವತ ಮತ್ತು ಲಿಪುಲೇಖ್ ಶಿಖರದ ನಡುವಿನ ವೈಮಾನಿಕ ಅಂತರ 60 ಕಿ.ಮೀ

ಹೊಸ ಕೈಲಾಸ ವ್ಯೂ ಪಾಯಿಂಟ್ ಅನ್ನು ತಲುಪಲು ಹಳೆಯ ಲಿಪುಲೇಖ್ ಕಣಿವೆಯನ್ನು ದಾಟಬೇಕು. ಇದು ಚೀನಾ ಗಡಿಗೆ ಸುಮಾರು ನಾಲ್ಕು ಕಿಲೋಮೀಟರ್ ಮುಂಚಿತವಾಗಿ ಸಿಗುತ್ತದೆ. ಪಿಥೋರಗಢದ ಧಾರ್ಚುಲಾದಲ್ಲಿರುವ 18,000 ಅಡಿ ಎತ್ತರದ ಹಳೆಯ ಲಿಪುಲೇಖ್ ಶಿಖರದಿಂದ ಕೈಲಾಸ ಪರ್ವತವು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಗಡಿಯಿಂದ ಸುಮಾರು 60 ಕಿ.ಮೀ ದೂರದಲ್ಲಿದೆ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಎನ್ನುತ್ತಿವೆ ಕೆಲವು ವರದಿಗಳು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ