ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ
- ಶನಿಯು ಸುಮಾರು 30 ವರ್ಷಗಳ ನಂತರ ಮೂಲ ತ್ರಿಕೋನ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಇದರ ಪರಿಣಾಮವಾಗಿ ಶಶ ರಾಜಯೋಗ ರೂಪುಗೊಂಡಿದೆ. ಎಲ್ಲಾ 12 ರಾಶಿಗಳು ಇದರಿಂದ ಪ್ರಭಾವಕ್ಕೆ ಒಳಗಾದರೂ 3 ರಾಶಿಗಳು ವಿಶೇಷ ಫಲಗಳನ್ನು ಪಡೆಯಲಿದ್ದಾರೆ.
- ಶನಿಯು ಸುಮಾರು 30 ವರ್ಷಗಳ ನಂತರ ಮೂಲ ತ್ರಿಕೋನ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಇದರ ಪರಿಣಾಮವಾಗಿ ಶಶ ರಾಜಯೋಗ ರೂಪುಗೊಂಡಿದೆ. ಎಲ್ಲಾ 12 ರಾಶಿಗಳು ಇದರಿಂದ ಪ್ರಭಾವಕ್ಕೆ ಒಳಗಾದರೂ 3 ರಾಶಿಗಳು ವಿಶೇಷ ಫಲಗಳನ್ನು ಪಡೆಯಲಿದ್ದಾರೆ.
(1 / 6)
ನವಗ್ರಹಗಳಲ್ಲಿ ಶನಿಯು ಕರ್ಮಕಾರಕನಾಗಿ ಹೆಸರಾಗಿದ್ದಾನೆ. ಅವನು ಮನುಷ್ಯರ ಪಾಪ ಕರ್ಮಗಳ ಅನುಸಾರವಾಗಿ ಎಲ್ಲರಿಗೂ ಫಲಗಳನ್ನು ನೀಡುತ್ತಾನೆ. ಪಾಪ ಕರ್ಮಗಳನ್ನು ಮಾಡುವವರಿಗೆ ಶಿಕ್ಷಿಸಿದರೆ, ದಾನ ಧರ್ಮ ಮಾಡುವವರಿಗೆ ದುಪ್ಪಟ್ಟು ಶುಭಫಲಗಳನ್ನು ನೀಡುತ್ತಾನೆ.
(2 / 6)
ನವಗ್ರಹಗಳಲ್ಲಿ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದು ಪರಿಗಣಿಸಲಾಗಿದೆ. ಶನಿ ದೇವರ ಬಗ್ಗೆ ಎಲ್ಲರೂ ಭಯ ಪಡುತ್ತಾರೆ. ಆದರೆ ನ್ಯಾಯ, ಧರ್ಮದ ಪರ ಇರುವವರು ಎಂದಿಗೂ ಶನಿಯ ಬಗ್ಗೆ ಭಯ ಪಡಬೇಕಿಲ್ಲ. ಶನಿಯು ಸುಮಾರು 30 ವರ್ಷಗಳ ನಂತರ ತನ್ನ ಮೂಲ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದು ಮುಂದಿನ ವರ್ಷ ಮತ್ತೆ ತನ್ನ ಸ್ಥಾನ ಬದಲಿಸಲಿದ್ದಾನೆ.
(3 / 6)
ಶನಿಯು ಮೂಲ ತ್ರಿಕೋನ ಕುಂಭ ರಾಶಿಯಲ್ಲಿ ಸಂಚರಿಸುವುದರಿಂದ ಶಶ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗವು ಎಲ್ಲಾ ರಾಶಿಯವರನ್ನು ಬಾಧಿಸಿದರೂ ಮಂಗಳಕರವಾದ ರಾಜಯೋಗವೆಂದು ಪರಿಗಣಿಸಲಾಗಿದೆ. 2025 ರ ವರೆಗೆ ಈ ಭಾಗ್ಯವನ್ನು ಪಡೆಯುವ ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.
(4 / 6)
ವೃಷಭ ರಾಶಿಯ 10ನೇ ಮನೆಯಲ್ಲಿ ಶಶ ಯೋಗ ರೂಪುಗೊಳ್ಳುತ್ತದೆ. ಇದು ನಿಮಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಬಹಳ ಕಾಲದಿಂದ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಹಣಕಾಸಿನ ಪರಿಸ್ಥಿತಿಯಲ್ಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಲಿದ್ದಾರೆ.
(5 / 6)
ಮಕರ ರಾಶಿಯ 2ನೇ ಮನೆಯಲ್ಲಿ ಶಶ ರಾಜ ಯೋಗ ರೂಪುಗೊಳ್ಳುತ್ತದೆ. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿಸಲು ಇದು ಒಳ್ಳೆಯ ಸಮಯ. ಇದು ಸಾಡೇಸಾತಿ ಶನಿಯ ಕೊನೆಯ ಹಂತ ಆಗಿರುವ ಕಾರಣ, ನೀವು ಅಡೆತಡೆಯಿಲ್ಲದೆ ಎಲ್ಲಾ ವಿಚಾರದಲ್ಲೂ ಗೆಲುವು ಸಾಧಿಸಲಿದ್ದೀರಿ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಇರಲಿದೆ.
ಇತರ ಗ್ಯಾಲರಿಗಳು