ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

ಇಂದು ವೈಶಾಖ ಅಮಾವಾಸ್ಯೆ. ಸಾಮಾನ್ಯವಾಗಿ ಹುಣ್ಣಿಮೆ, ಅಮಾವಾಸ್ಯೆ ಸೇರಿದಂತೆ ಕೆಲವೊಂದು ನಿರ್ದಿಷ್ಠ ದಿನಗಳಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅಮಾವಾಸ್ಯೆ ದಿನ ಕೂಡಾ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ. 

ವೈಶಾಖ ಮಾಸದ ಅಮಾವಾಸ್ಯೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನದಂದು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಈ ದಿನ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಿ ಎಂದು ಹೇಳಲಾಗುತ್ತದೆ.  ಈ ದಿನವು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ಮನೆಯ ದೋಷಗಳನ್ನು ತೆಗೆದುಹಾಕುವುದು, ಪೂರ್ವಜರಿಗೆ ನೈವೇದ್ಯ ಮಾಡುವುದು, ದಾನ ಮಾಡುವುದು ಇತ್ಯಾದಿಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.
icon

(1 / 7)

ಈ ಬಾರಿಯ ಅಮಾವಾಸ್ಯೆ ಕೂಡಾ ಬಹಳ ಮಂಗಳಕರವಾಗಿದೆ. ಈ ದಿನ ಇಲ್ಲಿ ತಿಳಿಸುವ ಕೆಲಸಗಳನ್ನು ಎಂದಿಗೂ ಮಾಡಬಾರದು. 
icon

(2 / 7)

ಅಮವಾಸ್ಯೆಯ ದಿನದಂದು ಮದ್ಯ ಮತ್ತು ಮಾಂಸವನ್ನು ತ್ಯಜಿಸಬೇಕು. ಮತ್ತೊಬ್ಬರ ಬಗ್ಗೆ ಅಸೂಯೆ ಪಡುವುದಾಗಲೀ, ದ್ವೇಷ ಸಾಧಿಸುವುದಾಗಲೀ ಮಾಡಿದರೆ ಅದು ನಿಮಗೇ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಇದೆ ಎಚ್ಚರ. 
icon

(3 / 7)

ಅಮಾವಾಸ್ಯೆ ದಿನ ಹೊಸ ಪೊರಕೆ ಖರೀದಿಸುವುದನ್ನು ತಪ್ಪಿಸಿ, ಹೀಗೆ ಮಾಡಿದರೆ ಲಕ್ಷ್ಮೀ ಕೋಪಗೊಳ್ಳುತ್ತಾಳೆ, ಈ ಅವಧಿಯಲ್ಲಿ ನಿಮ್ಮ ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಬೇಕು.
icon

(4 / 7)

ಈ ದಿನ ಹೆಣ್ಣು ನೋಡುವುದು, ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳನ್ನು ಮಾಡುವಂತಿಲ್ಲ. ಅಮಾವಾಸ್ಯೆಯಂದು ತಲೆಗೆ ಎಣ್ಣೆ ಹಚ್ಚುವುದನ್ನು ಸಹ ನಿಷೇಧಿಸಲಾಗಿದೆ. 
icon

(5 / 7)

ಈ ದಿನ ಸಾಧ್ಯವಾದಷ್ಟು ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಮಹಿಳೆಯರನ್ನು ಅವಮಾನಿಸುವುದು, ಅನಾವಶ್ಯಕ ಕೋಪಗೊಳ್ಳುವುದು, ಮತ್ತೊಬ್ಬರ ಮೇಲೆ ಅರಚಾಡುವುದು ಕೂಡಾ ಒಳ್ಳೆಯದಲ್ಲ. ಆದಷ್ಟು ತಾಳ್ಮೆಯಿಂದ ಇರಿ. 
icon

(6 / 7)

ಇನ್ನಷ್ಟು ಧಾರ್ಮಿಕ, ಆಧ್ಯಾತ್ಮಿಕ ಸುದ್ದಿ ಓದಲು ಹಿಂದೂಸ್ತಾನ್‌ ಟೈಮ್ಸ್‌ ವೆಬ್‌ಸೈಟ್‌ ನೋಡಿ
icon

(7 / 7)

ಇನ್ನಷ್ಟು ಧಾರ್ಮಿಕ, ಆಧ್ಯಾತ್ಮಿಕ ಸುದ್ದಿ ಓದಲು ಹಿಂದೂಸ್ತಾನ್‌ ಟೈಮ್ಸ್‌ ವೆಬ್‌ಸೈಟ್‌ ನೋಡಿ

IPL_Entry_Point

ಇತರ ಗ್ಯಾಲರಿಗಳು