ನಕಾರಾತ್ಮಕ ಶಕ್ತಿ ನಾಶ ಮಾಡಿ ಸದಾ ಧನಾತ್ಮಕ ಶಕ್ತಿಯನ್ನು ತರಲಿದೆ ಈ ತ್ರಿಶಕ್ತಿ ಯಂತ್ರ; ಮನೆಯ ಯಾವ ದಿಕ್ಕಿನಲ್ಲಿ ಇದನ್ನು ಇರಿಸಬೇಕು?
May 01, 2024 01:33 PM IST
ನಕಾರಾತ್ಮಕ ಶಕ್ತಿ ನಾಶ ಮಾಡಿ ಸದಾ ಧನಾತ್ಮಕ ಶಕ್ತಿಯನ್ನು ತರಲಿದೆ ಈ ತ್ರಿಶಕ್ತಿ ಯಂತ್ರ
Trishakti Yantra: ತ್ರಿಶೂಲ, ಸ್ವಸ್ತಿಕ್ ಆಕಾರ ಮತ್ತು ಓಂ ಚಿಹ್ನೆಗಳನ್ನು ಒಳಗೊಂಡಿರುವ ತ್ರಿಶಕ್ತಿ ಯಂತ್ರವು ನಿಮ್ಮ ಮನೆಯಲ್ಲಿ ಸದಾ ಧನಾತ್ಮಕ ಅಂಶವನ್ನು ತುಂಬಿರುತ್ತದೆ. ಸಮಸ್ಯೆ ಉಂಟು ಮಾಡುವ ನಕಾರಾತ್ಮಕ ಅಂಶಗಳನ್ನು ತೊಲಗಿಸಿ ಮನೆಯಲ್ಲಿ ಸದಾ ಸುಖ ಸಂತೋಷ ನೆಮ್ಮದಿ ತರುತ್ತದೆ.
ತ್ರಿಶಕ್ತಿ ಯಂತ್ರ: ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ವಾಸ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಮುಖ್ಯವಾದ ವಿಚಾರಗಳಿಗೆ ನೀವು ವಾಸ್ತುವನ್ನು ಅನುಸರಿಸಿದರೆ ಜೀವನದಲ್ಲಿ ನಿಮಗಿಂತ ಅದೃಷ್ಟಶಾಲಿಗಳು ಯಾರೂ ಇಲ್ಲ. ಬಹಳ ಜನರು ತಮ್ಮ ಮನೆಗಳಲ್ಲಿ ನಕಾರಾತ್ಮಕ ಅಂಶಗಳಿಗೆ ಸ್ಥಳವೇ ಇಲ್ಲದಂತೆ ಯಂತ್ರಗಳನ್ನು ಪ್ರತಿಷ್ಠಾಪಿಸುತ್ತಾರೆ. ಅವುಗಳನ್ನು ಒಂದು ತ್ರಿಶಕ್ತಿ ಯಂತ್ರ.
ತಾಜಾ ಫೋಟೊಗಳು
ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಆವರಣದಲ್ಲಿ ತ್ರಿಶಕ್ತಿ ಯಂತ್ರವನ್ನು ಇಟ್ಟರೆ ನಿಮ್ಮ ಮನೆಯಲ್ಲಿ ಸದಾ ಸಂತೋಷ ನೆಲೆಸಿರುತ್ತದೆ. ಸಂಪತ್ತು ಹೆಚ್ಚಾಗುವುದಲ್ಲದೆ, ನಕಾರಾತ್ಮಕ ಶಕ್ತಿಗಳಿಗೆ ಮನೆಯಲ್ಲಿ ಅವಕಾಶವಿರುವುದಿಲ್ಲ. ಈ ಒಂದು ಯಂತ್ರವು ನಿಮ್ಮ ಮನೆಯನ್ನು ಯಾವುದೇ ದುಷ್ಟಶಕ್ತಿಗಳಿಂದ ರಕ್ಷಿಸುತ್ತದೆ. ಈ ತ್ರಿಶಕ್ತಿ ಯಂತ್ರ ಅದ್ಭುತ ಶಕ್ತಿ ಹೊಂದಿದೆ. ಅದರಲ್ಲಿರುವ ಓಂ ಪದವು ಇಡೀ ಬ್ರಹ್ಮಾಂಡದ ಶಕ್ತಿಯನ್ನು ಒಳಗೊಂಡಿದೆ. ಈ ಒಂದು ಮಂತ್ರವನ್ನು ಪಠಿಸಿದರೆ ಅವರು ದೇವರ ಸನ್ನಿಧಿಯನ್ನು ತಲುಪಬಹುದು ಎಂದು ಹಲವರು ನಂಬುತ್ತಾರೆ. ತ್ರಿಶಕ್ತಿ ಎಂದರೇನು? ಇದನ್ನು ಮನೆಯಲ್ಲಿ ಯಾವ ಸ್ಥಳದಲ್ಲಿ ಇಡಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.
ಏನಿದು ತ್ರಿಶಕ್ತಿ ಯಂತ್ರ?
ತ್ರಿಶಕ್ತಿ ಯಂತ್ರವು ತ್ರಿಶೂಲ, ಸ್ವಸ್ತಿಕ್ ಆಕಾರ ಮತ್ತು ಓಂ 3 ಚಿಹ್ನೆಗಳನ್ನು ಒಳಗೊಂಡಿದೆ. ಈ ಯಂತ್ರವು ಮುಂಭಾಗದಲ್ಲಿ ಶಿವನ ಕೈಯಲ್ಲಿ ತ್ರಿಶೂಲವನ್ನು ಹೊಂದಿದೆ, ಮಧ್ಯದಲ್ಲಿ ಓಂ ಪದ ಮತ್ತು ತುದಿಗಳಲ್ಲಿ ಸ್ವಸ್ತಿಕ್ ಆಕಾರವಿದೆ. ಈ ಚಿಹ್ನೆಯಿರುವ ಯಂತ್ರವನ್ನು ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕು. ಈ ಯಂತ್ರವನ್ನು ಮನೆಯ ಬಾಗಿಲ ಬಳಿ ಇಡುವುದರಿಂದ ದುಷ್ಟ ಶಕ್ತಿಗಳು ನಿಮ್ಮ ಮನೆಗೆ ಬರುವುದಿಲ್ಲ. ತ್ರಿ ಶಕ್ತಿ ಯಂತ್ರವು ಯಾವುದೇ ದುಷ್ಟ ಶಕ್ತಿಗಳು ಮತ್ತು ಪ್ರೇತಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಇದಲ್ಲದೆ, ಇದು ಯಾವಾಗಲೂ ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದರಿಂದ ನಿಮ್ಮ ಮನೆಯಲ್ಲಿ ಸುಖ, ಸಂಪತ್ತು ಮತ್ತು ಶಾಂತಿ ಸದಾ ಹೆಚ್ಚುತ್ತದೆ.
ತ್ರಿ ಶಕ್ತಿಯು ಮನೆಯಲ್ಲಿ ಇರುವುದು ನಿಮಗೆ ಯಾವಾಗಲೂ ಒಳ್ಳೆಯ ಫಲಿತಾಂಶಗಳನ್ನು ತರುತ್ತದೆ. ದೇವರ ಕೃಪೆ ಶಾಶ್ವತವಾಗಿರುತ್ತದೆ. ಇದು ನಿಮ್ಮ ಆಲೋಚನಾ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಇದು ವಾಸ್ತು ದೋಷಗಳಿಂದ ಪರಿಹಾರವನ್ನು ನೀಡುತ್ತದೆ. ಗ್ರಹದೋಷಗಳನ್ನು ತಡೆಯುತ್ತದೆ. ಈ ಯಂತ್ರವು ನಿಮ್ಮ ಮನೆಯಲ್ಲಿನ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿ ತುಂಬಿರುವಂತೆ ಮಾಡುತ್ತದೆ.
ಮೂರು ಶಕ್ತಿಗಳಿಂದ ಮನೆಯಲ್ಲಿ ಶಾಂತಿ, ಸಮೃದ್ಧಿ
ನಾವು ಯಾವಾಗಲೂ ಭಗವಂತನ ಕೈಯಲ್ಲಿ ಅಥವಾ ದುರ್ಗಾದೇವಿಯ ಕೈಯಲ್ಲಿ ತ್ರಿಶೂಲವನ್ನು ಗಮನಿಸುತ್ತೇವೆ. ಆದರೆ ಈ ತ್ರಿಶೂಲವನ್ನು ಪ್ರತಿದಿನ ದೈವಿಕ ಮತ್ತು ದೈಹಿಕ ಮೂರು ರೀತಿಯ ದುಃಖಗಳ ನಾಶದ ಸಂಕೇತವೆಂದು ಪರಿಗಣಿಸಲಾಗಿದೆ. ಈ ತ್ರಿಶೂಲವು ನಮಗೆ ಎಲ್ಲಾ ಮೂರು ರೀತಿಯ ದುಃಖಗಳಿಂದ ಮುಕ್ತಿಯನ್ನು ನೀಡುತ್ತದೆ ಮತ್ತು ನಮ್ಮನ್ನು ಶಾಶ್ವತವಾಗಿ ರಕ್ಷಿಸುತ್ತದೆ. ಈಶ್ವರನ ಕೈಯಲ್ಲಿರುವ ತ್ರಿಶೂಲವು ಸತ್ಯ, ರಾಜ ಮತ್ತು ತಮೋ ಎಂಬ 3 ಗುಣಗಳನ್ನು ಪ್ರತಿನಿಧಿಸುತ್ತದೆ. ಈ ಮೂರರ ನಡುವೆ ಸಮತೋಲನವಿಲ್ಲದೆ ವಿಶ್ವವು ಕಾರ್ಯ ನಿರ್ವಹಿಸುವುದು ಅಸಾಧ್ಯ. ಆದ್ದರಿಂದಲೇ ಈಶ್ವರನು ಈ ಮೂರು ಗುಣಗಳನ್ನು ತ್ರಿಶೂಲದ ರೂಪದಲ್ಲಿ ತೆಗೆದುಕೊಳ್ಳುತ್ತಾನೆ. ಮತ್ತೊಂದು ನಂಬಿಕೆಯ ಪ್ರಕಾರ ಈ ತ್ರಿಶೂಲವು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಕ್ಕೆ ಸಂಬಂಧಿಸಿದೆ.
ಓಂ ಪದವು ಇಡೀ ಬ್ರಹ್ಮಾಂಡದ ಶಕ್ತಿಯನ್ನು ಒಳಗೊಂಡಿದೆ. ಕೇವಂ ಓಂ ಎಂಬ ಪದವನ್ನು ಪಠಿಸುವ ಮೂಲಕ ನಾವು ಅನೇಕ ರೋಗಗಳಿಂದ ಮುಕ್ತರಾಗಬಹುದು. ಈ ಪದವನ್ನು ನಾವು ಅನೇಕ ದೇವತೆಗಳ ಕಥೆಗಳು ಮತ್ತು ಪುರಾಣಗಳಲ್ಲಿ ಕಾಣುತ್ತೇವೆ. ಅದಕ್ಕಾಗಿಯೇ ಈ ಪದವನ್ನು ಎಲ್ಲಾ ಮಂತ್ರಗಳ ಮೂಲ ಎಂದು ಪರಿಗಣಿಸಲಾಗಿದೆ. ಅದರಿಂದ ಹೊರ ಹೊಮ್ಮುವ ಶಬ್ದವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಭಾವನೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಕೋಪವನ್ನು ನಿಯಂತ್ರಿಸುತ್ತದೆ. ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
ಸೂರ್ಯನ ಸಂಕೇತ
ಹಿಂದೂಗಳು ಮಾಡುವ ಪ್ರತಿಯೊಂದು ಪೂಜೆಯಲ್ಲೂ ಈ ಸ್ವಸ್ತಿಕ ಚಿಹ್ನೆ ಹೆಚ್ಚಾಗಿ ಕಂಡುಬರುತ್ತದೆ. ಇದು ಯೋಗಕ್ಷೇಮವನ್ನು ಸೂಚಿಸುತ್ತದೆ. ಅಲ್ಲದೆ, ಸ್ವಸ್ತಿಕವು ಸೂರ್ಯನ ಸಂಕೇತವಾಗಿದೆ. ಸ್ವಸ್ತಿಕ್ ಚಿಹ್ನೆಯನ್ನು ಬಳಸುವುದರಿಂದ ಮನೆಯಲ್ಲಿ ಧನಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ತ್ರಿಶಕ್ತಿ ಯಂತ್ರವನ್ನು ಖರೀದಿಸುವ ಮುನ್ನ ಸೂಕ್ತ ಜ್ಯೋತಿಷಿ ಮತ್ತು ವಾಸ್ತು ತಜ್ಞರನ್ನು ಸಂಪರ್ಕಿಸಿ ಮತ್ತು ಅವರ ಸಲಹೆಯನ್ನು ಅನುಸರಿಸಲು ಮರೆಯದಿರಿ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.