ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Auspicious Muhurta: ಮದುವೆಗೆ ಒಳ್ಳೆ ಸಮಯ ನೋಡ್ತಿದ್ದೀರಾ? ಮುಂದಿನ 3 ತಿಂಗಳು ಯಾವುದೇ ಶುಭ ಮುಹೂರ್ತ ಇಲ್ಲ; ಕಾರಣ ಏನು?

Auspicious Muhurta: ಮದುವೆಗೆ ಒಳ್ಳೆ ಸಮಯ ನೋಡ್ತಿದ್ದೀರಾ? ಮುಂದಿನ 3 ತಿಂಗಳು ಯಾವುದೇ ಶುಭ ಮುಹೂರ್ತ ಇಲ್ಲ; ಕಾರಣ ಏನು?

Auspicious Muhurtham: ಸುಮಾರು 23 ವರ್ಷಗಳ ನಂತರ ಮೇ ಮತ್ತು ಜೂನ್ ತಿಂಗಳಲ್ಲಿ ಮದುವೆಗೆ ಯಾವುದೇ ಮುಹೂರ್ತಗಳಿರುವುದಿಲ್ಲ. ಗುರು ಮತ್ತು ಶುಕ್ರ ಗ್ರಹಗಳ ರಾಶಿ ಬದಲಾವಣೆಯೇ ಇದಕ್ಕೆ ಕಾರಣ ಎನ್ನುತ್ತಾರೆ ಪುರೋಹಿತರು. ಜುಲೈನಲ್ಲಿ ಆಷಾಢ ಮುಗಿದ ನಂತರ ಮದುವೆಗೆ ಮತ್ತೆ ಶುಭ ಮುಹೂರ್ತಗಳಿರುತ್ತವೆ.

ಮುಂದಿನ 3 ತಿಂಗಳು ಯಾವುದೇ ಶುಭ ಮುಹೂರ್ತ ಇಲ್ಲ
ಮುಂದಿನ 3 ತಿಂಗಳು ಯಾವುದೇ ಶುಭ ಮುಹೂರ್ತ ಇಲ್ಲ (PC: Unsplash)

ವಿವಾಹ ಮುಹೂರ್ತ: ಆಷಾಢ, ಧನುರ್ಮಾಸ ಹೊರತುಪಡಿಸಿ ಬಹುತೇಕ ಎಲ್ಲಾ ತಿಂಗಳಲ್ಲೂ ಮದುವೆಗೆ ಶುಭ ಮುಹೂರ್ತವಿರುತ್ತದೆ. ಆದರೆ ಈ ಬಾರಿ ಸುಮಾರು 23 ವರ್ಷಗಳ ನಂತರ ಮುಂದಿನ 2 ತಿಂಗಳ ಕಾಲ ಮದುವೆಗೆ ಯಾವುದೇ ಶುಭ ಮುಹೂರ್ತವಿಲ್ಲ. ಇದಕ್ಕೆ ಕಾರಣ ಕೂಡಾ ಇದೆ.

ಗಂಡು ಅಥವಾ ಹೆಣ್ಣು ಮದುವೆ ಆಗಲು ಗುರುಬಲ ಇರಬೇಕು, ಶುಕ್ರನೂ ಶುಭ ಸ್ಥಾನದಲ್ಲಿರಬೇಕು. ಆದರೆ ಈ ಬಾರಿ ಶುಭ ಗ್ರಹಗಳೆಂದು ಪರಿಗಣಿಸಲಾದ ಶುಕ್ರ ಮತ್ತು ಗುರು ತಮ್ಮ ಚಲನೆಯನ್ನು ಬದಲಾಯಿಸುತ್ತವೆ. ಏಕೆಂದರೆ ಈ ಎರಡು ಗ್ರಹಗಳು ಮದುವೆಗೆ ಉತ್ತಮ ಸ್ಥಾನದಲ್ಲಿರಬೇಕು. ಎರಡೂ ಗ್ರಹಗಳು ಅಶುಭ ಸ್ಥಾನದಲ್ಲಿದ್ದರೆ, ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ಸೂಕ್ತವಲ್ಲ. ಮತ್ತೆ ಜುಲೈನಲ್ಲಿ ಆಷಾಢ ಮುಗಿದ ನಂತರವಷ್ಟೇ ಮದುವೆಗೆ ಒಳ್ಳೆ ಮುಹೂರ್ತವಿದೆ.

ಎರಡೂ ಗ್ರಹಗಳ ಅಸ್ತಂಗತ್ವ ಹಂತ

ಮೇ 1 ರಂದು ಗುರು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಆದರೆ, ಮೇ 3 ರಂದು ಗುರು ಅಸ್ತಂಗತ್ವ ಹಂತವನ್ನು ಪ್ರವೇಶಿಸುತ್ತಾನೆ. ಇನ್ನು ಕೆಲವೇ ದಿನಗಳಲ್ಲಿ ಸೂರ್ಯನೂ ವೃಷಭ ರಾಶಿ ಪ್ರವೇಶಿಸುತ್ತಾನೆ. ಮೇ 19 ರಂದು ಶುಕ್ರನು ವೃಷಭ ರಾಶಿಯನ್ನು ಸಂಕ್ರಮಿಸುತ್ತಾನೆ . ಆ ಸಮಯದಲ್ಲಿ ಗುರು ಮತ್ತು ಶುಕ್ರ ಸಂಯೋಗ ನಡೆಯುತ್ತದೆ. ಶುಕ್ರನೂ ಕೆಲವು ದಿನಗಳವರೆಗೆ ಅಸ್ತಂಗತ್ವ ಹಂತಕ್ಕೆ ಹೋಗುತ್ತಾನೆ. ಗುರು ಮತ್ತು ಶುಕ್ರ ಗ್ರಹಗಳು ಸೂರ್ಯನಿಗೆ ಸಮೀಪದಲ್ಲಿದ್ದಾಗ, ಅವರ ಶಕ್ತಿ ದುರ್ಬಲಗೊಳ್ಳುತ್ತದೆ. ಪರಿಣಾಮವಾಗಿ, ಈ ಎರಡು ಗ್ರಹಗಳು ಅಸ್ತಂಗತ್ವ ಹಂತವನ್ನು ತಲುಪುತ್ತವೆ. ಈ ಸಮಯದಲ್ಲಿ ಮದುವೆಯಂಥ ಶುಭ ಕಾರ್ಯಗಳನ್ನು ನಡೆಸುವುದು ಸೂಕ್ತವಲ್ಲ. ಆದರೆ ಶುಕ್ರನ ಉದಯದ ನಂತರ ಮತ್ತೆ ಮದುವೆಗೆ ಮುಹೂರ್ತಗಳನ್ನು ನೋಡಬಹುದು.

ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳಿನಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದವು . ಆದರೆ ಈ ಬಾರಿ ಈ ಎರಡು ತಿಂಗಳಲ್ಲಿ ಮದುವೆಗಳಿಗೆ ಯಾವುದೇ ಶುಭ ಮುಹೂರ್ತಗಳಿಲ್ಲ. ಮೇ 7 ರಿಂದ ಜೂನ್ 6 ರವರೆಗೆ ಒಂದು ತಿಂಗಳ ಕಾಲ ಗುರು ಅಸ್ತಂಗತ್ವ ಹಂತದಲ್ಲಿರುತ್ತಾನೆ. ಆದ್ದರಿಂದ, ಶುಭ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಿಲ್ಲ. ಅಲ್ಲದೆ ಜೂನ್‌ವರೆಗೆ ಶುಕ್ರನು ದಹನದಲ್ಲಿ ಇರುತ್ತಾನೆ. ಜುಲೈನಲ್ಲಿ ಆಷಾಢ ಮುಗಿದ ನಂತರ ಶುಭ ಕಾರ್ಯಗಳನ್ನು ಕೈಗೊಳ್ಳಲು ಶುಭ ಮುಹೂರ್ತಗಳು ಬರಲಿವೆ ಎಂದು ಪುರೋಹಿತರು ಹೇಳುತ್ತಾರೆ. ಈ ಸಮಯವನ್ನು ಮುಧಮ್ ಎಂದು ಕರೆಯಲಾಗುತ್ತದೆ.

23 ವರ್ಷಗಳ ನಂತರ ಈ ಸ್ಥಿತಿ

2000ನೇ ಇಸವಿಯಲ್ಲಿ ಮೇ ಮತ್ತು ಜೂನ್ ತಿಂಗಳು ಮುಹೂರ್ತಗಳು ಇರಲಿಲ್ಲ. ಇದೀಗ 23 ವರ್ಷಗಳ ನಂತರ ಮತ್ತೆ ಅದೇ ಸ್ಥಿತಿ ಎದುರಾಗಿದೆ. ಈಗ ಮತ್ತೆ ಬಂದಿದೆ ಎನ್ನುತ್ತಿದ್ದಾರೆ ಪಂಡಿತರು. ಮದುವೆ ಮುಹೂರ್ತಗಳನ್ನು ನೋಡುವಾಗ ಗುರು ಮತ್ತು ಶುಕ್ರರ ಸ್ಥಾನಗಳನ್ನು ಪರಿಗಣಿಸಬೇಕು . ಶುಕ್ರನು ಸಂತೋಷದ ಸೂಚಕವಾಗಿದೆ ಮತ್ತು ಸಂತೋಷವನ್ನು ಪ್ರತಿನಿಧಿಸುತ್ತದೆ. ಗುರುವು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ನೀಡುತ್ತದೆ. ಆದ್ದರಿಂದ ಯಾವುದೇ ಮದುವೆ ಯಶಸ್ವಿಯಾಗಿ ನಡೆಯಬೇಕು ಎಂದರೆ ಈ ಎರಡು ಗ್ರಹಗಳ ಶುಭ ಸ್ಥಾನಗಳು ಅಗತ್ಯವೆಂದು ಶಾಸ್ತ್ರಗಳು ಹೇಳುತ್ತವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.