ಕನ್ನಡ ಸುದ್ದಿ  /  ಕ್ರಿಕೆಟ್  /  Amir Hussain Lone: ಛಲದಂಕಮಲ್ಲ ಈ 34 ವರ್ಷದ ಕ್ರಿಕೆಟಿಗ; ಸಿದ್ಧವಾಗ್ತಿದೆ ಪ್ಯಾರಾ ತಂಡದ ನಾಯಕನ ಬಯೋಪಿಕ್‌

Amir Hussain Lone: ಛಲದಂಕಮಲ್ಲ ಈ 34 ವರ್ಷದ ಕ್ರಿಕೆಟಿಗ; ಸಿದ್ಧವಾಗ್ತಿದೆ ಪ್ಯಾರಾ ತಂಡದ ನಾಯಕನ ಬಯೋಪಿಕ್‌

Prasanna Kumar P N HT Kannada

Jan 12, 2024 11:57 AM IST

ಅಮೀರ್ ಹುಸೇನ್ ಲೋನ್.

    • Amir Hussain Lone: ತನ್ನ 8ನೇ ವಯಸ್ಸಿನಲ್ಲೇ ಎರಡೂ ಕೈಗಳನ್ನು ಕಳೆದುಕೊಂಡ ಅಮೀರ್ ಹುಸೇನ್ ಲೋನ್ ಎಂಬಾತ ಈಗ ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕನಾಗಿದ್ದಾರೆ.
ಅಮೀರ್ ಹುಸೇನ್ ಲೋನ್.
ಅಮೀರ್ ಹುಸೇನ್ ಲೋನ್.

ಸಾಧನೆಗೆ ನ್ಯೂನ್ಯತೆಗಳು ಅಡ್ಡಿ ಆಗಲಾರದು ಎಂಬುದಕ್ಕೆ ಬಹುದೊಡ್ಡ ಉದಾಹರಣೆ ಇವರೇ ನೋಡಿ. ಪ್ರಸ್ತುತ ಎಲ್ಲಾ ಇದ್ದವರೇ ಏನೂ ಸಾಧನೆ ಮಾಡದೆ ಕೈಕಟ್ಟಿ ಕೂರುವ ಈ ಕಾಲದಲ್ಲಿ ಜಗತ್ತಿಗೆ ಮಾದರಿ ಆಗಿದ್ದಾನೆ. ಅದೆಷ್ಟೋ ಯುವಕರಿಗೆ ಸ್ಫೂರ್ತಿ. ಸಾಧನೆಗೆ ಅಂಗವಿಕಲತೆ ಅಡ್ಡಿ ಮಾಡಲ್ಲ, ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಛಲವೊಂದಿದ್ದರೆ ಸಾಕು ಎನ್ನುವ ಪದಗಳಿಗೆ ಅರ್ಥವಾಗಿದ್ದಾರೆ ಈತ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ತಂಡದ್ದೇ ದರ್ಬಾರ್; ಚಿನ್ನಸ್ವಾಮಿ ಮೈದಾನದಲ್ಲೂ ಅವರದ್ದೇ ಕಾರುಬಾರು

ಆರ್​ಸಿಬಿ vs ಸಿಎಸ್​ಕೆ ಪಂದ್ಯಕ್ಕೆ ವರುಣನ ಕರಿನೆರಳು; ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕಿದೆ ಪ್ಲೇಆಫ್​ ಚಾನ್ಸ್?

ಐರ್ಲೆಂಡ್‌ ವಿರುದ್ಧ ವಿಶೇಷ ಮೈಲಿಗಲ್ಲು; ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದು ಅಗ್ರಸ್ಥಾನಕ್ಕೇರಿದ ಬಾಬರ್ ಅಜಮ್

ಆರ್‌ಸಿಬಿ vs ಸಿಎಸ್‌ಕೆ ಕಾಳಗದಲ್ಲಿ ಯಾರು ಗೆದ್ದರೆ ಏನಾಗುತ್ತೆ; ಗೆಲ್ಲುವ ಸಾಧ್ಯತೆ ಯಾವ ತಂಡಕ್ಕೆ ಹೆಚ್ಚು?

ಆತನ ಹೆಸರು ಅಮೀರ್​ ಹುಸೇನ್ ಲೋನ್ (Amir Hussain Lone). ಕಾಶ್ಮೀರದ ಪ್ರಸಿದ್ಧ ದಿವ್ಯಾಂಗ ಕ್ರಿಕೆಟಿಗನ ರೋಚಕ ಕಥೆ ಇದು. ಇಲ್ಲಿನ ವಾಘಮಾ ಗ್ರಾಮದ 34 ವರ್ಷದ ಅಮೀರ್ ಹುಸೇನ್ ಲೋನ್, ಕ್ರಿಕೆಟ್ ಜಗತ್ತಿನ ನೂತನ ಸೆನ್​ಸೇಷನ್ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟ್​ ತಂಡಕ್ಕೆ ನಾಯಕತ್ವದ ಹೊಣೆಗಾರಿಕೆಯನ್ನು ಅಮೀರ್​ಗೆ ನೀಡಲಾಗಿದೆ. ಮಹತ್ವದ ಜವಾಬ್ದಾರಿ ಅಲಂಕರಿಸುವ ಮೂಲಕ ಮಹೋನ್ನತ ಸಾಧನೆ ಮಾಡಿದ್ದಾರೆ.

ಕೈ ಕಳೆದುಕೊಂಡಿದ್ದೇಗೆ ಅಮೀರ್​?

ತನ್ನ 8ನೇ ವಯಸ್ಸಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದ ಅಮೀರ್, ಛಲ ಬಿಡದೆ ಕ್ರಿಕೆಟಿಗನಾಗಿದ್ದಾರೆ. ತಂದೆಯ ಗರಗಸದ ಕಾರ್ಖಾನೆ ಅಪಘಾತದಲ್ಲಿ 2 ತೋಳುಗಳನ್ನು ಕಳೆದುಕೊಂಡಿದ್ದರು. ಆದರೂ ಎದೆಗುಂದದೆ ಯಾರಿಂದಲೂ ಆಗದೇ ಇರುವುದನ್ನು ಇವರು ಸಾಧಿಸಿ ತೋರಿಸಿದ್ದಾರೆ. ಕೈ ಕಳೆದುಕೊಂಡಾಗ ಅವರ ಜೀವನವು ಛಿದ್ರವಾಗಿತ್ತು. ಆದರೆ, ಅವರು ಭರವಸೆ ಕಳೆದುಕೊಳ್ಳಲಿಲ್ಲ.

ಪಾದಗಳಿಂದ ಬೌಲಿಂಗ್​, ಕುತ್ತಿಗೆಯಿಂದ ಬ್ಯಾಟಿಂಗ್​

ಎರಡೂ ಕೈಗಳು ಇಲ್ಲದಿದ್ದರೂ ಹೇಗೆ ಬೌಲಿಂಗ್, ಬ್ಯಾಟಿಂಗ್ ನಡೆಸಲು ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಕೈಗಳು ಇಲ್ಲದಿದ್ದರೂ 2013ರಲ್ಲಿ ಅಮೀರ್ ಪಾದಗಳಿಂದಲೇ ಬೌಲಿಂಗ್​ ಮಾಡುವುದನ್ನು ಕಲಿತರು. ಕುತ್ತಿಗೆ ಮತ್ತು ಭುಜದ ನಡುವೆ ಬ್ಯಾಟ್ ಹಿಡಿದುಕೊಂಡು ಬ್ಯಾಟಿಂಗ್ ಮಾಡುವ ಅವರ ಆಟ ಇತರ ಕ್ರಿಕೆಟಿಗರಿಂದ ಭಿನ್ನವಾಗಿದೆ. ಮತ್ತು ಅಷ್ಟೇ ರೋಚಕವಾಗಿದೆ ಕೂಡ.

ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಆಶಿಶ್ ನೆಹ್ರಾ ಬ್ಯಾಟರ್ ಅನ್ನು ಶ್ಲಾಘಿಸಿದ್ದಾರೆ. ಅಮೀರ್​ ಅವರನ್ನು ನೆಹ್ರಾ ಅವರು ವಾಂಖೆಡೆಯಲ್ಲಿ ಟಿ20 ವಿಶ್ವಕಪ್ 2016 ಸೆಮಿಫೈನಲ್ ವೀಕ್ಷಿಸಲು ಆಹ್ವಾನಿಸಿದರು. 2013ರಿಂದ, ಅಮೀರ್ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದಾರೆ. ಅವರ ಸಾಮರ್ಥ್ಯವನ್ನು ನೋಡಿದ ಆತನ ಶಿಕ್ಷಕರು ಮೊದಲು ಕ್ರೀಡೆಗೆ ಪರಿಚಯಿಸಿದರು. ಶಾರ್ಜಾದಲ್ಲಿ ನಡೆದ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು.

ಅವರ ಅಸಾಧಾರಣ ಪ್ರಯಾಣವನ್ನು ಮುಂಬೈ ಮೂಲದ ಚಲನಚಿತ್ರ ನಿರ್ಮಾಣ ಸಂಸ್ಥೆ ಪಿಕಲ್ ಎಂಟರ್‌ಟೈನ್‌ಮೆಂಟ್ ತೆರೆ ಮೇಲೆ ತರಲು ನಿರ್ಧರಿಸಿದೆ. ಅಮೀರ್ ಅವರ ಜೀವನಚರಿತ್ರೆಯ ನಿರ್ಮಾಣವನ್ನು ಘೋಷಿಸಿದೆ. ಅಮೀರ್ ಎಂಬ ಶೀರ್ಷಿಕೆಯ ಈ ಬಯೋಪಿಕ್​ಗೆ ಬಿಗ್ ಬ್ಯಾಟ್ ಫಿಲ್ಮ್ಸ್​ಗೆ ಬಂಡವಾಳ ಹೂಡುತ್ತಿದ್ದು, ಮಹೇಶ್ ವಿ ಭಟ್ ನಿರ್ದೇಶಿಸುತ್ತಿದ್ದಾರೆ. ಈ ಬಯೋಪಿಕ್​ನಲ್ಲಿ ಅಮೀರ್ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಬಾಲಿವುಡ್ ನಟ ವಿಕ್ಕಿ ಕೌಶಲ್ ಹೇಳಿದ್ದರು.

IPL, 2024

Live

RR

144/9

20.0 Overs

VS

PBKS

36/3

(4.5)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ