ಕನ್ನಡ ಸುದ್ದಿ  /  ಕ್ರಿಕೆಟ್  /  ಈತನಿಗಿಂತ ಬೆಸ್ಟ್​ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿಲ್ಲ; 32 ವರ್ಷದ ಆಟಗಾರನನ್ನು ಕೊಂಡಾಡಿದ ಕೆವಿನ್ ಪೀಟರ್ಸನ್, ಆದರೆ ಸೂರ್ಯ ಅಲ್ಲ!

ಈತನಿಗಿಂತ ಬೆಸ್ಟ್​ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿಲ್ಲ; 32 ವರ್ಷದ ಆಟಗಾರನನ್ನು ಕೊಂಡಾಡಿದ ಕೆವಿನ್ ಪೀಟರ್ಸನ್, ಆದರೆ ಸೂರ್ಯ ಅಲ್ಲ!

Prasanna Kumar P N HT Kannada

Feb 09, 2024 09:07 AM IST

ಈತನಿಗಿಂತ ಬೆಸ್ಟ್​ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿಲ್ಲ; 32 ವರ್ಷದ ಆಟಗಾರನನ್ನು ಕೊಂಡಾಡಿದ ಕೆವಿನ್ ಪೀಟರ್ಸನ್

    • Kevin Pietersen : ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಅವರು ಟಿ20 ಕ್ರಿಕೆಟ್​​ನಲ್ಲಿ ಅತ್ಯುತ್ತಮ ಬ್ಯಾಟರ್ ಯಾರೆಂಬುದನ್ನು ತಿಳಿಸಿದ್ದಾರೆ. ಆದರೆ, ಸೂರ್ಯಕುಮಾರ್​ ಅಲ್ಲ.
ಈತನಿಗಿಂತ ಬೆಸ್ಟ್​ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿಲ್ಲ; 32 ವರ್ಷದ ಆಟಗಾರನನ್ನು ಕೊಂಡಾಡಿದ ಕೆವಿನ್ ಪೀಟರ್ಸನ್
ಈತನಿಗಿಂತ ಬೆಸ್ಟ್​ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿಲ್ಲ; 32 ವರ್ಷದ ಆಟಗಾರನನ್ನು ಕೊಂಡಾಡಿದ ಕೆವಿನ್ ಪೀಟರ್ಸನ್

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟರ್ ಕೆವಿನ್ ಪೀಟರ್ಸನ್ (Kevin Pietersen) ಅವರು 32 ವರ್ಷದ ಸ್ಟಾರ್ ಕ್ರಿಕೆಟಿಗನಿಗೆ ಪ್ರಶಂಸೆಯ ಸುರಿಮಳೆಗೈದಿದ್ದು, ಆತನನ್ನು ವಿಶ್ವದ ಅತ್ಯುತ್ತಮ ಟಿ20 ಬ್ಯಾಟರ್ ಎಂದು ಕರೆದಿದ್ದಾರೆ. ಆದರೆ ಆತ ಸೂರ್ಯಕುಮಾರ್​ ಯಾದವ್ (Suryakumar Yadav) ಅಲ್ಲ. ಪೀಟರ್ಸನ್ ಪ್ರಕಾರ, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್‌ (Heinrich Klassen) ಅವರಿಗಿಂತ ಉತ್ತಮ ಬ್ಯಾಟರ್ ಟಿ20 ಕ್ರಿಕೆಟ್‌ನಲ್ಲಿ ಇಲ್ಲ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ ತೊರೆದು ತವರಿಗೆ ಮರಳಿದ ವಿಲ್ ಜ್ಯಾಕ್ಸ್, ಬಟ್ಲರ್; ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ-ರಾಜಸ್ಥಾನಕ್ಕೆ ಭಾರಿ ಹೊಡೆತ

ಡೆಲ್ಲಿ ಕ್ಯಾಪಿಟಲ್ಸ್‌ vs ಲಕ್ನೋ ಸೂಪರ್‌ ಜೈಂಟ್ಸ್‌ ಮಾಡು ಇಲ್ಲವೇ ಮಡಿ ಪಂದ್ಯ: ಸಂಭಾವ್ಯ ತಂಡ, ಡೆಲ್ಲಿ ಪಿಚ್ ಹಾಗೂ ಹವಾಮಾನ ವರದಿ

ವಿಶ್ವಕಪ್ ಬಳಿಕ ಟಿ20 ಸ್ವರೂಪಕ್ಕೆ ರೋಹಿತ್ ಶರ್ಮಾ ವಿದಾಯ; ಹಾರ್ದಿಕ್ ಆಯ್ಕೆಗೆ ಅಚ್ಚರಿಯ ಕಾರಣ ತಿಳಿಸಿದ ವರದಿ

ವಿರಾಟ್‌ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ; ಅವರ ಬಗ್ಗೆ ಗೌರವ ಇದೆ ಎಂದ ಮೊಹಮ್ಮದ್‌ ರಿಜ್ವಾನ್‌

ಕ್ಲಾಸೆನ್ ಬೆಂಕಿ ಬಿರುಗಾಳಿ ಆಟ

ಸೌತ್ ಆಫ್ರಿಕಾದ ಟಿ20 ಲೀಗ್​​ನ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಜೋಬರ್ಗ್​ ಸೂಪರ್ ಕಿಂಗ್ಸ್​ ವಿರುದ್ಧ ಗುರುವಾರ (ಫೆಬ್ರವರಿ 8) ಡರ್ಬನ್ ಸೂಪರ್ ಜೈಂಟ್ಸ್‌ ತಂಡದ 32 ವರ್ಷದ ಕ್ಲಾಸೆನ್, ಬೆಂಕಿ ಬಿರುಗಾಳಿ ಆಟವಾಡಿದರು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಬಲಗೈ ಬ್ಯಾಟರ್ ಕೇವಲ 30 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್ ಸಹಿತ ಭರ್ಜರಿ 74 ರನ್ ಗಳಿಸುವ ಮೂಲಕ ಎದುರಾಳಿಯನ್ನು ರೋಸ್ಟ್ ಮಾಡಿದರು. ಆ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟು ಫೈನಲ್​ಗೇರಿಸಿದರು.

ಸೂಪರ್ ಕಿಂಗ್ಸ್​ 211 ರನ್

ಜೋಬರ್ಗ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 52ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಡರ್ಬನ್​ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಕ್ಲಾಸೆನ್, ವಿಯಾನ್ ಮುಲ್ಡರ್ ಸೇರಿ 101 ರನ್​ ಪೇರಿಸಿದರು. ಇದರಿಂದಾಗಿ ಡರ್ಬನ್ ತಂಡ 6 ವಿಕೆಟ್ ನಷ್ಟಕ್ಕೆ 211 ರನ್​​ಗಳ ಬೃಹತ್ ಮೊತ್ತ ಪೇರಿಸಿತು. ಮುಲ್ಡರ್ ಸಹ ಕೇವಲ 23 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್​​​ ಸಹಿತ ಅಜೇಯ 50 ರನ್ ಗಳಿಸಿ ನೆರವಾದರು.

142 ರನ್​ಗಳಿಗೆ ಆಲೌಟ್​

ಈ ಗುರಿ ಬೆನ್ನಟ್ಟಿದ ಸೂಪರ್ ಕಿಂಗ್ಸ್​​ 17.4 ಓವರ್​​ಗಳಲ್ಲಿ 142 ರನ್​ಗಳಿಗೆ ಆಲೌಟ್​ ಆಯಿತು. ನಾಯಕ ಫಾಫ್ ಡು ಪ್ಲೆಸಿಸ್, ರೀಜಾ ಹೆಂಡ್ರಿಕ್ಸ್, ಮೊಯಿನ್ ಅಲಿ ಸೇರಿದಂತೆ ಘಟಾನುಘಟಿ ಆಟಗಾರರು ನಿರಾಸೆ ಮೂಡಿಸಿದರು. ಜೂನಿಯರ್ ಡಾಲಾ 4 ವಿಕೆಟ್ ಪಡೆದು ಮಿಂಚಿದರು. ನವೀನ್ ಉಲ್ ಹಕ್ ಮತ್ತು ಡ್ವೇನ್ ಪ್ರಿಟೊರಿಯಸ್ ತಲಾ 2 ವಿಕೆಟ್ ಕಬಳಿಸಿದರು. ಆ ಮೂಲಕ ಫೈನಲ್​​​ಗೇರುವಲ್ಲಿ ವಿಫಲವಾಯಿತು.

ಪೀಟರ್ಸನ್ ಪೋಸ್ಟ್​ನಲ್ಲಿ ಏನಿದೆ?

ಮಾಡು ಇಲ್ಲವೇ ಮಡಿ ಆಟದಲ್ಲಿ ಕ್ಲಾಸೆನ್‌ ಅವರ ವೀರಾವೇಶದ ಆಟಕ್ಕೆ ಪ್ರಭಾವಿತನಾದ 43 ವರ್ಷದ ಪೀಟರ್ಸನ್, ತನ್ನ X (ಹಿಂದೆ ಟ್ವಿಟರ್) ಖಾತೆಯಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗನ ಕುರಿತು ಟ್ವೀಟ್ ಪೋಸ್ಟ್ ಮಾಡಿದರು. ವಿಶ್ವದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಕ್ಲಾಸೆನ್​ಗಿಂತ ಉತ್ತಮ ಬ್ಯಾಟರ್ ಇಲ್ಲ! ಕ್ಲಾಸೆನ್ ಬಾಸ್! ಎಂದು ಇಂಗ್ಲೆಂಡ್‌ನ 2010ರ ಟಿ20 ವಿಶ್ವಕಪ್ ತಂಡದ ಸದಸ್ಯ ಹೀಗೆ ಬರೆದಿದ್ದಾರೆ.

ಪೀಟರ್ಸನ್​ಗೆ ಫ್ಯಾನ್ಸ್ ತಿರುಗೇಟು

ಪೀಟರ್ಸನ್ ಮಾಡಿದ ಟ್ವೀಟ್ ತಕ್ಷಣವೇ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಸೂರ್ಯಕುಮಾರ್ ಯಾದವ್ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ವಿಶ್ವದ ಬೆಸ್ಟ್ ಬ್ಯಾಟರ್ ಸೂರ್ಯ ಎಂದು ಪೀಟರ್ಸನ್​ಗೆ ಪ್ರತಿಯಾಗಿ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ. ಸದ್ಯ ಟಿ20 ಕ್ರಿಕೆಟ್​​ನಲ್ಲಿ ವಿಶ್ವದ ನಂಬರ್​ 1 ಬ್ಯಾಟರ್​ ಆಗಿದ್ದಾರೆ. ಒಂದು ವರ್ಷಕ್ಕೂ ಅಧಿಕ ಕಾಲ ಅಗ್ರಸ್ಥಾನದಲ್ಲಿರುವ ಸೂರ್ಯ, 2023ರಲ್ಲಿ ಐಸಿಸಿ ಟಿ20ಐ ವರ್ಷದ ಕ್ರಿಕೆಟಿಗ ಪ್ರಶಸ್ತಿ ಗೆದ್ದಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ