ಕನ್ನಡ ಸುದ್ದಿ  /  ಕ್ರಿಕೆಟ್  /  ಹಾರ್ದಿಕ್ ಪಾಂಡ್ಯ ಅಲ್ಲ! ಟಿ20 ವಿಶ್ವಕಪ್​​ ಟೂರ್ನಿಗೆ ಭಾರತದ ನಾಯಕ ಯಾರೆಂದು ಖಚಿತಪಡಿಸಿದ ಜಯ್ ಶಾ

ಹಾರ್ದಿಕ್ ಪಾಂಡ್ಯ ಅಲ್ಲ! ಟಿ20 ವಿಶ್ವಕಪ್​​ ಟೂರ್ನಿಗೆ ಭಾರತದ ನಾಯಕ ಯಾರೆಂದು ಖಚಿತಪಡಿಸಿದ ಜಯ್ ಶಾ

Prasanna Kumar P N HT Kannada

Feb 15, 2024 11:56 AM IST

ಟಿ20 ವಿಶ್ವಕಪ್​​ ಟೂರ್ನಿಗೆ ಭಾರತದ ನಾಯಕ ಯಾರೆಂದು ಖಚಿತಪಡಿಸಿದ ಜಯ್ ಶಾ

    • Jay Shah : ಜೂನ್ 30 ರಂದು ಬಾರ್ಬಡೋಸ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಟಿ20 ವಿಶ್ವಕಪ್​​ ಟೂರ್ನಿಗೆ ಭಾರತದ ನಾಯಕ ಯಾರೆಂದು ಖಚಿತಪಡಿಸಿದ ಜಯ್ ಶಾ
ಟಿ20 ವಿಶ್ವಕಪ್​​ ಟೂರ್ನಿಗೆ ಭಾರತದ ನಾಯಕ ಯಾರೆಂದು ಖಚಿತಪಡಿಸಿದ ಜಯ್ ಶಾ

2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup 2024) ಟ್ರೋಫಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಟೀಮ್ ಇಂಡಿಯಾ (Team India) ಕೂಡ ಒಂದು. 2013 ರಿಂದ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ಮೆನ್ ಇನ್ ಬ್ಲೂ, ಇತ್ತೀಚೆಗೆ 2023ರಲ್ಲಿ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಅದೇ ವರ್ಷ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಹೃದಯವಿದ್ರಾವಕ ಸೋಲನುಭವಿಸಿತು. 4 ತಿಂಗಳಿರುವ ಮೆಗಾ ಟೂರ್ನಿಗೂ ಮುನ್ನ ಏರ್ಪಟ್ಟಿದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ವಿರಾಟ್‌ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ; ಅವರ ಬಗ್ಗೆ ಗೌರವ ಇದೆ ಎಂದ ಮೊಹಮ್ಮದ್‌ ರಿಜ್ವಾನ್‌

Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

ಕೆಕೆಆರ್​ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದರಷ್ಟೇ ಉಳಿಗಾಲ; ಸಂಭಾವ್ಯ ತಂಡ, ಹವಾಮಾನ ವರದಿ, ಪಿಚ್ ರಿಪೋರ್ಟ್ ವಿವರ

ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

ಈ ಹಿಂದೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ತಂಡವನ್ನು ಮುನ್ನಡೆಸಲಿದ್ದಾರೆ ಎಂದು ವರದಿಯಾಗಿತ್ತು. ಜೊತೆಗೆ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಆಡುವುದರ ಬಗ್ಗೆಯೂ ಅನುಮಾನ ಎದುರಾಗಿತ್ತು. ಆದರೆ ಅಫ್ಘಾನಿಸ್ತಾನ ಟಿ20 ಸರಣಿಗೆ ಇಬ್ಬರೂ ಮರಳಿದ ಬೆನ್ನಲ್ಲೇ ವಿಶ್ವಕಪ್ ಟೂರ್ನಿ ಆಡುವುದು ಬಹುತೇಕ ಖಚಿತವಾಯಿತು. ಇದರ ನಡುವೆಯೂ ನಾಯಕತ್ವದ ಬಗ್ಗೆ ಗೊಂದಲ ಹಾಗೆಯೇ ಇತ್ತು.

ಜಯ್ ಶಾ ಹೇಳಿದ್ದೇನು?

ಈಗ ಗೊಂದಲಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತೆರೆ ಎಳೆದಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್​ ಶರ್ಮಾ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನಾದಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಯ್​ ಶಾ, ರೋಹಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಖಚಿತಪಡಿಸಿದರು.

ಅಹಮದಾಬಾದ್‌ನಲ್ಲಿ ಸೋತ 2023ರ ಏಕದಿನ ವಿಶ್ವಕಪ್ ಫೈನಲ್‌ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಜೂನ್ 30 ರಂದು ಬಾರ್ಬಡೋಸ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಬಿಸಿಸಿಐ ಕಾರ್ಯದರ್ಶಿ ಹೇಳಿದ್ದಾರೆ. ಆ ಮೂಲಕ ಕ್ರಿಕೆಟ್​ ವಲಯದಲ್ಲಿ ಹಾರ್ದಿಕ್ ನಾಯಕನಾಗುತ್ತಾರೆ ಎಂಬ ಗೊಂದಲಕ್ಕೆ ಫುಲ್​ಸ್ಟಾಪ್ ಇಟ್ಟರು.

ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ

2022ರಲ್ಲಿ ನಾಯಕತ್ವದ ಗುಂಪಿನ ಭಾಗವಾದ ಹಾರ್ದಿಕ್, 2022ರ ಟಿ20 ವಿಶ್ವಕಪ್ ನಂತರ ನಿಯಮಿತವಾಗಿ ಚುಟುಕು ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 2023ರಲ್ಲಿ ಒಂದೇ ಒಂದು ಟಿ20 ಪಂದ್ಯವನ್ನಾಡದ ರೋಹಿತ್, ಏಕದಿನ, ಟೆಸ್ಟ್​ ಕ್ರಿಕೆಟ್​​ನಲ್ಲಿ ಬ್ಯುಸಿ ಆಗಿದ್ದರು. ಹಿಟ್​ಮ್ಯಾನ್ ಅಲಭ್ಯತೆಯಲ್ಲಿ ಹಾರ್ದಿಕ್ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಅವರೇ ವಿಶ್ವಕಪ್​ನಲ್ಲೂ ಭಾರತವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು.

ಹಾರ್ದಿಕ್ ನಾಯಕತ್ವದಲ್ಲಿ ಭಾರತ ಅತ್ಯಂತ ಯಶಸ್ಸು ಕಂಡಿತ್ತು. ಹೀಗಾಗಿ ಪೂರ್ಣ ಪ್ರಮಾಣದ ಟಿ20 ಕ್ಯಾಪ್ಟನ್ ಆಗಲು ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ ಆಯ್ಕೆಗಾರರು ಈ ಕ್ರಮವನ್ನು ವಿರೋಧಿಸಿದ್ದಾರೆ. ರೋಹಿತ್‌ಗೆ ಉಪನಾಯಕರಾಗಿದ್ದ ಹಾರ್ದಿಕ್, ಟಿ20 ವಿಶ್ವಕಪ್​ನಲ್ಲೂ ವೈಸ್​ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಲಿದ್ದಾರೆ.

2022ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ತನ್ನ ಕೊನೆಯ ಚುಟುಕು ಪಂದ್ಯವನ್ನಾಡಿದ್ದ ರೋಹಿತ್​ ಶರ್ಮಾ, ಈ ವರ್ಷದ ಆರಂಭದಲ್ಲಿ ಜರುಗಿದ ಅಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ಆಯ್ಕೆಯಾದರು. ಆ ಮೂಲಕ 14 ತಿಂಗಳ ಬಳಿಕ ಶಾರ್ಟೆಸ್ಟ್ ಫಾರ್ಮೆಟ್​​ಗೆ ಕಂಬ್ಯಾಕ್ ಮಾಡಿದರು. ರೋಹಿತ್ ಕಡಿಮೆ ಸ್ವರೂಪದಲ್ಲಿ ಮುಂದುವರಿಸುತ್ತಾರೆ. ತಂಡವನ್ನು ಮುನ್ನಡೆಸುತ್ತಾರೆ ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಈ ಹಿಂದೆ ಖಚಿತಪಡಿಸಿದ್ದರು.

ಜೂನ್ 5ರಂದು ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದಾರೆ. ಭಾರತ ಕ್ರಮವಾಗಿ ಜೂನ್ 12 ಮತ್ತು 15ರಂದು ಯುಎಸ್ಎ, ಕೆನಡಾ ತಂಡಗಳನ್ನು ಎದುರಿಸಲಿದೆ. ಟೂರ್ನಿ ಯುಎಸ್ಎ-ಕೆರಿಬಿಯನ್ ನಾಡಲ್ಲಿ ನಡೆಯಲಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ