logo
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

Prasanna Kumar P N HT Kannada

May 13, 2024 06:00 AM IST

google News

ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

    • RCB Qualification scenario : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ 47 ರನ್​ಗಳ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ಏನು ಮಾಡಬೇಕು? ಇಲ್ಲಿದೆ ವಿವರ.
ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!
ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

17ನೇ ಆವೃತ್ತಿಯ ಐಪಿಎಲ್​ (IPL 2024) ಕೊನೆಯ ಹಂತ ತಲುಪಿದ್ದು, ದಿನದಿಂದ ದಿನಕ್ಕೆ ಕೌತುಕತೆ ಹೆಚ್ಚಿಸುತ್ತಿದೆ. ಪ್ಲೇಆಫ್​ ಪ್ರವೇಶಿಸಲು ಏಳು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮೇ 12ರಂದು ನಡೆದ ಎರಡು ತಂಡಗಳ ಪೈಕಿ ಒಂದರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK vs RR) ಗೆಲುವು ದಾಖಲಿಸಿದ್ದರೆ, ಮತ್ತೊಂದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ (RCB vs DC) ಗೆಲುವು ಸಾಧಿಸಿತು. ಇದು ಪ್ಲೇಆಫ್ (IPL Playoff) ತೀವ್ರತೆ ಮತ್ತಷ್ಟು ಹೆಚ್ಚಿಸಿತು.

ಕೋಲ್ಕತ್ತಾ ನೈಟ್​ ರೈಡರ್ಸ್ (KKR) ಮೊದಲ ತಂಡವಾಗಿ ಐಪಿಎಲ್ ಪ್ಲೇಆಫ್​ ಪ್ರವೇಶಿಸಿದೆ. ಆದರೆ, ಉಳಿದ 3 ಸ್ಥಾನಗಳು ಇನ್ನೂ ಭರ್ತಿಯಾಗಿಲ್ಲ. ಈ ಸ್ಥಾನಗಳಿಗೆ 7 ತಂಡಗಳು ಪೈಪೋಟಿ ನಡೆಸುತ್ತಿದ್ದರೂ ಎಲ್ಲರ ಕಣ್ಣು ಇರುವುದು ಮಾತ್ರ ಆರ್​ಸಿಬಿ ಮೇಲೆ. ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಇಡೀ ಜಗತ್ತೇ ಪ್ರಾರ್ಥಿಸುತ್ತಿದೆ. ಹಾಗಿದ್ದ ಮೇಲೆ ಡೆಲ್ಲಿ ವಿರುದ್ಧ ನಂತರ ಪ್ಲೇಆಫ್​ ಪ್ರವೇಶಿಸಲು ಆರ್​ಸಿಬಿ ಮುಂದಿರುವ ಮಾರ್ಗವೇನು? ಯಾವ ತಂಡಗಳು ಸೋಲಬೇಕು? ಇಲ್ಲಿದೆ ಸವಿವರ.

ಆರ್​​ಸಿಬಿ ತನ್ನ ಆರಂಭಿಕ 8 ಪಂದ್ಯಗಳಲ್ಲಿ ಗೆದ್ದಿದ್ದೇ ಒಂದು. ಉಳಿದ 7ರಲ್ಲಿ ಘೋರ ಪರಾಭವಗೊಂಡಿತ್ತು. ಆದರೆ, ತದನಂತರ ಸಿಡಿದೆದ್ದ ಬೆಂಗಳೂರು ತಂಡ, 5ಕ್ಕೆ 5 ಗೆಲುವು ಸಾಧಿಸಿ ಪರಾಕ್ರಮ ಮರೆಯುತ್ತಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ರೆಡ್​ ಆರ್ಮಿ, ಈಗ ಹಂತ ಹಂತವಾಗಿ ಮೇಲೇರುತ್ತಾ, 5ನೇ ಸ್ಥಾನಕ್ಕೆ ತಲುಪಿದೆ. 13 ಪಂದ್ಯಗಳಲ್ಲಿ 6 ಗೆಲುವು, 7 ಸೋಲು ಕಂಡು 12 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ನೆಟ್ ರನ್​ ರೇಟ್ +0.387. ಈಗ ಉಳಿದ ಒಂದು ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಎದುರಿಸಲಿದೆ. ಇದು 2 ತಂಡಗಳಿಗೂ ನಿರ್ಣಾಯಕ ಪಂದ್ಯ.

ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸಲು ಹೀಗೆ ಜರುಗಬೇಕು!

ಆರ್​ಸಿಬಿ ತನ್ನ ಮುಂದಿನ ಸಿಎಸ್​ಕೆ ತಂಡವನ್ನು ಸೋಲಿಸಬೇಕು. ದೊಡ್ಡ ಅಂತರದ ಗೆಲುವು ಸಾಧಿಸಿದರೆ ಇನ್ನೂ ಉತ್ತಮ. ಆಗ 14 ಅಂಕ ಪಡೆಯಲಿದೆ. ನೆಟ್​ರನ್​ರೇಟ್ ಸಿಎಸ್​ಕೆಗಿಂತ ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ಚೆನ್ನೈ ಈಗಾಗಲೇ 14 ಅಂಕ ಪಡೆದಿದೆ. ಆದರೆ ಸನ್​ರೈಸರ್ಸ್ ಹೈದರಾಬಾದ್ ಎರಡಲ್ಲೂ (ಪಿಬಿಕೆಎಸ್, ಜಿಟಿ ವಿರುದ್ಧ) ಸೋಲಬೇಕು. ಒಂದು ವೇಳೆ ಎರಡರಲ್ಲೂ ಸೋತರೆ ನೆಟ್​ರನ್​ರೇಟ್​ ಕುಸಿಯಲಿದ್ದು, ಆರ್​ಸಿಬಿ ಮೇಲೇರಲು ದಾರಿ ಮಾಡಿಕೊಡಲಿದೆ.

ಡೆಲ್ಲಿ ತನ್ನ ಮುಂದಿನ ಪಂದ್ಯದಲ್ಲಿ (ಲಕ್ನೋ ವಿರುದ್ಧ) ಸೋಲಬೇಕು. ಅದು ಕೂಡ ಕಡಿಮೆ ಅಂತರದಲ್ಲಿ. ಮತ್ತೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ಉಳಿದ ಎರಡಲ್ಲೂ ಸೋಲಬೇಕು. ಏಕೆಂದರೆ 2ರಲ್ಲೂ ಗೆದ್ದರೆ, 16 ಅಂಕ ಪಡೆದು ಪ್ಲೇಆಫ್​ ಪ್ರವೇಶಿಸಿದರೂ ಅಚ್ಚರಿ ಇಲ್ಲ. ಅಥವಾ ಒಂದು ಸೋಲು, ಒಂದು ಗೆಲುವು (ಕಡಿಮೆ ಅಂತರದ) ಕಾಣಬೇಕು. ಏಕೆಂದರೆ ಡಿಸಿ ಮತ್ತು ಲಕ್ನೋ ತಂಡಗಳಿಗೆ ಹೋಲಿಸಿದರೆ ಆರ್​ಸಿಬಿ ನೆಟ್​ರನ್​ರೇಟ್ ಉತ್ತಮವಾಗಿದೆ. ಇದು ಆರ್​​ಸಿಬಿಗೆ ಲಾಭವಾಗಲಿದೆ.

ಗುಜರಾತ್ ಟೈಟಾನ್ಸ್ ತನ್ನ ಪಂದ್ಯಗಳ ಪೈಕಿ ಕೆಕೆಆರ್​​ ವಿರುದ್ಧ ಸೋಲಬೇಕು. ಮತ್ತು ಮತ್ತೊಂದು ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲ್ಲಬೇಕು. ಮೇಲಿನ ಎಲ್ಲವೂ ಸಾಧ್ಯವಾದರೆ ಆರ್​ಸಿಬಿ ನಾಲ್ಕನೇ ಸ್ಥಾನಕ್ಕಲ್ಲ, ಮೂರನೇ ಸ್ಥಾನಕ್ಕೇರಲಿದೆ. ಕೆಕೆಆರ್​ ಪ್ಲೇಆಫ್ ಪ್ರವೇಶಿಸಿದ್ದರೆ, ರಾಜಸ್ಥಾನ್ ರಾಯಲ್ಸ್ ಬಹುತೇಕ ಸ್ಥಾನ ಖಚಿತಪಡಿಸಿದೆ. ಆದರೆ ಎಸ್​ಆರ್​ಹೆಚ್​, ಸಿಎಸ್​ಕೆ, ಆರ್​ಸಿಬಿ, ಡಿಸಿ, ಲಕ್ನೋ ಮತ್ತು ಜಿಟಿ ತಂಡಗಳ ನಡುವೆ ಉಳಿದ ಎರಡು ಸ್ಥಾನಗಳಿಗೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ. ಯಾವುದೇ ತಂಡದ ಕೊಂಚ ಯಾಮಾರಿದರೂ ರೇಸ್​ನಿಂದ ಹೊರಬೀಳಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ