ಕನ್ನಡ ಸುದ್ದಿ  /  ಕರ್ನಾಟಕ  /  Bidar News: ಲಂಚ ಚೆಕ್‌ನಲ್ಲಿ ಪಡೆಯುವಾಗ ಸಿಕ್ಕಿಬಿದ್ದ ಬೀದರ್‌ ಮುಖ್ಯಶಿಕ್ಷಕ

Bidar News: ಲಂಚ ಚೆಕ್‌ನಲ್ಲಿ ಪಡೆಯುವಾಗ ಸಿಕ್ಕಿಬಿದ್ದ ಬೀದರ್‌ ಮುಖ್ಯಶಿಕ್ಷಕ

Umesha Bhatta P H HT Kannada

Feb 17, 2024 12:00 PM IST

ಬೀದರ್‌ನಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ.

    • lokayukta raid ಬೀದರ್‌ ನಗರದಲ್ಲಿ ನಿವೃತ್ತ ಶಿಕ್ಷಕಿಯಿಂದ ಲಂಚ ಪಡೆಯುವಾಗ ಮುಖ್ಯ ಶಿಕ್ಷಕರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ಧಾರೆ.
ಬೀದರ್‌ನಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ.
ಬೀದರ್‌ನಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ ತುಕಾರಾಂ ಕಾಂಬಳೆ.

ಬೀದರ್: ಮುಖ್ಯ ಶಿಕ್ಷಕರೊಬ್ಬರು ಲಂಚವನ್ನು ಚೆಕ್‌ರೂಪದಲ್ಲಿ ಮತ್ತೊಬ್ಬ ಶಿಕ್ಷಕರಿಂದ ಪಡೆಯುವಾಗ ಸಿಕ್ಕಿಬಿದ್ದಿರುವ ಘಟನೆಯಿದು. ಸ್ವಲ್ಪ ಹಣ ನಗದು ರೂಪದಲ್ಲಿ, ಉಳಿಕೆ ಹಣವನ್ನು ಲಂಚದ ರೂಪದಲ್ಲಿ ನೀಡುವಂತೆ ಬೇಡಿಕೆಯಿಟ್ಟು ಎರಡನ್ನೂ ಸ್ವೀಕರಿಸುವಾಗ ಬೀದರ್‌ ನಗರದಲ್ಲಿ ಲೋಕಾಯುಕ್ತ ಪೊಲೀಸರ ಬಲೆ ಬಿದ್ದಿದ್ದಾರೆ. ಮುಖ್ಯ ಶಿಕ್ಷಕರನ್ನು ಬಂಧಿಸಲಾಗಿದ್ದು, ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 13: ಬೆಂಗಳೂರಿನಲ್ಲಿ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆ; ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಇಂದು ವರುಣನ ಕೃಪೆ ಸಾಧ್ಯತೆ

Chikkamagaluru News: ಚಿಕ್ಕಮಗಳೂರಿನಲ್ಲಿ ಭಾರೀ ಗಾತ್ರದ ಸಲಗ ವಿದ್ಯುತ್‌ ಶಾಕ್‌ ಗೆ ಬಲಿ

Bangalore News: ಅಜಾಗರೂಕತೆಯಿಂದ ಕಾರು ಚಾಲನೆ, ಬೆಂಗಳೂರಲ್ಲಿ ಬಾಲಕ ಸಾವು, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

Hassan Scandal: ತಿರುವು ಪಡೆದುಕೊಳ್ಳುತ್ತಿರುವ ಪ್ರಜ್ವಲ್‌ ರೇವಣ್ಣ ಪ್ರಕರಣ, ಜೆಡಿಎಸ್‌ ಶಾಸಕನ ವಿರುದ್ದವೇ ಆರೋಪ, ಮತ್ತಿಬ್ಬರ ಬಂಧನ

ಬೀದರ್‌ ನಗರದಲ್ಲಿರುವ ಕರ್ನಾಟಕ ಸರ್ಕಾರದ ಅನುದಾನ ಪಡೆಯುತ್ತಿರುವ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮುಖ್ಯಶಿಕ್ಷಕ ತುಕಾರಾಮ ಕಾಂಬಳೆ ಅವರು ಅದೇ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ 2020 ರಲ್ಲಿ ನಿವೃತ್ತಿಯಾಗಿದ್ದ ಶಶಿಕಲಾ ಮನೋಹರ ಧನ್ನೂರಕರ್ ಅವರಿಂದ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು. ಶಶಿಕಲಾ ಧನ್ನೂರಕರ್‌ ಅವರಿಗೆ ನಿವೃತ್ತಿ ಹಿನ್ನೆಲೆಯಲ್ಲಿ ಸರ್ಕಾರದಿಂದ ಪಿಂಚಣಿ ಸಹಿತ ವಿವಿಧ ಸೌಲಭ್ಯಗಳು ಬರಬೇಕಿತ್ತು. ಇದಕ್ಕೆ ಶಾಲೆಯಿಂದಲೇ ಕಡತ ಹೋಗಬೇಕಿತ್ತು. ಈ ಕಡತವನ್ನು ಶಿಕ್ಷಣ ಇಲಾಖೆಗೆ ರವಾನಿಸಲು ಕಾಂಬಳೆ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಇಲ್ಲದೇ ಕೆಲಸ ಮಾಡಿಕೊಡುವಂತೆ ಕೋರಿಕೊಂಡರೂ ಒಪ್ಪಿರಲಿಲ್ಲ. ಕೊನೆಗೆ ಒಂದೂವರೆ ಲಕ್ಷ ರೂ. ನೀಡಲು ಶಶಿಕಲಾ ಒಪ್ಪಿಕೊಂಡ ಮಾತುಕತೆಯಾಗಿತ್ತು.

ತಮ್ಮದೇ ಪಿಂಚಣಿ ಹಾಗೂ ಇತರೆ ಸೇವಾ ಸೌಲಭ್ಯದ ಹಣ ಪಡೆಯಲು ಮುಖ್ಯಶಿಕ್ಷಕರು ಹಣ ಕೇಳುತ್ತಿದ್ದರಿಂದ ರೋಸಿ ಹೋಗಿದ್ದ ಶಶಿಕಲಾ ಲೋಕಾಯುಕ್ತ ಪೋಲಿಸರಿಗೆ ದೂರು ನೀಡಿದ್ದರು. ಇದೇ ವೇಳೇ ಶಾಲೆಗೆ ಆಗಮಿಸಿ ಶಶಿಕಲಾ ಅವರು 50 ಸಾವಿರ ನಗದು ಹಾಗೂ 1 ಲಕ್ಷ ರೂ. ಚೆಕ್ ನೀಡಲು ಮುಂದಾಗಿದ್ದರು. ಇದನ್ನು ಪಡೆಯುವಾಗಲೇ ದಾಳಿ ನಡೆಸಿದ್ದ ಬೀದರ್‌ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಕಾಂಬಳೆ ಅವರನ್ನು ಬಂಧಿಸಿದ್ದರು. ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಕಾಂಬಳೆ ತಿಳಿಸಿದರೂ ಈಗಾಗಲೇ ದೂರು ದಾಖಲಾಗಿ ಮಾಹಿತಿ ಕಲೆ ಹಾಕಿದ್ದ ಲೋಕಾಯುಕ್ತ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.ಎಲ್ಲವನ್ನೂ ವಿಡಿಯೋ ಚಿತ್ರೀಕರಣ ಮಾಡಿಕೊಂಡರು. ಕೊನೆಗೆ ಕಾಂಬಳೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೀದರ್‌ ಲೋಕಾಯುಕ್ತ ಡಿವೈಎಸ್ಪಿ ಎನ್‌.ಎಂ.ಓಲೆಕಾರ್‌ ಮಾರ್ಗದರ್ಶನದಲ್ಲಿ ಬೀದರ್‌ ಇನ್ಸ್‌ಪೆಕ್ಟರ್‌ ಸಂತೋಷ್‌ ರಾಠೋಡ್‌, ಎಸ್‌ಐ ಪ್ರದೀಪ್‌ ಕೊಲ್ಲಾ ಮತ್ತಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ನಿವೃತ್ತಿ ಹೊಂದಿದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಶಶಿಕಲಾ ಮನೋಹರ ಧನ್ನೂರಕರ್ ಸರ್ಕಾರದಿಂದ ಸಿಗಬೇಕಿದ್ದ ಪಿಂಚಣಿ ಹಾಗೂ ಇತರ ಸೌಲಭ್ಯದ ಕಡತ ತಯಾರಿಸಿ ಸಲ್ಲಿಸಲು ಮುಖ್ಯಶಿಕ್ಷಕರನ್ನು ಕೋರಿದ್ದರು. ಈ ವೇಳೆ ಹಣ ಹಾಗೂ ಚೆಕ್‌ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಕಲಬುರಗಿ ಲೋಕಾಯುಕ್ತ ಎಸ್ಪಿ ಆಂಟನಿ ಜಾನ್‌ ಕರ್ನೂರ್‌ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ