ಕನ್ನಡ ಸುದ್ದಿ  /  ಜೀವನಶೈಲಿ  /  Pregnant Women: ಗರ್ಭಿಣಿಯರಲ್ಲಿ ಕಾಡುತ್ತಿದೆ ವಿಟಮಿನ್‌ ಕೊರತೆ, ಇದ್ರಿಂದ ಮಗುವಿಗೂ ತಪ್ಪಿದ್ದಲ್ಲ ಅಪಾಯ; ಈ ಬಗ್ಗೆ ಅಧ್ಯಯನ ಹೇಳೋದಿಷ್ಟು

Pregnant Women: ಗರ್ಭಿಣಿಯರಲ್ಲಿ ಕಾಡುತ್ತಿದೆ ವಿಟಮಿನ್‌ ಕೊರತೆ, ಇದ್ರಿಂದ ಮಗುವಿಗೂ ತಪ್ಪಿದ್ದಲ್ಲ ಅಪಾಯ; ಈ ಬಗ್ಗೆ ಅಧ್ಯಯನ ಹೇಳೋದಿಷ್ಟು

Reshma HT Kannada

Jan 06, 2024 06:15 AM IST

ಸಾಂಕೇತಿಕ ಚಿತ್ರ

    • ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಗರ್ಭಿಣಿ ಮಹಿಳೆಯರಲ್ಲಿ ಜೀವಸತ್ವದ ಕೊರತೆ ಕಾಡುತ್ತಿದೆ ಎಂಬ ಅಂಶವೊಂದು ಹೊರಬಿದ್ದಿದೆ. ಗರ್ಭಧಾರಣೆಗೆ ಪ್ರಯತ್ನಿಸುವ ಸಂದರ್ಭ ಹಾಗೂ ಗರ್ಭ ಧರಿಸಿದ ನಂತರ ವಿಟಮಿನ್‌ ಹಾಗೂ ಮಿನರಲ್ಸ್‌ಗಳ ಪೂರೈಕೆ ಪೂರಕಗಳನ್ನು ಸೇವಿಸದೇ ಇರುವುದು ಅದಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಮಗುವಿಗೂ ಅಪಾಯ ಎದುರಾಗುತ್ತಿದೆ.  
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮನುಷ್ಯನ ದೇಹ ಸುಸೂತ್ರವಾಗಿ ಕಾರ್ಯನಿರ್ವಹಿಸಲು ವಿಟಮಿನ್‌ ಹಾಗೂ ಮಿನರಲ್ಸ್‌ಗಳು ಬಹಳ ಮುಖ್ಯ. ಉದಾಹರಣೆಗೆ ಹೇಳಬೇಕು ಅಂದ್ರೆ ವಿಟಮಿನ್‌ ಬಿ ದೇಶದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅಂಗಾಂಶಗಳು ಹಾಗೂ ನರಗಳ ಆರೋಗ್ಯ ಸುಧಾರಣೆಗೂ ನೆರವಾಗುತ್ತದೆ. ಅದರಲ್ಲೂ ಹೆಣ್ಣು ಗರ್ಭವತಿಯಾದಾಗ ಎಲ್ಲಾ ಬಗೆಯ ವಿಟಮಿನ್‌ಗಳನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ಫೋಲಿಕ್‌ ಆಮ್ಲ, ವಿಟಮಿನ್‌ ಬಿ9 ನಂತಹ ವಿಟಮಿನ್‌ ಪ್ರಮಾಣ ಕಡಿಮೆಯಾದರೆ ಗರ್ಭಣಿ ಹಾಗೂ ಹುಟ್ಟಲಿರುವ ಮಗು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಟ್ರೆಂಡಿಂಗ್​ ಸುದ್ದಿ

Moringa Water: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರು ಕುಡಿಯಿರಿ; ಈ ಆರೋಗ್ಯ ಪ್ರಯೋಜನ ಪಡೆಯಿರಿ

ವೈರಲ್‌ ಆಯ್ತು ಪ್ರೇತಕ್ಕೆ ಮದುವೆ ಮಾಡಿಸಲು ವರ ಬೇಕಾಗಿದೆ ಜಾಹೀರಾತು, ಏನಿದು ಪ್ರೇತ ಮದುವೆ?; ಪ್ರತಿಭಾ ಕುಡ್ತಡ್ಕ ಬರಹ

Garlic Rice: ಅನ್ನ ಮಿಕ್ಕಿದೆ ಅಂತ ವೇಸ್ಟ್‌ ಮಾಡ್ಬೇಡಿ, ಈ ರೀತಿ ಗಾರ್ಲಿಕ್‌ ರೈಸ್‌ ಮಾಡಿಕೊಡಿ, ಎಲ್ರೂ ಇಷ್ಟಪಟ್ಟು ತಿಂತಾರೆ

Parenting Tips: ಮಕ್ಕಳ ಮಾನಸಿಕ ಆರೋಗ್ಯ ವೃದ್ಧಿಗೆ ಸ್ಕ್ರೀನ್‌ಟೈಮ್‌ ವಿಚಾರದಲ್ಲಿ ಪೋಷಕರು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ನಮ್ಮ ದೇಹವು ಈ ಸೂಕ್ಷ್ಮ ಪೋಷಕಾಂಶಗಳನ್ನು ಸಣ್ಣ ಮಟ್ಟಿನಲ್ಲಿ ಮಾತ್ರ ಉತ್ಪಾದಿಸುವ ಕಾರಣ, ನಾವು ಆಹಾರಗಳಿಂದ ಅದನ್ನು ಪಡೆಯುವುದು ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಗರ್ಭ ಧರಿಸಿರುವ ಮಹಿಳೆಯರಲ್ಲಿ ಜೀವಸತ್ವಗಳ ಕೊರತೆ ಕಾಣುತ್ತಿದೆ. ಇದು ಗರ್ಭಿಣಿ ಹಾಗೂ ಮಗುವಿನ ಮೇಲೆ ಭಾರಿ ಪರಿಣಾಮ ಉಂಟು ಮಾಡಬಹುದು ಎನ್ನಲಾಗುತ್ತಿದೆ.

ಇತ್ತೀಚೆಗೆ ಯಕೆ, ಸಿಂಗಾಪುರ, ನ್ಯೂಜಿಲೆಂಡ್‌ ದೇಶಗಳಲ್ಲಿ ಅಧ್ಯಯನವೊಂದನ್ನು ನಡೆಸಲಾಗಿತ್ತು. ಆ ಅಧ್ಯಯನದಲ್ಲಿ 18 ರಿಂದ 38 ವರ್ಷ ವಯಸ್ಸಿನ 1,700 ಮಹಿಳೆಯರು ಭಾಗವಹಿಸಿದ್ದರು. ಇವರಲ್ಲಿ ಗರ್ಭಧಾರಣೆಯ ಮೊದಲು, ಗರ್ಭ ಧರಿಸಿದ ಸಮಯ ಹಾಗೂ ನಂತರ ಆರೋಗ್ಯ ಪರೀಕ್ಷೆ ಮಾಡಲಾಗಿತ್ತು.

ಇದನ್ನೂ ಓದಿ: Pregnancy: ಮುಟ್ಟಿನ ಬಳಿಕ ಇಷ್ಟು ದಿನ ಸೇರಿದ್ರೆ ಗರ್ಭಿಣಿಯಾಗೋಲ್ವಂತೆ; ಫ್ಯಾಮಿಲಿ ಪ್ಲ್ಯಾನಿಂಗ್‌ ಮಾಡೋರಿಗೆ ಉಪಯುಕ್ತ ಮಾಹಿತಿ

ಫೋಲಿಕ್‌ ಆಮ್ಲ

ಗರ್ಭಧಾರಣೆ ಮೊದಲು ಹತ್ತರಲ್ಲಿ ಒಂಬತ್ತು ಮಹಿಳೆಯರಲ್ಲಿ ಫೋಲಿಕ್‌ ಆಮ್ಲ, ರಿಬೋಫ್ಲಾಮಿನ್‌, ವಿಟಮಿನ್‌ ಬಿ 12 ಮತ್ತು ವಿಟಮಿನ್‌ ಡಿ ಸೇರಿದಂತೆ ಹಲವು ಜೀವಸತ್ವಗಳ ಪ್ರಮಾಣ ಕಡಿಮೆ ಇದೆ ಎಂಬುದು ಅರಿವಿಗೆ ಬಂದಿದೆ. ಗರ್ಭಾವಸ್ಥೆಯಲ್ಲಿ ತಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ಹುಟ್ಟಲಿರುವ ಮಗುವಿನ ಬೆಳವಣಿಗೆಗೆ ಜೀವಸತ್ವಗಳು ಅವಶ್ಯವಾಗಿರುವ ಕಾರಣ ಈ ಅಂಶಗಳು ಬಹಳ ಮುಖ್ಯ ಎನ್ನಿಸುತ್ತವೆ.

ನಂತರ ಈ ಅಧ್ಯಯನದಲ್ಲಿ ಪಾಲ್ಗೊಂಡ ಮಹಿಳೆಯರನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಒಂದು ಗುಂಪು ಪ್ರಮಾಣಿತ ಗರ್ಭಧಾರಣೆಯ ವಿಟಮಿನ್ ಪೂರಕವನ್ನು ಪಡೆದುಕೊಂಡಿತು, ಇದರಲ್ಲಿ ಫೋಲಿಕ್ ಆಮ್ಲವಿದೆ. ಇನ್ನೊಂದು ಗುಂಪು ವರ್ಧಿತ ಪೂರಕವನ್ನು ಪಡೆದುಕೊಂಡಿತು. ಅದರಲ್ಲಿ ಫೋಲಿಕ್‌ ಆಸಿಡ್‌ ಸೇರಿದಂತೆ ರಿಬೋಫ್ಲಾವಿನ್‌, ವಿಟಮಿನ್‌ ಬಿ6, ಬಿ12 ಹಾಗೂ ವಿಟಮಿನ್‌ ಡಿಯನ್ನು ಸೇರಿಸಲಾಗಿತ್ತು.

ಈ ಎರಡೂ ಗುಂಪಿನ ಮಹಿಳೆಯರು ವರ್ಧಿತ ಪೂರಕಗಳು, ಹಾಗೂ ವರ್ಧತವಲ್ಲ ಪೂರಕಗಳನ್ನು ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವಾಗ ಹಾಗೂ ಗರ್ಭ ಧರಿಸಿದ ನಂತರ ಸೇವಿಸಿದರು. ಮಗುವಿನ ಜನ್ಮ ನೀಡಿದ ನಂತರ ಇದರ ಸೇವನೆಯನ್ನು ನಿಲ್ಲಿಸಿದರು.

ಇದರ ಪ್ರಕಾರ ವರ್ಧಿತ ಪೂರಕವು ರಕ್ತದಲ್ಲಿ ವಿಟಮಿನ್‌ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಿತ್ತು. ಅಲ್ಲದೆ ಇದರಿಂದ ಗರ್ಭಾವಸ್ಥೆಯಲ್ಲಿ ವಿಟಮಿನ್‌ ಕೊರತೆ ಕಾಡುವುದು ಕಡಿಮೆಯಾಗಿರುವನ್ನು ಗಮನಿಸಬಹುದಾಗಿತ್ತು. ಅದರಲ್ಲೂ ವಿಶೇಷವಾಗಿ ರೈಬೋಫ್ಲಾವಿನ್‌, ವಿಟಮಿನ್‌ ಬಿ 6 ಮತ್ತು ವಿಟಮಿನ್‌ ಡಿ ಇವುಗಳ ಕೊರತೆ ಕಾಣಸಲಿಲ್ಲ.

ಗರ್ಭಾವಸ್ಥೆಯಲ್ಲಿ ರಿಬೋಫ್ಲಾವಿನ್ ಮುಖ್ಯ. ಏಕೆಂದರೆ ಇದು ರಕ್ತದ ಕೊರತೆಯನ್ನು ನೀಗಿಸಿ ರಕ್ತ ಹೀನತೆ ಕಾಡದಂತೆ ತಡೆಯುತ್ತದೆ. ಈ ಅಧ್ಯಯನಗಳಲ್ಲಿ ಭಾಗವಹಿಸಿದ ಮಹಿಳೆಯರು ಮಗುವಾಗ ಜನಿಸಿದ ಬಳಿಕವೂ ಮಗುವಿನ ಮೆದುಳಿನ ಬೆಳವಣಿಗೆಗೆ ಪೂರಕವಾದ ವಿಟಮಿನ್‌ ಬಿ12 ಅನ್ನು ಪೂರೈಸಲು ಇದು ಸಹಾಯ ಮಾಡಿತ್ತು.

ಈ ಅಧ್ಯಯನದ ಮೂಲಕ ತಿಳಿದುಕೊಳ್ಳಬೇಕಾದದ್ದು ಏನೆಂದರೆ ಗರ್ಭಾವಸ್ಥೆಯಲ್ಲಿ ಫೋಲಿಕ್‌ ಆಮ್ಲ ಬಹಳ ಮುಖ್ಯ. ಇದು ಅಭಿವೃದ್ಧಿ ಹೊಂದುತ್ತಿರುವ ಮಗುವಿನ ಮೆದುಳು ಹಾಗೂ ಬೆನ್ನುಮೂಳೆಯ ಪ್ರಮುಖ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆ ಕಾರಣಕ್ಕೆ ಗರ್ಭವತಿಯಾಗಲು ಪ್ರಯತ್ನ ಮಾಡುವವರಲ್ಲಿ ಹಾಗೂ ಗರ್ಭ ಧರಿಸಿರುವವರಿಗೆ ಫೋಲಿಕ್‌ ಆಮ್ಲವನ್ನು ಹೆಚ್ಚು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.

ಇದನ್ನೂ ಓದಿ: Pregnancy Skincare: ಗರ್ಭಿಣಿಯರೇ, ಸೌಂದರ್ಯ ಹೆಚ್ಚಿಸಿಕೊಳ್ಳುವ ಭರದಲ್ಲಿ ಅಪಾಯ ತಂದುಕೊಳ್ಳಬೇಡಿ; ಈ ಉತ್ಪನ್ನಗಳ ಬಳಕೆಗೆ ಮಿತಿ ಇರಲಿ

ಹುಟ್ಟುವ ಮಕ್ಕಳಿಗೂ ತೊಂದರೆ

ಗರ್ಭ ಧರಿಸುವ ವಿಷಯದಲ್ಲಿ ಕೆಲವರು ಸರಿಯಾಗಿ ಪ್ಲಾನ್‌ ಮಾಡುವುದಿಲ್ಲ. ಅಲ್ಲದೇ ಗರ್ಭ ಧರಿಸಲು ಪ್ರಯತ್ನಿಸುವಾಗ ಸರಿಯಾದ ಫೋಲಿಕ್‌ ಆಮ್ಲದ ಪೂರಕಗಳನ್ನು ಸೇವಿಸುವುದಿಲ್ಲ. ಆ ಕಾರಣದಿಂದಾಗಿ ಗರ್ಭಿಣಿಯರು ಹಾಗೂ ಹುಟ್ಟುವ ಮಕ್ಕಳಲ್ಲಿ ಸಮಸ್ಯೆಗಳು ಉದ್ಭವಿಸುತ್ತಿದೆ. ಅದಕ್ಕಾಗಿ ಫೋಲಿಕ್‌ ಆಸಿಡ್‌ ಅಂಶ ಇರುವ ಆಹಾರಗಳ ಸೇವನೆಗೆ ಒತ್ತು ನೀಡಬೇಕು.

ಗರ್ಭಾವಸ್ಥೆಯ ಮೊದಲು ಮತ್ತು ಸಮಯದಲ್ಲಿ ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಶಿಶುಗಳ ಅಟೊಪಿಕ್ ಎಸ್ಜಿಮಾದ ತೊಂದರೆ ಎದುರಾಗುವ ಸಾಧ್ಯತೆ ಕಡಿಮೆ ಇದೆ. ಅಲ್ಲದೆ ಮಕ್ಕಳಲ್ಲಿ ಮೂಳೆಯ ಆರೋಗ್ಯವೂ ಸುಧಾರಿಸುತ್ತದೆ.

ಕೆಲವು ಜೀವಸತ್ವಗಳು ಹಣ್ಣು, ತರಕಾರಿ, ಮಾಂಸ, ಡೇರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಸಸ್ಯಹಾರ ಸೇವನೆ ಮಾಡುವವರು ವಿಟಮಿನ್‌ಯುಕ್ತ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

    ಹಂಚಿಕೊಳ್ಳಲು ಲೇಖನಗಳು