ಕನ್ನಡ ಸುದ್ದಿ  /  Astrology  /  Daily Astrological Prediction For May 20th 2023 Today S Horoscope Mnk

Horoscope Today: ಶ್ವಾನಕ್ಕೆ ಆಹಾರ ನೀಡಿ ಕೆಲಸ ಆರಂಭಿಸಿ, ಪಾಲುದಾರಿಕೆ ವ್ಯವಹಾರ ಬೇಡ; ಹೀಗಿದೆ ಇಂದಿನ ದಿನ ಭವಿಷ್ಯ

ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.

ಶ್ವಾನಕ್ಕೆ ಆಹಾರ ನೀಡಿ ಕೆಲಸ ಆರಂಭಿಸಿ, ಪಾಲುದಾರಿಕೆ ವ್ಯವಹಾರ ಬೇಡ; ಹೀಗಿದೆ ಇಂದಿನ ದಿನ ಭವಿಷ್ಯ
ಶ್ವಾನಕ್ಕೆ ಆಹಾರ ನೀಡಿ ಕೆಲಸ ಆರಂಭಿಸಿ, ಪಾಲುದಾರಿಕೆ ವ್ಯವಹಾರ ಬೇಡ; ಹೀಗಿದೆ ಇಂದಿನ ದಿನ ಭವಿಷ್ಯ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ- ಉತ್ತರಾಯಣ -ಗ್ರೀಷ್ಮ ಋತು -ಜ್ಯೇಷ್ಠ ಮಾಸ - ಶುಕ್ಲ ಪಕ್ಷ - ಶನಿವಾರ

ತಿಥಿ: ಪಾಡ್ಯ ರಾ. 08.28ರವರೆಗೆ ಆನಂತರ ಬಿದಿಗೆ ಆರಂಭವಾಗುತ್ತದೆ.

ನಕ್ಷತ್ರ: ಕೃತ್ತಿಕ ನಕ್ಷತ್ರವು ಬೆ.07.22 ರವರೆಗೆ ಇದ್ದು ಆನಂತರ ರೋಹಿಣಿ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ. 05.52

ಸೂರ್ಯಾಸ್ತ: ಸ. 6.39

ರಾಹುಕಾಲ: ಬೆ. 9.08 ರಿಂದ ಬೆ. 10.44

ರಾಶಿ ಫಲಗಳು

ಮೇಷ

ಬೆಳಕನ್ನು ಸೂಸುವ ಪದಾರ್ಥಗಳ ವ್ಯಾಪಾರದಲ್ಲಿ ಲಾಭವಿದೆ. ಕೆಲವರ ಸಹವಾಸದಿಂದ ದೂರಾಗಲು ವಾಸಸ್ಥಳವನ್ನು ಬದಲಿಸುವಿ. ವಿದ್ಯುತ್ ಉಪಕರಣಗಳ ತಯಾರಿಕೆಯ ಕಾರ್ಖಾನೆಯಲ್ಲಿ ಉದ್ಯೋಗ ಲಭಿಸುತ್ತದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಅಚ್ಚರಿಯ ಫಲಿತಾಂಶವನ್ನು ನೀಡುತ್ತದೆ. ಉಷ್ಣದ ತೊಂದರೆ ಕಾಡುತ್ತದೆ. ಸಾಂಪ್ರದಾಯಿಕ ಕಲೆಯನ್ನು ಬಲ್ಲವರಿಗೆ ದೇಶ ವಿದೇಶಗಳಲ್ಲಿ ಮನ್ನಣೆ ಮತ್ತು ಅವಕಾಶಗಳು ದೊರೆಯುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಆಸಕ್ತಿ ಇರುವುದಿಲ್ಲ. ವೃತ್ತಿಜೀವನದಲ್ಲಿ ಹೊಟ್ಟೆಕಿಚ್ಚಿನ ಜನರು ಇರುತ್ತಾರೆ. ತಂದೆಯವರು ನಡೆಸುತ್ತಿದ್ದ ವ್ಯಾಪಾರವನ್ನು ಮುಂದುವರಿಸುವಿರಿ. ನೀಲಿ ಬಟ್ಟೆ ಧರಿಸಿ ಕೆಲಸ ಕಾರ್ಯವನ್ನು ಆರಂಭಿಸಿ.

ವೃಷಭ

ಸಂಬಂಧಿಕರೊಬ್ಬರಿಂದ ಹಣದ ಬೇಡಿಕೆಯ ಸಾಧ್ಯತೆ ಇದೆ. ಸಾಧ್ಯವಾದಷ್ಟೂ ಸ್ವಂತ ಬುದ್ಧಿ ಶಕ್ತಿಯಿಂದ ಏಕಾಂಗಿಯಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಖರ್ಚು ವೆಚ್ಚಕ್ಕೆ ತಕ್ಕಂತಹ ಆದಾಯ ಇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳಿಗೆ ಶುಭಫಲಗಳು ದೊರೆಯುತ್ತವೆ. ಬೇರೆಯವರ ಜೊತೆಗೂಡಿ ಯಾವುದೇ ವ್ಯಾಪಾರ ಆರಂಭಿಸದಿರಿ. ಸಂಗಾತಿಯ ಆದಾಯ ಹೆಚ್ಚಿಸಲು ಸಹಾಯ ಮಾಡುವಿರಿ. ಕಣ್ಣಿನ ತೊಂದರೆ ಇದ್ದಲ್ಲಿ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಕುಟುಂಬದಲ್ಲಿ ಬೇಸರದ ಸನ್ನಿವೇಶ ಇರುತ್ತದೆ. ನೆರೆ ಹೊರೆಯ ಮಕ್ಕಳಿಗೆ ಕುಡಿಯಲು ಆಹಾರ ನೀಡಿದ ನಂತರ ಕೆಲಸವನ್ನು ಆರಂಭಿಸಿ.

ಮಿಥುನ

ಮನೆಯನ್ನು ಅಲಂಕರಿಸುವ ವೈಭೋಗದ ಪದಾರ್ಥಗಳ ವ್ಯಾಪಾರ ಮತ್ತು ಸರಬರಾಜಿನಲ್ಲಿ ಉತ್ತಮ ಆದಾಯ ಇರುತ್ತದೆ. ಯಂತ್ರ ವಾಹನದಿಂದ ತೊಂದರೆ ಉಂಟಾಗಬಹುದು. ಸಂಸಾರದಲ್ಲಿ ಅನ್ಯೋನ್ಯತೆ ಇರುತ್ತದೆ. ಅವಿವಾಹಿತರಿಗೆ ಸಂಬಂಧ ಅಥವಾ ಪರಿಚಯದಲ್ಲಿ ವಿವಾಹ ನಿಶ್ಚಯವಾಗುತ್ತದೆ. ಉದ್ಯೋಗದಲ್ಲಿ ತೊಂದರೆ ಇಲ್ಲದೆ ಹೋದರು ವೃತ್ತಿಯನ್ನು ಬದಲಾಯಿಸುವಿರಿ. ಸೋದರ ಸೋದರಿಯರ ನಡುವೆ ಭಿನಾಭಿಪ್ರಾಯ ಇರುತ್ತದೆ. ತಾಯಿಯವರಿಗೆ ಅನಾರೋಗ್ಯ ಇರುತ್ತದೆ. ಹಣ ಉಳಿಸುವ ಆಲೋಚನೆ ಮಾಡಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ್ಸಕ್ಕಾಗಿ ದೂರದ ಸ್ಥಳಕ್ಕೆ ತೆರಳುವರು. ಖಾಕಿ ಬಟ್ಟೆಯಲ್ಲಿ ತಾಮ್ರದ ನಾಣ್ಯವನ್ನು ಕತ್ತಿನಲ್ಲಿ ಧರಿಸಿರಿ.

ಕಟಕ

ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಒತ್ತಡದ ಸನ್ನಿವೇಶದಲ್ಲಿ ತಪ್ಪು ನಿರ್ದಾರವೊಂದನ್ನು ತೆಗೆದುಕೊಳ್ಳುವಿರಿ. ಉದ್ಯೋಗಸ್ಥರಿಗೆ ಉನ್ನತ ಅಧಿಕಾರ ದೊರೆಯುತ್ತದೆ. ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ಅವಕಾಶವೊಂದು ದೊರೆಯುತ್ತದೆ. ಭೂವಿವಾದವನ್ನು ಎದುರಿಸಬೇಕಾಗುತ್ತದೆ. ತೋಟದ ಮನೆಯನ್ನು ಕೊಳ್ಳುವ ಮನಸ್ಸು ಮಾಡುವಿರಿ. ವಿದ್ಯಾರ್ಥಿಗಳಿಗೆ ಶುಭಫಲಗಳು ದೊರೆಯುತ್ತವೆ. ತರ್ಕ ಶಾಸ್ತ್ರ ಅಭ್ಯಾಸ ಮಾಡುವವರಿಗೆ ಮಹತ್ತರ ಅವಕಾಶ ದೊರೆಯುತ್ತದೆ. ಪಾಲುಗಾರಿಕೆ ವ್ಯಾಪಾರದಲ್ಲಿ ವಿವಾದ ಎದುರಿಸುವಿರಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭವಿದೆ. ಗೋಪೂಜೆ ಮಾಡಿ ದಿನದ ಕೆಲಸ ಆರಂಭಿಸಿ.

ಸಿಂಹ

ಸಮಾಜದ ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ಬೃಹತ್ ಯಂತ್ರಗಳ ತಂತ್ರಜ್ಞಾನವನ್ನು ಬಲ್ಲವರಿಗೆ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಲಭಿಸುತ್ತದೆ. ಸಮಾಜದಲ್ಲಿ ವಿಶೇಷವಾದ ಸ್ಥಾನ ಮಾನವನ್ನು ಗಳಿಸುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕಲಿಕೆಯಲ್ಲಿ ಮುಂದುವರಿಯುತ್ತಾರೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಭೂವ್ಯವಹಾರದಲ್ಲಿ ಲಾಭವಿರುತ್ತದೆ. ಮಹಿಳಾ ಅಧಿಕಾರಿಗಳಿಗೆ ಅತ್ಯುನ್ನತ ಫಲಿತಾಂಶಗಳು ದೊರೆಯುತ್ತವೆ. ದಿನಬಳಕೆಗೆ ಬೇಕಾದ ಎಣ್ಣೆಯ ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸದಿರಿ. ಕೋಪದಿಂದ ವರ್ತಿಸದಿರಿ. ಹಳದಿ ಬಣ್ಣದ ವಸ್ತ್ರವನ್ನು ಧಿರಿಸಿದಲ್ಲಿ ಶುಭಫಲಗಳು ದೊರೆಯುತ್ತವೆ.

ಕನ್ಯಾ

ಆತ್ಮ ವಿಶ್ವಾಸದ ಕೊರತೆ ಇರುತ್ತದೆ. ಹಣಕಾಸಿನ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಆಮದು ರಪ್ತು ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ. ಬೇಸಾಯಕ್ಕೆ ಅಗತ್ಯವಾದ ಗೊಬ್ಬರ ಮುಂತಾದ ಪದಾರ್ಥಗಳ ವ್ಯಾಪಾರದಲ್ಲಿ ಹಣಗಳಿಗೆ ಇರುತ್ತದೆ. ಪ್ರತಿಯೊಂದು ಕೆಲಸಕಾರ್ಯಗಳಿಗೆ ಬಾಳ ಸಂಗಾತಿಯ ಸಹಾಯ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳು ಕಷ್ಟ ಪಟ್ಟು ವ್ಯಾಸಂಗದಲ್ಲಿ ತೊಡಗಬೇಕು. ಪ್ರಸಕ್ತ ಇರುವ ವ್ಯಾಪಾರ ವ್ಯವಹಾರವನ್ನು ಮುಂದುವರಿಸುವುದು ಒಳಿತು. ಕಪ್ಪು ಮತ್ತು ಬಿಳಿ ಮಿಶ್ರಿತ ಕಂಬಳಿಯನ್ನು ದಾನ ನೀಡಿ ದಿನದ ಕೆಲಸವನ್ನು ಆರಂಭಿಸಿ.

ತುಲಾ

ಉದ್ಯೋಗದಲ್ಲಿ ಉನ್ನತ ಮಟ್ಟ ತಲುಪುವಿರಿ. ಕಾನೂನು ಪಾಲನಾ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಹಣದ ಕೊರತೆಯಿಂದ ಹೊರಬರಲು ಹಣಕಾಸಿನ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸುವಿರಿ. ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡುತ್ತಾರೆ. ಧೈರ್ಯ ಸಾಹಸದ ಗುಣವನ್ನು ಬೆಳೆಸಿಕೊಳ್ಳಿರಿ. ಸಮಾಜಸೇವೆ ಮಾಡುವಿರಿ. ಕುಟುಂಬದಲ್ಲಿ ಶಾಂತಿ ಸಂಧಾನವೊಂದು ನಡೆಯಲಿದೆ. ಕುಟುಂಬದ ಭೂಮಿಯೊಂದು ವಿವಾದಕ್ಕೆ ಸಿಲುಕಬಹುದು ಎಚ್ಚರಿಕೆ ಇರಲಿ. ಅಪರಿಚಿತರೊಂದಿಗೆ ಹಣದ ವ್ಯವಹಾರ ಮಾಡದಿರಿ. ಪಾರಿವಾಳಕ್ಕೆ ಆಹಾರ ಮತ್ತು ನೀರಿನವ್ಯವಸ್ಥೆ ಮಾಡಿದ ನಂತರ ದಿನದ ಕೆಲಸ ಆರಂಭಿಸಿ.

ವೃಶ್ಚಿಕ

ಕೃಷಿ ಕಾರ್ಮಿಕರಿಗೆ ಆದಾಯವಿರುತ್ತದೆ. ತೋಟಗಾರಿಕೆಯ ಪದಾರ್ಥಗಳನ್ನು ವಿದೇಶಕ್ಕೆ ಕಳಿಸುವ ವ್ಯಾಪಾರದಲ್ಲಿ ಲಾಭವಿದೆ. ಉದ್ಯೋಗದಲ್ಲಿ ಆತಂಕದ ಪರಿಸ್ಥಿತಿ ಎದುರಾಗುತ್ತದೆ. ಅನಗತ್ಯ ವಾದ ವಿವಾದಗಳನ್ನು ಮರೆತು ಸ್ನೇಹ ಪ್ರೀತಿಯಿಂದ ವರ್ತಿಸಿದಲ್ಲಿ ನೆಮ್ಮದಿಯ ಜೀವನ ನಡೆಸುವಿರಿ. ದಿನಸಿ ಪದಾರ್ಥಗಳ ಶೇಖರಣೆಯ ಕೇಂದ್ರದ ಮೇಲ್ವಿಚಾರಕರಾಗುವಿರಿ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಮಧ್ಯಮ ಗತಿಯ ಲಾಭ ದೊರೆಯುತ್ತದೆ. ದೈಹಿಕ ವ್ಯಾಯಾಮದಿಂದ ಆರೋಗ್ಯದಲ್ಲಿ ಸ್ಥಿರತೆ ಇರುತ್ತದೆ. ಬೆಳ್ಳಿಲೋಟದಲ್ಲಿ ಹಾಲನ್ನು ಕುಡಿದು ದಿನದ ಕಾರ್ಯವನ್ನು ಆರಂಭಿಸಿ.

ಧನಸ್ಸು

ದೊಡ್ಡ ವ್ಯಾಪಾರ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸ್ನೇಹಿತರೊಬ್ಬರು ನಿಮಗೆ ಆಸರೆ ಆಗುತ್ತಾರೆ. ಸಂತಾನ ಲಾಭವಿದೆ. ವಿನಾಕಾರಣ ವಾದ ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಿ ಸೂಕ್ತವಾದ ಪರಿಹಾರವನ್ನು ಸೂಚಿಸುವಿರಿ. ಸೋದರ ಅಥವಾ ಸೋದರಿಯ ಕುಟುಂಬದಲ್ಲಿ ಮನಸ್ತಾಪ ಉಂಟಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವಿರುತ್ತದೆ. ಭೂವಿವಾದದಲ್ಲಿ ಶತೃತ್ವ ಇರುತ್ತದೆ. ವ್ಯವಸಾಯದ ಕೆಲಸ ನಿರ್ವಹಿಸುವಿರಿ. ರಕ್ತದ ದೋಷ ಇರುತ್ತದೆ. ಕೋಪ ಬಂದಷ್ಟೇ ಬೇಗ ಮರೆಯಾಗುತ್ತದೆ. ತೆಗೆದುಕೊಂಡ ನಿರ್ಧಾರವನ್ನು ಪದೇ ಪದೇ ಬದಲಿಸದಿರಿ. ಧಾರ್ಮಿಕ ಕೇಂದ್ರಕ್ಕೆ ಬಾದಾಮಿಯನ್ನು ನೀಡಿ ದೈನಂದಿನ ಕೆಲಸ ಆರಂಭಿಸಿ.

ಮಕರ

ದುಡುಕುತನ ತೋರದೆ ಎಲ್ಲರ ಜೊತೆಯಲ್ಲಿ ಹೊಂದಿಕೊಂಡು ಹೋಗುವಿರಿ. ಆದರೆ ಅರ್ಥವಿಲ್ಲದ ಮಾತುಗಳು ವಿವಾದವನ್ನು ಉಂಟುಮಾಡುತ್ತದೆ. ಎಲ್ಲರನ್ನೂ ಅನುಮಾನಿಸದಿರಿ. ಶಿಕ್ಷಣ ಇಲಾಖೆಯಲ್ಲಿ ಅವಕಾಶ ದೊರೆಯಲಿದೆ. ಮಾತು ಕಡಿಮೆ ಮಾಡಿ ಕೆಲಸವನ್ನು ಹೆಚ್ಚು ಮಾಡಿ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಸಮಯಕ್ಕೆ ಬೆಲೆ ನೀಡಿ ವ್ಯಾಸಂಗದಲ್ಲಿ ಮುಂದುವರಿಯಿರಿ. ವಂಶದಲ್ಲಿಯೇ ವಿಶೇಷ ಸ್ಥಾನ ಮಾನ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ನಾಯಿಗೆ ಆಹಾರ ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ಕುಂಭ

ಪರರ ಮಾತನ್ನು ನಂಬಿ ತೊಂದರೆಗೆ ಒಳಗಾಗುವಿರಿ. ಗುರುಪೀಠದಲ್ಲಿ ಉದ್ಯೋಗ ದೊರೆಯುತ್ತದೆ. ಸ್ಥಳ ಬದಲಾವಣೆ ಮಾಡುವಿರಿ. ಕುಟುಂಬದಲ್ಲಿ ಸಾಮರಸ್ಯ ಇರುವುದಿಲ್ಲ. ನಿಮ್ಮಲ್ಲಿನ ಬುದ್ಧಿವಂತಿಕೆಯನ್ನು ಸರಿಯಾದ ಮಾದರಿಯಲ್ಲಿ ಉಪಯೋಗಿಸಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಕಷ್ಟಪಟ್ಟು ಹಣ ಆಸ್ತಿ ಕೀರ್ತಿ ಪ್ರತಿಷ್ಥೆಯನ್ನು ಗಳಿಸುವಿರಿ. ಭೂವ್ಯವಹಾರಗಳಲ್ಲಿ ಉತ್ತಮ ಧನಲಾಭವಿರುತ್ತದೆ. ಬಾಡಿಗೆಗೆ ಅಥವಾ ಖರೀದಿಗೆ ಮನೆಗಳನ್ನು ಕೊಡಿಸುವ ಕೆಲಸದಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಶುಭಫಲಗಳು ಲಭ್ಯವಾಗಲಿವೆ. ಹೈನುಗಾರಿಕೆ ವ್ಯಾಪಾರ ಬೇಡ. ಬಳಿಯಲ್ಲಿ ಓಂಕಾರದ ಆಕೃತಿ ಇದ್ದಲ್ಲಿ ಶುಭ ಫಲಗಳು ದೊರೆಯುತ್ತದೆ.

ಮೀನ

ಕುಟುಂಬದಲ್ಲಿ ನಡೆಯ ಬೇಕಿದ್ದ ಮಂಗಳಕಾರ್ಯವೊಂದು ಮುಂದೂಡಲ್ಪಡುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತದೆ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ಸಂಗಾತಿಯ ಬುದ್ಧಿವಂತಿಕೆ ನಿಮ್ಮನ್ನು ಉನ್ನತ ಮಟ್ಟಕ್ಕೆ ತಲುಪುವುದು. ದಂಪತಿಗಳ ನಡುವೆ ವಿರಸವಿರುತ್ತದೆ. ಹಣದ ತೊಂದರೆ ಇರುವುದಿಲ್ಲ. ಹಠದ ಬುದ್ಧಿ ಇರುತ್ತದೆ. ಉದ್ಯೋಗದಲ್ಲಿ ತೊಂದರೆ ಬಾರದು. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಪಡೆಯುತ್ತಾರೆ. ಧಾರ್ಮಿಕ ಕೇಂದ್ರ ಅಥವಾ ಬೋಧನಾ ಕೇಂದ್ರಗಳ ಒಡೆತನ ಲಭಿಸುತ್ತದೆ. ಕಪ್ಪು ಮತ್ತು ನೀಲಿಬಣ್ಣದ ವಸ್ತ್ರದಿಂದ ದೂರ ಇರುವುದು ಒಳ್ಳೆಯದು.

ವಿಭಾಗ