ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಐಪಿಎಲ್ 2024 ಪಾಯಿಂಟ್ಸ್ ಟೇಬಲ್: ಐಪಿಎಲ್ 2024 ರಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಎಲ್ಲ ತಂಡಗಳೂ ಲೀಗ್ ಹಂತದಲ್ಲಿ ಪಂದ್ಯಗಳನ್ನು ಆಡುತ್ತವೆ. ಐಪಿಎಲ್ ಆಡುವ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆದರೆ ಪಾಯಿಂಟ್ ಟೇಬಲ್ ಒಂದೇ ಆಗಿರುತ್ತದೆ. ಪ್ರತಿ ತಂಡವು ಲೀಗ್ ಹಂತದಲ್ಲಿ 14 ಪಂದ್ಯಗಳನ್ನು ಆಡುತ್ತದೆ. .ಆ ಪಂದ್ಯಗಳಲ್ಲಿನ ಗೆಲುವಿನ ಆಧಾರದ ಮೇಲೆ ಆಯಾ ತಂಡಗಳು ಪಾಯಿಂಟ್ಸ್ ಟೇಬಲ್‌ನಲ್ಲಿ ಸ್ಥಾನ ಪಡೆಯುತ್ತವೆ. ತಂಡಗಳ ಪ್ರದರ್ಶನ ಆಧರಿಸಿ ಅವುಗಳ ಸ್ಥಾನಗಳು ಬದಲಾಗುತ್ತವೆ.
ಪಂದ್ಯದಲ್ಲಿ ಗೆಲ್ಲುವ ತಂಡವು ಎರಡು ಅಂಕಗಳನ್ನು ಪಡೆಯುತ್ತದೆ. ಸೋತ ತಂಡಕ್ಕೆ ಅಂಕ ಸಿಗುವುದಿಲ್ಲ. ಒಂದು ವೇಳೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ಒಂದೊಂದು ಅಂಕ ದೊರೆಯಲಿದೆ. ಹೆಚ್ಚು ಅಂಕಗಳನ್ನು ಗಳಿಸಿದ ತಂಡವು ಅಗ್ರಸ್ಥಾನದಲ್ಲಿರುತ್ತದೆ. IPL 2024 ಪಾಯಿಂಟ್ಸ್ ಟೇಬಲ್‌ನ ಪಟ್ಟಿಯಲ್ಲಿ ಅಗ್ರ 4 ತಂಡಗಳು ಪ್ಲೇ ಆಫ್‌ಗೆ ಹೋಗುತ್ತವೆ. ಲೀಗ್ ಹಂತದಲ್ಲಿ ಪರ್ಫಾಮ್ ಮಾಡದ ಉಳಿದ ಐದರಿಂದ ಹತ್ತು ತಂಡಗಳು ಹಿಂದೆ ಸರಿಯಬೇಕಾಗುತ್ತದೆ. ಎರಡು ತಂಡಗಳು ಅಂಕಪಟ್ಟಿಯಲ್ಲಿ ಸಮಾನ ಅಂಕಗಳನ್ನು ಹೊಂದಿದ್ದರೆ, ಅವರ ನಿವ್ವಳ ರನ್ ರೇಟ್ ಆಧರಿಸಿ ಅವುಗಳ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ. ಈ ನಿವ್ವಳ ರನ್ ರೇಟ್ ಅನ್ನು ಲೆಕ್ಕಾಚಾರ ಮಾಡಲು ಒಂದು ವಿಶಿಷ್ಟ ವಿಧಾನವೂ ಇದೆ.
IPL 2024 ಪಾಯಿಂಟ್ಸ್ ಟೇಬಲ್ ನಿವ್ವಳ ರನ್ ರೇಟ್ ಲೆಕ್ಕಾಚಾರ ಮಾಡಲು ಒಂದು ಸೂತ್ರವನ್ನು ಹೊಂದಿದೆ. ಇದು ತಂಡಗಳ ಸ್ಥಾನಗಳನ್ನು ನಿರ್ಧರಿಸುತ್ತದೆ. ಈ ಸೂತ್ರ ಹೀಗಿದೆ; ಒಂದು ತಂಡ ಮಾಡಿದ ಒಟ್ಟು ಸ್ಕೋರ್ ಅನ್ನು ಆ ತಂಡವು ಆಡಿದ ಓವರ್‌ಗಳಿಂದ ಭಾಗಿಸಲಾಗುತ್ತದೆ. ಇದರಿಂದ ತಂಡವು ಎದುರಾಳಿಗೆ ನೀಡಿದ ರನ್‌ಗಳು ಮತ್ತು ಅವರು ಬೌಲ್ ಮಾಡಿದ ಓವರ್‌ಗಳ ಸಂಖ್ಯೆಯನ್ನು ಕಳೆಯಲಾಗುತ್ತದೆ. ಅದು ತಂಡದ ನೆಟ್ ರನ್ ರೇಟ್ ಆಗಿರುತ್ತದೆ.
ಐಪಿಎಲ್ ಮಾತ್ರವೇ ಅಲ್ಲ, ಎರಡಕ್ಕಿಂತ ಹೆಚ್ಚು ತಂಡಗಳು ಆಡುವ ಯಾವುದೇ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಯಿಂಟ್ಸ್ ಟೇಬಲ್‌ನಲ್ಲಿ ಪಾಯಿಂಟ್ಸ್ ಸಮವಾಗಿರುವಾಗ ನಿವ್ವಳ ರನ್ ರೇಟ್ ನಿರ್ಣಾಯಕವಾಗುತ್ತದೆ. ಅದಕ್ಕಾಗಿಯೇ ಮೊದಲ ಪಂದ್ಯದಿಂದಲೂ ಗೆಲ್ಲಲು, ಉತ್ತಮ ಪ್ರದರ್ಶನ ತೋರಲು ಪ್ರಯತ್ನಿಸುತ್ತವೆ. ಜಿದ್ದಾಜಿದ್ದಿ ಹೋರಾಟದಿಂದ ತಂಡಗಳ ನೆಟ್ ರನ್ ರೇಟ್ ಉತ್ತಮವಾಗಲಿದೆ.
ಐಪಿಎಲ್ 2024 ರಲ್ಲಿ ಮಾತ್ರವಲ್ಲದೆ, ಈ ಮೆಗಾ ಲೀಗ್‌ನಲ್ಲಿ ಈ ಹಿಂದೆ ಹಲವು ಬಾರಿ, ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡಗಳು ಲೀಗ್ ಹಂತದಲ್ಲಿ ಮುನ್ನಡೆ ಸಾಧಿಸಿವೆ. ಈಗ ಹತ್ತು ತಂಡಗಳು ಐಪಿಎಲ್ 2024 ರಲ್ಲಿ ಭಾಗವಹಿಸುತ್ತಿವೆ. ಅಗ್ರ 4 ತಂಡಗಳಿಗೆ ಮಾತ್ರ ಪ್ಲೇ ಆಫ್‌ಗೆ ಅವಕಾಶವಿದೆ.
ಐಪಿಎಲ್ 2024 ಪಾಯಿಂಟ್ಸ್ ಟೇಬಲ್
ಸ್ಥಾನ | ತಂಡಗಳು |
---|---|
1 | kkrkolkata knight riders |
2 | srhsunrisers hyderabad |
3 | rrrajasthan royals |
4 | rcbroyal challengers bengaluru |
5 | cskchennai super kings |
6 | dcdelhi capitals |
7 | lsglucknow super giants |
8 | gtgujarat titans |
9 | pbkspunjab kings |
10 | mimumbai indians |
ಮ್ಯಾಚ್ಗಳು | ಗೆಲುವು | ಸೋಲು | ಟೈ | ಫಲಿತಾಂಶ ಇಲ್ಲ | ಪಾಯಿಂಟ್ಸ್ ಟೇಬಲ್ | NRR | ಸಿರೀಸ್ ಫಾರ್ಮ್ |
---|---|---|---|---|---|---|---|
14 | 9 | 3 | 0 | 2 | 20 | +1.428 | AAWWW |
14 | 8 | 5 | 0 | 1 | 17 | +0.414 | WAWLW |
14 | 8 | 5 | 0 | 1 | 17 | +0.273 | ALLLL |
14 | 7 | 7 | 0 | 0 | 14 | +0.459 | WWWWW |
14 | 7 | 7 | 0 | 0 | 14 | +0.392 | LWLWL |
14 | 7 | 7 | 0 | 0 | 14 | -0.377 | WLWLW |
14 | 7 | 7 | 0 | 0 | 14 | -0.667 | WLLLW |
14 | 5 | 7 | 0 | 2 | 12 | -1.063 | AAWLL |
14 | 5 | 9 | 0 | 0 | 10 | -0.353 | LWLLW |
14 | 4 | 10 | 0 | 0 | 8 | -0.318 | LLWLL |
ಸ್ಥಾ: ಸ್ಥಾನ, ఆ: ಆಡಿರುವುದು, ಪಾ: ಪಾಯಿಂಟ್ಸ್ ಟೇಬಲ್, ಎನ್ಆರ್ಆರ್: ನೆಟ್ರನ್ರೇಟ್
ಐಪಿಎಲ್ ನ್ಯೂಸ್
ಐಪಿಎಲ್ FAQs
ಉತ್ತರ: IPL 2024 ರ ಲೀಗ್ ಪಂದ್ಯಗಳಲ್ಲಿ 10 ತಂಡಗಳು ಇರುತ್ತವೆ. ಹೆಚ್ಚು ಗೆಲುವುಗಳು ಮತ್ತು ಹೆಚ್ಚು ಅಂಕಗಳನ್ನು ಹೊಂದಿರುವ ತಂಡಗಳು ಅಗ್ರಸ್ಥಾನದಲ್ಲಿರುತ್ತವೆ. ನಿವ್ವಳ ರನ್ ರೇಟ್ ಆಧಾರದ ಮೇಲೆ ತಂಡಗಳು 1 ರಿಂದ 10 ಪಾಯಿಂಟ್ಸ್ ಪಡೆಯುತ್ತವೆ. ಟಾಪ್ 4 ರ ಸ್ಥಾನದಲ್ಲಿರುವ ತಂಡಗಳು ಪ್ಲೇ ಆಫ್‌ಗೆ ಹೋಗುತ್ತವೆ.
ಉತ್ತರ: ಐಪಿಎಲ್ 2024 ಪಾಯಿಂಟ್ಸ್ ಟೇಬಲ್‌ನಲ್ಲಿ ನೆಟ್ ರನ್ ರೇಟ್ (ನಿವ್ವಳ ರನ್ ಸರಾಸರಿ) ಬಹಳ ಮುಖ್ಯ. ಎರಡು ತಂಡಗಳು ಅಂಕಪಟ್ಟಿಯಲ್ಲಿ ಸಮಾನ ಪಾಯಿಂಟ್ಸ್ ಹೊಂದಿದ್ದರೆ, ನೆಟ್ ರನ್ ರೇಟ್ ಆಧರಿಸಿ ತಂಡಗಳ ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ. ನೆಟ್ ರನ್ ರೇಟ್ ಲೆಕ್ಕಾಚಾರಕ್ಕೆ ಒಂದು ವಿಶಿಷ್ಟ ವಿಧಾನ ಇದೆ. IPL 2024 ಪಾಯಿಂಟ್ಸ್ ಟೇಬಲ್ ಅನುಸರಿಸುವ ಈ ಸೂತ್ರವು ತಂಡಗಳ ಸ್ಥಾನಗಳನ್ನು ನಿರ್ಧರಿಸಲು ನಿರ್ಣಾಯಕವಾಗಿದೆ. ಅದೇನೆಂದರೆ.. ಒಂದು ತಂಡ ಮಾಡಿದ ಒಟ್ಟು ಸ್ಕೋರ್ ಅನ್ನು ಆ ತಂಡ ಆಡಿದ ಓವರ್‌ಗಳಿಂದ ಭಾಗಿಸಲಾಗುತ್ತದೆ. ಇದರಿಂದ ತಂಡವು ಎದುರಾಳಿಗೆ ನೀಡಿದ ರನ್‌ಗಳು ಮತ್ತು ಅವರು ಬೌಲ್ ಮಾಡಿದ ಓವರ್‌ಗಳ ಸಂಖ್ಯೆಯನ್ನು ಕಳೆಯಲಾಗುತ್ತದೆ. ಅದು ತಂಡದ ನೆಟ್ ರನ್ ರೇಟ್ ಆಗಿರುತ್ತದೆ.
ಉತ್ತರ: ಐಪಿಎಲ್ 2024 ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇ ಆಫ್‌ಗೆ ಹೋಗುತ್ತವೆ. ಉಳಿದ ಆರು ತಂಡಗಳು ಅವಕಾಶ ಕಳೆದುಕೊಳ್ಳುತ್ತವೆ. ಅಗ್ರ ನಾಲ್ಕರಲ್ಲಿ ಉಳಿಯಲು ಗೆಲುವು ಮತ್ತು ಅಂಕಗಳ ಜೊತೆಗೆ ನೆಟ್ ರನ್ ರೇಟ್ ಕೂಡ ನಿರ್ಣಾಯಕವಾಗಿರುತ್ತದೆ.
ಉತ್ತರ: IPL 2024 ರ ಲೀಗ್ ಹಂತದಲ್ಲಿ ವಿಜೇತ ತಂಡವು ಎರಡು ಅಂಕಗಳನ್ನು ಪಡೆಯುತ್ತದೆ ಮತ್ತು ಸೋತ ತಂಡವು ಶೂನ್ಯ ಅಂಕಗಳನ್ನು ಪಡೆಯುತ್ತದೆ. ಒಂದು ವೇಳೆ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ಒಂದೊಂದು ಅಂಕ ದೊರೆಯಲಿದೆ. ಹೆಚ್ಚು ಅಂಕ ಗಳಿಸಿದ ತಂಡ ಅಗ್ರಸ್ಥಾನದಲ್ಲಿರುತ್ತದೆ.