ಐಪಿಎಲ್ ಇತಿಹಾಸ
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅತಿ ಹೆಚ್ಚು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡಗಳಾಗಿವೆ. ಈ ಎರಡು ತಂಡಗಳು ಐದು ಬಾರಿ ಗೆದ್ದಿರುವುದು ಗಮನಾರ್ಹ. ಚೆನ್ನೈ ಸೂಪರ್ ಕಿಂಗ್ಸ್ 2010, 2011, 2018, 2021 ಮತ್ತು 2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದಿತ್ತು. ಮುಂಬೈ ಇಂಡಿಯನ್ಸ್ ಜೈತ್ರಯಾತ್ರೆ 2013 ರಲ್ಲಿ ಪ್ರಾರಂಭವಾಯಿತು. ಆ ನಂತರ 2015, 2017, 2019 ಮತ್ತು 2020ರಲ್ಲಿ ಗೆದ್ದಿತ್ತು. ಈ ಎರಡು ತಂಡಗಳ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ ಮೂರು ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೆಕೆಆರ್ ತಂಡವು 2012, 2014 ಮತ್ತು 2024ರಲ್ಲಿ ವಿಜಯಿಯಾಯಿತು.
2008ರಲ್ಲಿ ರಾಜಸ್ಥಾನ್ ರಾಯಲ್ಸ್, 2009ರಲ್ಲಿ ಡೆಕ್ಕನ್ ಚಾರ್ಜರ್ಸ್, 2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು 2022ರಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್ ಟ್ರೋಫಿಯನ್ನು ಪಡೆದಿವೆ. ಮೊದಲ ಸೀಸನ್‌ನಿಂದ ಈ ಮೆಗಾ ಲೀಗ್‌ನಲ್ಲಿ ಆಡುತ್ತಿದ್ದರೂ. ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ ಇಲೆವೆನ್ ಪಂಜಾಬ್), ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್‌ಡೆವಿಲ್ಸ್) ಇದುವರೆಗೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಅಲ್ಲದೆ 2022 ರಲ್ಲಿ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ಟ್ರೋಫಿಯನ್ನು ಗೆಲ್ಲಲಿಲ್ಲ. ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 2009, 2011 ಮತ್ತು 2016ರಲ್ಲಿ ಫೈನಲ್ ತಲುಪಿದ್ದರೂ ಕಪ್ ಗೆದ್ದಿಲ್ಲ. ಗೇಲ್, ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಹೊಂದಿದ್ದರೂ ಆರ್‌ಸಿಬಿಯ ಅದೃಷ್ಟ ಬದಲಾಗಿಲ್ಲ.
ಧೋನಿ ಮತ್ತು ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಇವರಿಬ್ಬರೂ ಐದು ಬಾರಿ ತಮ್ಮ ತಂಡಗಳಿಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಅವರು ಇನ್ನೂ ಚೆನ್ನೈ ಮತ್ತು ಮುಂಬೈ ಫ್ರಾಂಚೈಸಿಗಳೊಂದಿಗೆ ಮುಂದುವರಿಯುತ್ತಿದ್ದಾರೆ. ಧೋನಿ ನಾಯಕತ್ವ ತೊರೆದಿದ್ದರೂ.. ಆಟಗಾರನಾಗಿ ಸಿಎಸ್‌ಕೆಯಲ್ಲಿದ್ದಾರೆ. ರೋಹಿತ್ ಕೂಡ ಕಳೆದ ವರ್ಷದಿಂದ ಆಟಗಾರನಾಗಿ ಮುಂದುವರಿಯುತ್ತಿದ್ದಾರೆ. IPL 2025 ರಲ್ಲಿ ಎಲ್ಲಾ ಫ್ರಾಂಚೈಸಿಗಳು ಸಂಪೂರ್ಣವಾಗಿ ಹೊಸ ತಂಡಗಳೊಂದಿಗೆ ಕಣಕ್ಕೆ ಪ್ರವೇಶಿಸುತ್ತಿವೆ.
ಈಗಾಗಲೇ ಪ್ರಶಸ್ತಿ ಗೆದ್ದಿರುವ ತಂಡಗಳ ಜತೆಗೆ ಚೊಚ್ಚಲ ಬಾರಿಗೆ ಪ್ರಶಸ್ತಿಗಾಗಿ ಸೆಣಸುತ್ತಿರುವ ತಂಡಗಳೂ ಈ ಋತುವಿನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಅದರಲ್ಲೂ ಎಲ್ಲರ ಕಣ್ಣು ಆರ್‌ಸಿಬಿ ಮೇಲಿದೆ. ತಂಡದ ನಾಯಕತ್ವ ಮತ್ತೊಮ್ಮೆ ವಿರಾಟ್ ಕೊಹ್ಲಿ ಪಾಲಾಗಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಈ ಬಾರಿಯೂ ಅವರಿಗೆ ಮೊದಲ ಪ್ರಶಸ್ತಿ ಸಿಗುತ್ತದೋ ಇಲ್ಲವೋ ಎಂಬ ಕುತೂಹಲ ಮೂಡಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಹೊಸ ನಾಯಕರು ಮತ್ತು ಹೊಸ ತಂಡಗಳೊಂದಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ. ಮೂರು ಋತುಗಳಲ್ಲಿ ಆಡುತ್ತಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ತಮ್ಮ ಹೊಸ ನಾಯಕ ರಿಷಬ್ ಪಂತ್ ಮೇಲೆ ಹೆಚ್ಚಿನ ಭರವಸೆಯನ್ನು ಹೊಂದಿದೆ. 2025 ರಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎನ್ನುವುದನ್ನು ತಿಳಿಯಲು ಕ್ರಿಕೆಟ್ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
2023 Winner: Chennai Super Kings (By DLS method)

2023 Score


2022 Winner: Gujarat Titans

2022 Score


2021 Winner: Chennai Super Kings

2021 Score


2020 Winner: Mumbai Indians

2020 Score


2019 Winner: Mumbai Indians

2019 Score


2018 Winner: Chennai Super Kings

2018 Score


2017 Winner: Mumbai Indians

2017 Score


2016 Winner: Sunrisers Hyderabad

2016 Score


2015 Winner: Mumbai Indians

2015 Score


2014 Winner: Kolkata Knight Riders

2014 Score


2013 Winner: Mumbai Indians

2013 Score


2012 Winner: Kolkata Knight Riders

2012 Score


2011 Winner: Chennai Super Kings

2011 Score


2010 Winner: Chennai Super Kings

2010 Score


2009 Winner: Deccan Chargers

2009 Score


2008 Winner: Rajasthan Royals

2008 Score


FAQs
ಉ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ ಅತಿ ಹೆಚ್ಚು ಐಪಿಎಲ್ ಗೆದ್ದಿವೆ. ಈ ಎರಡು ತಂಡಗಳು ಐದು ಬಾರಿ ಪ್ರಶಸ್ತಿ ಗೆದ್ದಿವೆ.
ಉ: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗೆ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ.
ಉ: ಐಪಿಎಲ್ ವಿಜೇತರಿಗೆ ಬಹುಮಾನದ ಮೊತ್ತವು ಅಗಾಧವಾಗಿ ಹೆಚ್ಚಾಗಿದೆ. 2008 ರಲ್ಲಿ ವಿಜೇತರಿಗೆ 4.8 ಕೋಟಿ ರೂಪಾಯಿಗಳ ಬಹುಮಾನದ ಮೊತ್ತವು ಕಳೆದ ಕೆಲವು ಋತುಗಳಲ್ಲಿ 20 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ಈ ವರ್ಷವೂ ಅದೇ ಬಹುಮಾನದ ಮೊತ್ತ ಮುಂದುವರಿಯಲಿದೆ.
ಉ: ಐಪಿಎಲ್ 2025 ರಲ್ಲಿ ಕಣಕ್ಕೆ ಇಳಿಯುತ್ತಿರುವ ತಂಡಗಳನ್ನು ನೋಡಿದರೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಳೆದ ವರ್ಷದ ರನ್ನರ್ ಅಪ್ ಸನ್ ರೈಸರ್ಸ್ ಹೈದರಾಬಾದ್ ಫೇವರಿಟ್ ತಂಡಗಳಾಗಿವೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಅವಕಾಶಗಳನ್ನು ತಳ್ಳಿಹಾಕುವಂತಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇರುವ ಅವಕಾಶಗಳ ಬಗ್ಗೆಯೂ ಅಭಿಮಾನಿಗಳು ಆಸಕ್ತಿಯಿಂದ ಚರ್ಚಿಸುತ್ತಿದ್ದಾರೆ.