ಕನ್ನಡ ಸುದ್ದಿ  /  Astrology  /  Religion Shani Jayanti 2023 Some Dos And Donts On Shani Amavasya Spiritual Beliefs Kannada News Rst

Shani Jayanti 2023: ಶನಿ ಅಮಾಮಾಸ್ಯೆಯಂದು ಈ ತಪ್ಪುಗಳನ್ನು ಖಂಡಿತ ಮಾಡದಿರಿ; ಇದರಿಂದ ಶನಿದೇವ ಮುನಿಯಬಹುದು

Shani Jayanti: ನಾಳೆ ಶನಿ ಜಯಂತಿ. ಶನಿ ಅಮಾವಾಸ್ಯೆ ಅಂತಲೂ ಕರೆಯುವ ಈ ದಿನದ ಆಚರಣೆಗೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಈ ದಿನದಂದು ಪವಿತ್ರ ಗಂಗಾ ಸ್ನಾನ ಮಾಡುವುದರಿಂದ ಶನಿಯ ಕೃಪೆಗೆ ಪಾತ್ರರಾಗಬಹುದು ಎಂಬುದು ನಂಬಿಕೆ. ಶನಿ ಹುಟ್ಟಿದ ದಿನದಂದು ಶನಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಈ ತಪ್ಪುಗಳನ್ನು ಖಂಡಿತ ಮಾಡಬಾರದು.

ಶನಿ ಜಯಂತಿ 2023
ಶನಿ ಜಯಂತಿ 2023

ಹಿಂದೂ ಧರ್ಮದಲ್ಲಿ ಶನಿ ಜಯಂತಿ ಆಚರಣೆಗೆ ವಿಶೇಷ ಪ್ರಧಾನ್ಯವಿದೆ. ಇದನ್ನು ʼಶನಿ ಅಮಾವಾಸ್ಯೆʼ ಎಂದೂ ಕರೆಯಲಾಗುತ್ತದೆ. ವೈಶಾಖ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶನಿದೇವ, ಸೂರ್ಯದೇವ ಮತ್ತು ಛಾಯಾ ದೇವಿಯ ಮಗ. ಶನಿದೇವರನ್ನು ಕರ್ಮಫಲದಾತ ಎಂದೂ ಕರೆಯಲಾಗುತ್ತದೆ.

ಈ ವರ್ಷ ನಾಳೆ ಅಂದರೆ ಮೇ 19 ರಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನದಂದು ಪೂಜೆ, ವ್ರತ, ಉಪವಾಸಗಳ ಮೂಲಕ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಶನಿ ದೇವರ ಜಯಂತಿಯನ್ನು ಗಂಗಾ ಸ್ನಾನ ಮಾಡುವ ಮೂಲಕ ಆಚರಿಸುವುದು ವಾಡಿಕೆ. ಇದರೊಂದಿಗೆ ಉಪವಾಸ ವ್ರತ ಹಾಗೂ ಹನುಮಾನ್‌ ಚಾಲೀಸಾವನ್ನು ಓದುವ ಮೂಲಕ ಶನಿದೇವನ ಕೃಪೆಗೆ ಪಾತ್ರರಾಗಬಹುದು.

ಶನಿ ಜಯಂತಿ ಮಹತ್ವ

ಹಿಂದೂ ಧರ್ಮದ ಪ್ರಕಾರ, ಶನಿ ದೇವರು ಸೂರ್ಯ ಮತ್ತು ತಾಯಿ ಛಾಯಾ ಅವರ ಮಗ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಶನಿಯನ್ನು ಪರಸ್ಪರ ಶತ್ರುಗಳೆಂದು ಪರಿಗಣಿಸಲಾಗುತ್ತದೆ. ಶನಿಯು ಶಿವನ ಕಟ್ಟಾ ಭಕ್ತನಾಗಿದ್ದನು. ತಾನು ಬಯಸಿದ ಇಷ್ಟಾರ್ಥಗಳನ್ನು ಪಡೆಯಲು ಕಟ್ಟುನಿಟ್ಟಾಗಿ ತಪಸ್ಸು ಮಾಡಿದರು ಮತ್ತು ಶಿವನನ್ನು ಪೂಜಿಸಿದರು. ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಜನರು ಶನಿಶಾಂತಿ, ಶನಿಜಪದಂತಹ ಪೂಜೆಗಳನ್ನು ಮಾಡುವ ಮೂಲಕ ಅವನ ಆಶಿರ್ವಾದ ಪಡೆಯುತ್ತಾರೆ.

ಸಾಡೆ ಸಾತಿ, ಶನಿದೋಷ ಮತ್ತು ಧೈಯಾದಲ್ಲಿರುವ ಜನರು ಈ ದಿನ ಉಪವಾಸವನ್ನು ಆಚರಿಸಬೇಕು ಮತ್ತು ಪ್ರತಿ ಶನಿವಾರದಂದು ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು.

ಶನಿ ಅಮಾವಾಸ್ಯೆಯಂದು ಜನರು ಮಾಡಬಹುದಾದ ಕೆಲಸಗಳು ಹಾಗೂ ಮಾಡಬಾರದ ಕೆಲಸಗಳ ಬಗ್ಗೆ ಇಲ್ಲಿದೆ ವಿವರ.

ಹೀಗೆ ಮಾಡುವುದರಿಂದ ಶನಿಕೃಪೆಗೆ ಪಾತ್ರರಾಗಬಹುದು

* ಗಂಗಾನದಿಯಲ್ಲಿ ಪವಿತ್ರ ಸ್ನಾನ. ಗಂಗಾನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದೇ ಇರುವವರು ಸಮುದ್ರ ಸ್ನಾನ ಮಾಡಬಹುದು.

* ದಿನವಿಡೀ ಉಪವಾಸ ವ್ರತ ಕೈಗೊಳ್ಳುವ ಮೂಲಕ ಶನಿದೇವರ ಕೃಪೆಗೆ ಪಾತ್ರರಾಗಬಹುದು.

* ಶನಿ ದೋಷ ಪರಿಹಾರಕ್ಕೆ 7 ರಿಂದ 11 ಬಾರಿ ಹನುಮಾನ್‌ ಚಾಲೀಸಾವನ್ನು ಪಠಿಸಬೇಕು.

* ಆಲದ ಮರದ ಕೆಳಗೆ ಸಾಸಿವೆ ಎಣ್ಣೆಯಲ್ಲಿ ದೀಪ ಬೆಳಗಬಹುದು. ಇದರಿಂದ ಶನಿ ದೇವ ಸಂತೃಪ್ತಿಗೊಳ್ಳುತ್ತಾನೆ ಎಂಬ ನಂಬಿಕೆ ಇದೆ.

* ದಾನ, ಧರ್ಮ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಬಹುದು.

* ಈ ದಿನ ಕರಿಎಳ್ಳು ಹಾಗೂ ಕಪ್ಪು ಬಣ್ಣದ ಇಡೀ ಉದ್ದಿನಕಾಳನ್ನು ದಾನ ಮಾಡುವುದು ಉತ್ತಮ.

* ಈ ಪವಿತ್ರ ದಿನದಂದು ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಸಾತ್ವಿಕ ಆಹಾರ ಸೇವನೆಯೊಂದಿಗೆ ಉಪವಾಸವನ್ನು ಮುರಿಯಬಹುದು.

ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡದಿರಿ

* ನಿಮಗೆ ತಿಳಿದು ತಿಳಿದು ಯಾರಿಗೂ ನೋವು, ಅವಮಾನ ಮಾಡುವುದು ಮಾಡದಿರಿ.

* ಮನೆ ಕೆಲಸದವರು, ನಿಮ್ಮೊಂದಿಗೆ ಕೆಲಸ ಮಾಡುವವರು ಹಾಗೂ ನಿಮ್ಮ ಸಹಾಯಕರ ಜೊತೆ ಅನುಚಿತವಾಗಿ ವರ್ತಿಸಬೇಡಿ.

* ಶನಿ ದೇವರ ಆಶೀರ್ವಾದ ಪಡೆಯಲು ಬಯಸುವವರು ಯಾವುದೇ ಕಾರಣಕ್ಕೂ ಮಾಂಸಾಹಾರ ಹಾಗೂ ಮದ್ಯಪಾನ ಸೇವನೆ ಮಾಡದಿರಿ.

* ಕೆಟ್ಟ ಹಾಗೂ ಅನುಚಿತ ಶಬ್ದಗಳನ್ನು ಮಾತಿನಲ್ಲಿ ಬಳಸದಿರಿ.

* ಸುಮ್ಮನೆ ಕುಳಿತು ಸಮಯ ಹಾಳು ಮಾಡದಿರಿ. ಭವಿಷತ್ತಿಗಾಗಿ ಉತ್ತಮ ಕೆಲಸಗಳನ್ನು ಮಾಡಿ.

ಶನಿ ದೇವರ ಮಂತ್ರ

  • 'ಓಂ ಶಂ ಶನೈಶ್ಚರಾಯ ನಮಃ'
  • ʼನೀಲಾಂಜನ ಸಮಭಾಸಂ ರವಿ ಪುತ್ರಂ ಯಮಾಗ್ರಜಂ,ʼ
  • ʼಛಾಯಾ ಮಾರ್ತಾಂಡ ಶಂಭುತಂ ತಂ ನಮಾಮಿ ಶನೈಶ್ಚರಂ..!!ʼ

ವಿಭಾಗ