ಕನ್ನಡ ಸುದ್ದಿ  /  ಮನರಂಜನೆ  /   Rakhi Sawant Mother Death: ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ ನಟಿ ರಾಖಿ ಸಾವಂತ್‌ ತಾಯಿ ನಿಧನ..ಸಂತಾಪ ಸೂಚಿಸಿದ ಬಿಟೌನ್‌

Rakhi Sawant Mother Death: ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದ ನಟಿ ರಾಖಿ ಸಾವಂತ್‌ ತಾಯಿ ನಿಧನ..ಸಂತಾಪ ಸೂಚಿಸಿದ ಬಿಟೌನ್‌

ತಾಯಿ ಆಸ್ಪತ್ರೆಯಲ್ಲಿ ನೋವಿನಿಂದ ನರಳಾಡುತ್ತಿರುವ ವಿಡಿಯೋವೊಂದನ್ನು ಕೂಡಾ ರಾಖಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಖಿಯ ಗೋಳಾಟ ಕಂಡು ಬಾಲಿವುಡ್‌ ಸೆಲೆಬ್ರಿಟಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ರಾಖಿ ಸಾವಂತ್‌ ತಾಯಿ ನಿಧನ
ರಾಖಿ ಸಾವಂತ್‌ ತಾಯಿ ನಿಧನ (PC: Rakhi Sawant Instagram)

ಬ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿದ್ದು ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್‌ ನಟಿ ರಾಖಿ ಸಾವಂತ್‌ ತಾಯಿ ಜಯಾ ಭೇದಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸ್ವತ: ರಾಖಿ ಸಾವಂತ್‌, ತಮ್ಮ ತಾಯಿ ನಿಧನದ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕೆಲವು ದಿನಗಳಿಂದ ರಾಖಿ ಸಾವಂತ್‌ ತಮ್ಮ ತಾಯಿಯ ಆರೋಗ್ಯದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಫೋಟೋ, ವಿಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಈ ನಡುವೆ ರಾಖಿ ಸಾವಂತ್‌ ತಾವು ಆದಿಲ್‌ ಖಾನ್‌ ದುರ್ರಾನಿಯನ್ನು ಮದುವೆ ಆಗಿರುವುದಾಗಿ ರಿವೀಲ್‌ ಮಾಡಿದ್ದರು. ಕಳೆದ 6 ತಿಂಗಳ ಹಿಂದೆಯೇ ರಾಖಿ ಹಾಗೂ ಆದಿಲ್‌ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಈ ವಿಚಾರವನ್ನು ರಾಖಿ ಇತ್ತೀಚೆಗೆ ರಿವೀಲ್‌ ಮಾಡಿದ್ದರು. ಮೊನ್ನೆಯಷ್ಟೇ ಮುಂಬೈ ದರ್ಗಾವೊಂದಕ್ಕೆ ತೆರಳಿ ಅಮ್ಮನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು.

ತಾಯಿ ಆಸ್ಪತ್ರೆಯಲ್ಲಿ ನೋವಿನಿಂದ ನರಳಾಡುತ್ತಿರುವ ವಿಡಿಯೋವೊಂದನ್ನು ಕೂಡಾ ರಾಖಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಖಿಯ ಗೋಳಾಟ ಕಂಡು ಬಾಲಿವುಡ್‌ ಸೆಲೆಬ್ರಿಟಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಜಾಕಿ ಶ್ರಾಫ್‌, ಮಾನ್ಯತಾ ದತ್‌, ರಶ್ಮಿ ದೇಸಾಯಿ ಸೇರಿದಂತೆ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ರಾಖಿ ಸಾವಂತ್‌ ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು (ಭಾನುವಾರ) ಮಧ್ಯಾಹ್ನ12 ಗಂಟೆಗೆ ಜಯಾ ಭೇದಾ ಅಂತ್ಯಕ್ರಿಯೆ ಮುಂಬೈನ ಓಶಿವಾರದ ಮುನ್ಸಿಪಲ್‌ ಕ್ರಿಶ್ಚಿಯನ್‌ ರುದ್ರಭೂಮಿಯಲ್ಲಿ ನೆರವೇರಲಿದೆ.

ರಾಖಿ ಸಾವಂತ್‌ ಇನ್‌ಸ್ಟಾಗ್ರಾಮ್‌ ಪೋಸ್ಟ್‌
ರಾಖಿ ಸಾವಂತ್‌ ಇನ್‌ಸ್ಟಾಗ್ರಾಮ್‌ ಪೋಸ್ಟ್‌

ತಾಯಿಗಾಗಿ ಬಿಗ್‌ಬಾಸ್‌ ಶೋನಿಂದ ಹೊರ ಬಂದಿದ್ದ ರಾಖಿ ಸಾವಂತ್‌

‍ಕೆಲವು ದಿನಗಳ ಹಿಂದಷ್ಟೇ ರಾಖಿ ಸಾವಂತ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಣ್ಣೀರಿಡುತ್ತಾ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. '' ನಾನು ಮರಾಠಿ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ. ಅಮ್ಮನಿಗೆ ಆರೋಗ್ಯ ಸರಿ ಇಲ್ಲ, ದಯವಿಟ್ಟು ಅಮ್ಮನಿಗಾಗಿ ಪ್ರಾರ್ಥಿಸಿ, ಅಮ್ಮ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ಧಾರೆ. ಅಮ್ಮನಿಗೆ ಬ್ರೈನ್‌ ಟ್ಯೂಮರ್‌ ಇರುವ ವಿಚಾರ ಈಗಷ್ಟೇ ಗೊತ್ತಾಯ್ತು. ದಯವಿಟ್ಟು ಪ್ರತಿಯೊಬ್ಬರೂ ಅಮ್ಮನಿಗಾಗಿ ಪ್ರಾರ್ಥನೆ ಮಾಡಿ. ನಿಮ್ಮ ಹಾರೈಕೆಯಿಂದ ಅಮ್ಮ ಗುಣಮುಖರಾಗುತ್ತಾರೆ'' ಎಂದು ಮನವಿ ಮಾಡಿದ್ದರು. ಆಸ್ಪತ್ರೆ ಬೆಡ್‌ ಮೇಲೆ ಮಲಗಿರುವ ತಾಯಿಯನ್ನು ಕೂಡಾ ವಿಡಿಯೋದಲ್ಲಿ ತೋರಿಸಿದ್ದರು.

ಆದಿಲ್‌ ಮೋಸ ಮಾಡುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದ ರಾಖಿ ಸಾವಂತ್‌

ಮದುವೆ ವಿಚಾರ ರಿವೀಲ್‌ ಮಾಡಿದ್ದ ರಾಖಿ, ಆದಿಲ್‌ ಖಾನ್‌ ನನಗೆ ಮೋಸ ಮಾಡುತ್ತಿದ್ದಾನೆ ಎಂದು ಕಣ್ಣೀರಿಟ್ಟಿದ್ದರು. ಆದಿಲ್‌ ಖಾನ್‌ ಹಾಗೂ ನಾನು 6 ತಿಂಗಳ ಹಿಂದೆಯೇ ಮದುವೆಯಾಗಿದ್ದೆವು. ಆತನ ಇಷ್ಟದಂತೆ ನಾನು ಫಾತಿಮಾ ಆಗಿ ಬದಲಾಗಿದ್ದೇನೆ. ಈಗ ನೋಡಿದರೆ ಆತ ನನ್ನನ್ನು ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದರು. ಆದರೆ ಆದಿಲ್‌ ಮಾಧ್ಯಗಳ ಮುಂದೆ ತಾನು ರಾಖಿಯನ್ನು ಮದುವೆ ಆಗಿರುವುದಾಗಿ ಒಪ್ಪಿಕೊಂಡಿದ್ದರು. ''ನಮ್ಮಿಬ್ಬರ ಮದುವೆ ವಿಚಾರ ತಿಳಿದರೆ ನನ್ನ ತಂಗಿಗೆ ಗಂಡು ಸಿಗುವುದಿಲ್ಲ ಎಂದು ಭಯವಿತ್ತು. ರಾಖಿ ಹಾಗೂ ನಾನು ಪ್ರೀತಿಸುತ್ತಿದ್ದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಗುಟ್ಟಾಗಿ ಮದುವೆಯಾಗಬೇಕಾಯ್ತು. ಇದನ್ನು ನಾನು ನನ್ನ ಪೋಷಕರಿಗೆ ನಿಧಾನವಾಗಿ ಮನವರಿಕೆ ಮಾಡುತ್ತೇನೆ. ರಾಖಿ ಹಾಗೂ ನಾವಿಬ್ಬರೂ ಈಗ ಸಂತೋಷವಾಗಿದ್ದೇವೆ'' ಎಂದು ಪ್ರತಿಕ್ರಿಯಿಸಿದ್ದರು.

IPL_Entry_Point