ಕನ್ನಡ ಸುದ್ದಿ  /  Entertainment  /  Bollywood Actress Sherlyn Chopra Files Fir Against Businessman Sunil Lodha For Sexual Harassment Mnk

Sherlyn Chopra: ‘ನನ್ನ ಎದೆ ಭಾಗ ಮುಟ್ಟಿ, ಬೆಡ್‌ರೂಮ್‌ವರೆಗೂ ಹಿಂಬಾಲಿಸಿದ!’; ಉದ್ಯಮಿ ವಿರುದ್ಧ ಕೇಸ್‌ ಜಡಿದ ಶೆರ್ಲಿನ್‌ ಚೋಪ್ರಾ

ತಮ್ಮನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಉದ್ಯಮಿಯೊಬ್ಬರ ವಿರುದ್ಧ ನಟಿ ಶರ್ಲಿನ್‌ ಚೋಪ್ರಾ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

‘ನನ್ನ ಎದೆ ಭಾಗ ಮುಟ್ಟಿ, ಬೆಡ್‌ರೂಮ್‌ವರೆಗೂ ಹಿಂಬಾಲಿಸಿದ!’; ಉದ್ಯಮಿ ವಿರುದ್ಧ ಕೇಸ್‌ ಜಡಿದ ಶೆರ್ಲಿನ್‌ ಚೋಪ್ರಾ
‘ನನ್ನ ಎದೆ ಭಾಗ ಮುಟ್ಟಿ, ಬೆಡ್‌ರೂಮ್‌ವರೆಗೂ ಹಿಂಬಾಲಿಸಿದ!’; ಉದ್ಯಮಿ ವಿರುದ್ಧ ಕೇಸ್‌ ಜಡಿದ ಶೆರ್ಲಿನ್‌ ಚೋಪ್ರಾ

Sherlyn Chopra: ಬಾಲಿವುಡ್‌ನ ಬೋಲ್ಡ್‌ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್‌ ಚೋಪ್ರಾ (Sherlyn Chopra) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ವಿವಾದಾತ್ಮಕ ವಿಚಾರಗಳೇ ಹೆಚ್ಚು. ಇತ್ತೀಚೆಗಷ್ಟೇ ಬಾಲಿವುಡ್‌ ನಿರ್ಮಾಪಕ ಸಾಜಿದ್‌ ಖಾನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದ ಈ ನಟಿ, ಈಗ ಮುಂಬೈ ಮೂಲದ ಉದ್ಯಮಿಯೊಬ್ಬರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ ತಮ್ಮನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಆ ಉದ್ಯಮಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನೂ ದಾಖಲಿಸಿದ್ದಾರೆ.

ಇಡೀ ವಿಷಯ ಏನು?

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ನಟಿ ಶೆರ್ಲಿನ್‌ ಸುದ್ದಿಗೋಷ್ಠಿ ಕರೆದಿದ್ದರು. ಆ ಸುದ್ದಿಗೋಷ್ಠಿಯಲ್ಲಿ ಘಟನೆಯ ಹಿನ್ನೆಲೆಯನ್ನು ವಿವರಿಸಿದ್ದಾರೆ. ವಿಡಿಯೋ ಆಲ್ಬಂ ಹಾಡೊಂದನ್ನು ಮಾಡಿಕೊಡುವ ಸಲುವಾಗಿ ಮುಂಬೈ ಮೂಲದ ಉದ್ಯಮಿ ಸುನಿಲ್ ಪರಸ್ಮಾನಿ ಲೋಧಾ, ಏ. 12ರಂದು ಶರ್ಲಿನ್‌ ಅವರನ್ನು ಹೊಟೇಲ್‌ವೊಂದರಲ್ಲಿ ಭೇಟಿಯಾಗಿದ್ದರು. ಈ ವೇಳೆ ಉದ್ಯಮಿ, ಶರ್ಲಿನ್‌ ಅವರನ್ನು ತುಂಬ ಹೊಗಳಿದ್ದಾರೆ. ಹಾಡಿನ ನಿರ್ಮಾಣಕ್ಕೆ ಶರ್ಲಿನ್‌ ಮ್ಯಾನೇಜರ್‌ ಕೈಯಲ್ಲಿ ಮುಂಗಡ ಹಣವನ್ನೂ ನೀಡಿದ್ದಾರೆ. ಇದಾದ ಬಳಿಕ ಮಾತುಕತೆ ಮುಂದುವರಿದು, ಮನೆಗೆ ಹೊರಡುವ ಬಗ್ಗೆ ಶೆರ್ಲಿನ್‌ ಹೇಳುತ್ತಿದ್ದಂತೆ, ತಮ್ಮ ಬಳಿ ಗಾಡಿ ಇಲ್ಲ ಡ್ರಾಪ್‌ ಮಾಡಿ ಎಂದಿದ್ದಾರೆ.

ಕೂಡಲೇ ತಮ್ಮನ್ನು ಮೊದಲು ಮನೆಗೆ ಬಿಟ್ಟು ಇವರನ್ನು ಅವರ ಮನೆಗೆ ಬಿಡುವಂತೆ ಶರ್ಲಿನ್‌ ತಮ್ಮ ಕಾರ್‌ ಡ್ರೈವರ್‌ಗೆ ಹೇಳಿದ್ದಾರೆ. ಅದರಂತೆ, ಶರ್ಲಿನ್‌ ಮನೆ ಬರುತ್ತಿದ್ದಂತೆ, ನಿಮ್ಮ ಮನೆ ನೋಡಬಹುದಾ? ಎಂದಿದ್ದಾರೆ ಉದ್ಯಮಿ ಸುನಿಲ್‌, ಅದಕ್ಕೇನಂತೆ ಎಂದು ಮನೆಗೆ ಕರೆದೊಯ್ದು, ಕೆಲಹೊತ್ತು ಮಾತನಾಡಿದ್ದಾರೆ. ಪಾರ್ಸೆಲ್‌ ಊಟ ತರಿಸಿ ಸೇವಿಸಿದ್ದಾರೆ. ಊಟದ ಬಳಿಕ ಮಂಚದ ಮೇಲೆ ಕುಳಿತು ಎದೆ ಭಾಗವನ್ನು ಮುಟ್ಟಿದ್ದಾರೆ. ತಕ್ಷಣ ಅವರನ್ನು ಹಿಮ್ಮೆಟ್ಟಿಸಿದ ಶರ್ಲಿನ್‌, ಕೊಂಚ ಗರಂ ಆಗಿದ್ದಾರೆ.

ಇದೆಲ್ಲ ನನಗೆ ಇಷ್ಟವಾಗಲ್ಲ, ಈ ಕೂಡಲೇ ನೀವು ಹೊರಡಿ ಎಂದಿದ್ದಾರೆ. ಬಳಿಕ ಕ್ಷಮೆಯಾಚಿಸಿ, ನೀವು ತುಂಬ ಹಾಟ್‌ ಆಗಿದ್ದೀರಿ, ಹಾಗಾಗಿ ನನ್ನಿಂದ ತಡೆಯಲು ಆಗಲಿಲ್ಲ ಎಂದು ಸುನೀಲ್‌ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ನಾನು ಹಾಟ್‌ ಇದ್ದ ಮಾತ್ರಕ್ಕೆ ಸಾರ್ವಜನಿಕರ ಆಸ್ತಿಯಲ್ಲ ಎಂದಿದ್ದಾರೆ. ಇದಾದ ಮೇಲೆ ನಾನು ಅವನನ್ನು ಅಲ್ಲಿಯೇ ಬಿಟ್ಟು ನನ್ನ ಕೋಣೆಗೆ ಬಂದೆ. ಆಗ ಚಾರ್ಜರ್‌ ನೆಪದಲ್ಲಿ ಮತ್ತೆ ನನ್ನ ಕೋಣೆಗೆ ಬಂದ. ಅಲ್ಲಿ ಮತ್ತೆ ಅನುಚಿತವಾಗಿ ವರ್ತಿಸಿದ್ದಾನೆ. ಮುಂದುವರಿದು ಜೀವ ಬೆದರಿಕೆಯನ್ನೂ ಹಾಕಿದ್ದಾನೆ" ಎಂದು ಶರ್ಲಿನ್‌ ಚೋಪ್ರಾ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಶೆರ್ಲಿನ್ ಚೋಪ್ರಾ ಅವರ ಈ ದೂರಿನ ಆಧಾರದ ಮೇಲೆ ಸುನೀಲ್ ಪರಸ್ಮಾನಿ ಲೋಧಾ ವಿರುದ್ಧ ಜುಹು ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

IPL_Entry_Point