ಕನ್ನಡ ಸುದ್ದಿ  /  Entertainment  /  Bollywood News Kisi Ka Bhai Kisi Ki Jaan Box Office Collection Salman Khan Earns Only <Span Class='webrupee'>₹</span>15 Crore On Opening Day Mnk

Salman Khan: ಪ್ಲಾಪ್‌ ಆಯ್ತು ಸಲ್ಮಾನ್‌ ಖಾನ್‌ ರಿಮೇಕ್‌ ಫಾರ್ಮುಲಾ; ಈದ್‌ ಹಬ್ಬಕ್ಕೆ ಖುಷಿ ತರದ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಕಲೆಕ್ಷನ್‌

ಸಲ್ಮಾನ್‌ ಖಾನ್‌ ಸಿನಿಮಾಗಳು ಮೊದಲಿನಂತೆ ಕಮಾಲ್‌ ಮಾಡುತ್ತಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಅವರ ಚಿತ್ರಗಳ ಜತೆಗೆ ಅವರೂ ಚಾರ್ಮ್‌ ಕಳೆದುಕೊಳ್ಳುತ್ತಿದ್ದಾರಾ? ಹೀಗೊಂದು ಪ್ರಶ್ನೆ ಕಾಡಲು ಕಾರಣ ಈದ್‌ ಹಬ್ಬದ ಪ್ರಯುಕ್ತ ರಿಲೀಸ್‌ ಆದ ಅವರ ಸಿನಿಮಾ.

 ಪ್ಲಾಪ್‌ ಆಯ್ತು ಸಲ್ಮಾನ್‌ ಖಾನ್‌ ರಿಮೇಕ್‌ ಫಾರ್ಮುಲಾ; ಈದ್‌ ಹಬ್ಬಕ್ಕೆ ಖುಷಿ ತರದ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಕಲೆಕ್ಷನ್‌
ಪ್ಲಾಪ್‌ ಆಯ್ತು ಸಲ್ಮಾನ್‌ ಖಾನ್‌ ರಿಮೇಕ್‌ ಫಾರ್ಮುಲಾ; ಈದ್‌ ಹಬ್ಬಕ್ಕೆ ಖುಷಿ ತರದ ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ ಕಲೆಕ್ಷನ್‌

Kisi Ka Bhai Kisi Ki Jaan Box Office Collection: ಬಾಲಿವುಡ್‌ ಸ್ಟಾರ್‌ ಹೀರೋ ಸಲ್ಮಾನ್‌ ಖಾನ್‌ (Salman Khan) ಅವರ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಅಲ್ಲಿ ನಿರೀಕ್ಷೆಗಳು ಆಕಾಶ ಮುಟ್ಟಿರುತ್ತವೆ. ಅಭಿಮಾನಿ ವಲಯದಲ್ಲಿಯೂ ದೊಡ್ಡ ಸಂಭ್ರಮ. ಆದರೆ, ಸಲ್ಮಾನ್‌ ಖಾನ್‌ ಅವರಲ್ಲಿನ ಮೊದಲಿನ ಆ ಕಳೆ ಇತ್ತೀಚಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ. ಅದಕ್ಕೆ ಇದೀಗ ರಿಲೀಸ್‌ ಆಗಿರುವ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ (Kisi Ka Bhai Kisi Ki Jaan) ಕಣ್ಣ ಮುಂದಿನ ಉದಾಹರಣೆ.

ಸಲ್ಮಾನ್‌ ಖಾನ್‌ ಸಿನಿಮಾಗಳು ಬಿಡುಗಡೆ ಆಗಲಿವೆ ಎಂದಾಗಲೇ ಅಲ್ಲಿ ಬಾಕ್ಸ್‌ ಆಫೀಸ್‌ ಲೆಕ್ಕಾಚಾರಗಳು ದೊಡ್ಡ ಅಂಕಿ ಅಂಶಗಳನ್ನೇ ಹೇಳುತ್ತಿರುತ್ತವೆ. ಅವರ ಅದೆಷ್ಟೋ ಸಿನಿಮಾಗಳು ಸಲೀಸಾಗಿ ಎರಡ್ಮೂರು ದಿನದಲ್ಲಿ ನೂರು ಕೋಟಿ ಕ್ಲಬ್‌ಗೆ ಸೇರಿದ ಉದಾಹರಣೆಗಳಿವೆ. ಆದರೆ, ಇದೀಗ ಸಲ್ಮಾನ್‌ ಖಾನ್‌ ಸಿನಿಮಾಗಳು ಮೊದಲಿನಂತೆ ಕಮಾಲ್‌ ಮಾಡುತ್ತಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಅವರ ಚಿತ್ರಗಳ ಜತೆಗೆ ಅವರೂ ಚಾರ್ಮ್‌ ಕಳೆದುಕೊಳ್ಳುತ್ತಿದ್ದಾರೆ.

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಬಿಡುಗಡೆಗೂ ಮೊದಲು ಶಾರುಖ್‌ ಖಾನ್‌ ಅವರ ಪಠಾಣ್‌ ಚಿತ್ರದ ದಾಖಲೆ ಮುರಿಯಬಹುದು, ಮೊದಲ ದಿನದ ಅತೀ ಹೆಚ್ಚು ಗಳಿಕೆ ಪಟ್ಟವನ್ನು ಸಲ್ಮಾನ್‌ ಖಾನ್‌ ಗಿಟ್ಟಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಆ ಊಹೆ ಇದೀಗ ಸುಳ್ಳಾಗಿದೆ. ಶಾರುಖ್‌ ಸಿನಿಮಾ ಅಲ್ಲ, ರಣಬೀರ್‌ ಕಪೂರ್‌ ನಟನೆಯ ತೂ ಜೂಟಿ ಮೈ ಮಕ್ಕರ್‌ ಸಿನಿಮಾದಷ್ಟೇ ಸಲ್ಮಾನ್‌ ಖಾನ್‌ ಸಿನಿಮಾ ಕಲೆಕ್ಷನ್‌ ಮಾಡಿದೆ.

ಸಲ್ಮಾನ್‌ ಸಿನಿಮಾದ ಮೊದಲ ದಿನಗ ಗಳಿಕೆ ಎಷ್ಟು?

ಶಾರುಖ್‌ ಖಾನ್‌ ಅವರ ಪಠಾಣ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನವೇ ಬರೋಬ್ಬರಿ 57 ಕೋಟಿ ಕಲೆಕ್ಷನ್‌ ಮಾಡಿತ್ತು. ಅದಾದ ಬಳಿಕ ರಣಬೀರ್‌ ಕಪೂರ್‌ ನಟನೆಯ ತೂ ಜೂಟಿ ಮೈ ಮಕ್ಕರ್‌ ಸಿನಿಮಾ 15.73 ಕೋಟಿ ಗಳಿಸಿತ್ತು. ಇದೀಗ ಸಲ್ಮಾನ್‌ ಖಾನ್‌ ಅವರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಮೊದಲ ದಿನ 15.81 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ. ಅದೇ ರೀತಿ ಸಿನಿಮಾ ನೋಡಿದವರಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಲೆಕ್ಷನ್‌ ಮೇಲೂ ಇದು ಪರಿಣಾಮ ಬೀರಲಿದೆ.

2021ರಲ್ಲಿ ತೆರೆಗೆ ಬಂದಿದ್ದ ರಾಧೆ ಸಿನಿಮಾದ ಬಳಿಕ ಸಲ್ಮಾನ್‌ ಖಾನ್‌ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಅಂತಿಮ್‌, ಗಾಡ್‌ಫಾದರ್‌, ವೇದ್‌, ಪಠಾಣ್‌ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದನ್ನು ಬಿಟ್ಟರೆ, ಇದೀಗ ಕಿಸಿ ಕ ಭಾಯ್‌ ಕಿಸಿ ಕೀ ಜಾನ್ ಚಿತ್ರದ ಮೂಲಕ ಅವರ ಆಗಮನವಾಗಿದೆ. ಫರ್ಹಾದ್‌ ಸಮ್ಜಿ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದರೆ, ತೆಲುಗು ನಟ ವೆಂಕಟೇಶ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನುಳಿದಂತೆ ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್, ಭೂಮಿಕಾ ಚಾವ್ಲಾ ಹಲವರು ನಟಿಸಿದ್ದಾರೆ.

IPL_Entry_Point